ಹೊಸ ರೋಡ್‌ಸ್ಟರ್, ಸ್ಕ್ರ್ಯಾಂಬ್ಲರ್ ಮತ್ತು ಅಡ್ವೆಂಚರ್ ಬೈಕ್ ವಿತರಣೆಗೆ ಚಾಲನೆ ನೀಡಿದ ಯೆಜ್ಡಿ

ಮಹೀಂದ್ರಾ ಒಡೆತನದ ಕ್ಲಾಸಿಕ್ ಲೆಜೆಂಡ್ ಕಂಪನಿಯು ಯೆಜ್ಡಿ ಬ್ರ್ಯಾಂಡ್‌ಗೆ ಹೊಸ ರೂಪ ನೀಡುವ ಮೂಲಕ ಗ್ರಾಹಕರ ಬೇಡಿಕೆ ಪ್ರಮುಖ ಮೂರು ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಹೊಸ ರೋಡ್‌ಸ್ಟರ್, ಸ್ಕ್ರ್ಯಾಂಬ್ಲರ್ ಮತ್ತು ಅಡ್ವೆಂಚರ್ ಬೈಕ್ ಮಾದರಿಗಳ ಮೂಲಕ ಟು ಸ್ಟ್ರೋಕ್ ಕ್ರೇಜ್‌ಗೆ ಆಧುನಿಕ ವೈಶಿಷ್ಟ್ಯತೆ ನೀಡಿದೆ.

ಹೊಸ ರೋಡ್‌ಸ್ಟರ್, ಸ್ಕ್ರ್ಯಾಂಬ್ಲರ್ ಮತ್ತು ಅಡ್ವೆಂಚರ್ ಬೈಕ್ ವಿತರಣೆಗೆ ಚಾಲನೆ ನೀಡಿದ ಯೆಜ್ಡಿ

ಕ್ಲಾಸಿಕ್ ಲೆಜೆಂಡ್ ಕಂಪನಿಯು ಜಾವಾ ಮೋಟಾರ್‌ಸೈಕಲ್‌ಗಳನ್ನು ಹೊಸ ರೂಪದಲ್ಲಿ ಬಿಡುಗಡೆಗೊಳಿಸಿದ ನಂತರ ಇದೀಗ ಯೆಜ್ಡಿ ಬೈಕ್ ಮಾದರಿಗಳನ್ನು ಆಧುನಿಕ ವೈಶಿಷ್ಟ್ಯತೆಯೊಂದಿಗೆ ಮರಳಿ ಮಾರುಕಟ್ಟೆಗೆ ಪರಿಚಯಿಸಿದ್ದು, ಹಳೆಯ ಬೈಕ್ ಮಾದರಿಗಳ ವಿನ್ಯಾಸದೊಂದಿಗೆ ಹೊಸ ತಂತ್ರಜ್ಞಾನ ಪ್ರೇರಿತ ರೋಡ್‌ಸ್ಟರ್, ಸ್ಕ್ರ್ಯಾಂಬ್ಲರ್ ಮತ್ತು ಅಡ್ವೆಂಚರ್ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಿದೆ.

ಹೊಸ ರೋಡ್‌ಸ್ಟರ್, ಸ್ಕ್ರ್ಯಾಂಬ್ಲರ್ ಮತ್ತು ಅಡ್ವೆಂಚರ್ ಬೈಕ್ ವಿತರಣೆಗೆ ಚಾಲನೆ ನೀಡಿದ ಯೆಜ್ಡಿ

ಹೊಸ ಯೆಜ್ಡಿ ರೋಡ್‌ಸ್ಟರ್, ಯೆಜ್ಡಿ ಸ್ಕ್ರ್ಯಾಂಬ್ಲರ್ ಮತ್ತು ಯೆಜ್ಡಿ ಅಡ್ವೆಂಚರ್ ಮಾದರಿಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ಮಾದರಿಯು ರೂ. 1.98 ಲಕ್ಷ ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ. 2.09 ಲಕ್ಷ ಬೆಲೆ ಹೊಂದಿವೆ.

