ಬಹುನಿರೀಕ್ಷಿತ Zeppelin R ಕ್ರೂಸರ್ ಬಿಡುಗಡೆ ಕುರಿತ ವದಂತಿ: ಈ ಬಗ್ಗೆ TVS ಕಂಪನಿಯ ನಿಲುವೇನು?

ಭಾರತದಲ್ಲಿ ಮೋಟಾರ್‌ಸೈಕಲ್‌ಗಳಿಗೆ ಭಾರಿ ಬೇಡಿಕೆಯಿದೆ. ಒಂದು ಕಂಪನಿಯಿಂದ ಬೈಕ್ ಬಿಡುಗಡೆಗೊಳ್ಳುತ್ತಿದೆ ಎಂದರೆ ದೇಶದ ಯುವ ಜನತೆ ಬುಕಿಂಗ್‌ಗಾಗಿ ಕಾತುರದಿಂದ ಕಾಯುತ್ತಾರೆ. ಇದು ಕೇವಲ ವಿದೇಶಿ ಬ್ರ್ಯಾಂಡ್‌ಗಳಿಗೆ ಮಾತ್ರ ಸೀಮಿತವಾಗಿಲ್ಲ, ದೇಶೀಯ ಕಂಪನಿಗಳ ಮಾದರಿಗಳಿಗೂ ಅಷ್ಟೇ ಬೇಡಿಕೆ ಇದೆ.

ಬಹುನಿರೀಕ್ಷಿತ Zeppelin R ಕ್ರೂಸರ್ ಬಿಡುಗಡೆ ಕುರಿತ ವದಂತಿ: ಈ ಬಗ್ಗೆ TVS ಕಂಪನಿಯ ನಿಲುವೇನು?

ಇದೀಗ ಟಿವಿಎಸ್ ಕಂಪನಿಯ ಮೋಟಾರ್‌ ಸೈಕಲ್‌ವೊಂದಕ್ಕೆ ಗ್ರಾಹಕರು ಬಹುದಿನಗಳಿಂದ ಎದರು ನೋಡುತ್ತಿದ್ದಾರೆ. 2018 ರ ಆಟೋ ಎಕ್ಸ್‌ಪೋದಲ್ಲಿ, ಟಿವಿಎಸ್ ಮೋಟಾರ್ ಕಂಪನಿಯು ಭಾರತದಲ್ಲಿ 'ಜೆಪ್ಪೆಲಿನ್' (Zeppelin) ಪರಿಕಲ್ಪನೆಯನ್ನು ಪರಿಚಯಿಸಿತ್ತು. 2020 ರಲ್ಲಿ, ತಯಾರಕರು ದೇಶದಲ್ಲಿ 'ಜೆಪ್ಪೆಲಿನ್ ಆರ್' ಹೆಸರನ್ನು ಟ್ರೇಡ್‌ಮಾರ್ಕ್ ಮಾಡಿರುವ ಸುದ್ದಿಯೂ ಹಬ್ಬಿತ್ತು.

ಬಹುನಿರೀಕ್ಷಿತ Zeppelin R ಕ್ರೂಸರ್ ಬಿಡುಗಡೆ ಕುರಿತ ವದಂತಿ: ಈ ಬಗ್ಗೆ TVS ಕಂಪನಿಯ ನಿಲುವೇನು?

ಆದರೆ ನಂತರ ಈ ಬಗ್ಗೆ ಯಾವುದೇ ಸುದ್ದಿ ಅಥವಾ ಮಾಹಿತಿ ಹೊರಬಿದ್ದಿಲ್ಲ. ಈಗ, ಹೊಸ ವರದಿಗಳ ಪ್ರಕಾರ, ಈ ಬೈಕ್ ಶೀಘ್ರದಲ್ಲೇ ಉತ್ಪಾದನಾ ಮಾದರಿಯಾಗಲಿದೆ ಎಂಬ ವದಂತಿ ಎಲ್ಲೆಡೆ ಹಬ್ಬಿದ್ದು, ಟಿವಿಎಸ್ ಗ್ರಾಹಕರಲ್ಲಿ ನಿರೀಕ್ಷೆಗಳು ಹೆಚ್ಚಾಗಿವೆ. ಆದರೆ, ಕಂಪನಿಯು ಈ ಬಗ್ಗೆ ಯಾವುದೇ ನಿಖರವಾದ ವಿವರಗಳನ್ನು ಬಹಿರಂಗಪಡಿಸಿಲ್ಲ.

ಬಹುನಿರೀಕ್ಷಿತ Zeppelin R ಕ್ರೂಸರ್ ಬಿಡುಗಡೆ ಕುರಿತ ವದಂತಿ: ಈ ಬಗ್ಗೆ TVS ಕಂಪನಿಯ ನಿಲುವೇನು?

