ನಾಳೆಯಿಂದಲೇ ಮತ್ತಷ್ಟು ದುಬಾರಿ ಬೆಲೆ ಪಡೆದುಕೊಳ್ಳಲಿವೆ ಓಲಾ ಹೊಸ ಇವಿ ಸ್ಕೂಟರ್

ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಶೀಘ್ರದಲ್ಲಿಯೇ ತನ್ನ ಇವಿ ಸ್ಕೂಟರ್ ಮಾದರಿಗಳ ಬೆಲೆ ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿದ್ದು, ಕಂಪನಿಯ ಎಸ್1 ಪ್ರೊ ಮಾದರಿಯು ಮತ್ತಷ್ಟು ದುಬಾರಿಯಾಗಲಿದೆ.

ನಾಳೆಯಿಂದಲೇ ಮತ್ತಷ್ಟು ದುಬಾರಿ ಬೆಲೆ ಪಡೆದುಕೊಳ್ಳಲಿವೆ ಓಲಾ ಹೊಸ ಇವಿ ಸ್ಕೂಟರ್

ಬಜೆಟ್ ಬೆಲೆಯ ಇವಿ ಮಾದರಿಗಳ ಮೂಲಕ ಹೊಸ ಸಂಚಲನಕ್ಕೆ ಕಾರಣವಾಗಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಹೋಳಿ ಹಬ್ಬದ ವಿಶೇಷವಾಗಿ ಎಸ್1 ಪ್ರೊ ಇವಿ ಸ್ಕೂಟರ್ ಮಾದರಿಗಾಗಿ ವಿನೂತನ ಬಣ್ಣದ ಆಯ್ಕೆಯನ್ನು ಪರಿಚಯಿಸಿ ಹಳೆಯ ಬೆಲೆಯಲ್ಲಿ ಸ್ಕೂಟರ್ ಖರೀದಿಗೆ ಇಂದೇ ಕೊನೆಯ ದಿನವೆಂದು ಘೋಷಣೆ ಮಾಡಿದ್ದು, ಮಾರ್ಚ್ 18ರ ಮಧ್ಯರಾತ್ರಿ ತನಕ ಬುಕ್ಕಿಂಗ್ ಸಲ್ಲಿಸುವ ಗ್ರಾಹಕರಿಗೆ ಮಾತ್ರ ಪ್ರಸ್ತುತ ಮಾರುಕಟ್ಟೆಯಲ್ಲಿನ ಬೆಲೆಯಲ್ಲಿಯೇ ವಿತರಣೆ ಮಾಡುವುದಾಗಿ ಹೇಳಿಕೊಂಡಿದೆ.

ನಾಳೆಯಿಂದಲೇ ಮತ್ತಷ್ಟು ದುಬಾರಿ ಬೆಲೆ ಪಡೆದುಕೊಳ್ಳಲಿವೆ ಓಲಾ ಹೊಸ ಇವಿ ಸ್ಕೂಟರ್

ಮಾರ್ಚ್ 18ರ ನಂತರ ಎಸ್‌1 ಪ್ರೊ ಮಾದರಿಗಾಗಿ ಬುಕಿಂಗ್ ಸಲ್ಲಿಸುವ ಗ್ರಾಹಕರಿಗೆ ಹೊಸ ಬೆಲೆಯಲ್ಲಿ ವಿತರಣೆ ಮಾಡುವುದಾಗಿ ಹೇಳಿಕೊಂಡಿದ್ದು, ಮಾಹಿತಿಗಳ ಪ್ರಕಾರ ಹೊಸ ಇವಿ ಸ್ಕೂಟರ್ ರೂ.5 ಸಾವಿರದಿಂದ ರೂ. 8 ಸಾವಿರ ತನಕ ದರ ಹೆಚ್ಚಳ ಪಡೆದುಕೊಳ್ಳಬಹುದಾಗಿದೆ.

