ವಿವಿಧ ನಗರಗಳಲ್ಲಿ ಆಯೋಜಿಸಲಾಗಿರುವ ಟೆಸ್ಟ್ ರೈಡ್ ಮಾಹಿತಿ ಹಂಚಿಕೊಂಡ ಸಿಂಪಲ್ ಎನರ್ಜಿ

ಸಿಂಪಲ್ ಎನರ್ಜಿ ಕಂಪನಿಯು ತನ್ನ ಹೊಸ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ವಿತರಣೆ ಮಾಡಲು ಸಿದ್ದವಾಗುತ್ತಿದ್ದು, ಕಂಪನಿಯು ಹೊಸ ಸ್ಕೂಟರ್ ವಿತರಣೆಗೂ ಮುನ್ನ ಬುಕಿಂಗ್ ಮಾಡಿರುವ ಗ್ರಾಹಕರಿಗಾಗಿ ಶೀಘ್ರದಲ್ಲಿಯೇ ಟೆಸ್ಟ್ ರೈಡ್ ಒದಗಿಸಲಿದೆ.

ವಿವಿಧ ನಗರಗಳಲ್ಲಿ ನಡೆಯಲಿರುವ ಟೆಸ್ಟ್ ರೈಡ್ ಮಾಹಿತಿ ಹಂಚಿಕೊಂಡ ಸಿಂಪಲ್ ಎನರ್ಜಿ

ಹೊಸ ಸಿಂಪಲ್ ಒನ್ ಇವಿ ಸ್ಕೂಟರ್ ಮಾದರಿಗಾಗಿ ಬುಕಿಂಗ್ ಮಾಡಿರುವ ಗ್ರಾಹಕರಿಗೆ ಕಂಪನಿಯು ಜುಲೈ 20ರಿಂದ ಟೆಸ್ಟ್ ರೈಡ್ ಆಯೋಜಿಸುತ್ತಿದ್ದು, ಮೊದಲ ಹಂತದಲ್ಲಿ ಕಂಪನಿಯು ದೇಶದ ಪ್ರಮುಖ 13 ನಗರಗಳಲ್ಲಿ ಇವಿ ಸ್ಕೂಟರ್ ವಿತರಿಸಲಿದೆ. ಸಿಂಪಲ್ ಎನರ್ಜಿ ಕಂಪನಿಯು ಜುಲೈ 20ರಿಂದ ಸೆಪ್ಟೆಂಬರ್ 15ರ ತನಕ ಟೆಸ್ಟ್ ರೈಡ್ ಆಯೋಜಿಸಲಿದ್ದು, ಈಗಾಗಲೇ ಬುಕಿಂಗ್ ಸಲ್ಲಿಕೆ ಮಾಡುವ ಗ್ರಾಹಕರಿಗೆ ಹಂತ-ಹಂತವಾಗಿ ಟೆಸ್ಟ್ ರೈಡ್ ದೊರೆಯಲಿದೆ.

ವಿವಿಧ ನಗರಗಳಲ್ಲಿ ನಡೆಯಲಿರುವ ಟೆಸ್ಟ್ ರೈಡ್ ಮಾಹಿತಿ ಹಂಚಿಕೊಂಡ ಸಿಂಪಲ್ ಎನರ್ಜಿ

ಜುಲೈ 20ರಿಂದ 22ರ ತನಕ ಸಿಂಪಲ್ ಎನರ್ಜಿ ಕಂಪನಿಯು ಮೊದಲ ಟೆಸ್ಟ್ ರೈಡ್ ಅನ್ನು ನಮ್ಮ ಬೆಂಗಳೂರಿನಲ್ಲಿ ಆರಂಭಿಸುತ್ತಿದ್ದು, ತದನಂತರ ಚೆನ್ನೈ, ಹೈದ್ರಾಬಾದ್, ಪುಣೆ, ಮುಂಬೈ, ಪಣಜಿ, ಅಹಮದಾಬಾದ್, ಇಂಧೋರ್, ಜೈಪುರ್, ದೆಹಲಿ, ಲಕ್ನೋ, ಪಾಟ್ನಾ ಮತ್ತು ಭುವನೇಶ್ವರ್‌ದಲ್ಲಿ ಸೆಪ್ಟೆಂಬರ್ 15ರ ತನಕ ಟೆಸ್ಟ್ ರೈಡ್ ಆಯೋಜಿಸಿದೆ.

