Just In
- 11 hrs ago
ಮಂಗಳೂರಿನಲ್ಲಿರುವ ಒಕಿನಾವ ಇವಿ ಸ್ಕೂಟರ್ ಮಾರಾಟ ಮಳಿಗೆಯಲ್ಲಿ ಅಗ್ನಿ ಅವಘಡ
- 12 hrs ago
ಮ್ಯೂಸಿಕಲ್ ಸ್ಕೂಟರ್ನ ವಿಡಿಯೋ ಹಂಚಿಕೊಂಡು "ಭಾರತದಲ್ಲಿ ಮಾತ್ರ" ಎಂದ ಆನಂದ್ ಮಹೀಂದ್ರಾ
- 14 hrs ago
ಕೋಟಿ ಬೆಲೆಯ ಮರ್ಸಿಡಿಸ್ ಜಿಎಲ್ಎಸ್ ಎಸ್ಯುವಿ ಖರೀದಿಸಿದ ನಟ ವರುಣ್ ಧವನ್
- 16 hrs ago
ಮೇ ತಿಂಗಳಿನಲ್ಲಿ 10 ಸಾವಿರಕ್ಕೂ ಹೆಚ್ಚು ಮಾರಾಟ ದಾಖಲಿಸಿದ 8 ಮಾರುತಿ ಸುಜುಕಿ ಕಾರುಗಳು
Don't Miss!
- News
ಬಿಬಿಎಂಪಿ ವಾರ್ಡ್ ಮರುವಿಂಗಡಣೆ; ವೆಬ್ಸೈಟ್ನಲ್ಲಿ ಸಿಗಲಿದೆ ಪೂರ್ಣ ಮಾಹಿತಿ
- Lifestyle
Today RashiBhavishya: ಶನಿವಾರದ ದಿನ ಭವಿಷ್ಯ: ವೃಷಭ, ಕುಂಭ, ಮೀನ ರಾಶಿಯ ಉದ್ಯೋಗಿಗಳು ಕಚೇರಿ ಕೆಲಸದ ಮೇಲೆ ಗಮನಹರಿಸಿ
- Sports
ENG vs NZ: ನ್ಯೂಜಿಲೆಂಡ್ ವಿರುದ್ಧ ಸತತ 2ನೇ ಶತಕ ದಾಖಲಿಸಿದ ಜಾನಿ ಬೈಸ್ಟ್ರೋವ್
- Finance
ಈ 220 ಉದ್ಯೋಗಿಗಳಿಗೆ ವಾರ್ಷಿಕ 1 ಕೋಟಿ ರು ಸಂಬಳ, ಯಾವ್ದು ಕಂಪನಿ?
- Movies
ಕಾರ್ತಿಕ್ ಆರ್ಯನ್ಗೆ ಕೋಟಿಗಟ್ಟಲೆ ಮೌಲ್ಯದ ಕಾರು ಉಡುಗೊರೆ ನೀಡಿದ ನಿರ್ಮಾಪಕ!
- Education
CLAT 2022 Result : ಕ್ಲಾಟ್ ಪರೀಕ್ಷೆಯ ಫಲಿತಾಂಶ ಶೀಘ್ರದಲ್ಲಿ ಪ್ರಕಟ
- Technology
60,000ರೂ.ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಲ್ಯಾಪ್ಟಾಪ್ಗಳು!
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಹೊಸ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಟಿವಿಎಸ್ ಎನ್‌ಟಾರ್ಕ್ 125 ಎಕ್ಸ್‌ಟಿ ವರ್ಷನ್
ಟಿವಿಎಸ್ ಮೋಟಾರ್ ಕಂಪನಿಯು ತನ್ನ ಜನಪ್ರಿಯ ಪ್ರೀಮಿಯಂ ಸ್ಕೂಟರ್ ಎನ್‌ಟಾರ್ಕ್ 125 ಮಾದರಿಯಲ್ಲಿ ಸ್ಪೋರ್ಟಿ ಸೌಲಭ್ಯವುಳ್ಳ ಎಕ್ಸ್‌ಟಿ ವರ್ಷನ್ ಬಿಡುಗಡೆಗೆ ಸಿದ್ದವಾಗಿದ್ದು, ಹೊಸ ವರ್ಷನ್ ಬಿಡುಗಡೆಗೂ ಮುನ್ನ ಟೀಸರ್ ಪ್ರಕಟಿಸಿದೆ.

