ಹೊಸ ತಂತ್ರಜ್ಞಾನ ಪ್ರೇರಿತ ಟಿವಿಎಸ್ ಎನ್‌ಟಾರ್ಕ್ 125 ಎಕ್ಸ್‌ಟಿ ವರ್ಷನ್ ಬಿಡುಗಡೆ

ಟಿವಿಎಸ್ ಮೋಟಾರ್(TVS Motor) ಕಂಪನಿಯು ತನ್ನ ಜನಪ್ರಿಯ ಪ್ರೀಮಿಯಂ ಸ್ಕೂಟರ್ ಎನ್‌ಟಾರ್ಕ್ 125 ಮಾದರಿಯಲ್ಲಿ ಪ್ರೀಮಿಯಂ ಫೀಚರ್ಸ್ ಸೌಲಭ್ಯವುಳ್ಳ ಹೊಸ ಎಕ್ಸ್‌ಟಿ ವರ್ಷನ್ ಬಿಡುಗಡೆಗೊಳಿಸಿದ್ದು, ಹೊಸ ಸ್ಕೂಟರ್ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1,02,823 ಬೆಲೆ ಹೊಂದಿದೆ.

ಹೊಸ ತಂತ್ರಜ್ಞಾನ ಪ್ರೇರಿತ ಟಿವಿಎಸ್ ಎನ್‌ಟಾರ್ಕ್ ಟಾರ್ಕ್ 125 ಎಕ್ಸ್‌ಟಿ ವರ್ಷನ್ ಬಿಡುಗಡೆ

ಎನ್‌ಟಾರ್ಕ್ 125 ಸ್ಕೂಟರ್ ಮಾದರಿಯಲ್ಲಿ ಟಿವಿಎಸ್ ಕಂಪನಿಯು ಸದ್ಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಡ್ರಮ್, ಡಿಸ್ಕ್, ರೇಸ್ ಎಡಿಷನ್, ಸೂಪರ್ ಸ್ಕ್ವಾಡ್ ಎಡಿಷನ್ ಮತ್ತು ರೇಸ್ ಎಕ್ಸ್‌ಪಿ ಎನ್ನುವ ಐದು ವೆರಿಯೆಂಟ್‌ಗಳಲ್ಲಿ ಮಾರಾಟ ಮಾಡುತ್ತಿದ್ದು, ಇದೀಗ ಹೊಸದಾಗಿ ಟಾಪ್ ಎಂಡ್ ಮಾದರಿಯಾಗಿ ಎನ್‌ಟಾರ್ಕ್ 125 ಎಕ್ಸ್‌ಟಿ ವರ್ಷನ್ ಪರಿಚಯಿಸಿದೆ.

ಹೊಸ ತಂತ್ರಜ್ಞಾನ ಪ್ರೇರಿತ ಟಿವಿಎಸ್ ಎನ್‌ಟಾರ್ಕ್ ಟಾರ್ಕ್ 125 ಎಕ್ಸ್‌ಟಿ ವರ್ಷನ್ ಬಿಡುಗಡೆ

ಹೊಸ ಆವೃತ್ತಿಯು ಆಕರ್ಷಕ ಗ್ರಾಫಿಕ್ಸ್ ಡಿಸೈನ್‌ನೊಂದಿಗೆ ಸ್ಪೋರ್ಟಿ ಲುಕ್ ಇಷ್ಟಪಡುವ ಗ್ರಾಹಕರ ಆಯ್ಕೆಗೆ ಉತ್ತಮಯಾಗಲಿದ್ದು, ಹೊಸ ಆವೃತ್ತಿಯಲ್ಲಿ ಕಂಪನಿಯು ಉನ್ನತೀಕರಿಸಿದ ಕನೆಕ್ಟೆಡ್ ತಂತ್ರಜ್ಞಾನದೊಂದಿಗೆ ನಿಯೋ ಗ್ರಿನ್ ಬಣ್ಣದ ಆಯ್ಕೆ ನೀಡಿದೆ.

