ಅಭಿಮಾನಿಗಳಿಗಾಗಿ ಬೆಂಗಳೂರಿನಲ್ಲಿ ಬ್ಲೂ ವೀಕೆಂಡ್ ಈವೆಂಟ್ ಆಯೋಜಿಸಿದ್ದ ಯಮಹಾ: ಹೈಲೆಟ್ಸ್ ಇಲ್ಲಿವೆ...

"ದಿ ಕಾಲ್ ಆಫ್ ದಿ ಬ್ಲೂ" ಎಂಬ ತನ್ನ ಆಕರ್ಷಕ ಬ್ರಾಂಡ್ ಅಭಿಯಾನದ ಭಾಗವಾಗಿ, ಯಮಹಾ ಮೋಟಾರ್ ಇಂಡಿಯಾ ಗ್ರೂಪ್ ಭಾನುವಾರ ಕರ್ನಾಟಕದ ಹೊಸದೊಡ್ಡಿಯಲ್ಲಿರುವ ವಂಡರ್ಲಾ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ 'ದಿ ಕಾಲ್ ಆಫ್ ದಿ ಬ್ಲೂ ವೀಕೆಂಡ್ ಈವೆಂಟ್' ಅನ್ನು ಆಯೋಜಿಸಿತ್ತು.

ಅಭಿಮಾನಿಗಳಿಗಾಗಿ ಬೆಂಗಳೂರಿನಲ್ಲಿ ಬ್ಲೂ ವೀಕೆಂಡ್ ಈವೆಂಟ್ ಆಯೋಜಿಸಿದ್ದ ಯಮಹಾ: ಹೈಲೆಟ್ಸ್ ಇಲ್ಲಿವೆ...

ಯಮಹಾ ನಿರ್ವಹಿಸುವ ಗ್ರಾಹಕರೊಂದಿಗಿನ ಬಾಂಧವ್ಯ ಬೆಳೆಸಿಕೊಳ್ಳುವ ಈ ಕಾರ್ಯಕ್ರಮವು ಕರ್ನಾಟಕದಲ್ಲಿ ನಡೆಯುತ್ತಿರುವ ವರ್ಷದ ಮೊದಲ ಈವೆಂಟ್ ಆಗಿದೆ. ಈ ಈವೆಂಟ್‌ನಲ್ಲಿ ಬ್ಲೂ ಸ್ಟ್ರೀಕ್ಸ್‌ನ ಸುಮಾರು 400 ರೈಡರ್‌ಗಳು (ಪ್ಯಾಷನೇಟ್ ಯಮಹಾ ಕಮ್ಯುನಿಟಿ ಓನರ್ಸ್) ಮತ್ತು 1000ಕ್ಕೂ ಹೆಚ್ಚು ಯಮಹಾ ಅಭಿಮಾನಿಗಳು ಭಾಗವಹಿಸಿದ್ದರು.

ಅಭಿಮಾನಿಗಳಿಗಾಗಿ ಬೆಂಗಳೂರಿನಲ್ಲಿ ಬ್ಲೂ ವೀಕೆಂಡ್ ಈವೆಂಟ್ ಆಯೋಜಿಸಿದ್ದ ಯಮಹಾ: ಹೈಲೆಟ್ಸ್ ಇಲ್ಲಿವೆ...

ಈ ಈವೆಂಟ್ ಮೂಲಕ ಪ್ರತಿಯೊಬ್ಬ ಮೋಟಾರ್‌ಸೈಕಲ್ ಉತ್ಸಾಹಿಯು, ಯಮಹಾದ ಪ್ರೀಮಿಯಂ ಮಾಡೆಲ್ ರೇಂಜ್‌ನಲ್ಲಿನ ಅತ್ಯುತ್ತಮ ತಂತ್ರಜ್ಞಾನ, ಪರ್ಫಾಮೆನ್ಸ್ ಮತ್ತು ಸುರಕ್ಷತಾ ಫೀಚರ್ಸ್‌ಗಳನ್ನು ಹೊಂದಿರುವ ಬೈಕ್‌ ಅನ್ನು ಸವಾರಿ ಮಾಡುವ ಮತ್ತು ಥ್ರಿಲ್ ಅನುಭವಿಸುವ ಅವಕಾಶವನ್ನು ಪಡೆದುಕೊಂಡಿರು.

