ಎಸ್1 ಪ್ರೊ ಇವಿ ಸ್ಕೂಟರ್ ವಿತರಣೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಓಲಾ ಎಲೆಕ್ಟ್ರಿಕ್

ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಹೊಸ ಎಸ್1 ಪ್ರೊ ಇವಿ ಸ್ಕೂಟರ್ ಮೂಲಕ ಹಲವಾರು ದಾಖಲೆಗಳಿಗೆ ಕಾರಣವಾಗಿದೆ.

ಓಲಾ ಎಲೆಕ್ಟ್ರಿಕ್ ಕಂಪನಿಯು ಎಸ್1 ಪ್ರೊ ಬಿಡುಗಡೆ ಮಾಡಿದ ಒಂದು ವರ್ಷದಲ್ಲಿ ಇದುವರೆಗೆ ಬರೋಬ್ಬರಿ 70 ಸಾವಿರ ಯುನಿಟ್ ಮಾರಾಟ ಮಾಡುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ.

ಎಸ್1 ಪ್ರೊ ಇವಿ ಸ್ಕೂಟರ್ ವಿತರಣೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಓಲಾ ಎಲೆಕ್ಟ್ರಿಕ್

2021ರ ಅಗಸ್ಟ್ 15ರಂದು ಬಿಡುಗಡೆಯಾಗಿದ್ದ ಎಸ್1 ಪ್ರೊ ಇವಿ ಸ್ಕೂಟರ್ ಮಾದರಿಯನ್ನು ಓಲಾ ಎಲೆಕ್ಟ್ರಿಕ್ ಕಂಪನಿಯು ಡಿಸೆಂಬರ್‌ನಲ್ಲಿ ವಿತರಣೆ ಆರಂಭಿಸಿತ್ತು. ಆರಂಭದಲ್ಲಿ ಉತ್ಪಾದನಾ ಪ್ರಮಾಣಕ್ಕೆ ಅನುಗುಣವಾಗಿ ನಿಧಾನಗತಿಯಲ್ಲಿ ವಿತರಣೆ ಆರಂಭಿಸಿದ್ದ ಓಲಾ ಎಲೆಕ್ಟ್ರಿಕ್ ಕಳೆದ ಕೆಲ ತಿಂಗಳಿನಿಂದ ವಿತರಣೆಯನ್ನು ತೀವ್ರಗೊಳಿಸಿದೆ.

ಎಸ್1 ಪ್ರೊ ಇವಿ ಸ್ಕೂಟರ್ ವಿತರಣೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಓಲಾ ಎಲೆಕ್ಟ್ರಿಕ್

ಉತ್ಪಾದನಾ ಪ್ರಮಾಣ ಹೆಚ್ಚಳ ನಂತರ ಕಳೆದ ಆರು ತಿಂಗಳಿನಲ್ಲಿ ವಿತರಣೆ ಪ್ರಮಾಣವು ಸರಾಸರಿಯಾಗಿ ಪ್ರತಿ ತಿಂಗಳು 10 ಸಾವಿರ ಯುನಿಟ್ ವಿತರಣೆಗೊಂಡಿದ್ದು, ಈ ಮೂಲಕ ಹೊಸ ಸ್ಕೂಟರ್‌ಗೆ ದಾಖಲಾಗಿರುವ ಅರ್ಧಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಇವಿ ಸ್ಕೂಟರ್ ವಿತರಣೆ ಮಾಡಿದೆ.

ಎಸ್1 ಪ್ರೊ ಇವಿ ಸ್ಕೂಟರ್ ವಿತರಣೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಓಲಾ ಎಲೆಕ್ಟ್ರಿಕ್

ಎಸ್1 ಪ್ರೊ ಮಾದರಿಗಾಗಿ ಸುಮಾರು 1.50 ಲಕ್ಷಕ್ಕೂ ಹೆಚ್ಚು ಗ್ರಾಹಕರು ಬುಕಿಂಗ್ ಸಲ್ಲಿಸಿದ್ದು, ಸ್ಕೂಟರ್ ವಿತರಣೆಯ ಹೆಚ್ಚಳದ ಜೊತೆಗೆ ಹೊಸ ಸ್ಕೂಟರ್‌ನಲ್ಲಿ ಕಂಪನಿಯು ನಿರಂತರವಾಗಿ ಹೊಸ ಬದಲಾವಣೆಗಳನ್ನು ಕೂಡಾ ಪರಿಚಯಿಸುತ್ತಿದೆ.

