Just In
- 1 hr ago ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್ ಲುಕ್ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ 400 ಬೈಕ್
- 1 hr ago Ola: ಓಲಾದಿಂದ ಕಡಿಮೆ ಬೆಲೆಯ 'ಎಸ್1 ಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ದೊಡ್ಡ ಘೋಷಣೆ.. ಏನದು?
- 2 hrs ago ಫೋಕ್ಸ್ವ್ಯಾಗನ್ ವರ್ಟಸ್ ಕಾರಿಗೆ ಮನಸೋತ ಗ್ರಾಹಕರು: ಭಾರೀ ಬೇಡಿಕೆ
- 3 hrs ago ಸಾಮಾನ್ಯರಂತೆ ಹಳ್ಳಿಯಲ್ಲಿರುವ ದೇಶದ 55ನೇ ಶ್ರೀಮಂತ ಶ್ರೀಧರ್ ವೆಂಬು: ಕಚೇರಿಗೆ ಹೋಗಲು ಎಲೆಕ್ಟ್ರಿಕ್ ಆಟೋ ಖರೀದಿ!
Don't Miss!
- News ದೇವೇಗೌಡರು ಕಣ್ಣೀರು ಹಾಕುವಂತೆ ಯಾರು ಏನು ಮಾಡಿದ್ದಾರೆ? ಡಿ ಕೆ ಶಿವಕುಮಾರ್ ಹೇಳಿದ್ದೇನು?
- Sports ಟಿ20 ವಿಶ್ವಕಪ್-2024: "ಬಾಗಿಲು ಮುಚ್ಚಿದ್ದೇನೆ" ಎಂದಿದ್ದೇಕೆ ಸ್ಪಿನ್ ಮಾಂತ್ರಿಕ ನರೈನ್
- Movies ಡಾರ್ಲಿಂಗ್ ಕೃಷ್ಣ ನಟಿಸಿದ ಮೊದಲ ಸೀರಿಯಲ್ ನಟಿ 13 ವರ್ಷಗಳ ಬಳಿಕ ಕನ್ನಡ ಕಿರುತೆರೆ ಎಂಟ್ರಿ; ಯಾರಿವರು?
- Lifestyle ರೆಸಿಪಿ: ಮಾವಿನ ಕಾಯಿ ತುರಿದು ಮಾಡುವ ಉಪ್ಪಿನಕಾಯಿ, ಎಣ್ಣೆ ಬಳಸಿಲ್ಲ, ವರ್ಷದವರೆಗೆ ಇಡಲೂ ಬಹುದು
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Finance ಇನ್ಮುಂದೆ ನಿಮ್ಮ ಜಮೀನಿನಲ್ಲಿ ನೀವು ಮನೆ ಕಟ್ಟೋದಕ್ಕೂ ಸರ್ಕಾರದ ಅನುಮತಿ ಅಗತ್ಯ, ಏನಿದು ಹೋಸ ನಿಯಮ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಗೊಂಡ ಟಿವಿಎಸ್ ಎನ್ಟಾರ್ಕ್ 125
ಟಿವಿಎಸ್ ಮೋಟಾರ್ ಕಂಪನಿಯು ತನ್ನ ಜನಪ್ರಿಯ ಪ್ರೀಮಿಯಂ ಸ್ಕೂಟರ್ ಮಾದರಿಯಾದ ಎನ್ಟಾರ್ಕ್ 125 ಆವೃತ್ತಿಯಲ್ಲಿ ಹೊಸ ಬಣ್ಣದ ಆಯ್ಕೆ ಪರಿಚಯಿಸಿದ್ದು, ಮೆರಿನ್ ಬ್ಲ್ಯೂ ಬಣ್ಣದ ಆಯ್ಕೆ ಹೊಂದಿರುವ ಹೊಸ ಸ್ಕೂಟರ್ ಮಾದರಿಯು ಎಕ್ಸ್ಶೋರೂಂ ಪ್ರಕಾರ ರೂ. 87,011 ಬೆಲೆ ಹೊಂದಿದೆ.