ಇದಕ್ಕೆ ತದ್ವಿರುದ್ಧವಾಗಿ, ಟಿವಿಎಸ್ ಈ ವರ್ಷದ ಆರಂಭದಲ್ಲಿ ಜೆಪ್ಪೆಲಿನ್ ಪರಿಕಲ್ಪನೆಯ ಮಾದರಿಯಾಗಿದೆಯೇ ಹೊರತು, ಉತ್ಪಾದನೆಗೆ ಅಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಈ ಹೇಳಿಕೆಯು ಅನೇಕ ಅಭಿಮಾನಿಗಳನ್ನು ನಿರಾಸೆಗೊಳಿಸಿದೆ. ಏಕೆಂದರೆ ಬಹಳಷ್ಟು ದ್ವಿಚಕ್ರ ವಾಹನ ಪ್ರೇಮಿಗಳು ಇದರ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದರು.

ಬಹುನಿರೀಕ್ಷಿತ Zeppelin R ಕ್ರೂಸರ್ ಬಿಡುಗಡೆ ಕುರಿತ ವದಂತಿ: ಈ ಬಗ್ಗೆ TVS ಕಂಪನಿಯ ನಿಲುವೇನು?

ಈ ಮೋಟಾರ್‌ಸೈಕಲ್ ಅನ್ನು ಈ ತಿಂಗಳು ಭಾರತದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಇತ್ತೀಚೆಗೆ ಹಲವು ಆಟೋ ಮಾಧ್ಯಮಗಳು ವರದಿ ಮಾಡಿದ್ದವು. ಈ ಸುದ್ದಿ ನಿಜವಾದರೆ, TVS Zeppelin R ಬ್ರ್ಯಾಂಡ್‌ನ ಮೊದಲ ಕ್ರೂಸರ್ ಮೋಟಾರ್‌ಸೈಕಲ್ ಆಗಲಿದೆ. ಅಲ್ಲದೇ ಈ ರೀತಿಯ ವಾಹನಗಳಿಗೆ ದೇಶದಲ್ಲಿ ಉತ್ತಮ ಬೇಡಿಕೆಯಿದ್ದು, ಟಿವಿಎಸ್ ಉತ್ತಮ ಮಾರಾಟ ಬೆಳವಣಿಗೆ ಕಾಣಲಿದೆ.

ಬಹುನಿರೀಕ್ಷಿತ Zeppelin R ಕ್ರೂಸರ್ ಬಿಡುಗಡೆ ಕುರಿತ ವದಂತಿ: ಈ ಬಗ್ಗೆ TVS ಕಂಪನಿಯ ನಿಲುವೇನು?

ಈ ಕಾನ್ಸೆಪ್ಟ್ ಆವೃತ್ತಿಯು ಷಡ್ಭುಜೀಯ ಎಲ್ಇಡಿ ಹೆಡ್ಲ್ಯಾಂಪ್ (ಇಂಟಿಗ್ರೇಟೆಡ್ ಎಲ್ಇಡಿ ಡಿಆರ್ಎಲ್‌ಗಳೊಂದಿಗೆ), ಗೋಲ್ಡನ್ ಫಿನಿಶ್ಡ್ ಯುಎಸ್ಡಿ ಮುಂಭಾಗದ ಫೋರ್ಕ್‌ಗಳು, ಆಂಗುಲರ್ ಇಂಧನ ಟ್ಯಾಂಕ್, ಸಿಂಗಲ್ ಪೀಸ್ ಸ್ಟೆಪ್ಡ್ ಸೀಟ್, ಹಿಂಭಾಗದ ಮೊನೊಶಾಕ್ ಮತ್ತು ಎಲ್ಇಡಿ ಟೈಲ್‌ಲೈಟ್ ವಿನ್ಯಾಸವನ್ನು ಹೊಂದಿದೆ.

ಬಹುನಿರೀಕ್ಷಿತ Zeppelin R ಕ್ರೂಸರ್ ಬಿಡುಗಡೆ ಕುರಿತ ವದಂತಿ: ಈ ಬಗ್ಗೆ TVS ಕಂಪನಿಯ ನಿಲುವೇನು?

ಎರಡೂ ಟೈರ್‌ಗಳಲ್ಲಿ ಒಂದೇ ಡಿಸ್ಕ್ ಬ್ರೇಕ್‌ಗಳಿಂದ ಬ್ರೇಕಿಂಗ್ ಅನ್ನು ನಿರ್ವಹಿಸಲಾಗುತ್ತದೆ. ಮುಂಭಾಗದಲ್ಲಿ 300mm ಮತ್ತು ಹಿಂಭಾಗದಲ್ಲಿ 240mm ಇದ್ದು, ಈ ಮಾದರಿಯು ಆನ್‌ಬೋರ್ಡ್ ಕ್ಯಾಮೆರಾ ಮತ್ತು ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್‌ನೊಂದಿಗೆ ಬರುತ್ತದೆ. ಈ ವೈಶಿಷ್ಟ್ಯಗಳು ಹೆಚ್ಚು ಆಧುನಿಕವಾಗಿವೆ.