ನಾಳೆಯಿಂದಲೇ ಮತ್ತಷ್ಟು ದುಬಾರಿ ಬೆಲೆ ಪಡೆದುಕೊಳ್ಳಲಿವೆ ಓಲಾ ಹೊಸ ಇವಿ ಸ್ಕೂಟರ್

ಓಲಾ ಎಲೆಕ್ಟ್ರಿಕ್ ಕಂಪನಿಯು ಸದ್ಯ ಎಸ್1 ಪ್ರೊ ಮಾದರಿಯನ್ನು ಮಾತ್ರವೇ ಉತ್ಪಾದನೆಗೊಳಿಸುತ್ತಿದ್ದು, ಎಸ್1 ಮಾದರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಈಗಾಗಲೇ ಎಸ್1 ಮಾದರಿಗಾಗಿ ಬುಕಿಂಗ್ ಸಲ್ಲಿಸಿರುವ ಗ್ರಾಹಕರಿಗೆ ಕಂಪನಿಯು ಎಸ್1 ಬದಲಾಗಿ ಎಸ್1 ದರಯಲ್ಲಿಯೇ ಎಸ್1 ಪ್ರೊ ಮಾದರಿಯನ್ನೇ ವಿತರಣೆ ಮಾಡುತ್ತಿದ್ದು, ಕೆಲವು ಪ್ರೀಮಿಯಂ ಫೀಚರ್ಸ್‌ಗಳು, ಸಾಫ್ಟ್‌ವೇರ್ ಅಪ್‌ಡೇಟ್, ಅಧಿಕ ಮೈಲೇಜ್ ಬ್ಯಾಟರಿ ರೇಂಜ್ ನೀಡಲಾಗಿಲ್ಲ.

ನಾಳೆಯಿಂದಲೇ ಮತ್ತಷ್ಟು ದುಬಾರಿ ಬೆಲೆ ಪಡೆದುಕೊಳ್ಳಲಿವೆ ಓಲಾ ಹೊಸ ಇವಿ ಸ್ಕೂಟರ್

ಎಸ್1 ಮಾದರಿಗಾಗಿ ಬುಕಿಂಗ್ ಮಾಡಿದ ಗ್ರಾಹಕರಿಗೆ ಕೇವಲ ಎಸ್1 ಪ್ರೊ ಮಾದರಿಯು ಸಾಮಾನ್ಯ ಆವೃತ್ತಿಯನ್ನು ವಿತರಣೆ ನೀಡಲಾಗುತ್ತಿದ್ದು, ಒಂದು ವೇಳೆ ಹೆಚ್ಚುವರಿ ಫೀಚರ್ಸ್ ಮತ್ತು ಅಧಿಕ ಮೈಲೇಜ್ ರೇಂಜ್ ಬಯಸಿದರೆ ಇನ್ನುಳಿದ ಹಣ ಪಾವತಿ ಮಾಡಿ ಹೈ ಎಂಡ್ ಮಾದರಿಗೆ ಉನ್ನತೀಕರಿಸಿಕೊಳ್ಳಬಹುದು.

ನಾಳೆಯಿಂದಲೇ ಮತ್ತಷ್ಟು ದುಬಾರಿ ಬೆಲೆ ಪಡೆದುಕೊಳ್ಳಲಿವೆ ಓಲಾ ಹೊಸ ಇವಿ ಸ್ಕೂಟರ್

ಈಗಾಗಲೇ ಎಸ್1 ಪ್ರೊ ಮಾದರಿಗಾಗಿ ಬುಕಿಂಗ್ ಮಾಡಿರುವ ಗ್ರಾಹಕರು ಕಂಪನಿಯು ನಿಗದಿಪಡಿಸಿರುವ ತಾಂತ್ರಿಕ ಅಂಶಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲವಾದರೂ ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ 2.0 ಸಾಫ್ಟ್‌ವೇರ್ ಅಪ್‌ಡೇಟ್ ಹೊಂದಿರುವ ಎಸ್1 ಪ್ರೊ ಮಾದರಿಯು ತುಸು ದುಬಾರಿಯಾಗಲಿದೆ.

ನಾಳೆಯಿಂದಲೇ ಮತ್ತಷ್ಟು ದುಬಾರಿ ಬೆಲೆ ಪಡೆದುಕೊಳ್ಳಲಿವೆ ಓಲಾ ಹೊಸ ಇವಿ ಸ್ಕೂಟರ್

ಸದ್ಯ ಎಸ್1 ಪ್ರೊ ಮಾದರಿಯನ್ನು ಮಾತ್ರ ಉತ್ಪಾದನೆ ಕೈಗೊಳ್ಳುತ್ತಿರುವ ಓಲಾ ಕಂಪನಿಯು ಹಳೆಯ ಬೆಲೆಯಲ್ಲಿ ಖರೀದಿಗೆ ಕೊನೆಯ ಅವಕಾಶ ನೀಡಿದ್ದು, ಆಸಕ್ತ ಗ್ರಾಹಕರಿಗೆ ಈ ದಿನದ ಕೊನೆಯ ತನಕ ಬುಕಿಂಗ್ ಸಲ್ಲಿಸುವ ಅವಕಾಶವಿದೆ.

