Just In
Don't Miss!
- Sports
Ind vs Eng 5ನೇ ಟೆಸ್ಟ್: ಭಾರತದ ಆಡುವ 11ರ ಬಳಗದಲ್ಲಿ ಈ ಇಬ್ಬರು ವೇಗಿಗಳಿರಬೇಕು; ಅಜಿತ್ ಅಗರ್ಕರ್
- Movies
ಅಸ್ಸಾಂ ಪ್ರವಾಹ ಪೀಡಿತರ ನೆರವಿಗೆ ಬಂದ ಆಮಿರ್ ಖಾನ್: 25 ಲಕ್ಷ ರೂ. ದೇಣಿಗೆ!
- News
ಮೊಟ್ಟೆ ಕೊಡಲು ಕಾಸಿಲ್ಲ, ಶಿಕ್ಷಣ ಸಚಿವರ ಜಾಲತಾಣಕ್ಕೆ ಇದೆಯೇ?: ಕಾಂಗ್ರೆಸ್ ಟೀಕೆ
- Finance
ಜೂ.28ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Lifestyle
ಆಷಾಢ ಮಾಸ 2022: ಆಷಾಢದಲ್ಲಿ ಗರ್ಭವತಿಯಾದರೆ ಅಶುಭ ಎನ್ನಲು ವೈಜ್ಞಾನಿಕ ಕಾರಣ ಇದೇ ನೋಡಿ
- Technology
Reliance Jio: ಮುಖೇಶ್ ಅಂಬಾನಿ ರಾಜೀನಾಮೆ; ಆಕಾಶ್ ಅಂಬಾನಿ ನೂತನ ಸಾರಥಿ!
- Education
Cochin Shipyard Limited Recruitment 2022 : 106 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಬನ್ನೇರುಘಟ್ಟ - ಹೈಟೆಕ್ ನಗರ ಬೆಂಗಳೂರಿನಲ್ಲಿರುವ ಒಂದು ನೈಸರ್ಗಿಕ ತಾಣ
ಎನ್‌ಟಾರ್ಕ್ 125 ಸ್ಕೂಟರ್ ಬೆಲೆಯಲ್ಲಿ ಇಳಿಕೆ ಮಾಡಿದ ಟಿವಿಎಸ್ ಮೋಟಾರ್
ಟಿವಿಎಸ್ ಮೋಟಾರ್ ಕಂಪನಿಯು ಎನ್‌ಟಾರ್ಕ್ 125 ಮಾದರಿಯೊಂದಿಗೆ ಪ್ರೀಮಿಯಂ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿಯಲ್ಲಿದ್ದು, ಕಂಪನಿಯು ಬಿಡಿಭಾಗಗಳ ಲಭ್ಯತೆ ಆಧರಿಸಿ ಹೊಸ ಸ್ಕೂಟರ್ ಬೆಲೆಯಲ್ಲಿ ಇಳಿಕೆಗೆ ನಿರ್ಧರಿಸಿದೆ.

ಬಿಡಿಭಾಗಗಳ ಕೊರತೆಯಿಂದಾಗಿ ಈ ಹಿಂದೆ ಎನ್‌ಟಾರ್ಕ್ 125 ಮಾದರಿಯ ಬೆಲೆಯಲ್ಲಿ ಹಲವಾರು ಬಾರಿ ಬೆಲೆ ಏರಿಕೆ ಮಾಡಿದ್ದ ಟಿವಿಎಸ್ ಮೋಟಾರ್ ಕಂಪನಿಯು ಇದೀಗ ಹೊಸ ಸ್ಕೂಟರ್ ಬೆಲೆಯಲ್ಲಿ ಇಳಿಕೆ ಮಾಡಿರುವುದಾಗಿ ಹೇಳಿಕೊಂಡಿದ್ದು, ಟಾಪ್ ಎಂಡ್ ಮಾದರಿಯ ಎಕ್ಸ್‌ಟಿ ಆವೃತ್ತಿಯ ಬೆಲೆಯಲ್ಲಿ ಸುಮಾರು ರೂ. 5 ಸಾವಿರದಷ್ಟು ಬೆಲೆ ಇಳಿಕೆ ಮಾಡಿದೆ.

ಎನ್‌ಟಾರ್ಕ್ 125 ಎಕ್ಸ್‌ಟಿ ಮಾದರಿಯ ಬೆಲೆ ಇಳಿಕೆ ಮಾಡುವ ಮೂಲಕ ಕಂಪನಿಯು ಟಾಪ್ ಎಂಡ್ ಮತ್ತು ಬೆಸ್ ವೆರಿಯೆಂಟ್ ನಡುವಿನ ಬೆಲೆ ಅಂತರವನ್ನು ರೂ. 13 ಸಾವಿರದಿಂದ ರೂ. 8 ಸಾವಿರಕ್ಕೆ ಇಳಿಕೆ ಮಾಡಿದ್ದು, ಪ್ರೀಮಿಯಂ ಸ್ಕೂಟರ್ ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಇದು ಅತ್ಯುತ್ತಮ ಅವಕಾಶ ಎನ್ನಬಹುದು.