ಹೊಸ ತಂತ್ರಜ್ಞಾನ ಪ್ರೇರಿತ ಟಿವಿಎಸ್ ಎನ್‌ಟಾರ್ಕ್ ಟಾರ್ಕ್ 125 ಎಕ್ಸ್‌ಟಿ ವರ್ಷನ್ ಬಿಡುಗಡೆ

ಉನ್ನತೀಕರಿಸಿದ ಸ್ಮಾರ್ಟ್ಎಕ್ಸ್‌ಟಾಕ್ ಕನೆಕ್ಟ್ ತಂತ್ರಜ್ಞಾನದಿಂದಾಗಿ ಎನ್‌ಟಾರ್ಕ್ 125 ಸ್ಕೂಟರ್ ಬಳಕೆದಾರರು ಇದೀಗ ವಾಯ್ಸ್ ಕಮಾಂಡ್ ಮೂಲಕ ಸ್ಕೂಟರಿನ ಪ್ರಮುಖ ತಾಂತ್ರಿಕ ಅಂಶಗಳ ಮಾಹಿತಿ ಪಡೆಯಬಹುದಾಗಿದ್ದು, ಡಿಸ್‌ಪ್ಲೇ ಮೂಲಕ ಪ್ರಸಕ್ತ ವಿದ್ಯಮಾನ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದಾಗಿದೆ.

ಹೊಸ ತಂತ್ರಜ್ಞಾನ ಪ್ರೇರಿತ ಟಿವಿಎಸ್ ಎನ್‌ಟಾರ್ಕ್ ಟಾರ್ಕ್ 125 ಎಕ್ಸ್‌ಟಿ ವರ್ಷನ್ ಬಿಡುಗಡೆ

ಜೊತೆಗೆ ಸ್ಮಾರ್ಟ್ಎಕ್ಸ್‌ಟಾಕ್ ಕನೆಕ್ಟ್ ಸೌಲಭ್ಯವನ್ನು ಸ್ಮಾರ್ಟ್‌ಫೋನ್‌ಗೆ ಸಂಪರ್ಕಿಸುವ ಮೂಲಕ ಕರೆ ಸ್ವಿಕಾರವನ್ನು ಡಿಸ್‌ಪ್ಲೇ ಮೂಲಕ ಸುಲಭವಾಗಿ ನಿರ್ವಹಿಸಬಹುದಾಗಿದ್ದು, ಮುಖ್ಯವಾಗಿ ವಾಯ್ಸ್ ಕಮಾಂಡ್ ಮೂಲಕವೇ ಹಲವು ಅಲರ್ಟ್ ಸೌಲಭ್ಯಗಳನ್ನು ಒದಗಿಸುತ್ತದೆ.

ಹೊಸ ತಂತ್ರಜ್ಞಾನ ಪ್ರೇರಿತ ಟಿವಿಎಸ್ ಎನ್‌ಟಾರ್ಕ್ ಟಾರ್ಕ್ 125 ಎಕ್ಸ್‌ಟಿ ವರ್ಷನ್ ಬಿಡುಗಡೆ

ಸ್ಕೂಟರ್‌ನಲ್ಲಿ ಇಂಧನ ಖಾಲಿಯಾಗುವ, ಸ್ಮಾರ್ಟ್ಎಕ್ಸ್‌ಟಾಕ್‌ಗೆ ಕನೆಕ್ಟ್ ಮಾಡಲಾದ ಫೋನ್ ಬ್ಯಾಟರಿ ಚಾರ್ಜಿಂಗ್ ಲೆವಲ್, ಟ್ರಾಫಿಕ್‌ಗಳಲ್ಲಿ ಅನಗತ್ಯವಾಗಿ ಇಂಧನ ಹಾಳುತ್ತಿದ್ದರೆ ವಾಯ್ಸ್ ಅಲರ್ಟ್ ಮಾಡಲಿದ್ದು, ಇದು ರೈಡಿಂಗ್ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಹೊಸ ತಂತ್ರಜ್ಞಾನ ಪ್ರೇರಿತ ಟಿವಿಎಸ್ ಎನ್‌ಟಾರ್ಕ್ ಟಾರ್ಕ್ 125 ಎಕ್ಸ್‌ಟಿ ವರ್ಷನ್ ಬಿಡುಗಡೆ