ನಾಳೆಯಿಂದಲೇ ಮತ್ತಷ್ಟು ದುಬಾರಿ ಬೆಲೆ ಪಡೆದುಕೊಳ್ಳಲಿವೆ ಓಲಾ ಹೊಸ ಇವಿ ಸ್ಕೂಟರ್

ಜೊತೆಗೆ ವಿಶೇಷ ಬಣ್ಣವನ್ನು ಪಡೆದುಕೊಂಡಿರುವ ಹೊಸ ಆವೃತ್ತಿಯು ಸಹ ಕೇವಲ 17 ಮತ್ತು 18ರಂದು ಬುಕ್ ಮಾಡಿರುವ ಗ್ರಾಹಕರಿಗೆ ಮಾತ್ರ ವಿತರಣೆ ಮಾಡುವುದಾಗಿ ಹೇಳಿಕೊಂಡಿದ್ದು, ಎಸ್1 ಪ್ರೊ ಮಾದರಿಯು ಈ ಹಿಂದಿನ ಬೆಲೆ ರೂ. 1,29,999 ಖರೀದಿಗೆ ಲಭ್ಯವಿದೆ.

ನಾಳೆಯಿಂದಲೇ ಮತ್ತಷ್ಟು ದುಬಾರಿ ಬೆಲೆ ಪಡೆದುಕೊಳ್ಳಲಿವೆ ಓಲಾ ಹೊಸ ಇವಿ ಸ್ಕೂಟರ್

ಅತ್ಯತ್ತಮ ಕಾರ್ಯಕ್ಷಮತೆ, ಗರಿಷ್ಠ ಮೈಲೇಜ್, ಪ್ರೀಮಿಯಂ ಫೀಚರ್ಸ್ ಮತ್ತು ಬಜೆಟ್ ಬೆಲೆಯು ಹೊಸ ಸ್ಕೂಟರ್ ಆಯ್ಕೆ ಮೌಲ್ಯವನ್ನು ಹೆಚ್ಚಿಸಿದ್ದು, ಹೆಚ್ಚಳವಾಗುತ್ತಿರುವ ಉತ್ಪಾದನಾ ವೆಚ್ಚ ನಿರ್ವಹಣೆಗಾಗಿ ಕಂಪನಿಯು ಬೆಲೆ ಹೆಚ್ಚಳ ನಿರ್ಧಾರ ಪ್ರಕಟಿಸಿದೆ.

ನಾಳೆಯಿಂದಲೇ ಮತ್ತಷ್ಟು ದುಬಾರಿ ಬೆಲೆ ಪಡೆದುಕೊಳ್ಳಲಿವೆ ಓಲಾ ಹೊಸ ಇವಿ ಸ್ಕೂಟರ್

ಹೊಸ ಎಸ್1 ವೆರಿಯೆಂಟ್‌‌ನಲ್ಲಿ ಓಲಾ ಕಂಪನಿಯು 2.98kWh ಮತ್ತು ಎಸ್1 ಪ್ರೊ ಮಾದರಿಯಲ್ಲಿ 3.97kWh ಲೀಥಿಯಂ ಅಯಾನ್ ಬ್ಯಾಟರಿ ಜೋಡಣೆ ಮಾಡಿದ್ದು, ಪ್ರತಿ ಚಾರ್ಜ್‌ಗೆ ಎಸ್1 ಮಾದರಿಯು ಗರಿಷ್ಠ 121 ಕಿ.ಮೀ ಮೈಲೇಜ್ ಹಿಂದಿರುಗಿಸಿದರೆ ಎಸ್1 ಪ್ರೊ ಮಾದರಿಯು ಪ್ರತಿ ಚಾರ್ಜ್‌ಗೆ 181 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ನಾಳೆಯಿಂದಲೇ ಮತ್ತಷ್ಟು ದುಬಾರಿ ಬೆಲೆ ಪಡೆದುಕೊಳ್ಳಲಿವೆ ಓಲಾ ಹೊಸ ಇವಿ ಸ್ಕೂಟರ್

ಇದರಲ್ಲಿ ಎಸ್1 ಮಾದರಿಯು ಗಂಟೆಗೆ 90 ಕಿ.ಮೀ ಟಾಪ್ ಸ್ಪೀಡ್‌ ಹೊಂದಿದ್ದರೆ ಎಸ್1 ಪ್ರೊ ಮಾದರಿಯು ಪ್ರತಿ ಗಂಟೆಗೆ 115ಕಿ.ಮೀ ಟಾಪ್ ಸ್ಪೀಡ್‌ ಹೊಂದಿದ್ದು, ಎಸ್1 ಮಾದರಿಯಲ್ಲಿ ನಾರ್ಮಲ್ ಮತ್ತು ಸ್ಪೋರ್ಟ್ ರೈಡ್ ಮೋಡ್‌ಗಳಿದ್ದರೆ ಎಸ್1 ಪ್ರೊ ಮಾದರಿಯಲ್ಲಿ ನಾರ್ಮಲ್, ಸ್ಪೋರ್ಟ್ ಮತ್ತು ಹೈಪರ್ ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ.

