ಎಸ್1 ಸ್ಕೂಟರ್ ಖರೀದಿಗಾಗಿ ಇಂದು ಸಂಜೆ 6ಕ್ಕೆ ಪಾವತಿ ವಿಂಡೋ ತೆರೆಯಲಿದೆ ಓಲಾ ಎಲೆಕ್ಟ್ರಿಕ್

ಓಲಾ ಎಲೆಕ್ಟ್ರಿಕ್ ಕಂಪನಿಯು ಈಗಾಗಲೇ ಬುಕ್ಕಿಂಗ್ ಮಾಡಿರುವ ಗ್ರಾಹಕರಿಗೆ ಎಸ್1 ಪ್ರೊ ಇವಿ ಸ್ಕೂಟರ್ ವಿತರಣೆ ಆರಂಭಿಸಿದ್ದು, ಕಂಪನಿಯು ಇದೀಗ ಎಸ್1 ಮಾದರಿಗಾಗಿ ಕಾಯುತ್ತಿರುವ ಗ್ರಾಹಕರಿಗೆ ಅಂತಿಮ ಹಂತದ ಪಾವತಿಗೆ ಅವಕಾಶ ನೀಡುತ್ತಿದೆ.

ಎಸ್1 ಸ್ಕೂಟರ್ ಖರೀದಿಗಾಗಿ ಇಂದು ಸಂಜೆ 6ಕ್ಕೆ ಪಾವತಿ ವಿಂಡೋ ತೆರೆಯಲಿದೆ ಓಲಾ ಎಲೆಕ್ಟ್ರಿಕ್

ಎಸ್1 ಖರೀದಿಗಾಗಿ ಈಗಾಗಲೇ ರೂ.20 ಸಾವಿರ ಮುಂಗಡ ಹಣ ಪಾವತಿ ಮಾಡಿರುವ ಗ್ರಾಹಕರಿಂದ ಓಲಾ ಎಲೆಕ್ಟ್ರಿಕ್ ಕಂಪನಿಯು ಇಂದು ಸಂಜೆ 6 ರಿಂದ ಪೂರ್ಣ ಪ್ರಮಾಣದ ಹಣ ಸ್ವಿಕರಿಸಲಿದ್ದು, ಪೂರ್ತಿ ಹಣ ಪಾವತಿಸಿದ ಗ್ರಾಹಕರಿಗೆ ಕಂಪನಿಯು ಫೆಬ್ರವರಿ ತಿಂಗಳಿನಲ್ಲಿ ಸ್ಕೂಟರ್ ವಿತರಿಸುವುದಾಗಿ ಮಾಹಿತಿ ಹಂಚಿಕೊಂಡಿದೆ.

ಎಸ್1 ಸ್ಕೂಟರ್ ಖರೀದಿಗಾಗಿ ಇಂದು ಸಂಜೆ 6ಕ್ಕೆ ಪಾವತಿ ವಿಂಡೋ ತೆರೆಯಲಿದೆ ಓಲಾ ಎಲೆಕ್ಟ್ರಿಕ್

ಓಲಾ ಎಲೆಕ್ಟ್ರಿಕ್ ಅಪ್ಲಿಕೇಶನ್‌ನಲ್ಲಿ ಪಾವತಿ ವಿಂಡೋ ಇಂದು ಸಂಜೆ 6 ರಿಂದ ತೆರೆದಿರಲಿದ್ದು, ಕಳೆದ ಡಿಸೆಂಬರ್‌ನಲ್ಲಿ ರೂ. 20,000 ಮುಂಗಡ ಪಾವತಿಸಿದವರಿಗೆ ಮಾತ್ರವೇ ಇದು ಮುಕ್ತವಾಗಿರುತ್ತದೆ. ಜೊತೆಗೆ ಎಸ್1 ಮಾದರಿಗಾಗಿ ಬುಕ್ಕಿಂಗ್ ಮಾಡಿರುವ ಗ್ರಾಹಕರು ಎಸ್1 ಪ್ರೊ ಮಾದರಿಗಾಗಿ ಅಪ್‌ಗ್ರೆಡ್ ಬಯಸಿದರೆ ಹೆಚ್ಚುವರಿಯಾಗಿರುವ ರೂ.30 ಸಾವಿರವನ್ನು ಈಗಲೇ ಪಾವತಿಸಿ ಕಾಯ್ದಿರಿಸಬಹುದಾಗಿದ್ದು, ಎಸ್1 ಮಾದರಿಗಾಗಿ ಇದು ಸದ್ಯಕ್ಕೆ ಕೊನೆಯ ಪಾವತಿಯಾಗಲಿದೆ.

