ಹೋಳಿ ಹಬ್ಬದ ವಿಶೇಷತೆಗಾಗಿ ಎಸ್1 ಪ್ರೊ ಮಾದರಿಯಲ್ಲಿ ವಿಶೇಷ ಬಣ್ಣದ ಆಯ್ಕೆ ನೀಡಿದ ಓಲಾ ಎಲೆಕ್ಟ್ರಿಕ್

ಬಜೆಟ್ ಬೆಲೆಯ ಇವಿ ಮಾದರಿಗಳ ಮೂಲಕ ಹೊಸ ಸಂಚಲನಕ್ಕೆ ಕಾರಣವಾಗಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಭಾರತದಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುವ ಹೋಳಿ ಹಬ್ಬದ ವಿಶೇಷವಾಗಿ ತನ್ನ ಜನಪ್ರಿಯ ಎಸ್1 ಪ್ರೊ ಇವಿ ಸ್ಕೂಟರ್ ಮಾದರಿಯಲ್ಲಿ ವಿನೂತನ ಬಣ್ಣದ ಆಯ್ಕೆಯನ್ನು ಪರಿಚಯಿಸಿದೆ.

ಹೋಳಿ ಹಬ್ಬದ ವಿಶೇಷತೆಗಾಗಿ ಎಸ್1 ಪ್ರೊ ಮಾದರಿಯಲ್ಲಿ ವಿಶೇಷ ಬಣ್ಣದ ಆಯ್ಕೆ ನೀಡಿದ ಓಲಾ ಎಲೆಕ್ಟ್ರಿಕ್

ಹೋಳಿ ಹಬ್ಬದ ವಿಶೇಷತೆಗಾಗಿ ಎಸ್1 ಪ್ರೊ ಮಾದರಿಯಲ್ಲಿ ಹೊಸ ಬಣ್ಣದ ಆಯ್ಕೆ ನೀಡಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಭಾರೀ ಪ್ರಮಾಣದ ಗ್ರಾಹಕರನ್ನು ಸೆಳೆಯುವ ನೀರಿಕ್ಷೆಯಲ್ಲಿದ್ದು, ಕಡು ಕಿತ್ತಳೆ ಬಣ್ಣವನ್ನು ಹೊಂದಿರುವ ಹೊಸ ಮಾದರಿಯ ಖರೀದಿಗಾಗಿ ಕಂಪನಿಯು ಮಾರ್ಚ್ 17 ಮತ್ತು 18 ರಂದು ಬುಕಿಂಗ್‌ ಆರಂಭಿಸುತ್ತಿದೆ.

ಹೋಳಿ ಹಬ್ಬದ ವಿಶೇಷತೆಗಾಗಿ ಎಸ್1 ಪ್ರೊ ಮಾದರಿಯಲ್ಲಿ ವಿಶೇಷ ಬಣ್ಣದ ಆಯ್ಕೆ ನೀಡಿದ ಓಲಾ ಎಲೆಕ್ಟ್ರಿಕ್

ಮಾರ್ಚ್ 17 ಮತ್ತು 18ರಂದು ಬುಕಿಂಗ್ ಮಾಡುವ ಗ್ರಾಹಕರಿಗೆ ಮಾತ್ರ ಹೊಸ ಬಣ್ಣದ ಇವಿ ಸ್ಕೂಟರ್ ಖರೀದಿಗೆ ಲಭ್ಯವಿರಲಿದ್ದು, ಉಳಿದಂತೆ ಪ್ರಮುಖ ಹತ್ತು ಬಣ್ಣಗಳ ಆಯ್ಕೆ ಎಂದಿನಂತೆ ಖರೀದಿಗೆ ಲಭ್ಯವಿರಲಿವೆ.