ವಿವಿಧ ನಗರಗಳಲ್ಲಿ ನಡೆಯಲಿರುವ ಟೆಸ್ಟ್ ರೈಡ್ ಮಾಹಿತಿ ಹಂಚಿಕೊಂಡ ಸಿಂಪಲ್ ಎನರ್ಜಿ

ಟೆಸ್ಟ್ ರೈಡ್ ನಂತರ ಅಂತಿಮ ಹಂತದ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಲಿರುವ ಸಿಂಪಲ್ ಎನರ್ಜಿ ಕಂಪನಿಯು ಅಕ್ಟೋಬರ್ ವೇಳೆಗೆ ಹೊಸ ಇವಿ ಸ್ಕೂಟರ್‌ ಅನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಿದ್ದು, ಕಂಪನಿಯು ಸಂಪೂರ್ಣವಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕ ಖರೀದಿ ಪ್ರಕ್ರಿಯೆ ಮತ್ತು ಗ್ರಾಹಕ ಸೇವೆಗಳನ್ನು ಪೂರೈಸಲಿದೆ.

ವಿವಿಧ ನಗರಗಳಲ್ಲಿ ನಡೆಯಲಿರುವ ಟೆಸ್ಟ್ ರೈಡ್ ಮಾಹಿತಿ ಹಂಚಿಕೊಂಡ ಸಿಂಪಲ್ ಎನರ್ಜಿ

ಈ ಮೊದಲಿನ ಯೋಜನೆಯೆಂತೆ ಜೂನ್‌ ಆರಂಭದಲ್ಲಿಯೇ ಇವಿ ಸ್ಕೂಟರ್ ವಿತರಣೆ ಮಾಡಬೇಕಿದ್ದ ಕಂಪನಿಯು ಕಾರಣಾಂತರಗಳಿಂದ ಸ್ಕೂಟರ್ ವಿತರಣೆಯನ್ನು ಮುಂದೂಡಿಕೆ ಮಾಡಿದ್ದು, ಇವಿ ಸ್ಕೂಟರ್‌ಗಳಲ್ಲಿ ಅಗ್ನಿ ಅವಘಡಗಳನ್ನು ತಪ್ಪಿಸಲು ಕೇಂದ್ರ ಸರ್ಕಾರದ ಹೊಸ ಸುರಕ್ಷಾ ಮಾರ್ಗಸೂಚಿಯೆಂತೆ ಬ್ಯಾಟರಿ ಪ್ಯಾಕ್ ಅಭಿವೃದ್ದಿಪಡಿಸುತ್ತಿರುವುದೇ ವಿತರಣೆಗೆ ವಿಳಂಬವಾಗಿದೆ.