ಎಸ್1 ಸ್ಕೂಟರ್ ಖರೀದಿಗಾಗಿ ಇಂದು ಸಂಜೆ 6ಕ್ಕೆ ಪಾವತಿ ವಿಂಡೋ ತೆರೆಯಲಿದೆ ಓಲಾ ಎಲೆಕ್ಟ್ರಿಕ್

ಎಸ್1 ಮತ್ತು ಎಸ್1 ಪ್ರೊ ಮಾದರಿಗಳಲ್ಲಿ ದುಬಾರಿ ಬೆಲೆಯ ಎಸ್‍1 ಪ್ರೊ ಮಾದರಿಯೇ ಹೆಚ್ಚಿನ ಬೇಡಿಕೆ ಹೊಂದಿದ್ದು, ಈ ಹಿನ್ನಲೆಯಲ್ಲಿ ಕಂಪನಿಯು ಸದ್ಯ ಬುಕ್ಕಿಂಗ್ ಸ್ವಿಕರಿಸಿರುವ ಗ್ರಾಹಕರಿಗೆ ಮಾತ್ರ ಎಸ್1 ಮಾದರಿಯನ್ನು ವಿತರಣೆ ಪೂರ್ಣಗೊಳಿಸಿದ ನಂತರ ಪೂರ್ಣ ಪ್ರಮಾಣದಲ್ಲಿ ಎಸ್1 ಪ್ರೊ ಉತ್ಪಾದನೆ ಮಾಡಲು ನಿರ್ಧರಿಸಿದೆ.

ಎಸ್1 ಸ್ಕೂಟರ್ ಖರೀದಿಗಾಗಿ ಇಂದು ಸಂಜೆ 6ಕ್ಕೆ ಪಾವತಿ ವಿಂಡೋ ತೆರೆಯಲಿದೆ ಓಲಾ ಎಲೆಕ್ಟ್ರಿಕ್

ಪೂರ್ಣ ಪ್ರಮಾಣದಲ್ಲಿ ಎಸ್1 ಪ್ರೊ ಮಾದರಿಯ ಉತ್ಪಾದನೆಯ ಆರಂಭದ ನಂತರ ದಾಖಲಾಗುವ ಎಸ್1 ಮಾದರಿಗಾಗಿ ಬುಕ್ಕಿಂಗ್ ಸಲ್ಲಿಸುವ ಗ್ರಾಹಕರಿಗೂ ಎಸ್1 ಪ್ರೊ ಮಾದರಿಯನ್ನೇ ವಿತರಣೆ ಮಾಡುವುದಾಗಿ ಹೇಳಿಕೊಂಡಿರುವ ಓಲಾ ಕಂಪನಿಯು ಫೀಚರ್ಸ್‌ಗಳನ್ನು ಮಾತ್ರ ಎಸ್1 ಮಾದರಿಯಲ್ಲಿರುವಂತೆಯೇ ನೀಡಲು ನಿರ್ಧರಿಸಿದೆ.