ಹೋಳಿ ಹಬ್ಬದ ವಿಶೇಷತೆಗಾಗಿ ಎಸ್1 ಪ್ರೊ ಮಾದರಿಯಲ್ಲಿ ವಿಶೇಷ ಬಣ್ಣದ ಆಯ್ಕೆ ನೀಡಿದ ಓಲಾ ಎಲೆಕ್ಟ್ರಿಕ್

ವಿಶೇಷ ಬಣ್ಣವನ್ನು ಪಡೆದುಕೊಂಡಿರುವ ಹೊಸ ಆವೃತ್ತಿಯ ವಿತರಣೆಯು ಮುಂದಿನ ತಿಂಗಳು ಏಪ್ರಿಲ್‌ನಲ್ಲಿ ಪ್ರಾರಂಭ ಮಾಡುವುದಾಗಿ ಕಂಪನಿಯೇ ಮಾಹಿತಿ ಹಂಚಿಕೊಂಡಿದ್ದು, ಹೊಸ ಸ್ಕೂಟರ್ ಬುಕಿಂಗ್ ಮಾಡುವ ಗ್ರಾಹಕರು ಓಲಾ ಆಪ್ ಮೂಲಕವೇ ಬುಕ್ ಮಾಡಬೇಕಾಗುತ್ತದೆ.

ಹೋಳಿ ಹಬ್ಬದ ವಿಶೇಷತೆಗಾಗಿ ಎಸ್1 ಪ್ರೊ ಮಾದರಿಯಲ್ಲಿ ವಿಶೇಷ ಬಣ್ಣದ ಆಯ್ಕೆ ನೀಡಿದ ಓಲಾ ಎಲೆಕ್ಟ್ರಿಕ್

ಇನ್ನು ಕಂಪನಿಯು ಎಸ್1 ಮತ್ತು ಎಸ್1 ಪ್ರೊ ಮಾದರಿಗಳಿಗಾಗಿ 1 ಲಕ್ಷಕ್ಕೂ ಅಧಿಕ ಗ್ರಾಹಕರಿಂದ ಬುಕಿಂಗ್ ಪಡೆದುಕೊಂಡಿದ್ದು, ಬುಕಿಂಗ್ ಮಾಡಿದ ಗ್ರಾಹಕರಲ್ಲಿ ಇದುವರೆ ಕಂಪನಿಯು 7 ಸಾವಿರ ಯುನಿಟ್ ಮಾರಾಟ ಮಾಡಿರುವುದಾಗಿ ಕಂಪನಿಯೇ ಮಾಹಿತಿ ಹಂಚಿಕೊಂಡಿದೆ.

ಹೋಳಿ ಹಬ್ಬದ ವಿಶೇಷತೆಗಾಗಿ ಎಸ್1 ಪ್ರೊ ಮಾದರಿಯಲ್ಲಿ ವಿಶೇಷ ಬಣ್ಣದ ಆಯ್ಕೆ ನೀಡಿದ ಓಲಾ ಎಲೆಕ್ಟ್ರಿಕ್

ಕಳೆದ ಎರಡು ತಿಂಗಳಿನಲ್ಲಿ ಉತ್ಪಾದನಾ ಪ್ರಮಾಣ ಹೆಚ್ಚಿಸಿರುವುದರಿಂದ ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ವಿತರಣೆ ಪ್ರಮಾಣ ಹೆಚ್ಚಳವಾಗುವ ಬಗೆಗೆ ಭರವಸೆ ನೀಡಿರುವ ಓಲಾ ಅಧ್ಯಕ್ಷರು ಹೊಸ ಬಣ್ಣದ ಆಯ್ಕೆಯು ಗ್ರಾಹಕರಿಗೆ ಮೆಚ್ಚುಗೆ ಪಡೆದುಕೊಳ್ಳಲಿದೆ ಎಂದಿದ್ದಾರೆ.

ಹೋಳಿ ಹಬ್ಬದ ವಿಶೇಷತೆಗಾಗಿ ಎಸ್1 ಪ್ರೊ ಮಾದರಿಯಲ್ಲಿ ವಿಶೇಷ ಬಣ್ಣದ ಆಯ್ಕೆ ನೀಡಿದ ಓಲಾ ಎಲೆಕ್ಟ್ರಿಕ್

ಇನ್ನು ಎಸ್1 ಮಾದರಿಗಾಗಿ ಬುಕಿಂಗ್ ಸಲ್ಲಿಸಿರುವ ಗ್ರಾಹಕರಿಗೆ ಕಂಪನಿಯು ಎಸ್1 ಪ್ರೊ ಮಾದರಿಯನ್ನೇ ವಿತರಣೆ ಮಾಡುತ್ತಿದ್ದು, ತಾಂತ್ರಿಕವಾಗಿ ಒಂದೇ ಆಗಿರುವ ಎಸ್1 ಮತ್ತು ಎಸ್1 ಪ್ರೊ ಮಾದರಿಯನ್ನು ಖರೀದಿಸುವ ಅವಕಾಶ ನೀಡಲಾಗಿದೆ.

