ಆಕರ್ಷಕ ಬೆಲೆಯಲ್ಲಿ ಹೊಸ ಟಿವಿಎಸ್ ರೋನಿನ್ ಸ್ಕ್ರಾಂಬ್ಲರ್ ಬೈಕ್ ಬಿಡುಗಡೆ

ಟಿವಿಎಸ್ ಮೋಟಾರ್ ಕಂಪನಿಯು ದ್ವಿಚಕ್ರ ವಾಹನಗಳ ಸರಣಿ ಮಾರಾಟದಲ್ಲಿ ತನ್ನದೇ ಆದ ಜನಪ್ರಿಯತೆ ಹೊಂದಿದ್ದು, ಕಂಪನಿಯು ಇದೀಗ ಮತ್ತೊಂದು ಹೆಜ್ಜೆಯಿರಿಸುವ ಮೂಲಕ ರೋನಿನ್ ಸ್ಕ್ರಾಂಬ್ಲರ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದೆ.

ಆಕರ್ಷಕ ಬೆಲೆಯಲ್ಲಿ ಹೊಸ ಟಿವಿಎಸ್ ರೋನಿನ್ ಸ್ಕ್ರಾಂಬ್ಲರ್ ಬೈಕ್ ಬಿಡುಗಡೆ

ಹೊಸ ರೋನಿನ್ ಸ್ಕ್ರಾಂಬ್ಲರ್ ಬೈಕ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಬೈಕ್ ಬೆಲೆಯನ್ನು ಬಣ್ಣಗಳ ಆಯ್ಕೆ ಮತ್ತು ಎಬಿಎಸ್ ಸೌಲಭ್ಯ ಆಧರಿಸಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 1.49 ಲಕ್ಷ ಬೆಲೆ ಹೊಂದಿದೆ.

ಆಕರ್ಷಕ ಬೆಲೆಯಲ್ಲಿ ಹೊಸ ಟಿವಿಎಸ್ ರೋನಿನ್ ಸ್ಕ್ರಾಂಬ್ಲರ್ ಬೈಕ್ ಬಿಡುಗಡೆ

ರೋನಿನ್ ಬೈಕ್ ಮಾದರಿಯು ಬೆಸ್ ವೆರಿಯೆಂಟ್ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ. 1.49 ಲಕ್ಷ ಬೆಲೆ ಹೊಂದಿದ್ದರೆ ಬೆಸ್ ಪ್ಲಸ್ ವೆರಿಯೆಂಟ್ ರೂ. 1,56,500 ಬೆಲೆ ಹೊಂದಿದೆ. ಹಾಗೆಯೇ ಟಾಪ್ ಎಂಡ್ ಮಾದರಿಯಾದ ಟಿಡಿ ವೆರಿಯೆಂಟ್ ಎರಡು ಬಣ್ಣಗಳ ಆಯ್ಕೆಯೊಂದಿಗೆ ಆರಂಭಿಕವಾಗಿ ರೂ. 1,68,750 ಬೆಲೆ ಹೊಂದಿದ್ದರೆ ಮತ್ತೊಂದು ಮಾದರಿಯು ರೂ. 1,70,750 ಬೆಲೆ ಹೊಂದಿದೆ.