ವಿವಿಧ ನಗರಗಳಲ್ಲಿ ನಡೆಯಲಿರುವ ಟೆಸ್ಟ್ ರೈಡ್ ಮಾಹಿತಿ ಹಂಚಿಕೊಂಡ ಸಿಂಪಲ್ ಎನರ್ಜಿ

ಸಿಂಪಲ್ ಎನರ್ಜಿಯು ಹೊಸ ಇವಿ ಸ್ಕೂಟರ್ ಮಾದರಿಗಾಗಿ ಇತರೆ ದೇಶಗಳಿಂದ ಆಮದು ಮಾಡಿಕೊಳ್ಳುವ ಬ್ಯಾಟರಿ ಸೆಲ್‌ಗಳನ್ನು ಸ್ಥಳೀಯವಾಗಿ ಉತ್ಪಾದಿಸುವ ಗುರಿಹೊಂದಿದ್ದು, ಸಿ4ವಿ ಎನ್ನುವ ಕಂಪನಿಯೊಂದಿಗಿನ ಪಾಲುದಾರಿಕೆ ಯೋಜನೆ ಅಡಿ ಅಭಿವೃದ್ದಿಗೊಳಿಸಲಾದ ಹೊಸ ಬ್ಯಾಟರಿ ಪ್ಯಾಕ್ ಅನ್ನು ಭವಿಷ್ಯದ ಇವಿ ಮಾದರಿಗಳಿಗೆ ಬಳಕೆ ಮಾಡಿಕೊಳ್ಳುತ್ತಿದೆ.

ವಿವಿಧ ನಗರಗಳಲ್ಲಿ ನಡೆಯಲಿರುವ ಟೆಸ್ಟ್ ರೈಡ್ ಮಾಹಿತಿ ಹಂಚಿಕೊಂಡ ಸಿಂಪಲ್ ಎನರ್ಜಿ

ಹೀಗಾಗಿ ಹೊಸ ಇವಿ ಸ್ಕೂಟರ್ ವಿತರಣೆ ಆರಂಭಕ್ಕೂ ಮುನ್ನ ಹೊಸ ಇವಿ ಸ್ಕೂಟರ್ ಉತ್ಪಾದನೆಯಲ್ಲಿ ಮತ್ತಷ್ಟು ಹೊಸತನಗಳನ್ನು ಪರಿಚಯಿಸುವ ಮೂಲಕ ಸ್ಕೂಟರ್ ಕಾರ್ಯಕ್ಷಮತೆ ಮತ್ತು ಬ್ಯಾಟರಿ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ಗ್ರಾಹಕರನ್ನು ಸೆಳೆಯುವ ಪ್ರಯತ್ನದಲ್ಲಿದ್ದು, ಹೊಸ ಸ್ಕೂಟರ್ ವಿತರಣೆಗೂ ಮುನ್ನ ಮತ್ತಷ್ಟು ಸುಧಾರಿತ ತಾಂತ್ರಿಕ ಅಂಶಗಳನ್ನು ಅಳವಡಿಸುವ ಸುಳಿವು ನೀಡಿದೆ.

ವಿವಿಧ ನಗರಗಳಲ್ಲಿ ನಡೆಯಲಿರುವ ಟೆಸ್ಟ್ ರೈಡ್ ಮಾಹಿತಿ ಹಂಚಿಕೊಂಡ ಸಿಂಪಲ್ ಎನರ್ಜಿ

ಹೊಸ ಬ್ಯಾಟರಿ ನಿರ್ವಹಣಾ ವ್ಯವಸ್ಥೆಯ ಮೂಲಕ ಸಿಂಪಲ್ ಒನ್ ಸ್ಕೂಟರ್ ಶೇ. 95 ರಷ್ಟು ಬ್ಯಾಟರಿ ದಕ್ಷತೆಯನ್ನು ಹಿಂದಿರುಗಿಸಲಿದ್ದು, 4.8 kWh ಬ್ಯಾಟರಿ ಹೊಂದಿರುವ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು 72 ಎನ್ಎಂ ಟಾರ್ಕ್ ಜೊತೆಗೆ ಇಕೋ ಮೋಡ್‌ನಲ್ಲೂ 200 ಕಿಮೀ ಗಿಂತಲೂ ಹೆಚ್ಚಿನ ಮೈಲೇಜ್ ಖಾತ್ರಿಪಡಿಸುತ್ತದೆ.