ಹೊಸ ಎನ್ಟಾರ್ಕ್ 125 ಸ್ಕೂಟರ್ ಮಾದರಿಯನ್ನು ಟಿವಿಎಸ್ ಮೋಟಾರ್ ಕಂಪನಿಯು ರೇಸ್ ಎಡಿಷನ್ ಆಧರಿಸಿ ಬಿಡುಗಡೆ ಮಾಡಿದ್ದು, ರೇಸ್ ಎಡಿಷನ್ ಕಂಪನಿಯು ಯೆಲ್ಲೋ, ರೆಡ್ ಜೊತೆಗೆ ಇದೀಗ ಹೊಸದಾಗಿ ಮೆರಿನ್ ಬ್ಲ್ಯೂ ಬಣ್ಣದ ಆಯ್ಕೆ ನೀಡಲಾಗಿದೆ. ಹೊಸ ಬಣ್ಣದ ಆಯ್ಕೆ ರೇಸ್ಎಡಿಷನ್ ಮಾತ್ರ ಖರೀದಿಗೆ ಲಭ್ಯವಿದ್ದು, ಇನ್ನುಳಿದ ಮಾದರಿಗಳಲ್ಲಿ ಈ ಹಿಂದಿನ ಬಣ್ಣಗಳ ಆಯ್ಕೆ ಮುಂದುವರೆದಿದೆ.
ಕಳೆದ ಕೆಲ ತಿಂಗಳ ಹಿಂದಷ್ಟೇ ಹೊಸದಾಗಿ ಟಾಪ್ ಎಂಡ್ ಮಾದರಿಯಾಗಿ ಎನ್ಟಾರ್ಕ್ 125 ಎಕ್ಸ್ಟಿ ವರ್ಷನ್ ಪರಿಚಯಿಸಿದ್ದ ಕಂಪನಿಯು ಇದೀಗ ಮುಂಬರುವ ದಸರಾ ಮತ್ತು ದೀಪಾವಳಿ ವಿಶೇಷತೆಗಾಗಿ ರೇಸ್ ಎಡಿಷನ್ ಹೊಸ ಬಣ್ಣದ ಆಯ್ಕೆ ನೀಡಿದೆ.
ಮೆರಿನ್ ಬ್ಲ್ಯೂ ಬಣ್ಣದ ಆಯ್ಕೆ ಹೊಂದಿರುವ ಹೊಸ ಆವೃತ್ತಿಯು ಸ್ಟ್ಯಾಂಡರ್ಡ್ ರೇಸ್ ಎಡಿಷನ್ನಲ್ಲಿರುವ ಇತರೆ ವೆರಿಯೆಂಟ್ಗಳಿಂತ ರೂ. 1 ಸಾವಿರದಷ್ಟು ದುಬಾರಿಯಾಗಿದ್ದು, ಹೊಸ ಬಣ್ಣದ ಆಯ್ಕೆ ಪ್ರೀಮಿಯಂ ಸ್ಕೂಟರ್ಗೆ ಮತ್ತಷ್ಟು ಮೆರಗು ನೀಡಲಿದೆ.
ಎನ್ಟಾರ್ಕ್ 125 ಸ್ಕೂಟರ್ ಮಾದರಿಯಲ್ಲಿ ಟಿವಿಎಸ್ ಕಂಪನಿಯು ಸದ್ಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಡ್ರಮ್, ಡಿಸ್ಕ್, ರೇಸ್ ಎಡಿಷನ್, ಸೂಪರ್ ಸ್ಕ್ವಾಡ್ ಎಡಿಷನ್ ಮತ್ತು ರೇಸ್ ಎಕ್ಸ್ಪಿ ಎನ್ನುವ ಐದು ವೆರಿಯೆಂಟ್ಗಳಲ್ಲಿ ಮಾರಾಟ ಮಾಡುತ್ತಿದೆ.
