ರಿವರ್ಸ್ ಮೋಡ್ ಅವಾಂತರ: ಆಸ್ಪತ್ರೆ ಸೇರಿದ ಓಲಾ ಇವಿ ಸ್ಕೂಟರ್ ಮಾಲೀಕ..

ಓಲಾ ಎಸ್1 ಪ್ರೊ ಇವಿ ಸ್ಕೂಟರ್ ಮಾದರಿಯು ಮಾರುಕಟ್ಟೆ ಪ್ರವೇಶಿಸಿದ ನಂತರ ಅದರ ಮೈಲೇಜ್ ವಿಚಾರವಾಗಿ ಸದ್ದು ಮಾಡಿದ್ದಕ್ಕಿಂತಲೂ ಹೆಚ್ಚು ವಿವಾದಗಳಿಗೆ ಸಿಲುಕುತ್ತಿದ್ದು, ಇತ್ತೀಚೆಗೆ ಓಲಾ ಸ್ಕೂಟರ್ ಮಾಲೀಕರೊಬ್ಬರು ಸ್ಕೂಟರ್‌ನಲ್ಲಿ ತಾಂತ್ರಿಕ ವಿಚಾರವಾಗಿ ಕಂಪನಿಯ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ರಿವರ್ಸ್ ಮೋಡ್ ಅವಾಂತರ: ಆಸ್ಪತ್ರೆ ಸೇರಿದ ಓಲಾ ಇವಿ ಸ್ಕೂಟರ್ ಮಾಲೀಕ..

ಎಸ್‌1 ಪ್ರೊ ಮಾದರಿಯಲ್ಲಿರುವ ಓಲಾ ಕಂಪನಿಯು ನೀಡಿರುವ ರಿವರ್ಸ್ ಮೋಡ್ ಸೌಲಭ್ಯವು ಪಾರ್ಕಿಂಗ್ ಸ್ಥಳಗಳಲ್ಲಿ ಸ್ಕೂಟರ್ ಹಿಂತೆಗೆಯಲು ಸಹಕಾರಿಯಾಗುವ ಬದಲು ಜೀವಕ್ಕೆ ಸಂಚಕಾರ ತರುತ್ತಿದೆ ಎನ್ನಲಾಗಿದೆ. ಹೌದು, ಎಸ್1 ಪ್ರೊ ಮಾದರಿಯಲ್ಲಿರುವ ರಿವರ್ಸ್ ಮೋಡ್ ಸೌಲಭ್ಯದಿಂದ ಇವಿ ಸ್ಕೂಟರ್ ಮಾಲೀಕರೊಬ್ಬರು ಪ್ರಾಣಪಾಯಕ್ಕೆ ಸಿಲುಕುವಂತಾಗಿದೆ.

ರಿವರ್ಸ್ ಮೋಡ್ ಅವಾಂತರ: ಆಸ್ಪತ್ರೆ ಸೇರಿದ ಓಲಾ ಇವಿ ಸ್ಕೂಟರ್ ಮಾಲೀಕ..

ರಿವರ್ಸ್ ಮೋಡ್ ಬಳಕೆಯ ಸಂದರ್ಭದಲ್ಲಿ ಆದ ಗೊಂದಲಗಳಿಂದ ರಿವರ್ಸ್ ಮೋಡ್ ಅತಿ ವೇಗ ಪಡೆದುಕೊಂಡ ಪರಿಣಾಮ ಸ್ಕೂಟರ್ ಮಾಲೀಕರಿಗೆ ಗಂಭೀರ ಗಾಯಗಳಾಗಿದ್ದು, ರಿವರ್ಸ್ ತೆಗೆಯುವ ವೇಳೆ ಗೋಡೆಗೆ ರಭಸವಾಗಿ ಡಿಕ್ಕಿ ಹೊಡೆದೆ.

ರಿವರ್ಸ್ ಮೋಡ್ ಅವಾಂತರ: ಆಸ್ಪತ್ರೆ ಸೇರಿದ ಓಲಾ ಇವಿ ಸ್ಕೂಟರ್ ಮಾಲೀಕ..

