ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ Yamaha XSR 155 ಬೈಕ್

ಜನಪ್ರಿಯ ದ್ವಿಚಕ್ರ ವಾಹನ ತಯಾರ ಕಂಪನಿಯಾದ ಯಮಹಾ ತನ್ನ 2022ರ ಎಕ್ಸ್‌ಎಸ್‌ಆರ್ 155 ರೆಟ್ರೊ-ಲುಕಿಂಗ್ ಬೈಕ್ ಅನ್ನು ಇಂಡೋನೇಷ್ಯಾದಲ್ಲಿ ಅನಾವರಣಗೊಳಿಸಿದೆ. ಈ ಯಮಹಾ ಎಕ್ಸ್‌ಎಸ್‌ಆರ್ 155 (Yamaha XSR 155) ಬೈಕ್ ಬ್ರ್ಯಾಂಡ್‌ನ ಜನಪ್ರಿಯ ಬೈಕ್‌ಗಳಲ್ಲಿ ಒಂದಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ Yamaha XSR 155 ಬೈಕ್

2022ರ ಯಮಹಾ ಎಕ್ಸ್‌ಎಸ್‌ಆರ್ 155 ಬೈಕ್ ಈ ಬಾರಿ ಎರಡು ಹೊಸ ಬಣ್ಣಗಳ ಆಯ್ಕೆಯೊಂದಿಗೆ ಬರುತ್ತದೆ. ಈ 2022ರ ಯಮಹಾ ಎಕ್ಸ್‌ಎಸ್‌ಆರ್ 155 60ನೇ ವಾರ್ಷಿಕೋತ್ಸವದ ಛಾಯೆಯು ಜಪಾನಿನ ಕಂಪನಿಯಾದ ಯಮಹಾ ಮೊದಲ ಗ್ರ್ಯಾಂಡ್ ಪ್ರಿಕ್ಸ್ ಗೆಲುವನ್ನು ಆಚರಿಸುವುದು. ಇದು ಬಿಳಿ ಬೇಸ್ ಬಾಡಿ ಬಣ್ಣದೊಂದಿಗೆ ಸಾಂಪ್ರದಾಯಿಕ ಕೆಂಪು ಸ್ಪೀಡ್ ಬ್ಲಾಕ್ ವಿನ್ಯಾಸವನ್ನು ಪಡೆಯುತ್ತದೆ ಆದರೆ ಗೋಲ್ಡನ್ ಬಣ್ಣದ ವೈ-ಆಕರಾದ ವ್ಹೀಲ್ ಗಳು ಆಧುನಿಕತೆಗೆ ಸೇರಿಸುತ್ತವೆ ಮತ್ತು ಇದು ಅಪ್ ಸೈಡ್ ಡೌನ್ ಫೋರ್ಕ್‌ಗಳಿಗೆ ಗೋಲ್ಡನ್ ಫಿನಿಶ್‌ನೊಂದಿಗೆ ಚೆನ್ನಾಗಿ ಕಾಣುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ Yamaha XSR 155 ಬೈಕ್

ಫ್ಯೂಯಲ್ ಟ್ಯಾಂಕ್ ಸ್ಪೋರ್ಟಿ ಗ್ರಾಫಿಕ್ಸ್ ನೊಂದಿಗೆ ಬರುತ್ತದೆ ಮತ್ತು ಸೈಡ್ ಪ್ಯಾನಲ್ ಗಳನ್ನು ಬ್ರಷ್ಡ್ ಮೆಟಲ್ ಫಿನಿಶಿಂಗ್ ಹೊಂದಿದೆ. ಎಂಜಿನ್ ಪ್ರದೇಶ, ಎಕ್ಸಾಸ್ಟ್ ಡಬ್ಬಿ ಮತ್ತು ಸೀಟ್‌ನಂತಹ ಇತರ ಅಂಶಗಳನ್ನು ಕಪ್ಪು ಬಣ್ಣದ ಫಿನಿಶ್‌ನೊಂದಿಗೆ ಬರುತ್ತದೆ. ಮ್ಯಾಟ್ ಡಾರ್ಕ್ ಬ್ಲೂ ಅಥೆಂಟಿಕ್ ಕಲರ್ ಸ್ಕೀಮ್ ಬ್ಲ್ಯಾಕ್-ಔಟ್ ಬಿಟ್‌ಗಳು ಮತ್ತು ಫ್ಯುಯಲ್ ಟ್ಯಾಂಕ್‌ನಲ್ಲಿ ಎಕ್ಸ್‌ಎಸ್‌ಆರ್ ಗ್ರಾಫಿಕ್ಸ್ ಗಮನಾರ್ಹ ವಿನ್ಯಾಸಕ್ಕೆ ಪೂರಕವಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ Yamaha XSR 155 ಬೈಕ್