ಎಸ್1 ಪ್ರೊ ಇವಿ ಸ್ಕೂಟರ್ ವಿತರಣೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಓಲಾ ಎಲೆಕ್ಟ್ರಿಕ್

ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಅಗ್ರಸ್ಥಾನಕ್ಕೇರಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಇತ್ತೀಚೆಗಷ್ಟೇ ಮೂವ್ ಒಎಸ್ 2.0 ಸಾಫ್ಟ್‌ವೇರ್ ಅಪ್‌ಡೇಟ್ ನೀಡಿತ್ತು. ಇದೀಗ ಕಂಪನಿಯು ಮುಂಬರುವ ದೀಪಾವಳಿ ಹೊತ್ತಿಗೆ ಮೂವ್‌ ಒಎಸ್ 3.0(MoveOS 3) ಅಪ್‌ಡೇಟ್ ನೀಡುವುದಾಗಿ ಘೋಷಣೆ ಮಾಡಿದೆ.

ಎಸ್1 ಪ್ರೊ ಇವಿ ಸ್ಕೂಟರ್ ವಿತರಣೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಓಲಾ ಎಲೆಕ್ಟ್ರಿಕ್

ಹೊಸ ಎಸ್1 ಪ್ರೊ ಮಾದರಿಯಲ್ಲಿ ಸದ್ಯ ಮೂವ್‌ ಒಎಸ್ 2.0 ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಗ್ರಾಹಕರಿಗೆ ಗರಿಷ್ಠ ಫೀಚರ್ಸ್ ನೀಡುತ್ತಿದ್ದು, ಮೂವ್‌ ಒಎಸ್ 3.0 ಅಪ್‌ಡೇಟ್ ಮೂಲಕ ಮತ್ತಷ್ಟು ಹೊಸ ಫೀಚರ್ಸ್ ನೀಡುವುದಾಗಿ ಕಂಪನಿಯ ಸಿಇಓ ಭರವಸೆ ನೀಡಿದ್ದಾರೆ.

ಎಸ್1 ಪ್ರೊ ಇವಿ ಸ್ಕೂಟರ್ ವಿತರಣೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಓಲಾ ಎಲೆಕ್ಟ್ರಿಕ್

ಎಸ್1 ಪ್ರೊ ಸ್ಕೂಟರ್ ಬಿಡುಗಡೆ ಆರಂಭದಲ್ಲಿ ಕೆಲವೇ ಕೆಲವು ಫೀಚರ್ಸ್‌ಗಳನ್ನು ನೀಡಿದ್ದ ಓಲಾ ಎಲೆಕ್ಟ್ರಿಕ್ ಕಂಪನಿಯು ಮೂವ್‌ ಒಎಸ್ 2.0 ಅಪ್‌ಡೇಟ್ ಮೂಲಕ ಕೆಲವು ಹೊಸ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡಿತ್ತು. ಇದೀಗ ಮೂವ್‌ ಒಎಸ್ 3.0 ಅಪ್‌ಡೇಟ್ ಮೂಲಕ ಸ್ಕೂಟರ್ ಆರಂಭದಲ್ಲಿ ಘೋಷಣೆ ಮಾಡಲಾಗಿದ್ದ ಎಲ್ಲಾ ಫೀಚರ್ಸ್‌ಗಳನ್ನು ಒದಗಿಸುವ ಭರವಸೆ ನೀಡಿದೆ.

ಎಸ್1 ಪ್ರೊ ಇವಿ ಸ್ಕೂಟರ್ ವಿತರಣೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಓಲಾ ಎಲೆಕ್ಟ್ರಿಕ್

ಓಲಾ ಎಲೆಕ್ಟ್ರಿಕ್ ಕಂಪನಿಯು ಮೂವ್ಒಎಸ್ 2.0 ನವೀಕಣದ ಸಂದರ್ಭದಲ್ಲಿ ಎಸ್1 ಪ್ರೊ ಮಾದರಿಯಲ್ಲಿ ಇಕೋ ಮೋಡ್, ಡಿಜಿಟಲ್ ಲಾಕ್ ಮತ್ತು ಅನ್‌ಲಾಕ್, ಮ್ಯೂಸಿಕ್ ಮತ್ತು ಕ್ರೂಸ್ ಕಂಟ್ರೊಲ್ ಆಯ್ಕೆಗಳನ್ನು ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ಗ್ರಾಹಕರ ಬಳಕೆಗೆ ಅನುಮತಿ ನೀಡಿತ್ತು.

