ಆಕ್ಟೀವಾಗಿಂತ ಅಗ್ಗದ ಬೆಲೆಯಲ್ಲಿ ಲಭ್ಯವಾಗಲಿದೆ ಮುಂಬರಲಿರುವ ಎಲೆಕ್ಟ್ರಿಕ್ ಸ್ಕೂಟರ್: ಹೋಂಡಾ ಹೇಳಿಕೆ

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 2023 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವುದಾಗಿ ಈಗಾಗಲೇ ಬಹಿರಂಗಪಡಿಸಿದೆ.

ಆಕ್ಟೀವಾಗಿಂತ ಅಗ್ಗದ ಬೆಲೆಯಲ್ಲಿ ಲಭ್ಯವಾಗಲಿದೆ ಮುಂಬರಲಿರುವ ಎಲೆಕ್ಟ್ರಿಕ್ ಸ್ಕೂಟರ್: ಹೋಂಡಾ ಹೇಳಿಕೆ

ಭಾರತದಲ್ಲಿ ಸ್ಕೂಟರ್ ವಿಭಾಗದಲ್ಲಿ ಹೋಂಡಾ ಆಕ್ಟೀವಾ ಭಾರೀ ಬೇಡಿಕೆಯೊಂದಿಗೆ ಪ್ರತಿ ತಿಂಗಳು ಉತ್ತಮ ಮಾರಾಟ ದಾಖಲಿಸುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಇಂಧನ ಬೆಲೆಗಳು ಹೆಚ್ಚಾಗಿರುವ ಕಾರಣ ಎಲೆಕ್ಟ್ರಿಕ್ ವಾಹನಗಳು ನಿಧಾನವಾಗಿ ಬೇಡಿಕೆ ಪಡೆದುಕೊಳ್ಳುತ್ತಿವೆ. ಹಾಗಾಗಿ ಹೋಂಡಾ ಕೂಡ ಹೊಸ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಯಲ್ಲಿ ತೊಡಗಿಸಿಕೊಂಡಿದೆ.

ಆಕ್ಟೀವಾಗಿಂತ ಅಗ್ಗದ ಬೆಲೆಯಲ್ಲಿ ಲಭ್ಯವಾಗಲಿದೆ ಮುಂಬರಲಿರುವ ಎಲೆಕ್ಟ್ರಿಕ್ ಸ್ಕೂಟರ್: ಹೋಂಡಾ ಹೇಳಿಕೆ

ಅಧಿಕ ಮೈಲೇಜ್ ಹಾಗೂ ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಇವಿ ಸ್ಕೂಟರ್ ಪರಿಚಯಿಸಲು ಸಜ್ಜಾಗಿದೆ. ಈ ಕುರಿತು ಕಂಪನಿಯ ಅಧ್ಯಕ್ಷ ಅಟ್ಸುಶಿ ಒಗಾಟಾ ಅವರು ಮಾತನಾಡಿ, ಹೋಂಡಾದ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಯ ಪ್ರಸ್ತುತ ಹೆಚ್ಚು ಮಾರಾಟವಾಗುತ್ತಿರುವ ಆಕ್ಟಿವಾ ಸ್ಕೂಟರ್‌ಗಿಂತ ಅಗ್ಗವಾಗಿರಲಿದೆ ಎಂದು ಹೇಳಿದ್ದಾರೆ.

ಆಕ್ಟೀವಾಗಿಂತ ಅಗ್ಗದ ಬೆಲೆಯಲ್ಲಿ ಲಭ್ಯವಾಗಲಿದೆ ಮುಂಬರಲಿರುವ ಎಲೆಕ್ಟ್ರಿಕ್ ಸ್ಕೂಟರ್: ಹೋಂಡಾ ಹೇಳಿಕೆ

ಹೋಂಡಾದ ಮುಂಬರುವ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯ ವಿಷಯದಲ್ಲಿ ಇತರ ಸ್ಕೂಟರ್‌ಗಳಿಗೆ ಪೈಪೋಟಿ ನೀಡಲಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ. ಹೋಂಡಾ ದ್ವಿಚಕ್ರ ವಾಹನಗಳು 2030ರ ವೇಳೆಗೆ ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಶೇಕಡಾ 30 ರಷ್ಟು ಪಾಲನ್ನು ಸಾಧಿಸಲು ಯೋಜಿಸಿದೆ.