ವಿವಿಧ ನಗರಗಳಲ್ಲಿ ನಡೆಯಲಿರುವ ಟೆಸ್ಟ್ ರೈಡ್ ಮಾಹಿತಿ ಹಂಚಿಕೊಂಡ ಸಿಂಪಲ್ ಎನರ್ಜಿ

ಈ ಮೂಲಕ ಸಿಂಪಲ್ ಒನ್ ಇವಿ ಸ್ಕೂಟರ್ ಮಾದರಿಯು 4.5KW ಎಲೆಕ್ಟ್ರಿಕ್ ಮೋಟಾರ್ ಜೊತೆಗೆ 4.8kWh ಲೀಥಿಯಂ ಅಯಾನ್ ಬ್ಯಾಟರಿ(ಡ್ಯುಯಲ್ ಬ್ಯಾಟರಿ) ಜೋಡಣೆ ಹೊಂದಿದ್ದು, ಇದು ಪ್ರತಿ ಚಾರ್ಚ್‌ಗೆ ವಿವಿಧ ರೈಡ್ ಮೋಡ್‌ಗಳ ಚಾಲನಾ ಶೈಲಿ ಆಧಾರದ ಮೇಲೆ ಕನಿಷ್ಠ 203 ಕಿ.ಮೀ ನಿಂದ ಗರಿಷ್ಠ 236 ಕಿ.ಮೀ ಮೈಲೇಜ್ ಹಿಂದಿರುಗಿಸುವುದಾಗಿ ಖಾತ್ರಿಪಡಿಸಿದೆ.

ವಿವಿಧ ನಗರಗಳಲ್ಲಿ ನಡೆಯಲಿರುವ ಟೆಸ್ಟ್ ರೈಡ್ ಮಾಹಿತಿ ಹಂಚಿಕೊಂಡ ಸಿಂಪಲ್ ಎನರ್ಜಿ

ಇನ್ನು ಹೆಚ್ಚಿನ ಮೈಲೇಜ್ ಬಯಸುವ ಗ್ರಾಹಕರಿಗೆ ಕಂಪನಿಯು ಹೆಚ್ಚುವರಿಯಾಗಿ 1.6 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅನ್ನು ಸಹ ಆಯ್ಕೆ ರೂಪದಲ್ಲಿ ಜೋಡಣೆ ಮಾಡುವುದಾಗಿ ಹೇಳಿಕೊಂಡಿದ್ದು, ಹೆಚ್ಚುವರಿ ಬ್ಯಾಟರಿ ಪ್ಯಾಕ್ ಮೂಲಕ ಸಿಂಪಲ್ ಒನ್ ಸ್ಕೂಟರ್ ಮಾಲೀಕರು ಪ್ರತಿ ಚಾರ್ಜ್‌ಗೆ 300 ಕಿ.ಮೀ ಗಿಂತಲೂ ಹೆಚ್ಚು ದೂರ ಪ್ರಯಾಣಿಸಬಹುದಾಗಿದೆ.

ವಿವಿಧ ನಗರಗಳಲ್ಲಿ ನಡೆಯಲಿರುವ ಟೆಸ್ಟ್ ರೈಡ್ ಮಾಹಿತಿ ಹಂಚಿಕೊಂಡ ಸಿಂಪಲ್ ಎನರ್ಜಿ

1.6 kWh ಸಾಮರ್ಥ್ಯದ ಹೆಚ್ಚುವರಿ ಬ್ಯಾಟರಿ ಪ್ಯಾಕ್ ಅನ್ನು ಕಂಪನಿಯು ಹೊಸ ಸ್ಕೂಟರಿನ ಬೂಟ್‌ ಸ್ಪೆಸ್‌ನಲ್ಲಿ ಸುಲಭವಾಗಿ ಇರಿಸುವಂತೆ ವಿನ್ಯಾಸಗೊಳಿಸಿದ್ದು, ಇದು ದೂರದ ಪ್ರಯಾಣಕ್ಕೆ ಹೆಚ್ಚು ಸಹಕಾರಿಯಾಗಲಿದೆ.

