ಜುಲೈ ತಿಂಗಳಿನಲ್ಲಿ 55,555 ಬೈಕ್‌ಗಳನ್ನು ಮಾರಾಟ ಮಾಡಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು 2022ರ ಜುಲೈ ತಿಂಗಳ ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ಕಳೆದ ತಿಂಗಳು ರಾಯಲ್ ಎನ್‌ಫೀಲ್ಡ್ ಕಂಪನಿಯು ಒಟ್ಟು 55,555 ದ್ವಿಚಕ್ರ ವಾಹನಗಳನ್ನು ಮಾರಾಟಗೊಳಿಸಿವೆ.

ಜುಲೈ ತಿಂಗಳಿನಲ್ಲಿ 55,555 ಬೈಕ್‌ಗಳನ್ನು ಮಾರಾಟ ಮಾಡಿದ ರಾಯಲ್ ಎನ್‌ಫೀಲ್ಡ್

2021ರ ಜುಲೈ ತಿಂಗಳಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು 44,038 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇ.26.15 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. 2022ರ ಜೂನ್ ತಿಂಗಳಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು 61,407 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ತಿಂಗಳಿನಿಂದ ತಿಂಗಳ ಮಾರಾಟದಲ್ಲಿ ಶೇ.9.53 ರಷ್ಟು ಕುಸಿತವನ್ನು ಕಂಡಿದೆ.

ಜುಲೈ ತಿಂಗಳಿನಲ್ಲಿ 55,555 ಬೈಕ್‌ಗಳನ್ನು ಮಾರಾಟ ಮಾಡಿದ ರಾಯಲ್ ಎನ್‌ಫೀಲ್ಡ್

350cc ವಿಭಾಗದಲ್ಲಿ ರಾಯಲ್ ಎನ್‌ಫೀಲ್ಡ್ ಮಾರಾಟವು ಜುಲೈ 2021 ರಲ್ಲಿ ಮಾರಾಟವಾದ 6,482 ಯುನಿಟ್‌ಗಳಿಂದ ಕಳೆದ ತಿಂಗಳ 9,219 ಯುನಿಟ್‌ಗಳಿಗೆ ಹೋಲಿಸಿದರೆ ಶೇ.42.22 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಇದು 16.59 ಶೇಕಡಾ ಪಾಲನ್ನು ಹೊಂದಿದೆ.

ಜುಲೈ ತಿಂಗಳಿನಲ್ಲಿ 55,555 ಬೈಕ್‌ಗಳನ್ನು ಮಾರಾಟ ಮಾಡಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬ್ರ್ಯಾಂಡ್‌ನ ಏಕೈಕ ಅತಿ ಹೆಚ್ಚು ಮಾರಾಟವಾದ ಮೋಟಾರ್‌ಸೈಕಲ್ ಮಾದರಿಯಾಗಿದೆ. ಇದರೊಂದಿಗೆ ಬುಲೆಟ್ 350 ಮತ್ತು ಮೆಟಿಯೊರ್ 350 ನಂತಹ ಸಬ್ 350 ಸಿಸಿ ಮೋಟಾರ್‌ಸೈಕಲ್‌ಗಳು ಸಹ ಪ್ರಭಾವಶಾಲಿ ಮಾರಾಟದ ಪರಿಮಾಣಗಳೊಂದಿಗೆ ಕೊಡುಗೆ ನೀಡುವುದನ್ನು ಮುಂದುವರೆಸಿದೆ.