ಆಕ್ಟೀವಾಗಿಂತ ಅಗ್ಗದ ಬೆಲೆಯಲ್ಲಿ ಲಭ್ಯವಾಗಲಿದೆ ಮುಂಬರಲಿರುವ ಎಲೆಕ್ಟ್ರಿಕ್ ಸ್ಕೂಟರ್: ಹೋಂಡಾ ಹೇಳಿಕೆ

ಈ ಗುರಿಯನ್ನು ಸಾಧಿಸಲು ಹೋಂಡಾ 2030 ರ ವೇಳೆಗೆ ಮೂರು ಇ-ಸ್ಕೂಟರ್ ಮಾದರಿಗಳನ್ನು ಬಿಡುಗಡೆ ಮಾಡಲಿದೆ. ಇದರೊಂದಿಗೆ ಕಂಪನಿಯು ಒಂದು ಮಿಲಿಯನ್ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ. ಈ ಮಾರಾಟ ಗುರಿಯನ್ನು ಸಾಧಿಸಲು ಮಾರುಕಟ್ಟೆಯ ತೀವ್ರ ಪೈಪೋಟಿಯನ್ನು ಎದುರಿಸಬೇಕಿದೆ.

ಆಕ್ಟೀವಾಗಿಂತ ಅಗ್ಗದ ಬೆಲೆಯಲ್ಲಿ ಲಭ್ಯವಾಗಲಿದೆ ಮುಂಬರಲಿರುವ ಎಲೆಕ್ಟ್ರಿಕ್ ಸ್ಕೂಟರ್: ಹೋಂಡಾ ಹೇಳಿಕೆ

ಹಾಗಾಗಿ ಮಾರುಕಟ್ಟೆಯಲ್ಲಿನ ಇತರ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಿಂತ ಹೋಂಡಾದಿಂದ ಮುಂಬರಲಿರುವ ಎಲೆಕ್ಟ್ರಿಕ್ ಸ್ಕೂಟರ್ ಅಗ್ಗವಾಗಿ ಸಿಗಬೇಕಿದೆ. ಹೀಗೆ ನೋಡಿಕೊಂಡಲ್ಲಿ ಹೋಂಡಾದ ಹೊಸ ಇವಿ ಸ್ಕೂಟರ್ ಆಕ್ಟಿವಾಕ್ಕಿಂತ ಅಗ್ಗವಾಗಲಿದೆ ಎಂದು ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಅಧ್ಯಕ್ಷ ಅಟ್ಸುಶಿ ಒಗಾಟಾ ಹೇಳಿದ್ದಾರೆ.

ಆಕ್ಟೀವಾಗಿಂತ ಅಗ್ಗದ ಬೆಲೆಯಲ್ಲಿ ಲಭ್ಯವಾಗಲಿದೆ ಮುಂಬರಲಿರುವ ಎಲೆಕ್ಟ್ರಿಕ್ ಸ್ಕೂಟರ್: ಹೋಂಡಾ ಹೇಳಿಕೆ

ಇದರ ಬೆಲೆ ರೂ. 72,000 ದಿಂದ ರೂ. 75,000 (ಎಕ್ಸ್ ಶೋ ರೂಂ). ಮಧ್ಯೆ ಇರಬಹುದು. ಈ ಉತ್ಪನ್ನದೊಂದಿಗೆ ಕಂಪನಿಯು ಹೆಚ್ಚುವರಿ ಆಯ್ಕೆಯಾಗಿ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಬಯಸುವ ಗ್ರಾಹಕರನ್ನು ಗುರಿಯಾಗಿಸಿಕೊಂಡಿದೆ. ಇದು ಕೈಗೆಟುಕುವ ಮಧ್ಯಮ ಶ್ರೇಣಿಯ ಉತ್ಪನ್ನವಾಗಿದೆ ಎಂದು ಅಟ್ಸುಶಿ ಹೇಳಿದರು.

