ಅತ್ಯಾಧುನಿಕ ಫೀಚರ್ಸ್, ಆಕರ್ಷಕ ವಿನ್ಯಾಸದ ಯೆಜ್ಡಿ ಹೊಸ ಬೈಕ್‌ಗಳ ಫಸ್ಟ್ ರೈಡ್ ರಿವ್ಯೂ ವಿಡಿಯೋ
ಐನಾನಿಕ್ ಬ್ರಾಂಡ್ ಯೆಜ್ಡಿ ದೇಶಿಯ ಮಾರುಕಟ್ಟೆಗೆ ಮರಳಿ ಪ್ರವೇಶಿಸಿದ್ದು, ವಿನೂತನ ಮೂರು ಹೊಸ ಮೋಟಾರ್‌ಸೈಕಲ್ ಮಾದರಿಗಳೊಂದಿಗೆ ಯೆಜ್ಡಿ ಕಂಪನಿಯು ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಗಳನ್ನು ಅರಿತಿರುವ ಮಹೀಂದ್ರಾ ಒಡೆತನದ ಕ್ಲಾಸಿಕ್ ಲೆಜೆಂಡ್ಸ್ ಕಂಪನಿಯು ಯೆಜ್ಡಿ ಬ್ರಾಂಡ್‌ಗೆ ಹೊಸ ರೂಪ ನೀಡಿದ್ದು, ಗ್ರಾಹಕರು ತಮ್ಮ ಆದ್ಯತೆಗೆ ತಕ್ಕಂತೆ ಪ್ರಮುಖ ಮೂರು ಬೈಕ್ ಮಾದರಿಗಳನ್ನು ಅಭಿವೃದ್ದಿಪಡಿಸಿದೆ.

90ರ ದಶಕದಲ್ಲಿ ಬೈಕ್ ಪ್ರಿಯರ ಆಯ್ಕೆಯಲ್ಲಿ ತನ್ನದೆ ಆದ ಗ್ರಾಹಕರ ವರ್ಗವನ್ನೇ ಹುಟ್ಟುಹಾಕುವಲ್ಲಿ ಯಶಸ್ವಿಯಾಗಿದ್ದ ಕಾರಣಾಂತರಗಳಿಂದ ಮಾರುಕಟ್ಟೆಯಿಂದ ಹಿಂದೆ ಸರಿದಿತ್ತು. ಇದೀಗ ಮಹೀಂದ್ರಾ ಒಡೆತನದ ಕ್ಲಾಸಿಕ್ ಲೆಜೆಂಡ್ ಕಂಪನಿಯು ಯೆಜ್ಡಿ ಬ್ರಾಂಡ್‌ಗೆ ಹೊಸ ರೂಪ ನೀಡುವ ಮೂಲಕ ಮರಳಿ ಮಾರುಕಟ್ಟೆಗೆ ಪರಿಚಯಿಸಿದ್ದು, ಯೆಜ್ಡಿ ರೋಡ್‌ಸ್ಟರ್, ಯೆಜ್ಡಿ ಸ್ಕ್ರ್ಯಾಂಬ್ಲರ್ ಮತ್ತು ಯೆಜ್ಡಿ ಅಡ್ವೆಂಚರ್ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಿದೆ.
ಯೆಜ್ಡಿ ಕಂಪನಿಯು ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿವಿಧ ಸೆಗ್ಮೆಂಟ್‌ಗಳಲ್ಲಿ ಮೂರು ಬೈಕ್ ಮಾದರಿಗಳನ್ನು ಬಿಡುಗಡೆಗೊಳಿಸಿದ್ದು, ಯೆಜ್ಡಿ ಅಡ್ವೆಂಚರ್, ಯೆಜ್ಡಿ ಸ್ಕ್ರ್ಯಾಂಬ್ಲರ್ ಮತ್ತು ಯೆಜ್ಡಿ ರೋಡ್‌ಸ್ಟರ್ ಮಾದರಿಗಳು ವಿಭಿನ್ನವಾದ ತಾಂತ್ರಿಕ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿವೆ.