ಎಸ್1 ಸ್ಕೂಟರ್ ಖರೀದಿಗಾಗಿ ಇಂದು ಸಂಜೆ 6ಕ್ಕೆ ಪಾವತಿ ವಿಂಡೋ ತೆರೆಯಲಿದೆ ಓಲಾ ಎಲೆಕ್ಟ್ರಿಕ್

ಎಸ್1 ಮಾದರಿಗಾಗಿ ಬುಕ್ಕಿಂಗ್ ಮಾಡಿ ಎಸ್1 ಪ್ರೊ ಪಡೆದುಕೊಳ್ಳಿರುವ ಗ್ರಾಹಕರಿಗೆ ಸಾಮಾನ್ಯ ಫೀಚರ್ಸ್‌ಗಳಿರಲಿದ್ದು, ಎಸ್1 ಪ್ರೊ ಮಾದರಿಯಲ್ಲಿರುವಂತೆ ಹೆಚ್ಚಿನ ಮಟ್ಟದ ಮೈಲೇಜ್ ರೇಂಜ್, ಹೈಪರ್ ರೈಡಿಂಗ್ ಮೋಡ್, ಕನೆಕ್ಟೆಡ್ ಟೆಕ್ನಾಲಜಿ ಸೌಲಭ್ಯಗಳು ಬೇಕಿದ್ದಲ್ಲಿ ಹೆಚ್ಚುವರಿಯಾಗಿ ರೂ.30 ಸಾವಿರ ಪಾವತಿ ಮಾಡಬೇಕಾಗುತ್ತದೆ.

ಎಸ್1 ಸ್ಕೂಟರ್ ಖರೀದಿಗಾಗಿ ಇಂದು ಸಂಜೆ 6ಕ್ಕೆ ಪಾವತಿ ವಿಂಡೋ ತೆರೆಯಲಿದೆ ಓಲಾ ಎಲೆಕ್ಟ್ರಿಕ್

ರೂ.30 ಸಾವಿರ ಹಣ ಪಾವತಿ ನಂತರ ನಿಮ್ಮ ಸ್ಕೂಟರ್‌ನಲ್ಲಿರುವ ಪ್ರೀಮಿಯಂ ಫೀಚರ್ಸ್‌ಗಳನ್ನು ಅನ್‌ಲಾಕ್ ಮಾಡಲಿದ್ದು, ಒಂದು ವೇಳೆ ಪ್ರೀಮಿಯಂ ಫೀಚರ್ಸ್‌ಗಳು ಬೇಡವಾದಲ್ಲಿ ಎಸ್1 ಪ್ರೊ ಮಾದರಿಯನ್ನೇ ಎಸ್1 ಮಾದರಿಯಂತೆ ಬಳಕೆ ಮಾಡಬಹುದಾಗಿದೆ.

ಎಸ್1 ಸ್ಕೂಟರ್ ಖರೀದಿಗಾಗಿ ಇಂದು ಸಂಜೆ 6ಕ್ಕೆ ಪಾವತಿ ವಿಂಡೋ ತೆರೆಯಲಿದೆ ಓಲಾ ಎಲೆಕ್ಟ್ರಿಕ್

ಕಂಪನಿಯು ಎಸ್1 ಪ್ರೊ ಮಾದರಿಯ ಮೇಲೆ ಹೆಚ್ಚಿನ ಗಮನಹರಿಸಲು ಈ ತಂತ್ರ ಅನುಸರಿಸುತ್ತಿದ್ದು, ಪ್ರೀಮಿಯಂ ಫೀಚರ್ಸ್ ಬಯಸುವ ಗ್ರಾಹಕರಿಗೆ ಉತ್ತಮ ಫೀಚರ್ಸ್ ಹೊಂದಿರುವ ಎಸ್1 ಪ್ರೊ ಮಾದರಿಯನ್ನು ಬಜೆಟ್ ಬೆಲೆಯ ಇವಿ ಸ್ಕೂಟರ್ ಬಯಸುವ ಗ್ರಾಹಕರಿಗೆ ಪ್ರೀಮಿಯಂ ಫೀಚರ್ಸ್‌ಗಳಿಲ್ಲ ಎಸ್1 ಪ್ರೊ ಮಾದರಿಯನ್ನು ವಿತರಣೆ ಮಾಡಲಿದೆ.