ಬಹುನಿರೀಕ್ಷಿತ Zeppelin R ಕ್ರೂಸರ್ ಬಿಡುಗಡೆ ಕುರಿತ ವದಂತಿ: ಈ ಬಗ್ಗೆ TVS ಕಂಪನಿಯ ನಿಲುವೇನು?

ಕಾನ್ಸೆಪ್ಟ್ ಮೋಟಾರ್‌ಸೈಕಲ್‌ನಲ್ಲಿ ಆನ್‌ಲೈನ್ ಸಂಪರ್ಕವೂ ಲಭ್ಯವಿದ್ದು, ಉತ್ಪಾದನಾ ಆವೃತ್ತಿಗೆ ಪ್ರವೇಶಿಸಿದಾಗ ಈ ವೈಶಿಷ್ಟ್ಯಗಳು ಮತ್ತು ಘಟಕಗಳನ್ನು ನೀಡುವಂತೆ ಕಾಣುತ್ತಿಲ್ಲ. ಏಕೆಂದರೆ ಈ ಕಾನ್ಸೆಪ್ಟ್‌ ಅನ್ನು ಕೇವಲ ಮಾದರಿಗೆ ಮಾತ್ರ ಸೀಮಿತಗೊಳಿಸಿರುವುದಾಗಿ ಕಂಪನಿ ತಿಳಿಸಿದೆ ಆದರೆ ಮುಂದಿನ ದಿನಗಳಲ್ಲಿ ಗ್ರಾಹಕರ ಬೇಡಿಕೆಯಂತೆ ಬೈಕ್ ಬದಲಾಗಲೂಬಹುದು.

ಬಹುನಿರೀಕ್ಷಿತ Zeppelin R ಕ್ರೂಸರ್ ಬಿಡುಗಡೆ ಕುರಿತ ವದಂತಿ: ಈ ಬಗ್ಗೆ TVS ಕಂಪನಿಯ ನಿಲುವೇನು?

ಜೆಪ್ಪೆಲಿನ್ ಪರಿಕಲ್ಪನೆಯು 220cc ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ. ಈ ಘಟಕವು ಕ್ರಮವಾಗಿ 20 bhp ಪವರ್ ಮತ್ತು 18.5 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಬೆಲ್ಟ್ ಡ್ರೈವ್ ಅನ್ನು ಸಹ ಹೊಂದಿದೆ. ಇದು 48-ವೋಲ್ಟ್ Li-Ion ಬ್ಯಾಟರಿಯೊಂದಿಗೆ 1200 ವ್ಯಾಟ್ ಪುನರುತ್ಪಾದಕ ಅಸಿಸ್ಟ್ ಮೋಟಾರ್‌ನೊಂದಿಗೆ ಮೈಲ್ಡ್-ಹೈಬ್ರಿಡ್ ವ್ಯವಸ್ಥೆಯನ್ನು ಹೊಂದಿದೆ ಎಂದು ಹೆಳಲಾಗಿದೆ.

ಬಹುನಿರೀಕ್ಷಿತ Zeppelin R ಕ್ರೂಸರ್ ಬಿಡುಗಡೆ ಕುರಿತ ವದಂತಿ: ಈ ಬಗ್ಗೆ TVS ಕಂಪನಿಯ ನಿಲುವೇನು?

ಮೋಟಾರ್‌ಸೈಕಲ್‌ನ ಉತ್ಪಾದನಾ ಆವೃತ್ತಿಯಲ್ಲಿ ಅದೇ ಪವರ್‌ಟ್ರೇನ್ ಅನ್ನು ಬಳಸಲು ನಿರೀಕ್ಷಿಸಲಾಗಿದೆ. ಕೆಲವು ಹಿಂದಿನ ವರದಿಗಳ ಪ್ರಕಾರ, ಟಿವಿಎಸ್ ಜೆಪ್ಪೆಲಿನ್ ಆರ್ ಪ್ರಸ್ತುತ ಮಾದರಿಯಂತೆಯೇ ಅದೇ ಎಂಜಿನ್ ಅನ್ನು ಬಳಸುವ ಸಾಧ್ಯತೆಯಿದೆ (ಅಪಾಚೆ ಶ್ರೇಣಿ). ಏಕೆಂದರೆ ಇದು ಟಿವಿಎಸ್‌ ಮೋಟಾರ್‌ನಲ್ಲಿ ಉತ್ತಮ ಹೆಸರು ಪಡೆದುಕೊಂಡಿದೆ.