ಡ್ರಮ್ ಮಾದರಿಯು ದೆಹಲಿ ಎಕ್ಸ್ಶೋರೂಂ ಪ್ರಕಾರ ರೂ. 78,506, ಡಿಸ್ಕ್ ಮಾದರಿಯು ರೂ. 82,961 ರೇಸ್ ಎಡಿಷನ್ ಮಾದರಿಯು ರೂ. 86,461 ಸೂಪರ್ ಸ್ಕ್ವಾಡ್ ಎಡಿಷನ್ ರೂ. 88,961 ಮತ್ತು ರೇಸ್ ಎಕ್ಸ್ಪಿ ಎಡಿಷನ್ ರೂ. 90,511 ಬೆಲೆ ಮತ್ತು ಇದೀಗ ಬೆಲೆ ಇಳಿಕೆ ಮಾಡಲಾದ ಎಕ್ಸ್ಟಿ ಮಾದರಿಯು ರೂ. 98,411 ಬೆಲೆ ಹೊಂದಿದೆ.
ಇದರ ಹೊರತಾಗಿ ಹೊಸ ಸ್ಕೂಟರ್ನಲ್ಲಿ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆಯೇ ಎಂಜಿನ್ ಮತ್ತು ಇತರೆ ತಾಂತ್ರಿಕ ಸೌಲಭ್ಯವನ್ನು ಮುಂದುವರಿಸಲಾಗಿದ್ದು, ಹೊಸ ಸ್ಕೂಟರ್ನಲ್ಲಿ 124 ಏರ್ ಕೂಲ್ಡ್, ಫ್ಯೂಲ್ ಇಂಜೆಕ್ಷೆಡ್ ಎಂಜಿನ್ ಜೋಡಣೆ ಮಾಡಲಾಗಿದೆ.
ಸ್ಟ್ಯಾಂಡರ್ಡ್ ಮಾದರಿಗಳಂತೆ ಹೊಸ ಮಾದರಿಯು 9.25-ಬಿಎಚ್ಪಿ ಮತ್ತು 10.5-ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಹೊಸ ಸ್ಕೂಟರ್ನಲ್ಲಿರುವ ರೇಸ್ ಮೋಡ್ ಪರ್ಫಾಮೆನ್ಸ್ಗಾಗಿ ಮತ್ತು ಸ್ಟ್ರೀಟ್ ಮೋಡ್ ಇಂಧನ ದಕ್ಷತೆ ಕಾಯ್ದುಕೊಳ್ಳಲು ಸಹಕಾರಿಯಾಗಿದೆ.
ಜೊತೆಗೆ ಎನ್ಟಾರ್ಕ್ 125 ಹೊಸ ಮಾದರಿಯಲ್ಲಿ ಇತರೆ ವೆರಿಯೆಂಟ್ಗಳಲ್ಲಿರುವಂತೆ ಉನ್ನತೀಕರಿಸಲಾದ ಹಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ನೀಡಲಾಗಿದ್ದು, ಟಿ ಆಕಾರದ ಹೆಡ್ಲ್ಯಾಂಪ್ ಮತ್ತು ಟೈಲ್ಲ್ಯಾಂಪ್, ಎಲ್ಇಡಿ ಡಿಆರ್ಎಲ್ಎಸ್, ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಏಂಜಿನ್ ಕಿಲ್ ಸ್ವಿಚ್, 5.8 -ಲೀಟರ್ ಫ್ಯೂಲ್ ಟ್ಯಾಂಕ್ ಹೊಂದಿದೆ.
ಹೊಸ ಎಕ್ಸ್ಟಿ ಮಾದರಿಯು ರೇಸ್ ಎಕ್ಸ್ಪಿ ಮಾದರಿಗಿಂತಲೂ ತುಸು ಹೆಚ್ಚುವರಿ ಬೆಲೆ ಹೊಂದಿದ್ದು, ಹೊಸ ಮಾದರಿಯೊಂದಿಗೆ ಕಂಪನಿಯು 125 ಸಿಸಿ ವಿಭಾಗದಲ್ಲಿ ಸ್ಪೋರ್ಟಿ ಸ್ಕೂಟರ್ ಇಷ್ಟಪಡುವ ಗ್ರಾಹಕರನ್ನು ಸೆಳೆಯುತ್ತಿದೆ. ಮುಂಬರುವ ದಿನಗಳಲ್ಲಿ ಹೊಸ ಬಣ್ಣದ ಆಯ್ಕೆ ಹೊಂದಿರುವ ಮಾದರಿಯು ಮತ್ತಷ್ಟು ಬೇಡಿಕೆ ಪಡೆದುಕೊಳ್ಳಲಿದೆ.