ಇದರ ಹೊರತಾಗಿ ಹೊಸ ಸ್ಕೂಟರ್‌ನಲ್ಲಿ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆಯೇ ಎಂಜಿನ್ ಮತ್ತು ಇತರೆ ತಾಂತ್ರಿಕ ಸೌಲಭ್ಯವನ್ನು ಮುಂದುವರಿಸಲಾಗಿದ್ದು, ಹೊಸ ಸ್ಕೂಟರ್‌ನಲ್ಲಿ 124 ಏರ್ ಕೂಲ್ಡ್, ಫ್ಯೂಲ್ ಇಂಜೆಕ್ಷೆಡ್ ಎಂಜಿನ್ ಜೋಡಣೆ ಮಾಡಲಾಗಿದೆ.

ಹೊಸ ತಂತ್ರಜ್ಞಾನ ಪ್ರೇರಿತ ಟಿವಿಎಸ್ ಎನ್‌ಟಾರ್ಕ್ ಟಾರ್ಕ್ 125 ಎಕ್ಸ್‌ಟಿ ವರ್ಷನ್ ಬಿಡುಗಡೆ

ಸ್ಟ್ಯಾಂಡರ್ಡ್ ಮಾದರಿಗಳಂತೆ ಹೊಸ ಮಾದರಿಯು 9.25-ಬಿಎಚ್‌ಪಿ ಮತ್ತು 10.5-ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಹೊಸ ಸ್ಕೂಟರ್‌ನಲ್ಲಿರುವ ರೇಸ್ ಮೋಡ್ ಪರ್ಫಾಮೆನ್ಸ್‌ಗಾಗಿ ಮತ್ತು ಸ್ಟ್ರೀಟ್ ಮೋಡ್ ಇಂಧನ ದಕ್ಷತೆ ಕಾಯ್ದುಕೊಳ್ಳಲು ಸಹಕಾರಿಯಾಗಿದೆ.

ಹೊಸ ತಂತ್ರಜ್ಞಾನ ಪ್ರೇರಿತ ಟಿವಿಎಸ್ ಎನ್‌ಟಾರ್ಕ್ ಟಾರ್ಕ್ 125 ಎಕ್ಸ್‌ಟಿ ವರ್ಷನ್ ಬಿಡುಗಡೆ

ಜೊತೆಗೆ ಎನ್‌ಟಾರ್ಕ್ 125 ಹೊಸ ಮಾದರಿಯಲ್ಲಿ ಇತರೆ ವೆರಿಯೆಂಟ್‌ಗಳಲ್ಲಿರುವಂತೆ ಉನ್ನತೀಕರಿಸಲಾದ ಹಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ನೀಡಲಾಗಿದ್ದು, ಟಿ ಆಕಾರದ ಹೆಡ್‌ಲ್ಯಾಂಪ್ ಮತ್ತು ಟೈಲ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್ಎಸ್, ಪೂರ್ಣ ಪ್ರಮಾಣದ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಏಂಜಿನ್ ಕಿಲ್ ಸ್ವಿಚ್, 5.8 -ಲೀಟರ್ ಫ್ಯೂಲ್ ಟ್ಯಾಂಕ್ ಹೊಂದಿದೆ.

