ಹೊಸ ಬಣ್ಣಗಳ ಆಯ್ಕೆಯಲ್ಲಿ ರಾಯಲ್ ಎನ್ಫೀಲ್ಡ್ ಮಿಟಿಯೊರ್ 350 ಬೈಕ್ ಬಿಡುಗಡೆ
ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ರಾಯಲ್ ಎನ್‍ಫೀಲ್ಡ್ ಭಾರತದಲ್ಲಿ ಮಿಟಿಯೊರ್ 350 ಬೈಕ್ ಅನ್ನು ಮೂರು ಹೊಸ ಬಣ್ಣದ ಆಯ್ಕೆಗಳೊಂದಿಗೆ ಬಿಡುಗಡೆ ಮಾಡಿದೆ. ಹೊಸ ಬಣ್ಣದ ಆಯ್ಕೆಗಳನ್ನು ಸೇರಿಸುವ ಮೂಲಕ, ರಾಯಲ್ ಎನ್ಫೀಲ್ಡ್ ಮಿಟಿಯೊರ್ 350 ಬಣ್ಣದ ಆಯ್ಕೆಗಳನ್ನು ವಿಸ್ತರಿಸಿದೆ.

ರಾಯಲ್ ಎನ್ಫೀಲ್ಡ್ ಮಿಟಿಯೊರ್ 350 ಬೈಕ್ ಫೈರ್‌ಬಾಲ್ ಬ್ಲೂ, ಫೈರ್‌ಬಾಲ್ ಮ್ಯಾಟ್ ಗ್ರೀನ್ ಮತ್ತು ಸೂಪರ್‌ನೋವಾ ರೆಡ್ ಎಂಬ ಮೂರು ಹೊಸ ಬಣ್ಣದ ಆಯ್ಕೆಗಳನ್ನು ಪಡೆದುಕೊಂಡಿವೆ, ಬೆಲೆಯ ವಿಷಯದಲ್ಲಿ, ರಾಯಲ್ ಎನ್‌ಫೀಲ್ಡ್ ಮೆಟಿಯರ್ 350 ಫೈರ್‌ಬಾಲ್ ಮಾದರಿಗಳ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2.05 ಲಕ್ಷಗಳಾದರೆ, ರಾಯಲ್ ಎನ್‌ಫೀಲ್ಡ್ ಮೆಟಿಯರ್ 350 ಸ್ಟೆಲ್ಲಾರ್ ಮಾದರಿಗಳ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2.11 ಲಕ್ಷವಾಗಿದೆ. ಇವುಗಳ ಜೊತೆಗೆ ಟಾಪ್-ಆಫ್-ಲೈನ್ ರಾಯಲ್ ಎನ್‌ಫೀಲ್ಡ್ ಸೂಪರ್‌ನೋವಾ ರೂಪಾಂತರಗಳ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2.22 ಲಕ್ಷವಾಗಿದೆ.

ರಾಯಲ್ ಎನ್‌ಫೀಲ್ಡ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ಗೋವಿಂದರಾಜನ್ ಅವರು ಮಾತನಾಡಿ, ರಾಯಲ್ ಎನ್ಫೀಲ್ಡ್ ಮಿಟಿಯೊರ್ 350 ಬಿಡುಗಡೆಯು ನಮ್ಮ ಪ್ರಯಾಣದಲ್ಲಿ ಒಂದು ಪ್ರಮುಖ ಮೈಲಿಗಲ್ಲು ಗುರುತಿಸಿದೆ. ಎಲ್ಲಾ ಹೊಸ ಕ್ರೂಸರ್ ಮೋಟಾರ್‌ಸೈಕಲ್‌ನ ಪರಿಚಯವಾಗಿದೆ. ಎಲ್ಲಾ-ಹೊಸ, ಗ್ರೌಂಡ್-ಅಪ್ ಎಂಜಿನ್ ಪ್ಲಾಟ್‌ಫಾರ್ಮ್ ಬ್ರ್ಯಾಂಡ್‌ಗೆ ಪ್ರಮುಖ ಪರಿವರ್ತನೆಯಾಗಿದೆ.

ಕಳೆದ ಎರಡು ವರ್ಷಗಳಲ್ಲಿ, ಮೆಟಿಯರ್ 350 ಭಾರತದಲ್ಲಿನ ಎಂಟ್ರಿ ಲೆವೆಲ್ ಕ್ರೂಸರ್ ವಿಭಾಗದಲ್ಲಿ ಹೊಸ ಮಾನದಂಡಗಳನ್ನು ಹೊಂದಿಸಿದೆ. ಈ ಮಾದರಿ ಪ್ರಶಸ್ತಿಗಳು ಮತ್ತು ಪುರಸ್ಕಾರಗಳನ್ನು ಪಡೆದುಕೊಳ್ಳುತ್ತವೆ. ಮಿಟಿಯೊರ್ 350 ಬೈಕಿನಲ್ಲಿ ಹೊಸ ಅತ್ಯಾಕರ್ಷಕ ಬಣ್ಣಗಳ ಸೇರ್ಪಡೆಯು ಪ್ರಪಂಚದಾದ್ಯಂತದ ನಮ್ಮ ಗ್ರಾಹಕರಿಗೆ ಹೆಚ್ಚು ಬಲವಾದ ಆಯ್ಕೆಯಾಗಿದೆ ಎಂದು ಹೇಳಿದರು.