ಹಿಮ್ಮುಖವಾಗಿ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್‌ನಲ್ಲಿದ್ದ 65 ವರ್ಷದ ವ್ಯಕ್ತಿಯ ತಲೆಗೆ ಗಂಭೀರವಾಗಿ ಗಾಯಗಳಾಗಿದ್ದು, ಘಟನೆಗೆ ಸಾಫ್ಟ್‌ವೇರ್‌ನಲ್ಲಿ ದೋಷಗಳೆ ಕಾರಣವೆಂದು ಸ್ಕೂಟರ್ ಮಾಲೀಕರು ಗಂಭೀರ ಆರೋಪ ಮಾಡಿದ್ದಾರೆ.

ರಿವರ್ಸ್ ಮೋಡ್ ಅವಾಂತರ: ಆಸ್ಪತ್ರೆ ಸೇರಿದ ಓಲಾ ಇವಿ ಸ್ಕೂಟರ್ ಮಾಲೀಕ..

ಮಧ್ಯಪ್ರದೇಶದ ಜಬಲ್ಪುರ್‌ನಲ್ಲಿ ಈ ಘಟನೆ ನಡೆದಿದ್ದು, ಕಳೆದ ದಿನಗಳ ಹಿಂದಷ್ಟೇ ಎಸ್1 ಪ್ರೊ ಖರೀದಿಸಿದ್ದ ಪಲ್ಲವ್ ಮಹೇಶ್ವರಿ ಎನ್ನುವವರು ಹೊಸ ಸ್ಕೂಟರ್‌ನಲ್ಲಿ ಸಾಫ್ಟ್‌ವೇರ್ ಸಮಸ್ಯೆ ಕುರಿತು ಆರೋಪ ಮಾಡಿದ್ದಾರೆ. ಪಲ್ಲವ್ ಅವರ ಸ್ಕೂಟರ್ ಅನ್ನು ಖರೀದಿಸಿದ ನಂತರ ಅವರ ತಂದೆಗೂ ಬಳಕೆ ಮಾಡಲು ನೀಡಿದ್ದು, ಕಳೆದ ದಿನಗಳಿಂದ ಹೊಸ ಸ್ಕೂಟರ್ ಬಳಕೆ ಮಾಡುತ್ತಿರುವ ಪಲ್ಲವ್ ಅವರು ತಂದೆಗೆ ನಿನ್ನೆ ತಡರಾತ್ರಿ ರಿವರ್ಸ್ ಮೋಡ್ ಬಳಕೆಯು ಸಮಸ್ಯೆ ತಂದಿಟ್ಟಿದೆ.

ರಿವರ್ಸ್ ಮೋಡ್ ಅವಾಂತರ: ಆಸ್ಪತ್ರೆ ಸೇರಿದ ಓಲಾ ಇವಿ ಸ್ಕೂಟರ್ ಮಾಲೀಕ..

ಹೊಸ ಸ್ಕೂಟರ್ ಖರೀದಿ ನಂತರ ಪಲ್ಲವ್ ಮತ್ತು ಅವರ ತಂದೆ ಕೂಡಾ ನಿಯಮಿತವಾಗಿ ಬಳಕೆ ಮಾಡುತ್ತಿದ್ದು, ಇದೀಗ ಏಕಾಏಕಿಯಾಗಿ ರಿವರ್ಸ್ ಮೋಡ್ ಒಂದೇ ಬಾರಿಗೆ ಹೆಚ್ಚು ವೇಗ ಪಡೆದುಕೊಂಡಿರುವುದು ಸಮಸ್ಯೆಗೆ ಕಾರಣವಾಗಿದೆ.

ರಿವರ್ಸ್ ಮೋಡ್ ಅವಾಂತರ: ಆಸ್ಪತ್ರೆ ಸೇರಿದ ಓಲಾ ಇವಿ ಸ್ಕೂಟರ್ ಮಾಲೀಕ..