ಎಸ್1 ಸ್ಕೂಟರ್ ಖರೀದಿಗಾಗಿ ಇಂದು ಸಂಜೆ 6ಕ್ಕೆ ಪಾವತಿ ವಿಂಡೋ ತೆರೆಯಲಿದೆ ಓಲಾ ಎಲೆಕ್ಟ್ರಿಕ್

ಇನ್ನು ಓಲಾ ಹೊಸ ಎಸ್1 ಇವಿ ಸ್ಕೂಟರ್ ಮಾದರಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 99,999 ಬೆಲೆ ಹೊಂದಿದ್ದರೆ ಎಸ್1 ಪ್ರೊ ಮಾದರಿಯು ರೂ. 1,29,999 ಬೆಲೆ ಹೊಂದಿದ್ದು, ಅತ್ಯತ್ತಮ ಕಾರ್ಯಕ್ಷಮತೆ, ಗರಿಷ್ಠ ಮೈಲೇಜ್, ಪ್ರೀಮಿಯಂ ಫೀಚರ್ಸ್ ಮತ್ತು ಬಜೆಟ್ ಬೆಲೆಯು ಹೊಸ ಸ್ಕೂಟರ್ ಆಯ್ಕೆ ಮೌಲ್ಯವನ್ನು ಹೆಚ್ಚಿಸಿವೆ.

ಎಸ್1 ಸ್ಕೂಟರ್ ಖರೀದಿಗಾಗಿ ಇಂದು ಸಂಜೆ 6ಕ್ಕೆ ಪಾವತಿ ವಿಂಡೋ ತೆರೆಯಲಿದೆ ಓಲಾ ಎಲೆಕ್ಟ್ರಿಕ್

ಹೊಸ ಎಸ್1 ವೆರಿಯೆಂಟ್‌‌ನಲ್ಲಿ ಓಲಾ ಕಂಪನಿಯು 2.98kWh ಮತ್ತು ಎಸ್1 ಪ್ರೊ ಮಾದರಿಯಲ್ಲಿ 3.97kWh ಲೀಥಿಯಂ ಅಯಾನ್ ಬ್ಯಾಟರಿ ಜೋಡಣೆ ಮಾಡಿದ್ದು, ಪ್ರತಿ ಚಾರ್ಜ್‌ಗೆ ಎಸ್1 ಮಾದರಿಯು ಗರಿಷ್ಠ 121 ಕಿ.ಮೀ ಮೈಲೇಜ್ ಹಿಂದಿರುಗಿಸಿದರೆ ಎಸ್1 ಪ್ರೊ ಮಾದರಿಯು ಪ್ರತಿ ಚಾರ್ಜ್‌ಗೆ 181 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಎಸ್1 ಸ್ಕೂಟರ್ ಖರೀದಿಗಾಗಿ ಇಂದು ಸಂಜೆ 6ಕ್ಕೆ ಪಾವತಿ ವಿಂಡೋ ತೆರೆಯಲಿದೆ ಓಲಾ ಎಲೆಕ್ಟ್ರಿಕ್

ಇದರಲ್ಲಿ ಎಸ್1 ಮಾದರಿಯು ಗಂಟೆಗೆ 90 ಕಿ.ಮೀ ಟಾಪ್ ಸ್ಪೀಡ್‌ ಹೊಂದಿದ್ದರೆ ಎಸ್1 ಪ್ರೊ ಮಾದರಿಯು ಪ್ರತಿ ಗಂಟೆಗೆ 115ಕಿ.ಮೀ ಟಾಪ್ ಸ್ಪೀಡ್‌ ಹೊಂದಿದ್ದು, ಎಸ್1 ಮಾದರಿಯಲ್ಲಿ ನಾರ್ಮಲ್ ಮತ್ತು ಸ್ಪೋರ್ಟ್ ರೈಡ್ ಮೋಡ್‌ಗಳಿದ್ದರೆ ಎಸ್1 ಪ್ರೊ ಮಾದರಿಯಲ್ಲಿ ನಾರ್ಮಲ್, ಸ್ಪೋರ್ಟ್ ಮತ್ತು ಹೈಪರ್ ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ.