ಆಕರ್ಷಕ ಬೆಲೆಯಲ್ಲಿ ಹೊಸ ಟಿವಿಎಸ್ ರೋನಿನ್ ಸ್ಕ್ರಾಂಬ್ಲರ್ ಬೈಕ್ ಬಿಡುಗಡೆ

ಹೊಸ ಬೈಕಿನ ಆರಂಭಿಕ ವೆರಿಯೆಂಟ್ ಸಿಂಗಲ್ ಚಾನೆಲ್ ಎಬಿಎಸ್ ಜೊತೆ ಸಿಂಗಲ್ ಟೋನ್ ಬಣ್ಣದ ಆಯ್ಕೆ ಹೊಂದಿದ್ದರೆ ಬೆಸ್ ಪ್ಲಸ್ ವೆರಿಯೆಂಟ್ ಸಿಂಗಲ್ ಚಾನೆಲ್ ಎಬಿಎಸ್ ಜೊತೆಗೆ ಡ್ಯುಯಲ್ ಟೋನ್ ಬಣ್ಣದ ಆಯ್ಕೆಯನ್ನು ಹೊಂದಿದೆ. ಇದರಲ್ಲಿ ಟಾಪ್ ಎಂಡ್ ಮಾದರಿಯು ಟ್ರಿಪ್ಲಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ಡ್ಯುಯಲ್ ಚಾನೆಲ್ ಎಬಿಎಸ್ ಹೊಂದಿದ್ದು, ಮೂರು ವೆರಿಯೆಂಟ್‌ಗಳಲ್ಲೂ ಒಟ್ಟು ಆರು ಬಣ್ಣದ ಆಯ್ಕೆ ನೀಡಲಾಗಿದೆ.

ಆಕರ್ಷಕ ಬೆಲೆಯಲ್ಲಿ ಹೊಸ ಟಿವಿಎಸ್ ರೋನಿನ್ ಸ್ಕ್ರಾಂಬ್ಲರ್ ಬೈಕ್ ಬಿಡುಗಡೆ

ಬೆಸ್ ವೆರಿಯೆಂಟ್‌ನಲ್ಲಿ ಲೈಟ್ನಿಂಗ್ ಬ್ಲ್ಯಾಕ್ ಮತ್ತು ಮ್ಯಾಗ್ಮಾ ರೆಡ್ ಬಣ್ಣಗಳ ಆಯ್ಕೆಯಿದ್ದರೆ ಬೆಸ್ ಪ್ಲಸ್ ವೆರಿಯೆಂಟ್‌ನಲ್ಲಿ ಡೆಲ್ಟಾ ಬ್ಲ್ಯೂ ಮತ್ತು ಸ್ಟಾರೇಜ್ ಬ್ಲ್ಯಾಕ್ ಬಣ್ಣಗಳ ಆಯ್ಕೆ ಲಭ್ಯವಿದೆ. ಇದರಲ್ಲಿ ಟಾಪ್ ಎಂಡ್ ವೆರಿಯೆಂಟ್ ಗ್ಯಾಲಕ್ಟಿಕ್ ಗ್ರೇ ಮತ್ತು ಡಾನ್ ಆರೆಂಜ್ ಬಣ್ಣಗಳ ಆಯ್ಕೆ ಹೊಂದಿದ್ದು, ಗ್ಯಾಲಕ್ಟಿಕ್ ಗ್ರೇ ಬಣ್ಣಕ್ಕಿಂತ ಡಾನ್ ಆರೆಂಜ್ ಬಣ್ಣದ ಆಯ್ಕೆಯು ತುಸು ದುಬಾರಿಯಾಗಿರಲಿದೆ.

ಆಕರ್ಷಕ ಬೆಲೆಯಲ್ಲಿ ಹೊಸ ಟಿವಿಎಸ್ ರೋನಿನ್ ಸ್ಕ್ರಾಂಬ್ಲರ್ ಬೈಕ್ ಬಿಡುಗಡೆ

ಎಂಜಿನ್ ಮತ್ತು ಪರ್ಫಾಮೆನ್ಸ್

ಟಿವಿಎಸ್ ಹೊಸ ರೋನಿನ್ ಬೈಕ್ ಮಾದರಿಯು 225.9 ಸಿಸಿ ಫ್ಯೂಲ್-ಇಂಜೆಕ್ಟೆಡ್ ಸಿಂಗಲ್-ಸಿಲಿಂಡರ್ ಎಂಜಿನ್‌ ಆಯ್ಕೆ ಪಡೆದುಕೊಂಡಿದ್ದು, ಇದರಲ್ಲಿ ಕಂಪನಿಯು 66 ಎಂಎಂ ಬೋರ್ ಮತ್ತು ಸ್ಟ್ರೋಕ್‌ನೊಂದಿಗೆ ಮೈಲ್ಡ್-ಹೈಬ್ರಿಡ್ ಸಿಸ್ಟಂ ಜೋಡಣೆ ಮಾಡಿದೆ.

