ಮೊದಲ ದಿನವೇ 10 ಸಾವಿರ ಯುನಿಟ್ ಎಸ್1 ಇವಿ ಸ್ಕೂಟರ್ ಮಾರಾಟ ಮಾಡಿದ ಓಲಾ ಎಲೆಕ್ಟ್ರಿಕ್

ಓಲಾ ಎಲೆಕ್ಟ್ರಿಕ್ ಕಂಪನಿಯು ಎಸ್1 ಪ್ರೊ ನಂತರ ಇದೀಗ ಎಸ್1 ಮಾದರಿಯ ಮಾರಾಟಕ್ಕೆ ಅಧಿಕೃತ ಚಾಲನೆ ನೀಡಿದೆ.

ಹೊಸ ಸ್ಕೂಟರ್‌ಗೆ ಖರೀದಿ ವಿಂಡೋ ಆರಂಭವಾದ ಮೊದಲ ದಿನವೇ 10 ಸಾವಿರಕ್ಕೂ ಹೆಚ್ಚು ಯುನಿಟ್‌ಗಳು ಮಾರಾಟಗೊಂಡಿದ್ದು, ಹೊಸ ಇವಿ ಸ್ಕೂಟರ್‌ ಖರೀದಿಗೆ ಭರ್ಜರಿ ಬೇಡಿಕೆ ಹರಿದುಬರುತ್ತಿದೆ.

ಮೊದಲ ದಿನವೇ 10 ಸಾವಿರ ಯುನಿಟ್ ಎಸ್1 ಇವಿ ಸ್ಕೂಟರ್ ಮಾರಾಟ ಮಾಡಿದ ಓಲಾ ಎಲೆಕ್ಟ್ರಿಕ್

ಬಜೆಟ್ ಬೆಲೆಯೊಂದಿಗೆ ಅತ್ಯುತ್ತಮ ಫೀಚರ್ಸ್ ಹೊಂದಿರುವ ಹೊಸ ಎಸ್1 ಇವಿ ಸ್ಕೂಟರ್ ಮಾದರಿಯು ಓಲಾ ಎಲೆಕ್ಟ್ರಿಕ್ ಕಂಪನಿಗೆ ಹೆಚ್ಚಿನ ಬೇಡಿಕೆ ತಂದುಕೊಡುವ ನೀರಿಕ್ಷೆಯಿದ್ದು, ಖರೀದಿ ವಿಂಡೋ ಆರಂಭಿಸಿದ ಕೆಲವೇ ಗಂಟೆಗಳಲ್ಲಿ ಸಾವಿರಾರು ಗ್ರಾಹಕರು ಮುಂಗಡ ದರವನ್ನು ಪಾವತಿಸಿ ಬುಕಿಂಗ್ ಖಚಿತಗೊಳಿಸಿದ್ದಾರೆ.

ಮೊದಲ ದಿನವೇ 10 ಸಾವಿರ ಯುನಿಟ್ ಎಸ್1 ಇವಿ ಸ್ಕೂಟರ್ ಮಾರಾಟ ಮಾಡಿದ ಓಲಾ ಎಲೆಕ್ಟ್ರಿಕ್

ಖರೀದಿ ವಿಂಡೋ ಮೂಲಕ ಬುಕಿಂಗ್ ಖಚಿತಗೊಳಿಸಿರುವ ಗ್ರಾಹಕರಿಗೆ ಓಲಾ ಎಲೆಕ್ಟ್ರಿಕ್ ಕಂಪನಿಯು ಮುಂದಿನ ಒಂದು ವಾರದೊಳಾಗಿ ವಿತರಣೆ ಮಾಡುವ ಭರವಸೆ ನೀಡಿದ್ದು, ಇವಿ ಸ್ಕೂಟರ್ ಮಾರಾಟ ಹೆಚ್ಚಳವಾಗುತ್ತಿರುವುದಕ್ಕೆ ಕಂಪನಿಯ ಸಿಇಒ ಭಾವೀಶ್ ಅಗರ್ವಾಲ್ ಗ್ರಾಹಕರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಮೊದಲ ದಿನವೇ 10 ಸಾವಿರ ಯುನಿಟ್ ಎಸ್1 ಇವಿ ಸ್ಕೂಟರ್ ಮಾರಾಟ ಮಾಡಿದ ಓಲಾ ಎಲೆಕ್ಟ್ರಿಕ್

ಹೊಸ ತಂತ್ರಜ್ಞಾನ ಪ್ರೇರಿತ ಎಸ್1 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 99,999 ಬೆಲೆ ಹೊಂದಿದ್ದು, ನಿಗದಿತ ಸಂಖ್ಯೆಯ ಯುನಿಟ್ ಮಾರಾಟದ ನಂತರ ಬೆಲೆ ಹೆಚ್ಚಿಸುವುದಾಗಿ ಕಂಪನಿಯು ಮಾಹಿತಿ ನೀಡಿದೆ.