ಹೊಸ ರೋಡ್‌ಸ್ಟರ್, ಸ್ಕ್ರ್ಯಾಂಬ್ಲರ್ ಮತ್ತು ಅಡ್ವೆಂಚರ್ ಬೈಕ್ ವಿತರಣೆಗೆ ಚಾಲನೆ ನೀಡಿದ ಯೆಜ್ಡಿ

ಗ್ರಾಹಕರು ತಮ್ಮ ಬೇಡಿಕೆಯಂತೆ ತಕ್ಕಂತೆ ಯೆಜ್ಡಿ ರೋಡ್‌ಸ್ಟರ್, ಯೆಜ್ಡಿ ಸ್ಕ್ರ್ಯಾಂಬ್ಲರ್ ಮತ್ತು ಯೆಜ್ಡಿ ಅಡ್ವೆಂಚರ್ ಮಾದರಿಗಳನ್ನು ಖರೀದಿ ಮಾಡಬಹುದಾಗಿದ್ದು, ಕ್ಲಾಸಿಕ್ ಬೈಕ್ ಇಷ್ಟಪಡುವ ಗ್ರಾಹಕರಿಗೆ ರೋಡ್‌ಸ್ಟರ್, ಸ್ಟ್ರೀಟ್ ಮತ್ತು ಆಫ್ ರೋಡ್ ಇಷ್ಟಪಡುವ ಗ್ರಾಹಕರಿಗೆ ಸ್ಕ್ರ್ಯಾಂಬ್ಲರ್ ಮತ್ತು ಸಂಪೂರ್ಣವಾಗಿ ಆಫ್-ರೋಡ್ ಪ್ರಯಾಣಕ್ಕಾಗಿ ವಿಶೇಷವಾಗಿ ಅಡ್ವೆಂಚರ್ ಮಾದರಿಯನ್ನು ಆಯ್ಕೆ ಮಾಡಬಹುದಾಗಿದೆ.

ಹೊಸ ರೋಡ್‌ಸ್ಟರ್, ಸ್ಕ್ರ್ಯಾಂಬ್ಲರ್ ಮತ್ತು ಅಡ್ವೆಂಚರ್ ಬೈಕ್ ವಿತರಣೆಗೆ ಚಾಲನೆ ನೀಡಿದ ಯೆಜ್ಡಿ

ರೋಡ್‌ಸ್ಟರ್ ಮಾದರಿಗಳು ಸಾಮಾನ್ಯವಾಗಿ ದಿನಬಳಕೆಯ ಮೋಟಾರ್‌ಸೈಕಲ್‌ ಮಾದರಿಗಳಾಗಿದ್ದು, ಈ ಹಿಂದೆ ಯೆಜ್ಡಿಯ ನಿರ್ಮಾಣದ ಬಹುತೇಕ ಮೋಟಾರ್‌ಸೈಕಲ್‌ಗಳು ರೋಡ್‌ಸ್ಟರ್‌ಗಳಾಗಿದ್ದವು. ರೋಡ್‌ಸ್ಟರ್ ಮಾದರಿಗಳು ತಮ್ಮದೆ ಆದ ಹೊಸ ವೈಶಿಷ್ಟ್ಯತೆಯೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಹೊಂದಿದ್ದು, ಕಂಪನಿಯು ಇದೀಗ ತನ್ನ ಹೆರಿಟೇಜ್ ಬ್ರಾಂಡ್‌ಗೆ ಹೊಸ ಮಾದರಿಯನ್ನು ಸೇರ್ಪೆಡೆಗೊಳಿಸಿದೆ.

ಹೊಸ ರೋಡ್‌ಸ್ಟರ್, ಸ್ಕ್ರ್ಯಾಂಬ್ಲರ್ ಮತ್ತು ಅಡ್ವೆಂಚರ್ ಬೈಕ್ ವಿತರಣೆಗೆ ಚಾಲನೆ ನೀಡಿದ ಯೆಜ್ಡಿ

ಹಾಗೆಯೇ ಹೊಸ ಸ್ಕ್ರ್ಯಾಂಬ್ಲರ್ ಮಾದರಿಯು ಸಹ ಆಕರ್ಷಕ ವಿನ್ಯಾಸದೊಂದಿಗೆ ಗ್ರಾಹಕರನ್ನು ಸೆಳೆಯಲಿದ್ದು, ಹೊಸ ಅಡ್ವೆಂಚರ್ ಹೊಸ ಬೈಕ್ ಮಾದರಿಯು ಎಲ್ಲರ ನೀರಿಕ್ಷೆಯೆಂತೆ ಹಲವು ವೈಶಿಷ್ಟ್ಯತೆಯೊಂದಿಗೆ ಬಿಡುಗಡೆಯಾಗಿದೆ.