ಹೋಳಿ ಹಬ್ಬದ ವಿಶೇಷತೆಗಾಗಿ ಎಸ್1 ಪ್ರೊ ಮಾದರಿಯಲ್ಲಿ ವಿಶೇಷ ಬಣ್ಣದ ಆಯ್ಕೆ ನೀಡಿದ ಓಲಾ ಎಲೆಕ್ಟ್ರಿಕ್

ಎಸ್1 ಮಾದರಿಗಾಗಿ ಬುಕಿಂಗ್ ಸಲ್ಲಿಸಿರುವ ಗ್ರಾಹಕರು ಎಸ್1 ಪ್ರೊ ಖರೀದಿಸಲು ಕೆಲವು ಷರತ್ತು ಹಾಕಿರುವ ಕಂಪನಿಯು ತಾಂತ್ರಿಕ ವೈಶಿಷ್ಟ್ಯತೆಯೊಂದಿಗೆ ಎಸ್1 ಮಾದರಿಯನ್ನು ಉಚಿತವಾಗಿ ಎಸ್1 ಪ್ರೊ ಮಾದರಿಗೆ ಅಪ್‌ಗ್ರೆಡ್ ಮಾಡುವುದಾಗಿ ತಿಳಿಸಿದ್ದು, ಒಂದು ವೇಳೆ ಸಾಫ್ಟ್‌ವೇರ್, ಹೆಚ್ಚಿನ ಮೈಲೇಜ್ ರೇಂಜ್ ಬೇಕಿದ್ದಲ್ಲಿ ಹೆಚ್ಚುವರಿಯಾಗಿರುವ ರೂ.30 ಸಾವಿರ ಪಾವತಿಸಿ ಅಪ್‌ಗ್ರೆಡ್ ಮಾಡಿಕೊಳ್ಳುವ ಅವಕಾಶ ನೀಡಿದೆ.

ಹೋಳಿ ಹಬ್ಬದ ವಿಶೇಷತೆಗಾಗಿ ಎಸ್1 ಪ್ರೊ ಮಾದರಿಯಲ್ಲಿ ವಿಶೇಷ ಬಣ್ಣದ ಆಯ್ಕೆ ನೀಡಿದ ಓಲಾ ಎಲೆಕ್ಟ್ರಿಕ್

ಓಲಾ ಹೊಸ ಎಸ್1 ಇವಿ ಸ್ಕೂಟರ್ ಮಾದರಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 99,999 ಬೆಲೆ ಹೊಂದಿದ್ದರೆ ಎಸ್1 ಪ್ರೊ ಮಾದರಿಯು ರೂ. 1,29,999 ಬೆಲೆ ಹೊಂದಿದ್ದು, ಅತ್ಯತ್ತಮ ಕಾರ್ಯಕ್ಷಮತೆ, ಗರಿಷ್ಠ ಮೈಲೇಜ್, ಪ್ರೀಮಿಯಂ ಫೀಚರ್ಸ್ ಮತ್ತು ಬಜೆಟ್ ಬೆಲೆಯು ಹೊಸ ಸ್ಕೂಟರ್ ಆಯ್ಕೆ ಮೌಲ್ಯವನ್ನು ಹೆಚ್ಚಿಸಿವೆ.

ಹೋಳಿ ಹಬ್ಬದ ವಿಶೇಷತೆಗಾಗಿ ಎಸ್1 ಪ್ರೊ ಮಾದರಿಯಲ್ಲಿ ವಿಶೇಷ ಬಣ್ಣದ ಆಯ್ಕೆ ನೀಡಿದ ಓಲಾ ಎಲೆಕ್ಟ್ರಿಕ್

ಓಲಾ ಕಂಪನಿಯು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಕುರಿತಾದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಉಪಯಕ್ತ ಮಾಹಿತಿಯುಳ್ಳ ಆ್ಯಪ್ ಕೂಡಾ ಅಭಿವೃದ್ದಿಪಡಿಸಿದ್ದು, ಹೊಸ ಆ್ಯಪ್ ಮೂಲಕ ವಾಹನ ಖರೀದಿ, ವಿತರಣೆ, ಗ್ರಾಹಕ ಸೇವೆ, ಇನ್ಸುರೆನ್ಸ್, ಮೌಲ್ಯ ವರ್ಧಿತ ಸೇವೆಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ.