ಇನ್ನು ಈ ಬೈಕ್ ಸೈಡ್ ಪ್ಯಾನೆಲ್‌ಗಳು ಮತ್ತು ಕಪ್ಪಾಗಿಸಿದ ಹೆಡ್‌ಲ್ಯಾಂಪ್ ಕೇಸಿಂಗ್, ಟೈಲ್ ಲ್ಯಾಂಪ್, ಎಕ್ಸಾಸ್ಟ್ ಸಿಸ್ಟಮ್, ಫ್ರಂಟ್ ಫೆಂಡರ್, ಸೀಟ್, ಅಲಾಯ್ ವೀಲ್‌ಗಳು, ಇಂಜಿನ್ ಗಾರ್ಡ್ ಇತ್ಯಾದಿಗಳನ್ನು ಒಳಗೊಂಡಿದೆ ಕಾಸ್ಮೆಟಿಕ್ ಅಪ್‌ಡೇಟ್‌ಗಳ ಹೊರತಾಗಿ ಯಮಹಾ ಎಕ್ಸ್‌ಎಸ್‌ಆರ್ 155 ಬೈಕಿನಲ್ಲಿ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ Yamaha XSR 155 ಬೈಕ್

ಈ ಯಮಹಾ ಕಂಪನಿಯು ತನ್ನ ಎಕ್ಸ್‌ಎಸ್‌ಆರ್ ಸರಣಿಯನ್ನು ವಿಸ್ತರಿಸುತ್ತಿದೆ. 2022ರ ಯಮಹಾ ಎಕ್ಸ್‌ಎಸ್‌ಆರ್ 155 ಬೈಕ್ ಕ್ಲಾಸಿಕ್-ರೆಟ್ರೊ ವಿನ್ಯಾಸ ಮತ್ತು ಮಾರ್ಡನ್ ಲುಕ್ ಅನ್ನು ಹೊಂದಿದೆ. ಈ ಬೈಕ್ ದುಂಡಗಿನ ಆಕಾರದ ಹೆಡ್‌ಲೈಟ್ ಮತ್ತು ವಿಭಿನ್ನ ಶೈಲಿಯ ಇಂಧನ ಟ್ಯಾಂಕ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ Yamaha XSR 155 ಬೈಕ್

ಇನ್ನು ಈ ಹೊಸ ಬೈಕಿನಲ್ಲಿ ವೃತ್ತಾಕಾರದ ಟೈಲ್-ಲೈಟ್, ಸಿಂಗಲ್-ಪಾಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮತ್ತು ಸಿಂಗಲ್-ಪೀಸ್ ರಿಬ್ಬಡ್ ಸೀಟ್ ಅನ್ನು ಪಿಲಿಯನ್ ಗ್ರ್ಯಾಬ್ ಬೆಲ್ಟ್ ನೊಂದಿಗೆ ಮಧ್ಯದಲ್ಲಿ ಇರಿಸಲಾಗಿದೆ. ಇದು ಬೈಕಿನ ರೆಟ್ರೊ ಲುಕ್ ಅನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ Yamaha XSR 155 ಬೈಕ್