ಎಸ್1 ಪ್ರೊ ಮಾದರಿಯಲ್ಲಿರುವ ರಿವರ್ಸ್ ಮೋಡ್ ಪ್ರತಿ ಗಂಟೆಗೆ 50 ಕಿ.ಮೀ ವೇಗ ಹೊಂದಿದ್ದು, ರಿವರ್ಸ್ ವೇಳೆ ಒಂದೇ ಬಾರಿಗೆ ವೇಗ ಹೆಚ್ಚಿದ ಪರಿಣಾಮ ಗೋಡೆಗೆ ಡಿಕ್ಕಿ ಹೊಡೆದು ನೆಲಕ್ಕುಳಿದ್ದಾರೆ. ಘಟನೆಯಲ್ಲಿ ಪಲ್ಲವ್ ಅವರ ತಂದೆಯ ತಲೆಗೆ ಬಲವಾದ ಹೊಡೆತ ಬಿದ್ದಿದ್ದು, ಸಾಫ್ಟ್‌ವೇರ್ ಸಮಸ್ಯೆಯನ್ನು ಬಗೆಹರಿಸುವಂತೆ ಕಂಪನಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಿವರ್ಸ್ ಮೋಡ್ ಅವಾಂತರ: ಆಸ್ಪತ್ರೆ ಸೇರಿದ ಓಲಾ ಇವಿ ಸ್ಕೂಟರ್ ಮಾಲೀಕ..

ಕಳಪೆಯಾಗಿ ಪರೀಕ್ಷಿಸಿದ ಇವಿ ಸ್ಕೂಟರ್ ಪರಿಣಾಮವೇ ಇದಕ್ಕೆ ಕಾರಣವೆಂದಿರುವ ಪಲ್ಲವ್ ಮಹೇಶ್ವರಿ ಅವರು ಹೊಸ ಇವಿ ಸ್ಕೂಟರ್‌ಗಳ ಸುರಕ್ಷತೆಯ ಮಾನದಂಡಗಳಲ್ಲಿ ಈ ಮಟ್ಟಕ್ಕೆ ರಾಜಿಯಾಗುತ್ತವೆ ಎಂದು ಭಾವಿಸಿರಲಿಲ್ಲ ಎಂದು ಕಿಡಿಕಾರಿದ್ದಾರೆ.

ರಿವರ್ಸ್ ಮೋಡ್ ಅವಾಂತರ: ಆಸ್ಪತ್ರೆ ಸೇರಿದ ಓಲಾ ಇವಿ ಸ್ಕೂಟರ್ ಮಾಲೀಕ..

ಮತ್ತೊಂದು ಗಂಭೀರ ಆರೋಪ ಮಾಡಿರುವ ಪಲ್ಲವ್ ಅವರು ಘಟನೆ ಕುರಿತಂತೆ ಈಗಾಗಲೇ ಹಲವಾರು ದೂರುಗಳ ಕೇಳಿಬಂದರೂ ಕಂಪನಿಯು ಇದುವರೆಗೆ ಯಾವುದೇ ಸ್ಕೂಟರ್ ಮಾಲೀಕರನ್ನು ಈ ಸಮಸ್ಯೆಯ ಕುರಿತಂತೆ ಸಂಪರ್ಕಿಸಿಲ್ಲ ಎಂದಿದ್ದು, ಭವಿಷ್ಯದ ವಾಹನಗಳ ಕುರಿತಂತೆ ಆತಂಕ ವ್ಯಕ್ತಪಡಿಸಿದ್ದಾರೆ.

ರಿವರ್ಸ್ ಮೋಡ್ ಅವಾಂತರ: ಆಸ್ಪತ್ರೆ ಸೇರಿದ ಓಲಾ ಇವಿ ಸ್ಕೂಟರ್ ಮಾಲೀಕ..

ಇನ್ನು ಆಟೋ ಉದ್ಯಮದಲ್ಲಿ ಇತ್ತೀಚೆಗೆ ಸಂಭವಿಸುತ್ತಿರುವ ಇವಿ ಸ್ಕೂಟರ್ ಬೆಂಕಿ ಅವಘಡ ಪ್ರಕರಣಗಳು ಭವಿಷ್ಯದ ವಾಹನಗಳ ಸುರಕ್ಷತೆ ಕುರಿತಂತೆ ಗ್ರಾಹಕರಲ್ಲಿ ಅನುಮಾನ ಹುಟ್ಟುಹಾಕುವಂತೆ ಮಾಡಿದ್ದು, ಬೆಂಕಿ ಅವಘಡ ಪ್ರಕಣಗಳು ಹೆಚ್ಚಿದ ಪರಿಣಾಮ ಓಲಾ ಎಲೆಕ್ಟ್ರಿಕ್ ಕಂಪನಿಯು ಸಾವಿರ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಹಿಂಪಡೆದಿದೆ.

ರಿವರ್ಸ್ ಮೋಡ್ ಅವಾಂತರ: ಆಸ್ಪತ್ರೆ ಸೇರಿದ ಓಲಾ ಇವಿ ಸ್ಕೂಟರ್ ಮಾಲೀಕ..

ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬೆಂಕಿ ಅವಘಡಗಳ ಹಿನ್ನೆಲೆಯಲ್ಲಿ ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ 1,441 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಹಿಂಪಡೆಯುತ್ತಿರುವುದಾಗಿ ಮಾಹಿತಿ ಹಂಚಿಕೊಂಡಿದ್ದು, ಬೆಂಕಿ ಅವಘಡಗಳಿಗೆ ಕಾರಣವಾಗಿರುವ ಅಂಶಗಳನ್ನು ಪತ್ತೆಹಚ್ಚಿ ಸರಿಪಡಿಸುವಾಗಿ ಹೇಳಿಕೊಂಡಿದೆ.

ರಿವರ್ಸ್ ಮೋಡ್ ಅವಾಂತರ: ಆಸ್ಪತ್ರೆ ಸೇರಿದ ಓಲಾ ಇವಿ ಸ್ಕೂಟರ್ ಮಾಲೀಕ..

ಓಲಾ ಎಲೆಕ್ಟ್ರಿಕ್ ಪ್ರಕಾರ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬ್ಯಾಟರಿಗಳನ್ನು ಭಾರತೀಯ AIS 156 ಮಾನದಂಡಗಳನ್ನು ಮತ್ತು ಯುರೋಪಿಯನ್ ರಾಷ್ಟ್ರಗಳಲ್ಲಿ ಚಾಲ್ತಿಯಲ್ಲಿರುವ ECE 136 ಮಾನದಂಡವನ್ನು ಅನುಸರಿಸುತ್ತಿರುವುದಾಗಿ ಹೇಳಿಕೊಂಡಿದ್ದು, ಬ್ಯಾಟರಿ ಸುರಕ್ಷತೆಯಲ್ಲಿ ಗರಿಷ್ಠ ಪ್ರಮಾಣದ ಸುರಕ್ಷಾ ಮಾನದಂಡಗಳಿದ್ದರೂ ಘಟನೆಯು ಅಚ್ಚರಿ ತಂದಿದೆ ಎಂದಿದೆ.

ರಿವರ್ಸ್ ಮೋಡ್ ಅವಾಂತರ: ಆಸ್ಪತ್ರೆ ಸೇರಿದ ಓಲಾ ಇವಿ ಸ್ಕೂಟರ್ ಮಾಲೀಕ..

ಹೀಗಾಗಿ ಘಟನೆ ಕುರಿತಂತೆ ತಜ್ಞರ ತಂಡದೊಂದಿಗೆ ಕುಲಂಕೂಶವಾಗಿ ಪರಿಶೀಲನೆ ನಡೆಸುತ್ತಿರುವಾಗಿ ಅಧಿೃತ ಮಾಹಿತಿ ಹಂಚಿಕೊಂಡಿರುವ ಓಲಾ ಕಂಪನಿಯು ಭವಿಷ್ಯ ಇಂತಹ ಘಟನೆ ಮರುಕಳಿಸದಂತೆ ಎಚ್ಚರವಹಿಸುವ ಭರವಸೆ ನೀಡಿದೆ.

ರಿವರ್ಸ್ ಮೋಡ್ ಅವಾಂತರ: ಆಸ್ಪತ್ರೆ ಸೇರಿದ ಓಲಾ ಇವಿ ಸ್ಕೂಟರ್ ಮಾಲೀಕ..

ಇದಕ್ಕಾಗಿಯೇ ಮುಂಜಾಗ್ರತ ಕ್ರಮವಾಗಿ ಕಂಪನಿಯು ಅವಘಡದಲ್ಲಿ ಸಿಲುಕಿದ್ದ ಮಾದರಿ ನಿರ್ಮಾಣದ ಸಂದರ್ಭದಲ್ಲಿ ನಿರ್ಮಾಣಗೊಂಡಿದ್ದ ಸುಮಾರು 1,441 ಯುನಿಟ್‌ಗಳನ್ನು ಹಿಂಪಡೆದು ಪರಿಶೀಲನೆ ನಡೆಸುತ್ತಿದ್ದು, ಬಳಕೆದಾರರ ಸುರಕ್ಷತೆಗಾಗಿ ಅಗತ್ಯ ಕ್ರಮಗಳನ್ನು ಅಳವಡಿಸಿಕೊಳ್ಳುವುದಾಗಿ ಭರವಸೆ ನೀಡಿತ್ತು.