ಬಹುನಿರೀಕ್ಷಿತ Zeppelin R ಕ್ರೂಸರ್ ಬಿಡುಗಡೆ ಕುರಿತ ವದಂತಿ: ಈ ಬಗ್ಗೆ TVS ಕಂಪನಿಯ ನಿಲುವೇನು?

ಟಿವಿಎಸ್ ಜೆಪ್ಪೆಲಿನ್ ಆರ್ ಅನ್ನು ಬಿಡುಗಡೆ ಮಾಡುತ್ತದೆ ಎಂಬ ತನ್ನ ವದಂತಿಯನ್ನು ಕಂಪನಿಯು ಇನ್ನೂ ದೃಢಪಡಿಸಿಲ್ಲ. ಈ ಬಗ್ಗೆ ಕಂಪನಿಯು ಶೀಘ್ರದಲ್ಲೇ ಪ್ರತಿಕ್ರಿಯಿಸುವ ನಿರೀಕ್ಷೆಯಿದ್ದು, ಬಹುತೇಕ ಪಾಸಿಟಿವ್ ಮಾಹಿತಿ ನೀಡಬೇಕು ಎಂಬುದು ಅಭಿಮಾನಿಗಳ ಒತ್ತಾಸೆಯಾಗಿದೆ.

ಬಹುನಿರೀಕ್ಷಿತ Zeppelin R ಕ್ರೂಸರ್ ಬಿಡುಗಡೆ ಕುರಿತ ವದಂತಿ: ಈ ಬಗ್ಗೆ TVS ಕಂಪನಿಯ ನಿಲುವೇನು?

ಇನ್ನು ಟಿವಿಎಸ್ ಮೋಟಾರ್ ಕಂಪನಿಯು ತನ್ನ ಜನಪ್ರಿಯ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯ 2022ರ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಇವಿ ಸ್ಕೂಟರ್ ಮಾದರಿಯು ಪ್ರಮುಖ ಮೂರು ವೆರಿಯೆಂಟ್‌ಗಳಲ್ಲಿ ಮಾರುಕಟ್ಟೆ ಪ್ರವೇಶಿಸಿದೆ.

ಬಹುನಿರೀಕ್ಷಿತ Zeppelin R ಕ್ರೂಸರ್ ಬಿಡುಗಡೆ ಕುರಿತ ವದಂತಿ: ಈ ಬಗ್ಗೆ TVS ಕಂಪನಿಯ ನಿಲುವೇನು?

2022ರ ಐಕ್ಯೂಬ್ ಇವಿ ಸ್ಕೂಟರ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ವಿವಿಧ ಬ್ಯಾಟರಿ ಆಯ್ಕೆಗೆ ಅನುಗುಣವಾಗಿ ಹೊಸ ಸ್ಕೂಟರ್ ಐಕ್ಯೂಬ್ ಸ್ಟ್ಯಾಂಡರ್ಡ್, ಐಕ್ಯೂಬ್ ಎಸ್ ಮತ್ತು ಐಕ್ಯೂಬ್ ಎಸ್‌ಟಿ ವೆರಿಯೆಂಟ್‌ಗಳನ್ನು ಹೊಂದಿದೆ.

ಬಹುನಿರೀಕ್ಷಿತ Zeppelin R ಕ್ರೂಸರ್ ಬಿಡುಗಡೆ ಕುರಿತ ವದಂತಿ: ಈ ಬಗ್ಗೆ TVS ಕಂಪನಿಯ ನಿಲುವೇನು?

ಹೊಸ ಐಕ್ಯೂಬ್ ಸಾಮಾನ್ಯ ಮಾದರಿಯು ಬೆಂಗಳೂರಿನಲ್ಲಿ ಆನ್‌ ರೋಡ್ ಪ್ರಕಾರ ಆರಂಭಿಕವಾಗಿ ರೂ. 1,11,663 ಬೆಲೆ ಹೊಂದಿದ್ದು, ಐಕ್ಯೂಬ್ ಎಸ್ ಮಾದರಿಯು ರೂ. 1,19,663 ಬೆಲೆ ಹೊಂದಿದ್ದು, ಹೊಸ ಇವಿ ಸ್ಕೂಟರ್ ಮಾದರಿಗಾಗಿ ಕಂಪನಿಯು ರೂ. 999 ಮುಂಗಡದೊಂದಿಗೆ ಬುಕಿಂಗ್ ಆರಂಭಿಸಿದೆ.

Most Read Articles

Kannada
English summary
Rumor about the long awaited Zeppelin R Cruiser launch What is TVS stand on this
Story first published: Thursday, June 2, 2022, 16:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X