ಹೊಸ ಬೈಕಿನಲ್ಲಿರುವ ತಾಂತ್ರಿಕ ವೈಶಿಷ್ಟ್ಯತೆಗಳಿಗೆ ಅನುಗುಣವಾಗಿ ಆರಂಭಿಕ ಮಾದರಿಯಾದ ರೋಡ್‌ಸ್ಟರ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 1,98,142 ಬೆಲೆ ಹೊಂದಿದ್ದು, ಸ್ಕ್ರ್ಯಾಂಬ್ಲರ್ ಬೈಕ್ ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 2,04,900 ಆರಂಭಿಕ ಬೆಲೆ ಹೊಂದಿದ್ದರೆ ಹೊಸ ಅಡ್ವೆಂಚರ್ ಬೈಕ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 2,09,900 ಬೆಲೆ ಹೊಂದಿರಲಿದೆ.
ಯೆಜ್ಡಿ ಕಂಪನಿಯು ಮೂರು ಬೈಕ್ ಮಾದರಿಗಳಲ್ಲೂ ಒಂದೇ ಎಂಜಿನ್ ಆಯ್ಕೆ ನೀಡಿದ್ದರೂ ಕೂಡಾ ವಿವಿಧ ಮಾದರಿಗಳಿಗೆ ಅನುಗುಣವಾಗಿ ಪರ್ಫಾಮೆನ್ಸ್ ಏರಿಳಿತ ಮಾಡಲಾಗಿದ್ದು, 334ಸಿಸಿ, ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್‌ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆ ಹೊಂದಿವೆ. ರಿಯಲ್ ವ್ಹೀಲ್ ವೈಶಿಷ್ಟ್ಯತೆ ಹೊಂದಿರುವ ಹೊಸ ಮಾದರಿಗಳಲ್ಲಿ ರೋಡ್‌ಸ್ಟರ್ ಮಾದರಿಯು 29.3 ಬಿಎಚ್‌ಪಿ ಮತ್ತು 29 ಎನ್ಎಂ ಟಾರ್ಕ್ ಉತ್ಪಾದಿಸಿದರೆ ಸ್ಕ್ರ್ಯಾಂಬ್ಲರ್ ಮಾದರಿಯು 28.7 ಬಿಎಚ್‌ಪಿ ಮತ್ತು 28.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹಾಗೆಯೇ ಅಡ್ವೆಂಚರ್ ಮಾದರಿಯು 29.7 ಬಿಎಚ್‌ಪಿ ಮತ್ತು 29.9 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ರೋಡ್‌ಸ್ಟರ್ ಮಾದರಿಗಳು ಸಾಮಾನ್ಯವಾಗಿ ದಿನಬಳಕೆಯ ಮೋಟಾರ್‌ಸೈಕಲ್ ಮಾದರಿಗಳಾಗಿದ್ದು, ಈ ಹಿಂದೆ ಯೆಜ್ಡಿ ನಿರ್ಮಾಣದ ಬಹುತೇಕ ಮೋಟಾರ್‌ಸೈಕಲ್‌ಗಳು ರೋಡ್‌ಸ್ಟರ್‌ಗಳಾಗಿದ್ದವು. ರೋಡ್‌ಸ್ಟರ್ ಮಾದರಿಗಳು ತಮ್ಮದೆ ಆದ ಹೊಸ ವೈಶಿಷ್ಟ್ಯತೆಯೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಹೊಂದಿದ್ದು, ಕಂಪನಿಯು ಇದೀಗ ತನ್ನ ಹೆರಿಟೇಜ್ ಬ್ರಾಂಡ್‌ಗೆ ಹೊಸ ಮಾದರಿಯನ್ನು ಸೇರ್ಪೆಡೆಗೊಳಿಸಿದೆ.
ಹಾಗೆಯೇ ಹೊಸ ಸ್ಕ್ರ್ಯಾಂಬ್ಲರ್ ಮಾದರಿಯು ಸಹ ಆಕರ್ಷಕ ವಿನ್ಯಾಸದೊಂದಿಗೆ ಗ್ರಾಹಕರನ್ನು ಸೆಳೆಯಲಿದ್ದು, ಹೊಸ ಅಡ್ವೆಂಚರ್ ಹೊಸ ಬೈಕ್ ಮಾದರಿಯು ಎಲ್ಲರ ನೀರಿಕ್ಷೆಯೆಂತೆ ಹಲವು ವೈಶಿಷ್ಟ್ಯತೆಯೊಂದಿಗೆ ಬಿಡುಗಡೆಯಾಗಿದೆ.

ಹೊಸ ಬೈಕ್ ಮಾದರಿಗಳಲ್ಲಿ ಅಡ್ವೆಂಚರ್ ಮಾದರಿಯು ಹೆಚ್ಚು ಆಕರ್ಷಕವಾಗಿದ್ದು, ಅಡ್ವೆಂಚರ್ ಮಾದರಿಯು ವಿಶೇಷವಾಗಿ ದೂರದ ಪ್ರಯಾಣಕ್ಕೆ ಮತ್ತು ಸಾಹಸಿ ಬೈಕ್ ರೈಡಿಂಗ್ ಅನುಭವಕ್ಕಾಗಿ ವಿಶೇಷವಾಗಿ ಅಭಿವೃದ್ದಿಗೊಳಿಸಲಾಗಿದೆ. ಡಬಲ್ ಕ್ರೇಡಲ್ ಚಾಸಿಸ್ ಅನ್ನು ಹೊಂದಿರುವ ಅಡ್ವೆಂಚರ್ ಬೈಕ್ ಮಾದರಿಯು ರೋಡ್‌ಸ್ಟರ್ ಮತ್ತು ಸ್ಕ್ರ್ಯಾಂಬ್ಲರ್ ಮಾದರಿಗಳಿಂತಲೂ ಹೆಚ್ಚು ಶಕ್ತಿಶಾಲಿಯಾಗಿದ್ದು, ಆಫ್ ರೋಡ್ ಮತ್ತು ಆನ್‌ರೋಡ್‌ಗಳಲ್ಲೂ ಗಮನಸೆಳೆಯುತ್ತದೆ.


Click it and Unblock the Notifications