ಜುಲೈ ತಿಂಗಳಿನಲ್ಲಿ 55,555 ಬೈಕ್‌ಗಳನ್ನು ಮಾರಾಟ ಮಾಡಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ಮಾದರಿಗಳ ಸರಣಿಯನ್ನು ಹೊಸ ಭೌಗೋಳಿಕ ಪ್ರದೇಶಗಳಿಗೆ ವಿಸ್ತರಿಸುವುದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕೇಂದ್ರೀಕೃತ ಪ್ರದೇಶವಾಗಿ ಉಳಿದಿವೆ. ಇನ್ನು 2021 ರಲ್ಲಿ ಭಾರತ ಮತ್ತು ಥೈಲ್ಯಾಂಡ್‌ನಲ್ಲಿ ಬಿಡುಗಡೆಯಾದ ನಂತರ ಹೊಸ ಕ್ಲಾಸಿಕ್ 350 ಅನ್ನು ಫಿಲಿಪೈನ್ಸ್, ಕೊರಿಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಯುಕೆಯಲ್ಲಿಯು ಕೂಡ ಬಿಡುಗಡೆಗೊಳಿಸಿತ್ತು.

ಜುಲೈ ತಿಂಗಳಿನಲ್ಲಿ 55,555 ಬೈಕ್‌ಗಳನ್ನು ಮಾರಾಟ ಮಾಡಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‍ಫೀಲ್ಡ್ ತನ್ನ ಬಹುನಿರೀಕ್ಷಿತ ಸ್ಕ್ರಾಮ್ 411 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಜನಪ್ರಿಯ ಹಿಮಾಲಯನ್ ಅಡ್ವೆಂಚರ್ ಟೂರರ್ ಆಧಾರಿತ ಬೈಕ್ ಆಗಿದೆ. ಹಿಮಾಲಯದಿಂದ ತನ್ನನ್ನು ಪ್ರತ್ಯೇಕಿಸಲು ದೃಶ್ಯ ಬದಲಾವಣೆಗಳನ್ನು ಪಡೆದಿದೆ.

ಜುಲೈ ತಿಂಗಳಿನಲ್ಲಿ 55,555 ಬೈಕ್‌ಗಳನ್ನು ಮಾರಾಟ ಮಾಡಿದ ರಾಯಲ್ ಎನ್‌ಫೀಲ್ಡ್

ಈ ಹೊಸ ರಾಯಲ್ ಎನ್‍ಫೀಲ್ಡ್ ಸ್ಕ್ರಾಮ್ 411 ಬೈಕಿನಲ್ಲಿ ವೃತ್ತಾಕಾರದ ಹೆಡ್‌ಲ್ಯಾಂಪ್, ಡರ್ಟ್‌ಬೈಕ್-ಶೈಲಿಯ ಮಡ್‌ಗಾರ್ಡ್‌ಗಳು, ಸಿಂಗಲ್ ಪೀಸ್ ಸೀಟ್, ದೊಡ್ಡ ಇಂಧನ ಟ್ಯಾಂಕ್ ಮತ್ತು ಡ್ಯುಯಲ್-ಪರ್ಪಸ್ ಟೈರ್‌ಗಳು ಹೊಂದಿದೆ, ಇವುಗಳು ಸರಿಯಾದ ಸ್ಕ್ರಾಂಬ್ಲರ್‌ನ ವಿನ್ಯಾಸದ ಲಕ್ಷಣಗಳಾಗಿವೆ. ಇದರೊಂದಿಗೆ ರಾಯಲ್ ಎನ್‌ಫೀಲ್ಡ್ ಕಂಪನಿಯು ಹೊಸ ಸ್ಕ್ರಾಮ್ 411 ಬೈಕ್ ಗಾಗಿ ಅಕ್ಸೆಸರೀಸ್ ಗಳನ್ನು ಬಿಡುಗಡೆಗೊಳಿಸಲಾಗಿತ್ತು.