ಹೊಸ ಆವೃತ್ತಿಯಲ್ಲಿ ಆಕರ್ಷಕ ಗ್ರಾಫಿಕ್ಸ್ ಡಿಸೈನ್ನೊಂದಿಗೆ ಸ್ಪೋರ್ಟಿ ಲುಕ್ ಇಷ್ಟಪಡುವ ಗ್ರಾಹಕರ ಆಯ್ಕೆಗೆ ಉತ್ತಮಯಾಗಲಿದ್ದು, ಹೊಸ ಆವೃತ್ತಿಯಲ್ಲಿ ಕಂಪನಿಯು ಉನ್ನತೀಕರಿಸಿದ ಕನೆಕ್ಟೆಡ್ ತಂತ್ರಜ್ಞಾನದೊಂದಿಗೆ ನಿಯೋ ಗ್ರಿನ್ ಬಣ್ಣದ ಆಯ್ಕೆ ನೀಡಿದೆ.
ಉನ್ನತೀಕರಿಸಿದ ಸ್ಮಾರ್ಟ್ಎಕ್ಸ್ಟಾಕ್ ಕನೆಕ್ಟ್ ತಂತ್ರಜ್ಞಾನದಿಂದಾಗಿ ಎನ್ಟಾರ್ಕ್ 125 ಸ್ಕೂಟರ್ ಬಳಕೆದಾರರು ಇದೀಗ ವಾಯ್ಸ್ ಕಮಾಂಡ್ ಮೂಲಕ ಸ್ಕೂಟರಿನ ಪ್ರಮುಖ ತಾಂತ್ರಿಕ ಅಂಶಗಳ ಮಾಹಿತಿ ಪಡೆಯಬಹುದಾಗಿದ್ದು, ಡಿಸ್ಪ್ಲೇ ಮೂಲಕ ಪ್ರಸಕ್ತ ವಿದ್ಯಮಾನ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದಾಗಿದೆ.
ಜೊತೆಗೆ ಸ್ಮಾರ್ಟ್ಎಕ್ಸ್ಟಾಕ್ ಕನೆಕ್ಟ್ ಸೌಲಭ್ಯವನ್ನು ಸ್ಮಾರ್ಟ್ಫೋನ್ಗೆ ಸಂಪರ್ಕಿಸುವ ಮೂಲಕ ಕರೆ ಸ್ವಿಕಾರವನ್ನು ಡಿಸ್ಪ್ಲೇ ಮೂಲಕ ಸುಲಭವಾಗಿ ನಿರ್ವಹಿಸಬಹುದಾಗಿದ್ದು, ಮುಖ್ಯವಾಗಿ ವಾಯ್ಸ್ ಕಮಾಂಡ್ ಮೂಲಕವೇ ಹಲವು ಅಲರ್ಟ್ ಸೌಲಭ್ಯಗಳನ್ನು ಒದಗಿಸುತ್ತದೆ.
ಸ್ಕೂಟರ್ನಲ್ಲಿ ಇಂಧನ ಖಾಲಿಯಾಗುವ, ಸ್ಮಾರ್ಟ್ಎಕ್ಸ್ಟಾಕ್ಗೆ ಕನೆಕ್ಟ್ ಮಾಡಲಾದ ಫೋನ್ ಬ್ಯಾಟರಿ ಚಾರ್ಜಿಂಗ್ ಲೆವಲ್, ಟ್ರಾಫಿಕ್ಗಳಲ್ಲಿ ಅನಗತ್ಯವಾಗಿ ಇಂಧನ ಹಾಳುತ್ತಿದ್ದರೆ ವಾಯ್ಸ್ ಅಲರ್ಟ್ ಮಾಡಲಿದ್ದು, ಇದು ರೈಡಿಂಗ್ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.