ರಿವರ್ಸ್ ಮೋಡ್ ಅವಾಂತರ: ಆಸ್ಪತ್ರೆ ಸೇರಿದ ಓಲಾ ಇವಿ ಸ್ಕೂಟರ್ ಮಾಲೀಕ..

ಇನ್ನು ಓಲಾ ಎಲೆಕ್ಟ್ರಿಕ್ ಕಂಪನಿಯು ಸದ್ಯ ಎಸ್1 ಪ್ರೊ ಮಾದರಿಯನ್ನು ಮಾತ್ರವೇ ಉತ್ಪಾದನೆಗೊಳಿಸುತ್ತಿದ್ದು, ಎಸ್1 ಮಾದರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಈಗಾಗಲೇ ಎಸ್1 ಮಾದರಿಗಾಗಿ ಬುಕಿಂಗ್ ಸಲ್ಲಿಸಿರುವ ಗ್ರಾಹಕರಿಗೆ ಕಂಪನಿಯು ಎಸ್1 ಬದಲಾಗಿ ಎಸ್1 ದರಯಲ್ಲಿಯೇ ಎಸ್1 ಪ್ರೊ ಮಾದರಿಯನ್ನೇ ವಿತರಣೆ ಮಾಡುತ್ತಿದ್ದು, ಕೆಲವು ಪ್ರೀಮಿಯಂ ಫೀಚರ್ಸ್‌ಗಳು, ಸಾಫ್ಟ್‌ವೇರ್ ಅಪ್‌ಡೇಟ್, ಅಧಿಕ ಮೈಲೇಜ್ ಬ್ಯಾಟರಿ ರೇಂಜ್ ಮಾತ್ರ ನೀಡಲಾಗಿಲ್ಲ.

ರಿವರ್ಸ್ ಮೋಡ್ ಅವಾಂತರ: ಆಸ್ಪತ್ರೆ ಸೇರಿದ ಓಲಾ ಇವಿ ಸ್ಕೂಟರ್ ಮಾಲೀಕ..

ಎಸ್1 ಮಾದರಿಗಾಗಿ ಬುಕಿಂಗ್ ಮಾಡಿದ ಗ್ರಾಹಕರಿಗೆ ಕೇವಲ ಎಸ್1 ಪ್ರೊ ಮಾದರಿಯು ಸಾಮಾನ್ಯ ಆವೃತ್ತಿಯನ್ನು ವಿತರಣೆ ನೀಡಲಾಗುತ್ತಿದ್ದು, ಒಂದು ವೇಳೆ ಹೆಚ್ಚುವರಿ ಫೀಚರ್ಸ್ ಮತ್ತು ಅಧಿಕ ಮೈಲೇಜ್ ರೇಂಜ್ ಬಯಸಿದರೆ ಇನ್ನುಳಿದ ಹಣ ಪಾವತಿ ಮಾಡಿ ಹೈ ಎಂಡ್ ಮಾದರಿಗೆ ಉನ್ನತೀಕರಿಸಿಕೊಳ್ಳಬಹುದಾಗಿದೆ.

ಅತ್ಯತ್ತಮ ಕಾರ್ಯಕ್ಷಮತೆ, ಗರಿಷ್ಠ ಮೈಲೇಜ್, ಪ್ರೀಮಿಯಂ ಫೀಚರ್ಸ್ ಮತ್ತು ಬಜೆಟ್ ಬೆಲೆಯು ಹೊಸ ಸ್ಕೂಟರ್ ಆಯ್ಕೆಗಳು ಸ್ಕೂಟರ್ ಮೌಲ್ಯವನ್ನು ಹೆಚ್ಚಿದ್ದರೂ ಇತ್ತೀಚಿನ ಘಟನೆಗಳು ಓಲಾ ಸ್ಕೂಟರ್‌ಗಳ ಮೇಲಿನ ಗ್ರಾಹಕರ ನಂಬಿಕೆ ಕುಸಿಯುತ್ತಿದೆ ಎನ್ನಲಾಗಿದೆ.

Article Published On: Friday, May 13, 2022, 16:08 [IST]
English summary
Ola ev scooter rider injured after the scooter goes into reverse mode at full speed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+