ಮೊದಲ ದಿನವೇ 10 ಸಾವಿರ ಯುನಿಟ್ ಎಸ್1 ಇವಿ ಸ್ಕೂಟರ್ ಮಾರಾಟ ಮಾಡಿದ ಓಲಾ ಎಲೆಕ್ಟ್ರಿಕ್

ಕಳೆದ ವರ್ಷ ಅಗಸ್ಟ್ 15ರಂದೇ ಬಿಡುಗಡೆಯಾಗಿದ್ದ ಎಸ್1 ಮಾದರಿಯನ್ನು ಕಂಪನಿಯು ಕಾರಣಾಂತರಗಳಿಂದ ವಿತರಣೆ ಮಾಡಿರಲಿಲ್ಲ. ತದನಂತರ ಕೆಲವು ಹೊಸ ಬದಲಾವಣೆಗಳೊಂದಿಗೆ ಅಭಿವೃದ್ದಿಗೊಳಿಸುವ ಮೂಲಕ ಇದೀಗ ಮತ್ತೆ ಮರುಬಿಡುಗಡೆ ಮಾಡಿದೆ.

ಮೊದಲ ದಿನವೇ 10 ಸಾವಿರ ಯುನಿಟ್ ಎಸ್1 ಇವಿ ಸ್ಕೂಟರ್ ಮಾರಾಟ ಮಾಡಿದ ಓಲಾ ಎಲೆಕ್ಟ್ರಿಕ್

ಹೊಸ ಎಸ್1 ಮಾದರಿಯು ಎಸ್1 ಪ್ರೊ ಮಾದರಿಯನ್ನೇ ಆಧರಿಸಿ ನಿರ್ಮಾಣವಾಗಿದ್ದು, ಫೀಚರ್ಸ್‌ಗಳಲ್ಲಿ ತುಸು ಭಿನ್ನತೆ ಹೊಂದಿರುವ ಎಸ್1 ಇವಿ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 99,999 ಬೆಲೆ ಹೊಂದಿದೆ.

ಮೊದಲ ದಿನವೇ 10 ಸಾವಿರ ಯುನಿಟ್ ಎಸ್1 ಇವಿ ಸ್ಕೂಟರ್ ಮಾರಾಟ ಮಾಡಿದ ಓಲಾ ಎಲೆಕ್ಟ್ರಿಕ್

ಎಸ್1 ಇವಿ ಸ್ಕೂಟರ್ ಬೆಲೆಯು ಕೆಲವು ರಾಜ್ಯಗಳಲ್ಲಿ ಸಬ್ಸಡಿ ಆಧರಿಸಿ ತುಸು ಹೆಚ್ಚಳವಾಗಲಿದ್ದು, ಹೊಸ ಇವಿ ಸ್ಕೂಟರ್ ಖರೀದಿಗಾಗಿ ಕಂಪನಿಯು ರೂ. 499 ಮುಂಗಡ ಹಣದೊಂದಿಗೆ ಬುಕಿಂಗ್ ಮಾಡಬಹುದಾಗಿದೆ. ಓಲಾ ಎಲೆಕ್ಟ್ರಿಕ್‌ನ ಅಧಿಕೃತ ವೆಬ್‌ಸೈಟ್‌ (https://book.olaelectric.com/) ಮೂಲಕ ಸ್ಕೂಟರ್ ಅನ್ನು ಬುಕ್ ಮಾಡಬಹುದಾಗಿದ್ದು, ಉತ್ಪಾದನೆ ಹೆಚ್ಚಿರುವುದರಿಂದ ವಿತರಣೆಗೆ ಹೆಚ್ಚಿನ ಸಮಯ ಕಾಯಬೇಕಿಲ್ಲ.