ಜುಲೈ ತಿಂಗಳಿನಲ್ಲಿ 55,555 ಬೈಕ್‌ಗಳನ್ನು ಮಾರಾಟ ಮಾಡಿದ ರಾಯಲ್ ಎನ್‌ಫೀಲ್ಡ್

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ. ಈ ವರ್ಷ ರಾಯಲ್ ಎನ್‌ಫೀಲ್ಡ್ ಕಂಪನಿಯು ಹೊಸ ಬೈಕ್‌ಗಳನ್ನು ಬಿಡುಗಡೆಗೊಳಿಸಲಿದೆ. ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ದೊಡ್ಡ ಅಭಿಮಾನಿ ವರ್ಗವಿದೆ. ಈ ರಾಯಲ್ ಎನ್‌ಫೀಲ್ಡ್ ಕಂಪನಿಯು 350ಸಿಸಿಯಿಂದ 650ಸಿಸಿ ವರೆಗಿನ ಬೈಕ್‌ಗಳನ್ನು ಬಿಡುಗಡೆಗೊಳಿಸಲಿವೆ. ಶೀಘ್ರದಲ್ಲೇ ಈ ಹೊಸ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

ಜುಲೈ ತಿಂಗಳಿನಲ್ಲಿ 55,555 ಬೈಕ್‌ಗಳನ್ನು ಮಾರಾಟ ಮಾಡಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಭಾರತೀಯ ಮಾರುಕಟ್ಟೆಯಲ್ಲಿ ಶಾಟ್‌ಗನ್, ಹಂಟರ್, ಫ್ಲೈಯಿಂಗ್ ಫ್ಲಿಯಾ, ಶೆರ್ಪಾ ಮತ್ತು ರೋಡ್ಸ್ಟರ್ ಸೇರಿದಂತೆ ಮುಂಬರುವ ಮಾದರಿಗಳಿಗಾಗಿ ಅನೇಕ ನೇಮ್‌ಪ್ಲೇಟ್‌ಗಳನ್ನು ಟ್ರೇಡ್‌ಮಾರ್ಕ್ ಮಾಡಿದೆ. ಈ ವರ್ಷ ಹಲವಾರು ನವೀಕರಣಗಳನೊಂದಿಗೆ ತಮ್ಮ ಜನಪ್ರಿಯ ಮಾದರಿಗಳನ್ನು ಪರಿಚಯಿಸುತ್ತದೆ. ಇದರಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯ ನ್ಯೂ ಜನರೇಷನ್ ಬುಲೆಟ್ 350 ಬೈಕ್ ಒಳಗೊಂಡಿರಲಿದೆ,

ಜುಲೈ ತಿಂಗಳಿನಲ್ಲಿ 55,555 ಬೈಕ್‌ಗಳನ್ನು ಮಾರಾಟ ಮಾಡಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‍ಫೀಲ್ಡ್ ಕಂಪನಿಯು ಮುಂದೆ ಬಡುಗಡೆಗೊಳಿಸುವ ಮಾದರಿಗಳಲ್ಲಿ ಹೊಸ ಹಂಟರ್ 350 ಕೂಡ ಒಳಗೊಂಡಿದೆ. ಈ ನಿರ್ದಿಷ್ಟ ಮುಂಬರುವ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್ ರಾಯಲ್ ಎನ್‌ಫೀಲ್ಡ್ ಮೆಟಿಯರ್ 350 ಪ್ಲಾಟ್‌ಫಾರ್ಮ್ (ರಾಯಲ್ ಎನ್‌ಫೀಲ್ಡ್ ಜೆ-ಪ್ಲಾಟ್‌ಫಾರ್ಮ್) ಅನ್ನು ಆಧರಿಸಿದೆ. ಮುಂಬರುವ ರಾಯಲ್ ಎನ್‌ಫೀಲ್ಡ್ ಹಂಟರ್ 350 ರಾಯಲ್ ಎನ್‌ಫೀಲ್ಡ್‌ನ ಉತ್ಪನ್ನ ಪೋರ್ಟ್‌ಫೋಲಿಯೊದಲ್ಲಿ ಕೈಗೆಟುಕುವ ಬೆಲೆಯನ್ನು ಹೊಂದಿರುತ್ತದೆ.