ಎಸ್1 ಪ್ರೊ ಇವಿ ಸ್ಕೂಟರ್ ವಿತರಣೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಓಲಾ ಎಲೆಕ್ಟ್ರಿಕ್

ಇದೀಗ ಕಂಪನಿಯು ಮೂವ್‌ ಒಎಸ್ 3.0 ಅಪ್‌ಡೇಟ್ ಮೂಲಕ ಹಿಲ್ ಹೋಲ್ಡ್, ಪ್ರಾಕ್ಸಿಮಿಟಿ ಅನ್‌ಲಾಕ್, ಮೂಡ್ಸ್, ರೀಜೆನ್ ವಿ2, ಹೈಪರ್ ಚಾರ್ಜಿಂಗ್, ಕಾಲಿಂಗ್, ಕೀ ಶೇರಿಂಗ್ ಸೇರಿದಂತೆ ಹಲವು ಫೀಚರ್ಸ್ ಬಳಕೆಗೆ ಅವಕಾಶ ಸಿಗಲಿದೆ.

ಎಸ್1 ಪ್ರೊ ಇವಿ ಸ್ಕೂಟರ್ ವಿತರಣೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಓಲಾ ಎಲೆಕ್ಟ್ರಿಕ್

ಮೂವ್ ಒಎಸ್ 2.0 ಸಾಫ್ಟ್‌ವೇರ್ ಅಪ್‌ಡೇಟ್‌ ಮುಖ್ಯವಾಗಿ ಬ್ಯಾಟರಿ ಡ್ರಾಪ್ ಅನ್ನು ಪರಿಹರಿಸಲಿದ್ದು, ಇದು ಹೊಸ ಇಕೋ ಮೋಡ್‌ನೊಂದಿಗೆ ಸಂಪೂರ್ಣವಾಗಿ ಬ್ಯಾಟರಿ ಡೌನ್ ಆತಂಕವನ್ನು ದೂರ ಮಾಡುತ್ತದೆ. ಕಂಪನಿಯ ಪರೀಕ್ಷೆಯ ಪ್ರಕಾರ ಇಕೋ-ಮೋಡ್ ಪ್ರತಿ ಚಾರ್ಜ್‌ಗೆ ಕನಿಷ್ಠ 170 ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ.

ಎಸ್1 ಪ್ರೊ ಇವಿ ಸ್ಕೂಟರ್ ವಿತರಣೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಓಲಾ ಎಲೆಕ್ಟ್ರಿಕ್

ಹೊಸ ಅಪ್‌ಡೇಟ್ ನಂತರ ಈಗಾಗಲೇ ಹಲವಾರು ಗ್ರಾಹಕರು ಪ್ರತಿ ಚಾರ್ಜ್‌ನಲ್ಲಿಯೇ ಗರಿಷ್ಠ 200 ಕಿಲೋ ಮೀಟರ್‌ಗಿಂತಲೂ ಹೆಚ್ಚಿನ ವ್ಯಾಪ್ತಿಯನ್ನು ಸಾಧಿಸಿದ್ದು, ಇನ್ನುಳಿದ ರೈಡ್ ಮೋಡ್‌ಗಳಲ್ಲೂ ಉತ್ತಮ ಮೈಲೇಜ್ ಜೊತೆಗೆ ಉತ್ತಮ ಪರ್ಫಾಮೆನ್ಸ್ ಕೂಡಾ ಒದಗಿಸಲಿದೆ.

ಎಸ್1 ಪ್ರೊ ಇವಿ ಸ್ಕೂಟರ್ ವಿತರಣೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಓಲಾ ಎಲೆಕ್ಟ್ರಿಕ್

ಇದರ ಜೊತಗೆ ಹೊಸ ಅಪ್‌ಡೇಟ್ ನಂತರ ಡಿಜಿಟಲ್ ಲಾಕ್‌ನೊಂದಿಗೆ ಬರಲಿದ್ದು, ಇದಕ್ಕಾಗಿ ಕಂಪನಿಯು ಓಲಾ ಎಲೆಕ್ಟ್ರಿಕ್ ಕಂಪ್ಯಾನಿಯನ್ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಇದು ಸ್ಕೂಟರ್ ಅನ್ನು ಲಾಕ್, ಅನ್‌ಲಾಕ್ ಮಾಡಲು ಸಹಾಯ ಮಾಡುವುದಲ್ಲದೆ ಇದು ಪ್ರಮುಖ ವಾಹನ ಮೆಟ್ರಿಕ್‌ಗಳನ್ನು ಲಾಗಿನ್‌ ಆಗಲು ಸಹಾಯ ಮಾಡುತ್ತದೆ.