ಹೊಸ ತಂತ್ರಜ್ಞಾನ ಪ್ರೇರಿತ ಟಿವಿಎಸ್ ಎನ್‌ಟಾರ್ಕ್ ಟಾರ್ಕ್ 125 ಎಕ್ಸ್‌ಟಿ ವರ್ಷನ್ ಬಿಡುಗಡೆ

ಈ ಮೂಲಕ ಹೊಸ ವೆರಿಯೆಂಟ್‌ನೊಂದಿಗೆ ಎನ್‌ಟಾರ್ಕ್ 125 ಮಾದರಿಯು ಒಟ್ಟು ಆರು ವೆರಿಯೆಂಟ್‌ಗಳನ್ನು ಹೊಂದಿದಂತಾಗಲಿದ್ದು, ಸದ್ಯ ಖರೀದಿಗೆ ಲಭ್ಯವಿರುವ ಡ್ರಮ್ ಮಾದರಿಯು ಬೆಂಗಳೂರು ಎಕ್ಸ್‌ಶೋರೂಂ ಪ್ರಕಾರ ರೂ. 82,741, ಡಿಸ್ಕ್ ಮಾದರಿಯು ರೂ. 87,846 ರೇಸ್ ಎಡಿಷನ್ ಮಾದರಿಯು ರೂ. 91,446, ಸೂಪರ್ ಸ್ಕ್ವಾಡ್ ಎಡಿಷನ್ ರೂ. 93,896 ಮತ್ತು ರೇಸ್ ಎಕ್ಸ್‌ಪಿ ಎಡಿಷನ್ ರೂ. 95,496 ಬೆಲೆ ಹೊಂದಿವೆ.

ಹೊಸ ತಂತ್ರಜ್ಞಾನ ಪ್ರೇರಿತ ಟಿವಿಎಸ್ ಎನ್‌ಟಾರ್ಕ್ ಟಾರ್ಕ್ 125 ಎಕ್ಸ್‌ಟಿ ವರ್ಷನ್ ಬಿಡುಗಡೆ

ಹೊಸ ಎಕ್ಸ್‌ಟಿ ಮಾದರಿಯು ರೇಸ್ ಎಕ್ಸ್‌ಪಿ ಮಾದರಿಗಿಂತಲೂ ತುಸು ಹೆಚ್ಚುವರಿ ಬೆಲೆ ಹೊಂದಿದ್ದು, ಹೊಸ ಮಾದರಿಯೊಂದಿಗೆ ಕಂಪನಿಯು 125 ಸಿಸಿ ವಿಭಾಗದಲ್ಲಿ ಸ್ಪೋರ್ಟಿ ಸ್ಕೂಟರ್ ಇಷ್ಟಪಡುವ ಗ್ರಾಹಕರನ್ನು ಸೆಳೆಯುವ ನೀರಿಕ್ಷೆಯಲ್ಲಿದೆ.

ಹೊಸ ತಂತ್ರಜ್ಞಾನ ಪ್ರೇರಿತ ಟಿವಿಎಸ್ ಎನ್‌ಟಾರ್ಕ್ ಟಾರ್ಕ್ 125 ಎಕ್ಸ್‌ಟಿ ವರ್ಷನ್ ಬಿಡುಗಡೆ

ಎನ್‌ಟಾರ್ಕ್ 125 ಎಕ್ಸ್‌ಟಿ ಮಾದರಿಯ ಬಿಡುಗಡೆ ಕುರಿತು ಮಾತನಾಡಿದ ಟಿವಿಎಸ್ ಮಾರ್ಕೆಟಿಂಗ್ ವಿಭಾಗದ ಹಿರಿಯ ಉಪಾಧ್ಯಕ್ಷ ಅನಿರುದ್ದ ಹಲ್ದಾರ್ ಅವರು, ಹೊಸ ಮಾದರಿಯು ಸ್ಪೋರ್ಟಿ ವಿನ್ಯಾಸ, ಪರ್ಫಾಮೆನ್ಸ್ ಮತ್ತು ತಂತ್ರಜ್ಞಾನ ಮೂರು ಅಂಶಗಳನ್ನು ಒಳಗೊಂಡ ಅತ್ಯುತ್ತಮ ಮಾದರಿಯಾಗಿ ಹೊರಹೊಮ್ಮಿದ್ದು, ಇದೀಗ ಹೊಸ ಮಾದರಿಯು ಇನ್ನಷ್ಟು ಗ್ರಾಹಕರನ್ನು ಸೆಳೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Most Read Articles

Kannada
English summary
Tvs ntorq 125 xt launched in india at rs 1 02 823 details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X