ಆಕರ್ಷಕ ಬೆಲೆಯಲ್ಲಿ ಹೊಸ ಟಿವಿಎಸ್ ರೋನಿನ್ ಸ್ಕ್ರಾಂಬ್ಲರ್ ಬೈಕ್ ಬಿಡುಗಡೆ

ಹೊಸ ಎಂಜಿನ್ ಮಾದರಿಯು 7,750 ಆರ್‌ಪಿಎಂನಲ್ಲಿ 20.12 ಬಿಎಚ್‌ಪಿ ಮತ್ತು 3,750 ಆರ್‌ಪಿಎಂನಲ್ಲಿ 19.93 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದ್ದು, ಹೊಸ ಎಂಜಿನ್ ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್‌ನೊಂದಿಗೆ 5-ಸ್ಪೀಡ್ ಗೇರ್‌ಬಾಕ್ಸ್ ಮೂಲಕ ಹಿಂದಿನ ಚಕ್ರಕ್ಕೆ ಶಕ್ತಿಯನ್ನು ಕಳುಹಿಸುತ್ತದೆ.

ಆಕರ್ಷಕ ಬೆಲೆಯಲ್ಲಿ ಹೊಸ ಟಿವಿಎಸ್ ರೋನಿನ್ ಸ್ಕ್ರಾಂಬ್ಲರ್ ಬೈಕ್ ಬಿಡುಗಡೆ

ರೋನಿನ್ ಒಂದು ಸಂಯೋಜಿತ ಸ್ಟಾರ್ಟರ್ ಜನರೇಟರ್ ಸಿಸ್ಟಮ್ ಅನ್ನು ಒಳಗೊಂಡಿದ್ದು, ಇದರ ಮೂಲಕ ಎಂಜಿನ್ ಆರಂಭಕ್ಕೆ ಅನುವು ಮಾಡಿಕೊಡವುದರ ಇಂಧನ ದಕ್ಷತೆಗೆ ಸಹಕರಿಸುತ್ತದೆ.

ಆಕರ್ಷಕ ಬೆಲೆಯಲ್ಲಿ ಹೊಸ ಟಿವಿಎಸ್ ರೋನಿನ್ ಸ್ಕ್ರಾಂಬ್ಲರ್ ಬೈಕ್ ಬಿಡುಗಡೆ

ಇದರೊಂದಿಗೆ ಹೊಸ ರೋನಿನ್ ಮಾದರಿಯು ಡಬಲ್-ಕ್ರೇಡಲ್ ಸ್ಪ್ಲಿಟ್ ಚಾಸಿಸ್‌ನೊಂದಿಗೆ ಅಭಿವೃದ್ದಿಗೊಂಡಿದ್ದು, ಮುಂಭಾಗದಲ್ಲಿ 41-ಎಂಎಂ ಅಪ್‌ಸೈಡ್-ಡೌನ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಗ್ಯಾಸ್-ಚಾರ್ಜ್ಡ್ ಮೊನೊಶಾಕ್ ಹೊಂದಿದೆ.

ಆಕರ್ಷಕ ಬೆಲೆಯಲ್ಲಿ ಹೊಸ ಟಿವಿಎಸ್ ರೋನಿನ್ ಸ್ಕ್ರಾಂಬ್ಲರ್ ಬೈಕ್ ಬಿಡುಗಡೆ

ರೋನಿನ್ ಬೈಕ್ ಮಾದರಿಯಲ್ಲಿ ಕಂಪನಿಯು ಮುಂಭಾಗದ ಚಕ್ರಗಳಲ್ಲಿ 110/70 ಮತ್ತು ಹಿಂಭಾಗದಲ್ಲಿ 130/70 ಪ್ರೊಫೈಲ್ ಹೊಂದಿರುವ ಟೈರ್‌ಗಳನ್ನು ನೀಡಿದ್ದು, 17-ಇಂಚಿನ 9-ಸ್ಪೋಕ್ ಅಲಾಯ್ ಚಕ್ರಗಳು ಅರಾಮದಾಯಕ ಬೈಕ್ ಸವಾರಿಗೆ ಪೂರಕವಾಗಿವೆ.