ಆಕ್ಟೀವಾಗಿಂತ ಅಗ್ಗದ ಬೆಲೆಯಲ್ಲಿ ಲಭ್ಯವಾಗಲಿದೆ ಮುಂಬರಲಿರುವ ಎಲೆಕ್ಟ್ರಿಕ್ ಸ್ಕೂಟರ್: ಹೋಂಡಾ ಹೇಳಿಕೆ

ಪ್ರಸ್ತುತ ಹಳೆಯ ದ್ವಿಚಕ್ರ ವಾಹನ ತಯಾರಕರಲ್ಲಿ ಬಜಾಜ್ ಮತ್ತು ಟಿವಿಎಸ್ ಮಾತ್ರ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿವೆ. ದ್ವಿಚಕ್ರ ವಾಹನಗಳ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಹೀರೋ ಎಲೆಕ್ಟ್ರಿಕ್ ಮತ್ತು ಓಕಿನಾವಾ ಸೇರಿದಂತೆ ಎಥರ್, ಓಲಾ ಎಲೆಕ್ಟ್ರಿಕ್ ಮತ್ತು ಪ್ಯೂರ್ ಇವಿಗಳಂತಹ ಸ್ಟಾರ್ಟ್‌ಅಪ್‌ಗಳು ಪ್ರಾಬಲ್ಯ ಹೊಂದಿವೆ.

ಆಕ್ಟೀವಾಗಿಂತ ಅಗ್ಗದ ಬೆಲೆಯಲ್ಲಿ ಲಭ್ಯವಾಗಲಿದೆ ಮುಂಬರಲಿರುವ ಎಲೆಕ್ಟ್ರಿಕ್ ಸ್ಕೂಟರ್: ಹೋಂಡಾ ಹೇಳಿಕೆ

ಪ್ರತಿ ಹಳೆಯ ದ್ವಿಚಕ್ರ ವಾಹನ ಬ್ರ್ಯಾಂಡ್‌ಗಳು ಮುಂಬರುವ ದಿನಗಳಲ್ಲಿ ಸ್ಪರ್ಧಾತ್ಮಕ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡುವುದರಿಂದ ಪೈಪೋಟಿ ಹೆಚ್ಚಾಗಲಿದೆ. ಹೋಂಡಾ ಅಲ್ಲದೆ, ಯಮಹಾ ಮತ್ತು ಸುಜುಕಿಯಂತಹ ದ್ವಿಚಕ್ರ ವಾಹನ ಕಂಪನಿಗಳು ಸಹ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ತರಲು ತಯಾರಿ ನಡೆಸುತ್ತಿವೆ.

ಆಕ್ಟೀವಾಗಿಂತ ಅಗ್ಗದ ಬೆಲೆಯಲ್ಲಿ ಲಭ್ಯವಾಗಲಿದೆ ಮುಂಬರಲಿರುವ ಎಲೆಕ್ಟ್ರಿಕ್ ಸ್ಕೂಟರ್: ಹೋಂಡಾ ಹೇಳಿಕೆ

Hero MotoCorp ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ತನ್ನ ಎಲೆಕ್ಟ್ರಿಕ್ ಸ್ಕೂಟರ್ ಬ್ರಾಂಡ್ 'ವಿಡಾ' ಅಡಿಯಲ್ಲಿ ಅಕ್ಟೋಬರ್ 7 ರಂದು ಅನಾವರಣಗೊಳಿಸಲು ಸಿದ್ಧವಾಗಿದೆ. Hero MotoCorp EV ಸ್ಟಾರ್ಟ್‌ಅಪ್ ಕಂಪನಿ ಎಥರ್‌ನಲ್ಲಿ ಪ್ರಮುಖ ಹೂಡಿಕೆದಾರರಾಗಿದ್ದಾರೆ. ಅದರ ಡೀಲರ್‌ಶಿಪ್‌ನಿಂದ ಎಥರ್ ಸ್ಕೂಟರ್‌ಗಳನ್ನು ಮಾರಾಟ ಕೂಡ ಮಾಡುತ್ತದೆ.