ಜುಲೈ ತಿಂಗಳಿನಲ್ಲಿ 55,555 ಬೈಕ್‌ಗಳನ್ನು ಮಾರಾಟ ಮಾಡಿದ ರಾಯಲ್ ಎನ್‌ಫೀಲ್ಡ್

ದಾಖಲೆಯ ಪ್ರಕಾರ, ರಾಯಲ್ ಎನ್‌ಫೀಲ್ಡ್ ಹಂಟರ್ 350 ಒಟ್ಟಾರೆ ಉದ್ದ 2,055 ಎಂಎಂ, 800 ಎಂಎಂ ಅಗಲ ಮತ್ತು 1,055 ಎಂಎಂ ಎತ್ತರವನ್ನು ಹೊಂದಿದ್ದು, ವೀಲ್‌ಬೇಸ್ ಉದ್ದವು 1,370 ಎಂಎಂ ಮತ್ತು ಒಟ್ಟು ವಾಹನದ ತೂಕವನ್ನು 360 ಕೆಜಿಯನ್ನು ಹೊಂದಿದೆ. ಮಿಟಿಯೊರ್ ಬೈಕಿಗೆ ಹೋಲಿಸಿದರೆ, ಹಂಟರ್ 350 ಉದ್ದದಲ್ಲಿ 85 ಎಂಎಂ ಚಿಕ್ಕದಾಗಿದೆ, 45 ಎಂಎಂ ಕಿರಿದಾಗಿದೆ ಮತ್ತು 85 ಎಂಎಂ ಎತ್ತರದಲ್ಲಿ ಚಿಕ್ಕದಾಗಿದೆ ಮತ್ತು 30 ಎಂಎಂ ಚಿಕ್ಕದಾದ ವೀಲ್‌ಬೇಸ್ ಉದ್ದವನ್ನು ಹೊಂದಿದೆ. ಕ್ಲಾಸಿಕ್ 350 ಬೈಕಿಗೆ ಹೋಲಿಸಿದರೆ, ಹಂಟರ್ 90 ಎಂಎಂ ಉದ್ದ ಮತ್ತು 35 ಎಂಎಂ ಎತ್ತರ ಕಡಿಮೆ ಆದರೆ 15 ಎಂಎಂ ಅಗಲವಾಗಿರುತ್ತದೆ. ವೀಲ್‌ಬೇಸ್ ಉದ್ದವು ಕ್ಲಾಸಿಕ್‌ನಲ್ಲಿ 20 ಎಂಎಂ ಉದ್ದವಾಗಿದೆ ಮತ್ತು 15 ಕೆಜಿಯಷ್ಟು ಭಾರವಾಗಿರುತ್ತದೆ.

ಜುಲೈ ತಿಂಗಳಿನಲ್ಲಿ 55,555 ಬೈಕ್‌ಗಳನ್ನು ಮಾರಾಟ ಮಾಡಿದ ರಾಯಲ್ ಎನ್‌ಫೀಲ್ಡ್

ಇನ್ನು ರಾಯಲ್ ಎನ್‌ಫೀಲ್ಡ್ ಕಂಪನಿಯ 350ಸಿಸಿ ವಿಭಾಗದ ಹಂಟರ್ ಬೈಕ್ ಹೊಸ ಮಾದರಿಯಾಗಿದೆ. ಈ ಹೊಸ ರಾಯಲ್ ಎನ್‌ಫೀಲ್ಡ್ ಹಂಟರ್ ಬೈಕ್ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದುದೆಂದು ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹೋಂಡಾ ಹೈನೆಸ್ ಸಿಬಿ 350 ಬೈಕಿಗೆ ಪೈಪೋಟಿ ನೀಡುತ್ತದೆ.

Article Published On: Tuesday, August 2, 2022, 19:21 [IST]
English summary
Royal enfield motorcycle sales july 55555 units registers growth of 26 percent details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+