ಹೊಸ ರೋಡ್‌ಸ್ಟರ್, ಸ್ಕ್ರ್ಯಾಂಬ್ಲರ್ ಮತ್ತು ಅಡ್ವೆಂಚರ್ ಬೈಕ್ ವಿತರಣೆಗೆ ಚಾಲನೆ ನೀಡಿದ ಯೆಜ್ಡಿ

ಹೊಸ ಬೈಕಿನಲ್ಲಿರುವ ತಾಂತ್ರಿಕ ವೈಶಿಷ್ಟ್ಯತೆಗಳಿಗೆ ಅನುಗುಣವಾಗಿ ಆರಂಭಿಕ ಮಾದರಿಯಾದ ರೋಡ್‌ಸ್ಟರ್ ಮಾದರಿಯು ರೂ. 1,98,142 ಬೆಲೆ ಹೊಂದಿದ್ದು, ಸ್ಕ್ರ್ಯಾಂಬ್ಲರ್ ಬೈಕ್ ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 2,04,900 ಆರಂಭಿಕ ಬೆಲೆ ಹೊಂದಿದ್ದರೆ ಹೊಸ ಅಡ್ವೆಂಚರ್ ಬೈಕ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 2,09,900 ಬೆಲೆ ಹೊಂದಿರಲಿದೆ.

ಹೊಸ ರೋಡ್‌ಸ್ಟರ್, ಸ್ಕ್ರ್ಯಾಂಬ್ಲರ್ ಮತ್ತು ಅಡ್ವೆಂಚರ್ ಬೈಕ್ ವಿತರಣೆಗೆ ಚಾಲನೆ ನೀಡಿದ ಯೆಜ್ಡಿ

ಈ ಮೂಲಕ ಕ್ಲಾಸಿಕ್ ಲೆಜೆಂಡ್ ಕಂಪನಿಯು ಯೆಜ್ಡಿ ಹೊಸ ಮಾದರಿಯ ಮೂಲಕ ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರಮುಖ ಕ್ಲಾಸಿಕ್, ಅಡ್ವೆಂಚರ್ ಬೈಕ್ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುವ ತವಕದಲ್ಲಿದ್ದು, ಮೂರು ಬೈಕ್ ಮಾದರಿಗಳಲ್ಲೂ ಕಂಪನಿಯು ಒಂದೇ ಎಂಜಿನ್ ಆಯ್ಕೆ ನೀಡಿದೆ.

ಹೊಸ ರೋಡ್‌ಸ್ಟರ್, ಸ್ಕ್ರ್ಯಾಂಬ್ಲರ್ ಮತ್ತು ಅಡ್ವೆಂಚರ್ ಬೈಕ್ ವಿತರಣೆಗೆ ಚಾಲನೆ ನೀಡಿದ ಯೆಜ್ಡಿ

ಮೂರು ಬೈಕ್ ಮಾದರಿಗಳಲ್ಲೂ ಒಂದೇ ಎಂಜಿನ್ ಆಯ್ಕೆ ನೀಡಿದ್ದರೂ ಕೂಡಾ ವಿವಿಧ ಮಾದರಿಗಳಿಗೆ ಅನುಗುಣವಾಗಿ ಪರ್ಫಾಮೆನ್ಸ್ ಏರಿಳಿತ ಮಾಡಲಾಗಿದ್ದು, 334ಸಿಸಿ, ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್‌ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆ ಹೊಂದಿವೆ.