ಆಕರ್ಷಕ ಬೆಲೆಯಲ್ಲಿ ಹೊಸ ಟಿವಿಎಸ್ ರೋನಿನ್ ಸ್ಕ್ರಾಂಬ್ಲರ್ ಬೈಕ್ ಬಿಡುಗಡೆ

ಸುರಕ್ಷತೆಗಾಗಿ ಹೊಸ ರೋನಿನ್ ಬೈಕ್ ಮಾದರಿಯಲ್ಲಿ ಸ್ಪೋರ್ಟ್ಸ್ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಸಿಂಗಲ್ ಮತ್ತು ಡ್ಯುಯಲ್-ಚಾನೆಲ್ ಮೂಲಕ ಸ್ವಿಚ್ ಮಾಡಬಹುದಾದ ವಿಧಾನಗಳನ್ನು ಹೊಂದಿದೆ.

ಆಕರ್ಷಕ ಬೆಲೆಯಲ್ಲಿ ಹೊಸ ಟಿವಿಎಸ್ ರೋನಿನ್ ಸ್ಕ್ರಾಂಬ್ಲರ್ ಬೈಕ್ ಬಿಡುಗಡೆ

ಈ ಮೂಲಕ ಹೊಸ ಟಿವಿಎಸ್ ರೋನಿನ್ ಮಾದರಿಯು ಒಟ್ಟಾರೆಯಾಗಿ 160 ಕಿ.ಗ್ರಾಂ ತೂಕ ಹೊಂದಿದ್ದು, ಇದು 1,357 ಎಂಎಂ ವ್ಹೀಲ್‌ಬೆಸ್‌ನೊಂದಿಗೆ ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದೆ.

ಆಕರ್ಷಕ ಬೆಲೆಯಲ್ಲಿ ಹೊಸ ಟಿವಿಎಸ್ ರೋನಿನ್ ಸ್ಕ್ರಾಂಬ್ಲರ್ ಬೈಕ್ ಬಿಡುಗಡೆ

ರೋನಿನ್ ಬೈಕ್ ಮಾದರಿಯು ರೌಂಡ್ ಎಲ್ಇಡಿ ಹೆಡ್‌ಲೈಟ್ ಯುನಿಟ್ ಹೊಂದಿದ್ದು, T ಆಕಾರದ ಸಿಗ್ನಿಚೆರ್ ಲ್ಯಾಂಪ್ ಮೂಲಕ ವಿಭಿನ್ನ ನೋಟವನ್ನು ಹೊಂದಿದೆ. ಹಾಗೆಯೇ ಹಿಂಬದಿಯಲ್ಲಿ ಕ್ರಿಸ್ಟಲ್ ಲೈಟ್ ಬಾರ್ ಮೂಲಕ ಹೊಸ ನೋಟ ಹೊಂದಿದ್ದು, ಬಾಣದ ಆಕಾರದ ಎಲ್ಇಡಿ ಟರ್ನ್ ಸಿಗ್ನಲ್ ಲ್ಯಾಂಪ್‌ಗಳನ್ನು ಸಹ ಒಳಗೊಂಡಿದೆ.