ಎಸ್1 ಸ್ಕೂಟರ್ ಖರೀದಿಗಾಗಿ ಇಂದು ಸಂಜೆ 6ಕ್ಕೆ ಪಾವತಿ ವಿಂಡೋ ತೆರೆಯಲಿದೆ ಓಲಾ ಎಲೆಕ್ಟ್ರಿಕ್

ಹಾಗೆಯೇ ಓಲಾ ಇವಿ ಸ್ಕೂಟರ್‌ಗಳು ಅತ್ಯುತ್ತಮ ವಿನ್ಯಾಸದೊಂದಿಗೆ ಗರಿಷ್ಠ ಮಟ್ಟದ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಂಡಿದ್ದು, ಹೊಸ ಸ್ಕೂಟರ್‌ಗಳಲ್ಲಿ ಟ್ವಿನ್ ಪಾಡ್ ಎಲ್ಇಡಿ ಸೆಟ್ಅಪ್, ಎಲ್ಇಡಿ ಡಿಆರ್‌ಎಲ್ಎಸ್, ಎಲ್ಇಡಿ ಟೈಲ್‌ಲ್ಯಾಂಪ್, ಕೌಂಟ್‌ರ್ಡ್ ಸೀಟ್, ಅಲಾಯ್ ವ್ಹೀಲ್, 36-ಲೀಟರ್ ಸಾಮರ್ಥ್ಯ ಅಂಡರ್ ಸೀಟ್ ಸ್ಪೋರೇಜ್, ರಿಯರ್ ಗ್ರ್ಯಾಬ್ ರೈಲ್ಸ್, ಫ್ರಂಟ್ ಸ್ಟೋರೇಜ್ ಪ್ಯಾಕೇಟ್, ಲಗೇಜ್ ಹುಕ್ ಮತ್ತು ಹತ್ತು ವಿವಿಧ ಬಣ್ಣಗಳ ಆಯ್ಕೆ ಹೊಂದಿದೆ.

ಎಸ್1 ಸ್ಕೂಟರ್ ಖರೀದಿಗಾಗಿ ಇಂದು ಸಂಜೆ 6ಕ್ಕೆ ಪಾವತಿ ವಿಂಡೋ ತೆರೆಯಲಿದೆ ಓಲಾ ಎಲೆಕ್ಟ್ರಿಕ್

ಹೊಸ ಸ್ಕೂಟರ್‌ಗಳು 1,859 ಎಂಎಂ ಉದ್ದ, 712 ಎಂಎಂ ಅಗಲ, 1,160 ಎಂಎಂ ಎತ್ತರ, 1,359 ಎಂಎಂ ವ್ಹೀಲ್ ಬೆಸ್, 792 ಎಂಎಂ ಸೀಟ್ ಹೈಟ್, 125 ಕೆ.ಜಿ ತೂಕ ಹೊಂದಿದ್ದು, ಮುಂಭಾಗದಲ್ಲಿ ಸಿಂಗಲ್ ಫೋರ್ಕ್ ಸಸ್ಫೆಷನ್ ಮತ್ತು ಹಿಂಬದಿಯಲ್ಲಿ ಮೊನೊ ಶಾಕ್ ಸಸ್ಷೆಷನ್‌ನೊಂದಿಗೆ ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್ ಜೋಡಣೆ ಹೊಂದಿವೆ.

ಎಸ್1 ಸ್ಕೂಟರ್ ಖರೀದಿಗಾಗಿ ಇಂದು ಸಂಜೆ 6ಕ್ಕೆ ಪಾವತಿ ವಿಂಡೋ ತೆರೆಯಲಿದೆ ಓಲಾ ಎಲೆಕ್ಟ್ರಿಕ್

ಜೊತೆಗೆ ಹೊಸ ಸ್ಕೂಟರ್‌ನಲ್ಲಿ 7-ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್ ಮತ್ತು ಶಟರ್‌ಪ್ರೂಫ್ ಸ್ಕ್ರೀನ್‌ನೊಂದಿಗೆ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಆನ್ ಬೋರ್ಡ್ ನ್ಯಾನಿಗೇಷನ್‌ಗಾಗಿ ಇಸಿಮ್ ಇಂಟರ್‌ನೆಂಟ್ ಕನೆಕ್ಟಿವಿಟಿ, ಸ್ಮಾಟ್‌ಫೋರ್ಟ್ ಮೂಲಕ ವಿವಿಧ ತಾಂತ್ರಿಕ ಅಂಶಗಳನ್ನು ನಿಯಂತ್ರಿಸಲು ಕನೆಕ್ಟೆಡ್ ಫೀಚರ್ಸ್ ಸಹ ನೀಡಲಾಗಿದೆ.

More from DriveSpark

Article Published On: Friday, January 21, 2022, 16:09 [IST]
English summary
Ola s1 ev scooter final payment window will be open today 6 pm
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+