ಎಸ್1 ಪ್ರೊ ಇವಿ ಸ್ಕೂಟರ್ ವಿತರಣೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಓಲಾ ಎಲೆಕ್ಟ್ರಿಕ್

ಇದರೊಂದಿಗೆ ಹೊಸ ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಮೊದಲ ಬಾರಿಗೆ ಮ್ಯೂಜಿಕ್ ಪ್ಲೇಬ್ಯಾಕ್ ವೈಶಿಷ್ಟ್ಯವನ್ನು ನೀಡಲಾಗಿದ್ದು, ಸವಾರರು ಈಗ ಬ್ಲೂಟೂತ್ ಮೂಲಕ ಅವರ ಫೋನ್‌ಗಳನ್ನು ಕನೆಕ್ಟ್ ಮಾಡಿಕೊಂಡು ಪ್ರಯಾಣದಲ್ಲಿರುವಾಗ ಜಿಯೋಸಾವನ್ ಮತ್ತು ಸ್ಪೋರ್ಟಿಫೈಅಪ್ಲಿಕೇಶನ್‌ಗಳ ಮೂಲಕ ಅವರ ನೆಚ್ಚಿನ ಟ್ಯೂನ್‌ಗಳನ್ನು ಆನಂದಿಸಬಹುದಾಗಿದೆ.

ಎಸ್1 ಪ್ರೊ ಇವಿ ಸ್ಕೂಟರ್ ವಿತರಣೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಓಲಾ ಎಲೆಕ್ಟ್ರಿಕ್

ಹೊಸ ಅಪ್‌ಡೇಟ್‌ನಲ್ಲಿ ಮುಖ್ಯವಾಗಿ ಕ್ರೂಸ್ ಕಂಟ್ರೋಲ್ ಸೇರ್ಪಡೆ ಮಾಡಲಾಗಿದ್ದು, ಇದನ್ನು ನಾರ್ಮಲ್, ಸ್ಪೋರ್ಟ್ ಮತ್ತು ಹೈಪರ್ ಮೋಡ್‌ಗಳಲ್ಲಿ ಮಾತ್ರ ಸಕ್ರಿಯವಾಗಿರುತ್ತದೆ.

ಎಸ್1 ಪ್ರೊ ಇವಿ ಸ್ಕೂಟರ್ ವಿತರಣೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಓಲಾ ಎಲೆಕ್ಟ್ರಿಕ್

ಇದು ಪ್ರಯಾಣಿಕರ ಇವಿ ಸ್ಕೂಟರ್ ವಿಭಾಗದಲ್ಲಿ ಒಂದು ರೀತಿಯ ಹೊಸ ಅನುಭವ ನೀಡುತ್ತಿದ್ದು, ಇದು ಮುಕ್ತವಾಗಿರುವ ಮಾರ್ಗಗಳಲ್ಲಿ 20 km/h ನಿಂದ 80 km/h ವರೆಗೆ ಹೆಚ್ಚಿನ ಸೌಕರ್ಯ ಮತ್ತು ಸುಗಮ ಸವಾರಿಯ ಅನುಭವವನ್ನು ಖಾತರಿಪಡಿಸಲು ನೇರವಾಗುತ್ತದೆ.

ಎಸ್1 ಪ್ರೊ ಇವಿ ಸ್ಕೂಟರ್ ವಿತರಣೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಓಲಾ ಎಲೆಕ್ಟ್ರಿಕ್

ಕ್ರೂಸ್ ಕಂಟ್ರೋಲ್ ಅನ್ನು ಎಡಭಾಗದ ಡಿಪ್ಯಾಡ್ ಮೇಲಿನ ಬಲಭಾಗದ ಬಟನ್ ಅನ್ನು ದೀರ್ಘವಾಗಿ ಒತ್ತುವ ಮೂಲಕ 20 kmph ಮತ್ತು 80 kmph ನಡುವೆ ಸಕ್ರಿಯಗೊಳಿಸಬಹುದಾಗಿದ್ದು, ಅದರ ಮೇಲೆ ಕ್ರೂಸ್ ಕಂಟ್ರೋಲ್/ರಿವರ್ಸ್ ಐಕಾನ್ ಕೂಡ ಇರುತ್ತದೆ. ಇದನ್ನು ನಾರ್ಮಲ್, ಹೈಪರ್ ಮತ್ತು ಸ್ಪೋರ್ಟ್ ವಿಧಾನಗಳಲ್ಲಿ ಸಕ್ರಿಯಗೊಳಿಸಬಹುದಾಗಿದೆ.

More from DriveSpark

Article Published On: Monday, August 22, 2022, 10:59 [IST]
English summary
Ola s1 pro electric scooter sales cross 70 000 units in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+