ನಾಳೆಯಿಂದಲೇ ಮತ್ತಷ್ಟು ದುಬಾರಿ ಬೆಲೆ ಪಡೆದುಕೊಳ್ಳಲಿವೆ ಓಲಾ ಹೊಸ ಇವಿ ಸ್ಕೂಟರ್

ಹಾಗೆಯೇ ಓಲಾ ಇವಿ ಸ್ಕೂಟರ್‌ಗಳು ಅತ್ಯುತ್ತಮ ವಿನ್ಯಾಸದೊಂದಿಗೆ ಗರಿಷ್ಠ ಮಟ್ಟದ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಂಡಿದ್ದು, ಹೊಸ ಸ್ಕೂಟರ್‌ಗಳಲ್ಲಿ ಟ್ವಿನ್ ಪಾಡ್ ಎಲ್ಇಡಿ ಸೆಟ್ಅಪ್, ಎಲ್ಇಡಿ ಡಿಆರ್‌ಎಲ್ಎಸ್, ಎಲ್ಇಡಿ ಟೈಲ್‌ಲ್ಯಾಂಪ್, ಕೌಂಟ್‌ರ್ಡ್ ಸೀಟ್, ಅಲಾಯ್ ವ್ಹೀಲ್, 36-ಲೀಟರ್ ಸಾಮರ್ಥ್ಯ ಅಂಡರ್ ಸೀಟ್ ಸ್ಪೋರೇಜ್, ರಿಯರ್ ಗ್ರ್ಯಾಬ್ ರೈಲ್ಸ್, ಫ್ರಂಟ್ ಸ್ಟೋರೇಜ್ ಪ್ಯಾಕೇಟ್, ಲಗೇಜ್ ಹುಕ್ ಮತ್ತು ಹತ್ತು ವಿವಿಧ ಬಣ್ಣಗಳ ಆಯ್ಕೆ ಹೊಂದಿದೆ.

ನಾಳೆಯಿಂದಲೇ ಮತ್ತಷ್ಟು ದುಬಾರಿ ಬೆಲೆ ಪಡೆದುಕೊಳ್ಳಲಿವೆ ಓಲಾ ಹೊಸ ಇವಿ ಸ್ಕೂಟರ್

ಹೊಸ ಸ್ಕೂಟರ್‌ಗಳು 1,859 ಎಂಎಂ ಉದ್ದ, 712 ಎಂಎಂ ಅಗಲ, 1,160 ಎಂಎಂ ಎತ್ತರ, 1,359 ಎಂಎಂ ವ್ಹೀಲ್ ಬೆಸ್, 792 ಎಂಎಂ ಸೀಟ್ ಹೈಟ್, 125 ಕೆ.ಜಿ ತೂಕ ಹೊಂದಿದ್ದು, ಮುಂಭಾಗದಲ್ಲಿ ಸಿಂಗಲ್ ಫೋರ್ಕ್ ಸಸ್ಫೆಷನ್ ಮತ್ತು ಹಿಂಬದಿಯಲ್ಲಿ ಮೊನೊ ಶಾಕ್ ಸಸ್ಷೆಷನ್‌ನೊಂದಿಗೆ ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್ ಜೋಡಣೆ ಹೊಂದಿವೆ.

ನಾಳೆಯಿಂದಲೇ ಮತ್ತಷ್ಟು ದುಬಾರಿ ಬೆಲೆ ಪಡೆದುಕೊಳ್ಳಲಿವೆ ಓಲಾ ಹೊಸ ಇವಿ ಸ್ಕೂಟರ್

ಜೊತೆಗೆ ಹೊಸ ಸ್ಕೂಟರ್‌ನಲ್ಲಿ 7-ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್ ಮತ್ತು ಶಟರ್‌ಪ್ರೂಫ್ ಸ್ಕ್ರೀನ್‌ನೊಂದಿಗೆ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಆನ್ ಬೋರ್ಡ್ ನ್ಯಾನಿಗೇಷನ್‌ಗಾಗಿ ಇಸಿಮ್ ಇಂಟರ್‌ನೆಂಟ್ ಕನೆಕ್ಟಿವಿಟಿ, ಸ್ಮಾಟ್‌ಫೋರ್ಟ್ ಮೂಲಕ ವಿವಿಧ ತಾಂತ್ರಿಕ ಅಂಶಗಳನ್ನು ನಿಯಂತ್ರಿಸಲು ಕನೆಕ್ಟೆಡ್ ಫೀಚರ್ಸ್ ಸಹ ನೀಡಲಾಗಿದೆ.

More from DriveSpark

Article Published On: Friday, March 18, 2022, 13:26 [IST]
English summary
Ola s1 pro electric scooter price hike soon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+