ಆಕರ್ಷಕ ಬೆಲೆಯಲ್ಲಿ ಹೊಸ ಟಿವಿಎಸ್ ರೋನಿನ್ ಸ್ಕ್ರಾಂಬ್ಲರ್ ಬೈಕ್ ಬಿಡುಗಡೆ

ಇದೆಲ್ಲದರ ಜೊತೆಗೆ ಹೊಸ ಮಾದರಿಯಲ್ಲಿ ಗೋಲ್ಡ್ ಪೇಂಟ್ ಹೊಂದಿರುವ ಅಪ್‌ಸೈಡ್ ಡೌನ್ ಫೋಕ್ಸ್ ಸ್ಪೋರ್ಟಿ ಲುಕ್ ನೀಡಿದ್ದು, ಟಿಯರ್‌ಡ್ರಾಪ್-ಆಕಾರದ ಇಂಧನ ಟ್ಯಾಂಕ್, ಡ್ಯುಯಲ್-ಪರ್ಪಸ್ ಬ್ಲಾಕ್-ಪ್ಯಾಟರ್ನ್ ಟೈರ್‌ಗಳು, ಬ್ಲ್ಯಾಕ್ಡ್-ಔಟ್ ಎಂಜಿನ್ ಮತ್ತು ಮಲ್ಟಿ-ಟೋನ್ ಪೇಂಟ್ ಆಯ್ಕೆಗಳನ್ನು ಹೊಂದಿದೆ.

ಆಕರ್ಷಕ ಬೆಲೆಯಲ್ಲಿ ಹೊಸ ಟಿವಿಎಸ್ ರೋನಿನ್ ಸ್ಕ್ರಾಂಬ್ಲರ್ ಬೈಕ್ ಬಿಡುಗಡೆ

ಹೊಸ ಬೈಕಿನಲ್ಲಿ ಕನೆಕ್ವಿಟಿ ಸೌಲಭ್ಯಕ್ಕಾಗಿ ಟಿವಿಎಸ್ ಕಂಪನಿಯು ವಿಶಿಷ್ಟವಾದ ರೌಂಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ನೀಡಿದ್ದು, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮೂಲಕ ಸವಾರರು ಟ್ರಿಪ್ ಅಂಕಿಅಂಶಗಳ ಜೊತೆಗೆ ಗೇರ್ ಶಿಫ್ಟ್ ಇಂಡಿಕೇಟರ್, ರೈಡ್ ಮೋಡ್ ಇಂಡಿಕೇಟರ್, ಟಿವಿಎಸ್ ಸ್ಮಾರ್ಟ್ಎಕ್ಸ್‌ಕನೆಕ್ಟ್ ಸಂಪರ್ಕಿತ ಆಯ್ಕೆ(ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಕರೆಗಳು ಮತ್ತು ಎಸ್ಎಂಎಸ್ ಎಚ್ಚರಿಕೆಗಳು) ಮತ್ತು ವಾಯ್ಸ್ ಅಸಿಸ್ಟ್ ಸೌಲಭ್ಯವನ್ನು ಹೊಂದಿದೆ.

ಆಕರ್ಷಕ ಬೆಲೆಯಲ್ಲಿ ಹೊಸ ಟಿವಿಎಸ್ ರೋನಿನ್ ಸ್ಕ್ರಾಂಬ್ಲರ್ ಬೈಕ್ ಬಿಡುಗಡೆ

ಇದರ ಜೊತೆಗೆ ಹೊಸ ಬೈಕಿನಲ್ಲಿ ಇನ್ನು ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯಗಳನ್ನು ಬಯಸುವ ಗ್ರಾಹಕರಿಗೆ ಕಂಪನಿಯು ಆನ್‌ಲೈನ್ ಕಾನ್ಫಿಗರೇಟರ್‌ ಮೂಲಕ ವೈಯಕ್ತೀಕರಿಸುವ ಸೌಲಭ್ಯ ನೀಡಿದ್ದು, ಮಧ್ಯಮ ಕ್ರಮಾಂಕದಲ್ಲಿ ಬಿಡುಗಡೆಯಾಗಿರುವ ಹೊಸ ರೋನಿನ್ ಬೆಲೆ ವಿಚಾರದಲ್ಲಿ ಪ್ರಮುಖ ಬೈಕ್ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದೆ ಎನ್ನಬಹುದು.

Article Published On: Wednesday, July 6, 2022, 19:30 [IST]
English summary
Tvs ronin launched in india prices start at rs 1 49 lakh details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+