ಈ ಹೊಸ ಯಮಹಾ ಎಕ್ಸ್‌ಎಸ್‌ಆರ್ 155 ಬೈಕಿನಲ್ಲಿನ ಸಿಂಗಲ್-ಪಾಡ್ ಫುಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸವಾರರಿಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ. ಇದರಲ್ಲಿ ಡಿಜಿಟಲ್ ಟ್ರಿಪ್ ಮೀಟರ್, ಫ್ಯೂಯಲ್ ಗೇಜ್, ಸ್ಪೀಡೋಮೀಟರ್, ಒಡಿಒ ಜೊತೆ ಗೇರ್ ಇಂಡಿಕೇಟರ್ ಮತ್ತು ಟ್ರಿಪ್ ಇಂಡಿಕೇಟರ್ ಮಾಹಿತಿಗಳನ್ನು ಪ್ರದರ್ಶಿಸುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ Yamaha XSR 155 ಬೈಕ್

ಈ ಯಮಹಾ ಎಕ್ಸ್‌ಎಸ್‌ಆರ್ 155 ಬೈಕಿನಲ್ಲಿ ಎಂಟಿ -15 ಮತ್ತು ಆರ್ 15ವಿ 3.0 ನಲ್ಲಿ ಅಳವಡಿಸಿರುವಂತಹ ಅದೇ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಬೈಕಿನಲ್ಲಿ ವಿವಿಎ ತಂತ್ರಜ್ಞಾನದೊಂದಿಗೆ ಲಿಕ್ವಿಡ್-ಕೂಲ್ಡ್ ಸಿಂಗಲ್ ಸಿಲಿಂಡರ್ 155 ಸಿಸಿ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 18.9 ಬಿಹೆಚ್‍ಪಿ ಪವರ್ ಮತ್ತು 14.7 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ Yamaha XSR 155 ಬೈಕ್

ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್ ಅಸಿಸ್ಟ್ ಕ್ಲಚ್‌ನೊಂದಿಗೆ ಜೋಡಿಸಲಾಗಿದೆ. ಯಮಹಾ ಎಕ್ಸ್‌ಎಸ್‌ಆರ್ 155 ಸ್ಟೀಲ್-ಡೆಲ್ಟಾಬಾಕ್ಸ್ ಫ್ರೇಮ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಸಂಸ್ಪೆಕ್ಷನ್ ಗಾಗಿ ಮುಂಭಾಗದಲ್ಲಿ (ಯುಎಸ್‌ಡಿ) ಅಪ್‌ಸೈಡ್-ಡೌನ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಅನ್ನು ಅಳವಡಿಸಲಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ Yamaha XSR 155 ಬೈಕ್

ಇನ್ನು ಯಮಹಾ ತನ್ನ ಎಂಟಿ-15 ಬೈಕ್ ಹೊಸ ನವೀಕರಣಗಳೊಂದಿಗೆ ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಯಮಹಾ ಎಂಟಿ-15 ಬೈಕ್ ಒಂದೆರಡು ಬದಲಾವಣೆಗಳನ್ನು ಪಡೆಯುವ ಸಾಧ್ಯತೆಯಿದೆ. ಹೊಸ ಯಮಹಾ ಎಂಟಿ-15 ಬೈಕ್ ಬ್ಲೂಟೂತ್-ಸಕ್ರಿಯಗೊಳಿಸಿದ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ನ ಸೇರ್ಪಡೆಯಾಗಿದೆ. ಈ ಹೊಸ ಬೈಕಿನ ಬಿಡುಗಡೆಯ ದಿನಾಂಕವನ್ನು ಕಂಪನಿಯು ಬಹಿರಂಗಪಡಿಸಿಲ್ಲ, ಕೆಲವು ವರದಿಗಳ ಪ್ರಕಾರ ಈ ಹೊಸ ಯಮಹಾ ಎಂಟಿ-15 ಬೈಕ್ ಈ ವರ್ಷದ ಫೆಬ್ರವರಿ ಅಥವಾ ಮಾರ್ಚ್ ತಿಂಗಳುಗಳಲ್ಲಿ ಬಿಡುಗಡೆಯಾಗಬಹುದು. ಹೊಸ ಯಮಹಾ ವೈಝಡ್ಎಫ್ ಆರ್15 ವಿ4 ಈಗಾಗಲೇ ಅದರ ಹಿಂದಿನ ಅಪ್‌ಡೇಟ್‌ನೊಂದಿಗೆ ಬ್ಲೂಟೂತ್ ಕನೆಕ್ಟಿವಿಟಿಯನ್ನು ಪಡೆದಿದೆ ಎಂದು ಪರಿಗಣಿಸಿದರೆ ಇದು ಆಶ್ಚರ್ಯವೇನಿಲ್ಲ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ Yamaha XSR 155 ಬೈಕ್