ಆಕ್ಟೀವಾಗಿಂತ ಅಗ್ಗದ ಬೆಲೆಯಲ್ಲಿ ಲಭ್ಯವಾಗಲಿದೆ ಮುಂಬರಲಿರುವ ಎಲೆಕ್ಟ್ರಿಕ್ ಸ್ಕೂಟರ್: ಹೋಂಡಾ ಹೇಳಿಕೆ

ಹಳೆಯ ಕಂಪನಿಗಳ ಎಲೆಕ್ಟ್ರಿಕ್ ವಾಹನಗಳನ್ನು ಸ್ಟಾರ್ಟ್ ಅಪ್ ಕಂಪನಿಗಳು ಹೇಗೆ ಎದುರಿಸುತ್ತವೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ. ಹಳೆಯ ತಯಾರಕರು ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ದಶಕಗಳ ಎಂಜಿನಿಯರಿಂಗ್, ಉತ್ಪಾದನೆ ಮತ್ತು ವಿತರಣಾ ಅನುಭವವನ್ನು ಹೊಂದಿದ್ದರೂ, ಹೊಸ ಕಂಪನಿಗಳು ಈ ಮೂರರಲ್ಲಿ ಯಾವುದೇ ಅನುಭವ ಹೊಂದಿಲ್ಲ.

ಆಕ್ಟೀವಾಗಿಂತ ಅಗ್ಗದ ಬೆಲೆಯಲ್ಲಿ ಲಭ್ಯವಾಗಲಿದೆ ಮುಂಬರಲಿರುವ ಎಲೆಕ್ಟ್ರಿಕ್ ಸ್ಕೂಟರ್: ಹೋಂಡಾ ಹೇಳಿಕೆ

ಹೋಂಡಾ ಬಗ್ಗೆ ಮಾತನಾಡುವುದಾದರೆ, ಪ್ರಸ್ತುತ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಭಾರತದಲ್ಲಿ ಬೆನ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರೀಕ್ಷಿಸುತ್ತಿದೆ. ಈ ಸ್ಕೂಟರ್ ಅನ್ನು ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ​​ಆಫ್ ಇಂಡಿಯಾ (ARAI) ನಲ್ಲಿಯೂ ಗುರುತಿಸಲಾಗಿದೆ.

ಆಕ್ಟೀವಾಗಿಂತ ಅಗ್ಗದ ಬೆಲೆಯಲ್ಲಿ ಲಭ್ಯವಾಗಲಿದೆ ಮುಂಬರಲಿರುವ ಎಲೆಕ್ಟ್ರಿಕ್ ಸ್ಕೂಟರ್: ಹೋಂಡಾ ಹೇಳಿಕೆ

ಬೆನ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಹೇಳುವುದಾದರೆ, ಹೋಂಡಾ ಜಪಾನ್‌ನಲ್ಲಿ 4 ವಿಭಿನ್ನ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ನೀಡುತ್ತಿದೆ. ಈ ರೂಪಾಂತರಗಳಲ್ಲಿ Benly e: I, Benly e: I Pro, Benly e: II, ಮತ್ತು Benly e: II Pro ಸೇರಿವೆ. ಜಪಾನ್‌ನಲ್ಲಿನ ಬೆನ್ಲಿ ಎಲೆಕ್ಟ್ರಿಕ್ ಸ್ಕೂಟರ್ ಶ್ರೇಣಿಯನ್ನು ಪ್ರಾಥಮಿಕವಾಗಿ ವಾಣಿಜ್ಯ ಮತ್ತು ಫ್ಲೀಟ್ ವಿಭಾಗಗಳಲ್ಲಿ ಕೊನೆಯ ಮೈಲಿ ವಿತರಣೆಗಾಗಿ ಲಭ್ಯವಾಗುವಂತೆ ಮಾಡಲಾಗಿದೆ.

Most Read Articles

Kannada
Read more on ಹೋಂಡಾ honda
English summary
Our electric scooter will be available at a cheaper price than Activa Honda statement
Story first published: Tuesday, September 20, 2022, 11:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X