ಎನ್‌ಟಾರ್ಕ್ 125 ಸ್ಕೂಟರ್ ಮಾದರಿಯಲ್ಲಿ ಟಿವಿಎಸ್ ಕಂಪನಿಯು ಸದ್ಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಡ್ರಮ್, ಡಿಸ್ಕ್, ರೇಸ್ ಎಡಿಷನ್, ಸೂಪರ್ ಸ್ಕ್ವಾಡ್ ಎಡಿಷನ್ ಮತ್ತು ರೇಸ್ ಎಕ್ಸ್‌ಪಿ ಎನ್ನುವ ಐದು ವೆರಿಯೆಂಟ್‌ಗಳಲ್ಲಿ ಮಾರಾಟ ಮಾಡುತ್ತಿದ್ದು, ಇದೀಗ ಹೊಸದಾಗಿ ಎನ್‌ಟಾರ್ಕ್ 125 ಎಕ್ಸ್‌ಟಿ ವರ್ಷನ್ ಪರಿಚಯಿಸಲಾಗುತ್ತಿದೆ.

ಹೊಸ ಆವೃತ್ತಿಯು ಆಕರ್ಷಕ ಗ್ರಾಫಿಕ್ಸ್ ಡಿಸೈನ್‌ನೊಂದಿಗೆ ಸ್ಪೋರ್ಟಿ ಲುಕ್ ಇಷ್ಟಪಡುವ ಗ್ರಾಹಕರ ಆಯ್ಕೆಗೆ ಉತ್ತಮಯಾಗಲಿದ್ದು, ಹೊಸ ಆವೃತ್ತಿಯು ಡಿಸ್ಕ್ ಮಾದರಿಯನ್ನು ಆಧರಿಸಿ ನಿರ್ಮಾಣಗೊಳ್ಳಲಿದೆ.

ಹೊಸ ಮಾದರಿಯಲ್ಲಿ ಕಂಪನಿಯು ಎಲ್ಇಡಿ ಹೆಡ್‌ಲೈಟ್, 12-ಇಂಚಿನ ಡೈಮಂಡ್ ಕಟ್ ಅಲಾಯ್ ಚಕ್ರಗಳು, ಪೆಟಲ್ ಫ್ರಂಟ್ ಡಿಸ್ಕ್ ಬ್ರೇಕ್, ಸ್ಪ್ಲಿಟ್ ಗ್ರಾಬ್ ರೈಲ್, ಯುಎಸ್‌ಬಿ ಚಾರ್ಜರ್, ನವೀಕೃತ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಕನೆಕ್ಟ್ ಎಕ್ಸ್ ಬ್ಲೂಟೂಥ್ ಸಂಪರ್ಕ ಮತ್ತು ಟಿವಿಎಸ್ ಎನ್‌ಟಾರ್ಕ್ 3ಡಿ ಲೋಗೋ ನೀಡಬಹುದಾಗಿದೆ.

ಹೊಸ ಆವೃತ್ತಿಯು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೆಚ್ಚು ಗ್ರಾಫಿಕ್ಸ್ ಮತ್ತು ಪವರ್‌ಫುಲ್ ಎಂಜಿನ್ ಟೋನ್‌ನೊಂದಿಗೆ ಸ್ಪೋರ್ಟಿ ಮಾದರಿಯಾಗಿ ಗುರುತಿಸಿಕೊಳ್ಳಲಿದ್ದು, ಹೊಸ ಮಾದರಿಯಲ್ಲಿ ಸ್ಮಾರ್ಟ್‌ಕನೆಕ್ಟ್ ಮತ್ತು ವಾಯ್ಸ್ ಅಸಿಸ್ಟ್ ಸೌಲಭ್ಯಗಳನ್ನು ನೀಡಬಹುದಾಗಿದೆ.

ಎಕ್ಸ್‌ಟಿ ಎಡಿಷನ್‌ನಲ್ಲಿ ಎನ್‌ಟಾರ್ಕ್ 125 ಮಾದರಿಯಲ್ಲಿ ಇತರೆ ವೆರಿಯೆಂಟ್‌ಗಳಲ್ಲಿ ಇರುವಂತೆ 124 ಏರ್ ಕೂಲ್ಡ್, ಫ್ಯೂಲ್ ಇಂಜೆಕ್ಷೆಡ್ ಎಂಜಿನ್ ಬಳಕೆ ಮಾಡಿದ್ದು, ಹೊಸ ಆವೃತ್ತಿಯು ಇತರೆ ಆವೃತ್ತಿಗಿಂತಲೂ ಹೆಚ್ಚು ಹಾರ್ಸ್ ಪವರ್ ಹೊಂದಿರಬಹುದಾಗಿದೆ.