ಅಭಿಮಾನಿಗಳಿಗಾಗಿ ಬೆಂಗಳೂರಿನಲ್ಲಿ ಬ್ಲೂ ವೀಕೆಂಡ್ ಈವೆಂಟ್ ಆಯೋಜಿಸಿದ್ದ ಯಮಹಾ: ಹೈಲೆಟ್ಸ್ ಇಲ್ಲಿವೆ...

ಈವೆಂಟ್‌ನಲ್ಲಿ ಭಾಗವಹಿಸುವವರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಅವರ ಸವಾರಿ ಕೌಶಲ್ಯವನ್ನು ತೀಕ್ಷ್ಣಗೊಳಿಸಲು ಜಿಮ್ಖಾನಾ ರೈಡ್‌ನಂತಹ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಮತ್ತಷ್ಟು ಉತ್ಸಾಹವನ್ನು ಹೆಚ್ಚಿಸಲು, ಟೆಸ್ಟ್ ರೈಡ್, ಯಮಹಾ ಉತ್ಪನ್ನ ಶ್ರೇಣಿಯ ಪ್ರದರ್ಶನ ಮತ್ತು ಪರಿಕರಗಳು, ಉಡುಪುಗಳ ವಲಯವನ್ನು ಸಹ ಏರ್ಪಡಿಸಲಾಗಿತ್ತು.

ಅಭಿಮಾನಿಗಳಿಗಾಗಿ ಬೆಂಗಳೂರಿನಲ್ಲಿ ಬ್ಲೂ ವೀಕೆಂಡ್ ಈವೆಂಟ್ ಆಯೋಜಿಸಿದ್ದ ಯಮಹಾ: ಹೈಲೆಟ್ಸ್ ಇಲ್ಲಿವೆ...

ಈವೆಂಟ್‌ನ ಮತ್ತೊಂದು ಪ್ರಮುಖ ಮುಖ್ಯಾಂಶವೆಂದರೆ ಸ್ಟೈಲಿಂಗ್ ಝೋನ್, ಇದರಲ್ಲಿ ಗ್ರಾಹಕರು ಫೇಸ್ ಪೇಂಟಿಗ್ ಮತ್ತು ಟ್ಯಾಟೂನಂತಹ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಗ್ರಾಹಕರ ಜೀವನಶೈಲಿಯ ಭಾಗವಾಗಿ ರೈಡಿಂಗ್ ಸಂಸ್ಕೃತಿಯನ್ನು ಉತ್ತೇಜಿಸಲು ಬ್ರ್ಯಾಂಡ್‌ನ ಬಗ್ಗೆ ಅರಿವು ಮೂಡಿಸಲು ಮುಂದಿನ ದಿನಗಳಲ್ಲಿ ಕಂಪನಿಯು ಕರ್ನಾಟಕದ ಇತರ ಸ್ಥಳಗಳಲ್ಲಿ 'ದಿ ಕಾಲ್ ಆಫ್ ದಿ ಬ್ಲೂ ವೀಕೆಂಡ್ ಈವೆಂಟ್‌' ಅನ್ನು ಆಯೋಜಿಸಲಿದೆ.

ಅಭಿಮಾನಿಗಳಿಗಾಗಿ ಬೆಂಗಳೂರಿನಲ್ಲಿ ಬ್ಲೂ ವೀಕೆಂಡ್ ಈವೆಂಟ್ ಆಯೋಜಿಸಿದ್ದ ಯಮಹಾ: ಹೈಲೆಟ್ಸ್ ಇಲ್ಲಿವೆ...