ಹೋಳಿ ಹಬ್ಬದ ವಿಶೇಷತೆಗಾಗಿ ಎಸ್1 ಪ್ರೊ ಮಾದರಿಯಲ್ಲಿ ವಿಶೇಷ ಬಣ್ಣದ ಆಯ್ಕೆ ನೀಡಿದ ಓಲಾ ಎಲೆಕ್ಟ್ರಿಕ್

ಹೊಸ ಎಸ್1 ವೆರಿಯೆಂಟ್‌‌ನಲ್ಲಿ ಓಲಾ ಕಂಪನಿಯು 2.98kWh ಮತ್ತು ಎಸ್1 ಪ್ರೊ ಮಾದರಿಯಲ್ಲಿ 3.97kWh ಲೀಥಿಯಂ ಅಯಾನ್ ಬ್ಯಾಟರಿ ಜೋಡಣೆ ಮಾಡಿದ್ದು, ಪ್ರತಿ ಚಾರ್ಜ್‌ಗೆ ಎಸ್1 ಮಾದರಿಯು ಗರಿಷ್ಠ 121 ಕಿ.ಮೀ ಮೈಲೇಜ್ ಹಿಂದಿರುಗಿಸಿದರೆ ಎಸ್1 ಪ್ರೊ ಮಾದರಿಯು ಪ್ರತಿ ಚಾರ್ಜ್‌ಗೆ 181 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಹೋಳಿ ಹಬ್ಬದ ವಿಶೇಷತೆಗಾಗಿ ಎಸ್1 ಪ್ರೊ ಮಾದರಿಯಲ್ಲಿ ವಿಶೇಷ ಬಣ್ಣದ ಆಯ್ಕೆ ನೀಡಿದ ಓಲಾ ಎಲೆಕ್ಟ್ರಿಕ್

ಇದರಲ್ಲಿ ಎಸ್1 ಮಾದರಿಯು ಗಂಟೆಗೆ 90 ಕಿ.ಮೀ ಟಾಪ್ ಸ್ಪೀಡ್‌ ಹೊಂದಿದ್ದರೆ ಎಸ್1 ಪ್ರೊ ಮಾದರಿಯು ಪ್ರತಿ ಗಂಟೆಗೆ 115ಕಿ.ಮೀ ಟಾಪ್ ಸ್ಪೀಡ್‌ ಹೊಂದಿದ್ದು, ಎಸ್1 ಮಾದರಿಯಲ್ಲಿ ನಾರ್ಮಲ್ ಮತ್ತು ಸ್ಪೋರ್ಟ್ ರೈಡ್ ಮೋಡ್‌ಗಳಿದ್ದರೆ ಎಸ್1 ಪ್ರೊ ಮಾದರಿಯಲ್ಲಿ ನಾರ್ಮಲ್, ಸ್ಪೋರ್ಟ್ ಮತ್ತು ಹೈಪರ್ ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ.

ಹೋಳಿ ಹಬ್ಬದ ವಿಶೇಷತೆಗಾಗಿ ಎಸ್1 ಪ್ರೊ ಮಾದರಿಯಲ್ಲಿ ವಿಶೇಷ ಬಣ್ಣದ ಆಯ್ಕೆ ನೀಡಿದ ಓಲಾ ಎಲೆಕ್ಟ್ರಿಕ್