ಬೆಲೆ ಇಳಿಕೆ ನಂತರ ಎನ್‌ಟಾರ್ಕ್ 125 ಸ್ಕೂಟರ್ ಎಕ್ಸ್‌ಟಿ ಬೆಲೆಯು 1,02,823 ದಿಂದ ರೂ. 97,061 ಕ್ಕೆ ಇಳಿಕೆಯಾಗಿದ್ದು, ಎಕ್ಸ್‌ಟಿ ಮಾದರಿಯ ಬೆಲೆ ಹೊರತಾಗಿ ಇನ್ನುಳಿದ ವೆರಿಯೆಂಟ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಎನ್‌ಟಾರ್ಕ್ 125 ಸ್ಕೂಟರ್ ಮಾದರಿಯಲ್ಲಿ ಟಿವಿಎಸ್ ಕಂಪನಿಯು ಸದ್ಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಡ್ರಮ್, ಡಿಸ್ಕ್, ರೇಸ್ ಎಡಿಷನ್, ಸೂಪರ್ ಸ್ಕ್ವಾಡ್ ಎಡಿಷನ್ ಮತ್ತು ರೇಸ್ ಎಕ್ಸ್‌ಪಿ ಎನ್ನುವ ಐದು ವೆರಿಯೆಂಟ್‌ಗಳಲ್ಲಿ ಮಾರಾಟ ಮಾಡುತ್ತಿದ್ದು, ಕಳೆದ ತಿಂಗಳ ಹಿಂದಷ್ಟೇ ಹೊಸದಾಗಿ ಟಾಪ್ ಎಂಡ್ ಮಾದರಿಯಾಗಿ ಎನ್‌ಟಾರ್ಕ್ 125 ಎಕ್ಸ್‌ಟಿ ವರ್ಷನ್ ಪರಿಚಯಿಸಿತ್ತು.

ಡ್ರಮ್ ಮಾದರಿಯು ಬೆಂಗಳೂರು ಎಕ್ಸ್‌ಶೋರೂಂ ಪ್ರಕಾರ ರೂ. 82,741, ಡಿಸ್ಕ್ ಮಾದರಿಯು ರೂ. 87,846 ರೇಸ್ ಎಡಿಷನ್ ಮಾದರಿಯು ರೂ. 91,446, ಸೂಪರ್ ಸ್ಕ್ವಾಡ್ ಎಡಿಷನ್ ರೂ. 93,896 ಮತ್ತು ರೇಸ್ ಎಕ್ಸ್‌ಪಿ ಎಡಿಷನ್ ರೂ. 95,496 ಬೆಲೆ ಮತ್ತು ಇದೀಗ ಬೆಲೆ ಇಳಿಕೆ ಮಾಡಲಾದ ಎಕ್ಸ್‌ಟಿ ಮಾದರಿಯು ರೂ. 97,061 ಬೆಲೆ ಹೊಂದಿದೆ.

ಹೊಸ ಆವೃತ್ತಿಯು ಆಕರ್ಷಕ ಗ್ರಾಫಿಕ್ಸ್ ಡಿಸೈನ್‌ನೊಂದಿಗೆ ಸ್ಪೋರ್ಟಿ ಲುಕ್ ಇಷ್ಟಪಡುವ ಗ್ರಾಹಕರ ಆಯ್ಕೆಗೆ ಉತ್ತಮಯಾಗಲಿದ್ದು, ಹೊಸ ಆವೃತ್ತಿಯಲ್ಲಿ ಕಂಪನಿಯು ಉನ್ನತೀಕರಿಸಿದ ಕನೆಕ್ಟೆಡ್ ತಂತ್ರಜ್ಞಾನದೊಂದಿಗೆ ನಿಯೋ ಗ್ರಿನ್ ಬಣ್ಣದ ಆಯ್ಕೆ ನೀಡಿದೆ.

ಉನ್ನತೀಕರಿಸಿದ ಸ್ಮಾರ್ಟ್ಎಕ್ಸ್‌ಟಾಕ್ ಕನೆಕ್ಟ್ ತಂತ್ರಜ್ಞಾನದಿಂದಾಗಿ ಎನ್‌ಟಾರ್ಕ್ 125 ಸ್ಕೂಟರ್ ಬಳಕೆದಾರರು ಇದೀಗ ವಾಯ್ಸ್ ಕಮಾಂಡ್ ಮೂಲಕ ಸ್ಕೂಟರಿನ ಪ್ರಮುಖ ತಾಂತ್ರಿಕ ಅಂಶಗಳ ಮಾಹಿತಿ ಪಡೆಯಬಹುದಾಗಿದ್ದು, ಡಿಸ್‌ಪ್ಲೇ ಮೂಲಕ ಪ್ರಸಕ್ತ ವಿದ್ಯಮಾನ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದಾಗಿದೆ.