ರಾಯಲ್ ಎನ್ಫೀಲ್ಡ್ ಮಿಟಿಯೊರ್ 350 ನಲ್ಲಿನ ಹೊಸ ಮ್ಯಾಟ್ ಗ್ರೀನ್ ಬಣ್ಣದ ಆಯ್ಕೆಯು ಫೈರ್‌ಬಾಲ್ ಯೆಲ್ಲೋ ಮತ್ತು ಫೈರ್‌ಬಾಲ್ ರೆಡ್‌ಗೆ ಹೋಲುವ ಬ್ಲ್ಯಾಕ್ಡ್-ಔಟ್ ಥೀಮ್‌ನೊಂದಿಗೆ ಬರುತ್ತದೆ. ಇದಲ್ಲದೆ ವ್ಹೀಲ್ ಗಳ ಮೇಲೆ ಗ್ರೀ ಸ್ಟ್ರೀಪ್ ಉಪಸ್ಥಿತಿಯು ಆಸಕ್ತಿದಾಯಕ ವಿವರವಾಗಿದೆ.

ಮತ್ತೊಂದೆಡೆ, ಹೊಸದಾಗಿ ಬಿಡುಗಡೆಗೊಳಿಸಲಾದ ಗ್ರೀನ್ ಬಣ್ಣದ ಆಯ್ಕೆಯು ಬ್ಲ್ಯಾಕ್ಡ್-ಔಟ್ ಥೀಮ್ ಅನ್ನು ಸಹ ಹೊಂದಿದೆ. ಆದರೆ ವ್ಹೀಲ್ ಗಳ ಮೇಲಿನ ಬ್ಯಾಡ್ಜಿಂಗ್ ಮತ್ತು ಸ್ಟ್ರೀಪ್ ಯೆಲ್ಲೋ ಬಣ್ಣವನ್ನು ಹೊಂದಿರುತ್ತದೆ. ಅದರ ಜೊತೆಗೆ, ರಾಯಲ್ ಎನ್‌ಫೀಲ್ಡ್ ಸೂಪರ್‌ನೋವಾ ರೆಡ್ ಅನ್ನು ಸಹ ಬಿಡುಗಡೆ ಮಾಡಿದೆ.

ರಾಯಲ್ ಎನ್ಫೀಲ್ಡ್ ಮಿಟಿಯೊರ್ 350 ಬೈಕಿನಲ್ಲಿ ಹೊಸ ಬಣ್ಣದ ಆಯ್ಕೆಯನ್ನು ಹೊರತಾಗಿ ಕ್ರೂಸರ್‌ನಲ್ಲಿ ಯಾವುದೇ ಇತರ ಪ್ರಮುಖ ನವೀಕರಣಗಳನ್ನು ಹೊಂದಿಲ್ಲ. ರಾಯಲ್ ಎನ್ಫೀಲ್ಡ್ ಮಿಟಿಯೊರ್ 350 ಬೈಕನ್ನು ತಮಿಳುನಾಡು ಮತ್ತು ಯುಕೆ ಮೂಲದ ಆರ್‌ಇ ತಂಡವು ವಿನ್ಯಾಸಗೊಳಿಸಿದೆ.

ಹಿಂದಿನ ಥಂಡರ್‌ಬರ್ಡ್ ಎಕ್ಸ್ ಮಾದರಿಯನ್ನು ಆಧರಿಸಿ ನಿರ್ಮಾಣಗೊಂಡಿರುವ ಮಿಟಿಯೊರ್ 350 ಬೈಕ್ ಮಾದರಿಯು ಥಂಡರ್‌ಬರ್ಡ್ ಬೈಕಿಗಿಂತಲೂ ಸಾಕಷ್ಟು ವಿಭಿನ್ನವಾಗಿ ಮತ್ತು ಆಕರ್ಷಕವಾಗಿದೆ. ಈ ಹೊಸ ರಾಯಲ್ ಎನ್ಫೀಲ್ಡ್ ಮಿಟಿಯೊರ್ 350 ಬೈಕಿನಲ್ಲಿ 349 ಸಿಸಿ, ಏರ್/ಆಯಿಲ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ.

ಇದರಲ್ಲಿ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಕೂಡ ಪಡೆಯುತ್ತದೆ. ಈ ಎಂಜಿನ್ 20.2 ಬಿಹೆಚ್‍ಪಿ ಪವರ್ ಮತ್ತು 27 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ರಾಯಲ್ ಎನ್ಫೀಲ್ಡ್ ಮಿಟಿಯೊರ್ 350 ಬೈಕನ್ನು ಹೊಸ ಜೆ ಪ್ಲಾಟ್‌ಫಾರ್ಮ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ.