ಹಾಗೆಯೇ ಓಲಾ ಇವಿ ಸ್ಕೂಟರ್‌ಗಳು ಅತ್ಯುತ್ತಮ ವಿನ್ಯಾಸದೊಂದಿಗೆ ಗರಿಷ್ಠ ಮಟ್ಟದ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಂಡಿದ್ದು, ಹೊಸ ಸ್ಕೂಟರ್‌ಗಳಲ್ಲಿ ಟ್ವಿನ್ ಪಾಡ್ ಎಲ್ಇಡಿ ಸೆಟ್ಅಪ್, ಎಲ್ಇಡಿ ಡಿಆರ್‌ಎಲ್ಎಸ್, ಎಲ್ಇಡಿ ಟೈಲ್‌ಲ್ಯಾಂಪ್, ಕೌಂಟ್‌ರ್ಡ್ ಸೀಟ್, ಅಲಾಯ್ ವ್ಹೀಲ್, 36-ಲೀಟರ್ ಸಾಮರ್ಥ್ಯ ಅಂಡರ್ ಸೀಟ್ ಸ್ಪೋರೇಜ್, ರಿಯರ್ ಗ್ರ್ಯಾಬ್ ರೈಲ್ಸ್, ಫ್ರಂಟ್ ಸ್ಟೋರೇಜ್ ಪ್ಯಾಕೇಟ್, ಲಗೇಜ್ ಹುಕ್ ಮತ್ತು ಹತ್ತು ವಿವಿಧ ಬಣ್ಣಗಳ ಆಯ್ಕೆ ಹೊಂದಿದೆ.

ಹೋಳಿ ಹಬ್ಬದ ವಿಶೇಷತೆಗಾಗಿ ಎಸ್1 ಪ್ರೊ ಮಾದರಿಯಲ್ಲಿ ವಿಶೇಷ ಬಣ್ಣದ ಆಯ್ಕೆ ನೀಡಿದ ಓಲಾ ಎಲೆಕ್ಟ್ರಿಕ್

ಹೊಸ ಸ್ಕೂಟರ್‌ಗಳು 1,859 ಎಂಎಂ ಉದ್ದ, 712 ಎಂಎಂ ಅಗಲ, 1,160 ಎಂಎಂ ಎತ್ತರ, 1,359 ಎಂಎಂ ವ್ಹೀಲ್ ಬೆಸ್, 792 ಎಂಎಂ ಸೀಟ್ ಹೈಟ್, 125 ಕೆ.ಜಿ ತೂಕ ಹೊಂದಿದ್ದು, ಮುಂಭಾಗದಲ್ಲಿ ಸಿಂಗಲ್ ಫೋರ್ಕ್ ಸಸ್ಫೆಷನ್ ಮತ್ತು ಹಿಂಬದಿಯಲ್ಲಿ ಮೊನೊ ಶಾಕ್ ಸಸ್ಷೆಷನ್‌ನೊಂದಿಗೆ ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್ ಜೋಡಣೆ ಹೊಂದಿವೆ.

ಹೋಳಿ ಹಬ್ಬದ ವಿಶೇಷತೆಗಾಗಿ ಎಸ್1 ಪ್ರೊ ಮಾದರಿಯಲ್ಲಿ ವಿಶೇಷ ಬಣ್ಣದ ಆಯ್ಕೆ ನೀಡಿದ ಓಲಾ ಎಲೆಕ್ಟ್ರಿಕ್

ಜೊತೆಗೆ ಹೊಸ ಸ್ಕೂಟರ್‌ನಲ್ಲಿ 7-ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್ ಮತ್ತು ಶಟರ್‌ಪ್ರೂಫ್ ಸ್ಕ್ರೀನ್‌ನೊಂದಿಗೆ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಆನ್ ಬೋರ್ಡ್ ನ್ಯಾನಿಗೇಷನ್‌ಗಾಗಿ ಇಸಿಮ್ ಇಂಟರ್‌ನೆಂಟ್ ಕನೆಕ್ಟಿವಿಟಿ, ಸ್ಮಾಟ್‌ಫೋರ್ಟ್ ಮೂಲಕ ವಿವಿಧ ತಾಂತ್ರಿಕ ಅಂಶಗಳನ್ನು ನಿಯಂತ್ರಿಸಲು ಕನೆಕ್ಟೆಡ್ ಫೀಚರ್ಸ್ ಸಹ ನೀಡಲಾಗಿದೆ.

More from DriveSpark

Article Published On: Tuesday, March 15, 2022, 11:36 [IST]
English summary
Ola s1 pro gerua exclusive color special edition on holi occasion
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+