ಜೊತೆಗೆ ಸ್ಮಾರ್ಟ್ಎಕ್ಸ್‌ಟಾಕ್ ಕನೆಕ್ಟ್ ಸೌಲಭ್ಯವನ್ನು ಸ್ಮಾರ್ಟ್‌ಫೋನ್‌ಗೆ ಸಂಪರ್ಕಿಸುವ ಮೂಲಕ ಕರೆ ಸ್ವಿಕಾರವನ್ನು ಡಿಸ್‌ಪ್ಲೇ ಮೂಲಕ ಸುಲಭವಾಗಿ ನಿರ್ವಹಿಸಬಹುದಾಗಿದ್ದು, ಮುಖ್ಯವಾಗಿ ವಾಯ್ಸ್ ಕಮಾಂಡ್ ಮೂಲಕವೇ ಹಲವು ಅಲರ್ಟ್ ಸೌಲಭ್ಯಗಳನ್ನು ಒದಗಿಸುತ್ತದೆ.

ಸ್ಕೂಟರ್‌ನಲ್ಲಿ ಇಂಧನ ಖಾಲಿಯಾಗುವ, ಸ್ಮಾರ್ಟ್ಎಕ್ಸ್‌ಟಾಕ್‌ಗೆ ಕನೆಕ್ಟ್ ಮಾಡಲಾದ ಫೋನ್ ಬ್ಯಾಟರಿ ಚಾರ್ಜಿಂಗ್ ಲೆವಲ್, ಟ್ರಾಫಿಕ್‌ಗಳಲ್ಲಿ ಅನಗತ್ಯವಾಗಿ ಇಂಧನ ಹಾಳುತ್ತಿದ್ದರೆ ವಾಯ್ಸ್ ಅಲರ್ಟ್ ಮಾಡಲಿದ್ದು, ಇದು ರೈಡಿಂಗ್ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಇದರ ಹೊರತಾಗಿ ಹೊಸ ಸ್ಕೂಟರ್‌ನಲ್ಲಿ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆಯೇ ಎಂಜಿನ್ ಮತ್ತು ಇತರೆ ತಾಂತ್ರಿಕ ಸೌಲಭ್ಯವನ್ನು ಮುಂದುವರಿಸಲಾಗಿದ್ದು, ಹೊಸ ಸ್ಕೂಟರ್‌ನಲ್ಲಿ 124 ಏರ್ ಕೂಲ್ಡ್, ಫ್ಯೂಲ್ ಇಂಜೆಕ್ಷೆಡ್ ಎಂಜಿನ್ ಜೋಡಣೆ ಮಾಡಲಾಗಿದೆ.

ಸ್ಟ್ಯಾಂಡರ್ಡ್ ಮಾದರಿಗಳಂತೆ ಹೊಸ ಮಾದರಿಯು 9.25-ಬಿಎಚ್‌ಪಿ ಮತ್ತು 10.5-ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಹೊಸ ಸ್ಕೂಟರ್‌ನಲ್ಲಿರುವ ರೇಸ್ ಮೋಡ್ ಪರ್ಫಾಮೆನ್ಸ್‌ಗಾಗಿ ಮತ್ತು ಸ್ಟ್ರೀಟ್ ಮೋಡ್ ಇಂಧನ ದಕ್ಷತೆ ಕಾಯ್ದುಕೊಳ್ಳಲು ಸಹಕಾರಿಯಾಗಿದೆ.

ಜೊತೆಗೆ ಎನ್‌ಟಾರ್ಕ್ 125 ಹೊಸ ಮಾದರಿಯಲ್ಲಿ ಇತರೆ ವೆರಿಯೆಂಟ್‌ಗಳಲ್ಲಿರುವಂತೆ ಉನ್ನತೀಕರಿಸಲಾದ ಹಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ನೀಡಲಾಗಿದ್ದು, ಟಿ ಆಕಾರದ ಹೆಡ್‌ಲ್ಯಾಂಪ್ ಮತ್ತು ಟೈಲ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್ಎಸ್, ಪೂರ್ಣ ಪ್ರಮಾಣದ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಏಂಜಿನ್ ಕಿಲ್ ಸ್ವಿಚ್, 5.8 -ಲೀಟರ್ ಫ್ಯೂಲ್ ಟ್ಯಾಂಕ್ ಹೊಂದಿದೆ.

ಹೊಸ ಎಕ್ಸ್‌ಟಿ ಮಾದರಿಯು ರೇಸ್ ಎಕ್ಸ್‌ಪಿ ಮಾದರಿಗಿಂತಲೂ ತುಸು ಹೆಚ್ಚುವರಿ ಬೆಲೆ ಹೊಂದಿದ್ದು, ಹೊಸ ಮಾದರಿಯೊಂದಿಗೆ ಕಂಪನಿಯು 125 ಸಿಸಿ ವಿಭಾಗದಲ್ಲಿ ಸ್ಪೋರ್ಟಿ ಸ್ಕೂಟರ್ ಇಷ್ಟಪಡುವ ಗ್ರಾಹಕರನ್ನು ಸೆಳೆಯುವ ನೀರಿಕ್ಷೆಯಲ್ಲಿದೆ.