ಎಂಟಿ-15 ಬೈಕ್ ಹೆಚ್ಚಿನ ಯುನಿಟ್ ಗಳನ್ನು ಆರ್15 ಮಾದರಿಯೊಂದಿಗೆ ಹಂಚಿಕೊಳ್ಳುವುದರಿಂದ, ಬ್ಲೂಟೂತ್ ಅನ್ನು ಪಡೆಯುವ ಸಮಯವಾಗಿದೆ, ಹೊಸ ಯಮಹಾ ಎಂಟಿ-15 ಬೈಕಿನಲ್ಲಿ ಅದೇ 155 ಸಿಸಿ ಲಿಕ್ವಿಡ್ ಕೂಲಿಂಗ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 18.5 ಬಿ‍‍ಹೆಚ್‍‍ಪಿ ಪವರ್ ಮತ್ತು 13.9 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಹೊಸ ಯಮಹಾ ಎಂಟಿ-15 ಬೈಕಿನಲ್ಲಿ ಹೆಡ್‌ಲ್ಯಾಂಪ್ ಕ್ಲಸ್ಟರ್‌ನಲ್ಲಿ ಡ್ಯುಯಲ್ ಎಲ್‌ಇಡಿ ಸೆಟ್ ಅಪ್ ಹೊಂದಿರುವ ಹೊಸ ಬೈಕಿನಲ್ಲಿ ಮೇಲಿನ ಎರಡು ಲೈಟ್‌ಗಳು ಡೇ ಟೈಮ್ ರನ್ನಿಂಗ್ ಲೈಟ್‌ಗಳಾಗಿ ಕಾರ್ಯನಿರ್ವಹಿಸಿದ್ದಲ್ಲಿ, ಅದರ ಕೆಳಭಾಗದಲ್ಲಿಯೇ ಎಲ್ಇಡಿ ಹೆಡ್‌ಲ್ಯಾಂಪ್ ಅನ್ನು ಜೊಡಣೆ ಮಾಡಲಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ Yamaha XSR 155 ಬೈಕ್

ಇನ್ನು ಈ ಯಮಹಾ ಎಕ್ಸ್‌ಎಸ್‌ಆರ್ 155 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಗಳಾಗಿತ್ತು. ಆದರೆ ಯಾವುದೇ ಅಧಿಕೃತ ಮಾಹಿತಿಯನ್ನು ಯಮಹಾ ಕಂಪನಿ ಬಹಿರಂಗಪಡಿಸಿಲ್ಲ. ಈ ಬೈಕ್ ಭಾರತದಲ್ಲಿ ಬಿಡುಗಡೆಯಾದ ಬಳಿಕ 150 ಸಿಸಿ ಸರಣಿಯಲ್ಲಿರುವ ಬೈಕ್ ಗಳಿಗೆ ಪೈಪೋಟಿಯನ್ನು ನೀಡುತ್ತದೆ.

More from DriveSpark

Article Published On: Sunday, January 23, 2022, 13:00 [IST]
English summary
Yamaha unveiled 2022 xsr 155 new colour schemes details
Read more on ಯಮಹಾ yamaha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+