ಯಮಹಾ ಎಫ್‍‌ಜೆಡ್-ಎಕ್ಸ್ ಬೈಕ್ ಬೆಲೆ ಏರಿಕೆ

ಯಮಹಾ ಮೋಟಾರ್ ಇಂಡಿಯಾ ಕಂಪನಿಯು ತನ್ನ ಸರಣಿಯಲ್ಲಿರುವ ಮಾದರಿಗಳ ಬೆಲೆಗಳನ್ನು ಇತ್ತೀಚೆಗೆ ಪರಿಷ್ಕರಿಸಿದೆ. ಕಳೆದ ತಿಂಗಳಿನಿಂದ ಜಾರಿಗೆ ಬಂದಿರುವ ಈ ಬೆಲೆ ಏರಿಕೆಯು ಎಫ್‍‌ಜೆಡ್-ಎಕ್ಸ್ ಸೇರಿದಂತೆ ಕಂಪನಿಯ ಪೋರ್ಟ್‌ಫೋಲಿಯೊದಲ್ಲಿ ಹಲವಾರು ಸ್ಕೂಟರ್‌ಗಳು ಮತ್ತು ಮೋಟಾರ್‌ಸೈಕಲ್‌ಗಳ ಮೇಲೆ ಪರಿಣಾಮ ಬೀರಿದೆ.

ಅಭಿಮಾನಿಗಳಿಗಾಗಿ ಬೆಂಗಳೂರಿನಲ್ಲಿ ಬ್ಲೂ ವೀಕೆಂಡ್ ಈವೆಂಟ್ ಆಯೋಜಿಸಿದ್ದ ಯಮಹಾ: ಹೈಲೆಟ್ಸ್ ಇಲ್ಲಿವೆ...

ಈ ಯಮಹಾ ಎಫ್‍‌ಜೆಡ್-ಎಕ್ಸ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವರ್ಷ ಬಿಡುಗಡೆಗೊಳಿಸಿತ್ತು. ಇದೀಗ ಯಮಹಾ ಕಂಪನಿಯು ಈ ಎಫ್‍‌ಜೆಡ್-ಎಕ್ಸ್ ಬೈಕಿನ ಬೆಲೆಯನ್ನು ಹೊಸ ಪರಿಷ್ಕರಣೆಯಂತೆ ರೂ.1,000 ವರೆಗೆ ಹೆಚ್ಚಿಸಿದೆ. ಬೆಲೆ ಏರಿಕೆಯ ಬಳಿಕ ಯಮಹಾ ಎಫ್‍‌ಜೆಡ್-ಎಕ್ಸ್ ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.1,31,400 ಆಗಿದೆ.

ಅಭಿಮಾನಿಗಳಿಗಾಗಿ ಬೆಂಗಳೂರಿನಲ್ಲಿ ಬ್ಲೂ ವೀಕೆಂಡ್ ಈವೆಂಟ್ ಆಯೋಜಿಸಿದ್ದ ಯಮಹಾ: ಹೈಲೆಟ್ಸ್ ಇಲ್ಲಿವೆ...

ಬೆಲೆ ಏರಿಕೆಯನ್ನು ಹೊರತುಪಡಿಸಿ ಉಳಿದಂತೆ ಸ್ಟೈಲಿಂಗ್, ಎಂಜಿನ್ ಅಥವಾ ಇತರ ಯಾವುದೇ ನವೀಕರಣಗಳು ಅಥವಾ ಬದಲಾವಣೆಗಳನ್ನು ಮಾಡಿಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಎಕ್ಸ್‌ಎಸ್‌ಆರ್ ಮಾದರಿಯಿಂದ ಸ್ಫೂರ್ತಿ ಪಡೆದ ಹೊಸ ಎಫ್‍‌ಜೆಡ್-ಎಕ್ಸ್ ಬೈಕ್ ರೆಟ್ರೊ ಶೈಲಿಯ ವಿನ್ಯಾಸವನ್ನು ಹೊಂದಿದೆ.

ಅಭಿಮಾನಿಗಳಿಗಾಗಿ ಬೆಂಗಳೂರಿನಲ್ಲಿ ಬ್ಲೂ ವೀಕೆಂಡ್ ಈವೆಂಟ್ ಆಯೋಜಿಸಿದ್ದ ಯಮಹಾ: ಹೈಲೆಟ್ಸ್ ಇಲ್ಲಿವೆ...