ವಿವಿಧ ನಗರಗಳಲ್ಲಿ ನಡೆಯಲಿರುವ ಟೆಸ್ಟ್ ರೈಡ್ ಮಾಹಿತಿ ಹಂಚಿಕೊಂಡ ಸಿಂಪಲ್ ಎನರ್ಜಿ

ಸಿಂಪಲ್ ಎನರ್ಜಿ ಕಂಪನಿಯು ಸದ್ಯ ಸ್ಟ್ಯಾಂಡರ್ಡ್ ಸಿಂಪಲ್ ಒನ್ ಇವಿ ಸ್ಕೂಟರ್ ಬೆಲೆಯನ್ನು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 1.10 ಲಕ್ಷಕ್ಕೆ ನಿಗದಿಪಡಿಸಿದ್ದು, ಹೆಚ್ಚುವರಿ ಬ್ಯಾಟರಿ ಪ್ಯಾಕ್ ಆಯ್ಕೆ ಮಾಡುವ ಗ್ರಾಹಕರು ಹೊಸ ಮಾದರಿಗೆ ರೂ. 1.44 ಲಕ್ಷ ದರ ಪಾವತಿ ಮಾಡಬೇಕಾಗುತ್ತದೆ.

ವಿವಿಧ ನಗರಗಳಲ್ಲಿ ನಡೆಯಲಿರುವ ಟೆಸ್ಟ್ ರೈಡ್ ಮಾಹಿತಿ ಹಂಚಿಕೊಂಡ ಸಿಂಪಲ್ ಎನರ್ಜಿ

ಇದರೊಂದಿಗೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಭಾರತದಲ್ಲಿ ಮಾತ್ರವಲ್ಲ ವಿಶ್ವದಲ್ಲೇ ಅತಿ ಹೆಚ್ಚು ಮೈಲೇಜ್ ಹೊಂದಿರುವ ಇವಿ ಸ್ಕೂಟರ್ ಎಂಬ ಹೆಗ್ಗೆಳಿಕೆಗೆ ಪಾತ್ರವಾಗಲಿದ್ದು, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಸ್ಪೋರ್ಟಿ ವಿನ್ಯಾಸದೊಂದಿಗೆ ಅತ್ಯುತ್ತಮ ತಂತ್ರಜ್ಞಾನ ಸೌಲಭ್ಯಗಳನ್ನು ಹೊಂದಿದೆ.

ವಿವಿಧ ನಗರಗಳಲ್ಲಿ ನಡೆಯಲಿರುವ ಟೆಸ್ಟ್ ರೈಡ್ ಮಾಹಿತಿ ಹಂಚಿಕೊಂಡ ಸಿಂಪಲ್ ಎನರ್ಜಿ

ಇನ್ನೊಂದು ವಿಶೇಷ ಅಂದರೆ ಸಿಂಪಲ್ ಎನರ್ಜಿ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ನಮ್ಮ ಬೆಂಗಳೂರಿನಲ್ಲಿಯೇ ಪೂರ್ಣ ಪ್ರಮಾಣದಲ್ಲಿ ಅಭಿವೃದ್ದಿಗೊಳಿಸಿ ಬಿಡುಗಡೆ ಮಾಡುತ್ತಿದ್ದು, ಬೆಂಗಳೂರಿನಲ್ಲಿಯೇ ಅಭಿವೃದ್ದಿಪಡಿಸಿದ ಸಂಭ್ರಮಕ್ಕಾಗಿ ಹೊಸ ಸ್ಕೂಟರ್‌ನಲ್ಲಿ ಕಂಪನಿಯು ವಿಶೇಷವಾಗಿ 'ನಮ್ಮ ರೆಡ್' ಎನ್ನುವ ಬಣ್ಣದ ಆಯ್ಕೆ ನೀಡಿ ಗ್ರಾಹಕರನ್ನು ಸೆಳೆಯುತ್ತಿದೆ.

Most Read Articles

Kannada
English summary
Simple one electric scooter test ride dates revealed ahead of distributing
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X