ಡಬಲ್ ಡೌನ್‌ಟ್ಯೂಬ್ ಕ್ರೆಡಲ್ ಫ್ರೇಮ್ ಮೇಲೆ ಅಭಿವೃದ್ದಿಗೊಂಡಿರುವ ಈ ಹೊಸ ಬೈಕ್ ಮಾದರಿಯು ಥಂಡರ್‌ಬರ್ಡ್ ಮಾದರಿಗಿಂತಲೂ ಹೆಚ್ಚು ಅರಾಮದಾಯಕ ರೈಡಿಂಗ್ ಅನುಭವ ನೀಡುತ್ತದೆ. ಈ ರೆಟ್ರೊ ಕ್ರೂಸರ್ ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 41-ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ 6 ಹಂತಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಟ್ವಿನ್ ಶಾಕ್ ಅಬ್ಸಾರ್ಬರ್ ಅನ್ನು ಹೊಂದಿದೆ..

ರಾಯಲ್ ಎನ್ಫೀಲ್ಡ್ ಮಿಟಿಯೊರ್ 350 ಬೈಕಿನ ಮುಂಭಾಗ 19-ಇಂಚಿನ ಮತ್ತು ಹಿಂಭಾಗದಲ್ಲಿ 17-ಇಂಚಿನ ಅಲಾಯ್ ವ್ಹೀಲ್ ಗಳನ್ನು ಜೋಡಿಸಲಾಗಿದೆ. ಇದು ಕ್ರಮವಾಗಿ 100 / 90-19 57 ಪಿ ಮತ್ತು 140 / 70-17 66 ಪಿ ಸಿಯೆಟ್ ಟ್ಯೂಬ್‌ಲೆಸ್ ಟೈರ್ ಅನ್ನು ಹೊಂದಿದೆ. ಇದರೊಂದಿಗೆ ರಾಯಲ್ ಎನ್ಫೀಲ್ಡ್ ಮಿಟಿಯೊರ್ 350 ಬೈಕಿನಲ್ಲಿ ಟಿಪ್ಪರ್ ಪಾಡ್ ಒಳಗೊಂಡಿರುವ ಟರ್ನ್-ಬೈ-ಟರ್ನ್ ಗೂಗಲ್ ನ್ಯಾವಿಗೇಷನ್, ಬ್ಲೂಟೂತ್ ಮೂಲಕ ಕನೆಕ್ಟ್ ಮಾಡಬಹುದಾದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಇನ್ನು ಇದರೊಂದಿಗೆ ಹಲವಾರು ಫೀಚರ್ ಗಳನ್ನು ಒಳಗೊಂಡಿದೆ.

ಇನ್ನು ರಾಯಲ್ ಎನ್‌ಫೀಲ್ಡ್ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿದೆ. ಈ ರಾಯಲ್ ಎನ್‌ಫೀಲ್ಡ್ ಕಂಪನಿಯು 2022ರ ಮಾರ್ಚ್ ತಿಂಗಳ ಮಾರಾಟದ ವರದಿಯನ್ನು ಇತ್ತೀಚೆಗೆ ಬಹಿರಂಗಪಡಿಸಿತ್ತು ಕಳೆದ ತಿಂಗಳು ರಾಯಲ್ ಎನ್‌ಫೀಲ್ಡ್ ಕಂಪನಿಯು ಒಟ್ಟು 59,160 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು 66,058 ಯುನಿಟ್‌ಗಳನ್ನು ಮಾರಾಟಗೊಳಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಸುಮಾರು ಶೇಕಡಾ 2.39 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

ಈ ವರ್ಷ ರಾಯಲ್ ಎನ್‌ಫೀಲ್ಡ್ ಕಂಪನಿಯು ಹೊಸ ಬೈಕ್‌ಗಳನ್ನು ಬಿಡುಗಡೆಗೊಳಿಸಲಿದೆ. ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ದೊಡ್ಡ ಅಭಿಮಾನಿ ವರ್ಗವಿದೆ. ಈ ರಾಯಲ್ ಎನ್‌ಫೀಲ್ಡ್ ಕಂಪನಿಯು 350ಸಿಸಿಯಿಂದ 650ಸಿಸಿ ವರೆಗಿನ ಬೈಕ್‌ಗಳನ್ನು ಬಿಡುಗಡೆಗೊಳಿಸಲಿವೆ. ಶೀಘ್ರದಲ್ಲೇ ಈ ಹೊಸ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಬಿಡುಗಡೆಯಗಲಿವೆ ಎಂದು ನಿರೀಕ್ಷಿಸುತ್ತೇವೆ. ಇನ್ನು ರಾಯಲ್ ಎನ್ಫೀಲ್ಡ್ ಮಿಟಿಯೊರ್ 350 ಹೊಸ ಬಣ್ಣದ ಆಯ್ಕೆಗಳಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತದೆ.


Click it and Unblock the Notifications