ಈ ಯಮಹಾ ಎಫ್‍‌ಜೆಡ್-ಎಕ್ಸ್ ಬೈಕ್ ಅದೇ ಸರಣಿಯ ಎಫ್‍‌ಜೆಡ್ ವಿ3 ಹಾಗೂ ಎಫ್‌ಝಡ್‌ಎಸ್‌ ವಿ3 ಮಾದರಿಗಳಿಗಿಂತ ಅಗ್ರ ಸ್ಥಾನದಲ್ಲಿದೆ. ಯಮಹಾ ಎಫ್‍‌ಜೆಡ್-ಎಕ್ಸ್ ಬೈಕ್ ಎಫ್‍‌ಜೆಡ್ ವಿ3 ಕಮ್ಯೂಟರ್ ಬೈಕಿನ ಅದೇ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.

ಅಭಿಮಾನಿಗಳಿಗಾಗಿ ಬೆಂಗಳೂರಿನಲ್ಲಿ ಬ್ಲೂ ವೀಕೆಂಡ್ ಈವೆಂಟ್ ಆಯೋಜಿಸಿದ್ದ ಯಮಹಾ: ಹೈಲೆಟ್ಸ್ ಇಲ್ಲಿವೆ...

ಈ ಯಮಹಾ ಎಫ್‌ಜೆಡ್-ಎಕ್ಸ್ ಮಾದರಿಯು ತನ್ನ ಡಿಸೈನ್ ಅನ್ನು ಎಕ್ಸ್‌ಎಸ್‌ಆರ್ 155 ಬೈಕಿನಿಂದ ಎರವಲು ಪಡೆದುಕೊಂಡಿದೆ, ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ ಮತ್ತು ಅಲ್ಯೂಮಿನಿಯಂ ಬ್ರಾಕೆಟ್‌ಗಳೊಂದಿಗೆ ವೃತ್ತಾಕಾರದ ಎಲ್ಇಡಿ ಹೆಡ್‌ಲ್ಯಾಂಪ್ ಅನ್ನು ಒಳಗೊಂಡಿದೆ.

ಅಭಿಮಾನಿಗಳಿಗಾಗಿ ಬೆಂಗಳೂರಿನಲ್ಲಿ ಬ್ಲೂ ವೀಕೆಂಡ್ ಈವೆಂಟ್ ಆಯೋಜಿಸಿದ್ದ ಯಮಹಾ: ಹೈಲೆಟ್ಸ್ ಇಲ್ಲಿವೆ...

ಇದರೊಂದಿಗೆ ಟಿಯರ್ ಡ್ರಾಪ್ ಆಕಾರದ ಫ್ಯೂಯಲ್ ಟ್ಯಾಂಕ್, ಸಿಂಗಲ್-ಪೀಸ್ ಟಕ್ ಮತ್ತು ರೋಲ್ ಸೀಟ್, ಅಂಡರ್ಬೆಲ್ಲಿ ಕೌಲ್ ಮತ್ತು ಕಪ್ಪಾದ ಬಾಡಿ ಪ್ಯಾನೆಲ್‌ಗಳನ್ನು ಸಹ ಒಳಗೊಂಡಿದೆ. ಹಿಂಭಾಗದಲ್ಲಿ ಗ್ರ್ಯಾಬ್ ರೈಲ್ ಮತ್ತು ಎಲ್ಇಡಿ ಟೈಲ್ ಲ್ಯಾಂಪ್ ಅನ್ನು ಹೊಂದಿದೆ.

ಅಭಿಮಾನಿಗಳಿಗಾಗಿ ಬೆಂಗಳೂರಿನಲ್ಲಿ ಬ್ಲೂ ವೀಕೆಂಡ್ ಈವೆಂಟ್ ಆಯೋಜಿಸಿದ್ದ ಯಮಹಾ: ಹೈಲೆಟ್ಸ್ ಇಲ್ಲಿವೆ...