ಮೊದಲ ದಿನವೇ 10 ಸಾವಿರ ಯುನಿಟ್ ಎಸ್1 ಇವಿ ಸ್ಕೂಟರ್ ಮಾರಾಟ ಮಾಡಿದ ಓಲಾ ಎಲೆಕ್ಟ್ರಿಕ್

ಹೊಸ ಎಸ್1 ಇವಿ ಸ್ಕೂಟರ್ ಖರೀದಿಗಾಗಿ ರೂ. 2,999 ಗಳಗೆ ಲಭ್ಯವಿರುವ ಇಎಂಐನೊಂದಿಗೆ ಸಾಲ-ಸೌಲಭ್ಯಗಳು ಲಭ್ಯವಿದ್ದು, ಓಲಾ ಕಂಪನಿಯೊಂದಿನ ಪಾಲುದಾರಿಕೆ ಬ್ಯಾಂಕ್‌ಗಳಿಂದಲೂ ಸುಲಭ ಹಣಕಾಸು ಸೌಲಭ್ಯಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಮೊದಲ ದಿನವೇ 10 ಸಾವಿರ ಯುನಿಟ್ ಎಸ್1 ಇವಿ ಸ್ಕೂಟರ್ ಮಾರಾಟ ಮಾಡಿದ ಓಲಾ ಎಲೆಕ್ಟ್ರಿಕ್

ಹೊಸ ಇವಿ ಸ್ಕೂಟರ್ ಖರೀದಿಸುವ ಗ್ರಾಹಕರು ಪೂರ್ಣ ಮೊತ್ತದೊಂದಿಗೆ ಇಲ್ಲವೆ ವಿವಿಧ ಹಣಕಾಸು ಸೌಲಭ್ಯಗಳೊಂದಿಗೆ ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ಇವೆಡರ ಜೊತೆಗೆ ಕಂಪನಿಯು ತನ್ನದೇ ಆದ ಓಲಾ ಫೈನಾನ್ಸ್ ಮೂಲಕವೂ ವಿವಿಧ ಹಣಕಾಸು ಸೇವೆಗಳನ್ನು ಒದಗಿಸುತ್ತದೆ.

ಮೊದಲ ದಿನವೇ 10 ಸಾವಿರ ಯುನಿಟ್ ಎಸ್1 ಇವಿ ಸ್ಕೂಟರ್ ಮಾರಾಟ ಮಾಡಿದ ಓಲಾ ಎಲೆಕ್ಟ್ರಿಕ್

ಎಸ್1 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು 3KWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಮೂಲಕ ARAI ಪ್ರಮಾಣೀಕೃತ 131 ಕಿಮೀ ಮೈಲೇಜ್ ಹಿಂದಿರುಗಿಸಲಿದೆ.

ಮೊದಲ ದಿನವೇ 10 ಸಾವಿರ ಯುನಿಟ್ ಎಸ್1 ಇವಿ ಸ್ಕೂಟರ್ ಮಾರಾಟ ಮಾಡಿದ ಓಲಾ ಎಲೆಕ್ಟ್ರಿಕ್

ಇದು ಇಕೋ ಮೋಡ್‌ನಲ್ಲಿ ಗರಿಷ್ಠ 128 ಕಿಮೀ, 101 ಕಿ.ಮೀ ನಾರ್ಮಲ್ ಮೋಡ್‌ನಲ್ಲಿ ಮತ್ತು ಸ್ಪೋರ್ಟ್ ಮೋಡ್‌ನಲ್ಲಿ ಕನಿಷ್ಠ 90 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಮೊದಲ ದಿನವೇ 10 ಸಾವಿರ ಯುನಿಟ್ ಎಸ್1 ಇವಿ ಸ್ಕೂಟರ್ ಮಾರಾಟ ಮಾಡಿದ ಓಲಾ ಎಲೆಕ್ಟ್ರಿಕ್

ಓಲಾ ಪ್ರಕಾರ, ಎಸ್1 ಮಾದರಿಯ ಗರಿಷ್ಠ ವೇಗವು 95 ಕಿ.ಮೀ ಆಗಿದ್ದು, ಈ ಕಾರಣದಿಂದಾಗಿ ಈ ಸ್ಕೂಟರ್ ಅನ್ನು ಹೆದ್ದಾರಿಗಳಲ್ಲಿಯೂ ಸುಲಭವಾಗಿ ಓಡಿಸಬಹುದಾಗಿದೆ.

ಮೊದಲ ದಿನವೇ 10 ಸಾವಿರ ಯುನಿಟ್ ಎಸ್1 ಇವಿ ಸ್ಕೂಟರ್ ಮಾರಾಟ ಮಾಡಿದ ಓಲಾ ಎಲೆಕ್ಟ್ರಿಕ್

ಜೊತೆಗೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಐದು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಗ್ರಾಹಕರು ರೆಡ್, ಜೆಟ್ ಬ್ಲಾಕ್, ಬ್ರೊಸಲಿನ್ ವೈಟ್, ನಿಯೋ ಮಿಂಟ್, ಲಿಕ್ವಿಡ್ ಸಿಲ್ವರ್ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.

More from DriveSpark

Article Published On: Friday, September 2, 2022, 11:25 [IST]
English summary
Ola elecric sold 10000 units of s1 electric scooter on first day details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+