ಸ್ಟ್ಯಾಂಡರ್ಡ್ ಮಾದರಿಗಳು 9.17-ಬಿಎಚ್‌ಪಿ ಹೊಂದಿದ್ದರೆ ರೇಸ್ ಎಕ್ಸ್‌ಪಿ ಮಾದರಿಯು 10-ಬಿಎಚ್‌ಪಿ ಸಾಮರ್ಥ್ಯ ಹೊಂದಿದ್ದು, ಈ ಹಿಂದಿನಂತಯೇ 10.5-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಜೊತೆಗೆ ಹೊಸ ಎನ್‌ಟಾರ್ಕ್ 125 ರೇಸ್ ಎಕ್ಸ್‌ಪಿ ಮಾದರಿಯಲ್ಲಿ ಪರ್ಫಾಮೆನ್ಸ್ ಪ್ರಿಯರಿಗಾಗಿಯೇ ರೇಸ್ ಮತ್ತು ಸ್ಟ್ರೀಟ್ ರೈಡ್ ಮೋಡ್‌ಗಳನ್ನು ಜೋಡಿಸಿದ್ದು, ರೇಸ್ ಮೋಡ್ ಪರ್ಫಾಮೆನ್ಸ್‌ಗಾಗಿ ಮತ್ತು ಸ್ಟ್ರೀಟ್ ಮೋಡ್ ಇಂಧನ ದಕ್ಷತೆ ಕಾಯ್ದುಕೊಳ್ಳಲು ಸಹಕಾರಿಯಾಗಿದೆ.

ಜೊತೆಗೆ ಹೊಸ ವೆರಿಯೆಂಟ್‌ನಲ್ಲಿ ಟಿವಿಎಸ್ ಕಂಪನಿಯು ಉನ್ನತೀಕರಿಸಲಾದ ಹಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ನೀಡಲಿದ್ದು, ಟಿ ಆಕಾರದ ಹೆಡ್‌ಲ್ಯಾಂಪ್ ಮತ್ತು ಟೈಲ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್ಎಸ್, ಪೂರ್ಣ ಪ್ರಮಾಣದ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಏಂಜಿನ್ ಕಿಲ್ ಸ್ವಿಚ್, 5.8 -ಲೀಟರ್ ಫ್ಯೂಲ್ ಟ್ಯಾಂಕ್ ಹೊಂದಿಲಿದೆ.

ಉನ್ನತೀಕರಿಸಿದ ಸ್ಮಾರ್ಟ್‌ಕನೆಕ್ಸ್ ಫೀಚರ್ಸ್‌ನಲ್ಲಿ ಲೈವ್ ಡ್ಯಾಶ್‌ಬೋರ್ಡ್ ಮೂಲಕ ರೈಡಿಂಗ್ ಮೋಡ್ ಮಾಹಿತಿ ಸೌಲಭ್ಯ, ಬದಲಾವಣೆ ಮಾಡಲಾದ ಯುಐ ಮತ್ತು ಯುಎಕ್ಸ್, ಉಳಿಸಿಕೊಳ್ಳಬಹುದಾದ ನ್ಯಾವಿಗೇಷನ್ ಅಡ್ರೆಸ್ ಮತ್ತು ಸ್ಪೋರ್ಟಿ ಗ್ರಾಫಿಕ್ಸ್ ಆಕರ್ಷಕವಾಗಲಿದೆ.

ಇನ್ನು ಹೊಸ ವೆರಿಯೆಂಟ್‌ನೊಂದಿಗೆ ಎನ್‌ಟಾರ್ಕ್ 125 ಮಾದರಿಯು ಒಟ್ಟು ಆರು ವೆರಿಯೆಂಟ್‌ಗಳನ್ನು ಹೊಂದಿದಂತಾಗಲಿದ್ದು, ಸದ್ಯ ಖರೀದಿಗೆ ಲಭ್ಯವಿರುವ ಡ್ರಮ್ ಮಾದರಿಯು ಬೆಂಗಳೂರು ಎಕ್ಸ್‌ಶೋರೂಂ ಪ್ರಕಾರ ರೂ. 82,741, ಡಿಸ್ಕ್ ಮಾದರಿಯು ರೂ. 87,846 ರೇಸ್ ಎಡಿಷನ್ ಮಾದರಿಯು ರೂ. 91,446, ಸೂಪರ್ ಸ್ಕ್ವಾಡ್ ಎಡಿಷನ್ ರೂ. 93,896 ಮತ್ತು ರೇಸ್ ಎಕ್ಸ್‌ಪಿ ಎಡಿಷನ್ ರೂ. 95,496 ಬೆಲೆ ಹೊಂದಿದೆ.

ಹೊಸ ಎಕ್ಸ್‌ಟಿ ಮಾದರಿಯು ಸ್ಟ್ಯಾಂಡರ್ಡ್ ಡಿಸ್ಕ್ ಮಾದರಿಗಿಂತಲೂ ತುಸು ಹೆಚ್ಚುವರಿ ಬೆಲೆ ಹೊಂದಿರಬಹುದಾಗಿದ್ದು, ಹೊಸ ಮಾದರಿಯೊಂದಿಗೆ ಕಂಪನಿಯು 125 ಸಿಸಿ ವಿಭಾಗದಲ್ಲಿ ಸ್ಪೋರ್ಟಿ ಸ್ಕೂಟರ್ ಇಷ್ಟಪಡುವ ಗ್ರಾಹಕರನ್ನು ಸೆಳೆಯುವ ನೀರಿಕ್ಷೆಯಲ್ಲಿದೆ.