ಇನ್ನು ಪ್ರಮುಖವಾಗಿ ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 282 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಅನ್ನು ನೀಡಲಾಗುತ್ತದೆ. ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಸಿಂಗಲ್-ಚಾನೆಲ್ ಎಬಿಎಸ್ ಅನ್ನು ನೀಡಿದೆ.

ಅಭಿಮಾನಿಗಳಿಗಾಗಿ ಬೆಂಗಳೂರಿನಲ್ಲಿ ಬ್ಲೂ ವೀಕೆಂಡ್ ಈವೆಂಟ್ ಆಯೋಜಿಸಿದ್ದ ಯಮಹಾ: ಹೈಲೆಟ್ಸ್ ಇಲ್ಲಿವೆ...

ಈ ಯಮಹಾ ಎಫ್‍‍ಜೆಡ್-ಎಕ್ಸ್ ಬೈಕ್ 2020 ಎಂಎಂ ಉದ್ದ, 785 ಎಂಎಂ ಅಗಲ ಮತ್ತು 1115 ಎಂಎಂ ಎತ್ತರವನ್ನು ಹೊಂದಿದೆ. ಇನ್ನು ಈ ಯಮಹಾ ಎಫ್‍‍ಝಡ್-ಎಕ್ಸ್ ಬೈಕ್ 1330 ಎಂಎಂ ವ್ಹೀಲ್‌ಬೇಸ್ ಅನ್ನು ಹೊಂದಿದೆ. ಇದೇ ಸರಣಿಯ ಎಫ್‌ಜೆಡ್ -150 ಬೈಕ್ ಕೂಡ ಇದೇ ರೀತಿಯ ವ್ಹೀಲ್‌ಬೇಸ್ ಅನ್ನು ಹೊಂದಿರಲಿದೆ.

ಅಭಿಮಾನಿಗಳಿಗಾಗಿ ಬೆಂಗಳೂರಿನಲ್ಲಿ ಬ್ಲೂ ವೀಕೆಂಡ್ ಈವೆಂಟ್ ಆಯೋಜಿಸಿದ್ದ ಯಮಹಾ: ಹೈಲೆಟ್ಸ್ ಇಲ್ಲಿವೆ...

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಯಮಹಾ ಕಂಪನಿಯು ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು ಹಾಗೂ ಅವರ ಆಸಕ್ತಿಗಳನ್ನು ತಿಳಿದುಕೊಳ್ಳಲು ದಿ ಕಾಲ್ ಆಫ್ ದಿ ಬ್ಲೂ ಈವೆಂಟ್‌ಗಳನ್ನು ಆಯೋಜಿಸುತ್ತಿರುತ್ತದೆ. ಈ ಮೂಲಕ ಗ್ರಾಹಕರು ಹಾಗೂ ಅಭೀಮಾನಿಗಳು ಯಮಹಾ ಟಾಪ್ ಎಂಡ್ ಉತ್ಪನ್ನಗಳನ್ನು ರೈಡ್‌ ಮಾಡುವ ಅವಕಾಶ ಕಲ್ಪಿಸುತ್ತದೆ. ಇನ್ನು ಬೆಲೆ ಏರಿಕೆ ವಿಷಯಕ್ಕೆ ಬಂದರೆ ಕಚ್ಚಾ ವಸ್ತುಗಳ ಏರಿಕೆಯಿಂದಾಗಿ ಬಹುತೇಕ ಎಲ್ಲಾ ಕಂಪನಿಗಳು ಬೆಲೆ ಏರಿಕೆ ಮಾಡಿವೆ. ಬೆಲೆ ಏರಿಕೆಯಾದರೂ ಗ್ರಾಹಕರನ್ನು ತೃಪ್ತಿಗೊಳಿಸುವುದು ನಮ್ಮ ಧ್ಯೇಯ ಎಂದು ಕಂಪನಿ ಹೇಳಿಕೊಂಡಿದೆ.

More from DriveSpark

Article Published On: Wednesday, July 6, 2022, 10:34 [IST]
English summary
Yamaha organized a Blue Weekend event in Bengaluru for fans Here are the highlights
Read more on ಯಮಹಾ yamaha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+