ಹೊಸ ರೋಡ್‌ಸ್ಟರ್, ಸ್ಕ್ರ್ಯಾಂಬ್ಲರ್ ಮತ್ತು ಅಡ್ವೆಂಚರ್ ಬೈಕ್ ವಿತರಣೆಗೆ ಚಾಲನೆ ನೀಡಿದ ಯೆಜ್ಡಿ

ರಿಯಲ್ ವ್ಹೀಲ್ ವೈಶಿಷ್ಟ್ಯತೆ ಹೊಂದಿರುವ ಹೊಸ ಮಾದರಿಗಳಲ್ಲಿ ರೋಡ್‌ಸ್ಟರ್ ಮಾದರಿಯು 29.3 ಬಿಎಚ್‌ಪಿ ಮತ್ತು 29 ಎನ್ಎಂ ಟಾರ್ಕ್ ಉತ್ಪಾದಿಸಿದರೆ ಸ್ಕ್ರ್ಯಾಂಬ್ಲರ್ ಮಾದರಿಯು 28.7 ಬಿಎಚ್‌ಪಿ ಮತ್ತು 28.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹಾಗೆಯೇ ಅಡ್ವೆಂಚರ್ ಮಾದರಿಯು 29.7 ಬಿಎಚ್‌ಪಿ ಮತ್ತು 29.9 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ರೋಡ್‌ಸ್ಟರ್, ಸ್ಕ್ರ್ಯಾಂಬ್ಲರ್ ಮತ್ತು ಅಡ್ವೆಂಚರ್ ಬೈಕ್ ವಿತರಣೆಗೆ ಚಾಲನೆ ನೀಡಿದ ಯೆಜ್ಡಿ

ಹೊಸ ಬೈಕ್ ಮಾದರಿಗಳಲ್ಲಿ ಅಡ್ವೆಂಚರ್ ಮಾದರಿಯು ಹೆಚ್ಚು ಆಕರ್ಷಕವಾಗಿದ್ದು, ಅಡ್ವೆಂಚರ್ ಮಾದರಿಯು ವಿಶೇಷವಾಗಿ ದೂರದ ಪ್ರಯಾಣಕ್ಕೆ ಮತ್ತು ಸಾಹಸಿ ಬೈಕ್ ರೈಡಿಂಗ್ ಅನುಭವಕ್ಕಾಗಿ ವಿಶೇಷವಾಗಿ ಅಭಿವೃದ್ದಿಗೊಳಿಸಲಾಗಿದೆ.

ಹೊಸ ರೋಡ್‌ಸ್ಟರ್, ಸ್ಕ್ರ್ಯಾಂಬ್ಲರ್ ಮತ್ತು ಅಡ್ವೆಂಚರ್ ಬೈಕ್ ವಿತರಣೆಗೆ ಚಾಲನೆ ನೀಡಿದ ಯೆಜ್ಡಿ

ಡಬಲ್ ಕ್ರೇಡಲ್ ಚಾಸಿಸ್ ಅನ್ನು ಹೊಂದಿರುವ ಅಡ್ವೆಂಚರ್ ಬೈಕ್ ಮಾದರಿಯು ರೋಡ್‌ಸ್ಟರ್ ಮತ್ತು ಸ್ಕ್ರ್ಯಾಂಬ್ಲರ್ ಮಾದರಿಗಳಿಂತಲೂ ಹೆಚ್ಚು ಶಕ್ತಿಶಾಲಿಯಾಗಿದ್ದು, ಅಡ್ವೆಂಚರ್ ಮಾದರಿಯಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್, ಟೈಲ್ ಲ್ಯಾಂಪ್ ಮತ್ತು ಇಂಡಿಕೇಟರ್ ಸೆಟಪ್ ನೀಡಲಾಗಿದೆ. ಹಾಗೆಯೇ ದೂರದ ಪ್ರಯಾಣಕ್ಕೆ ಅನುಕೂಲಕರವಾಗಿ ಈ ಬೈಕಿನಲ್ಲಿ ಗೊಡ್ಡ ಗಾತ್ರದ ವಿಂಡ್‌ಸ್ಕ್ರೀನ್‌ನೊಂದಿಗೆ ಫಸ್ಟ್ ಇನ್-ಸೆಗ್ಮೆಂಟ್ ವೈಶಿಷ್ಟ್ಯತೆಯ ಟಿಲ್ಟ್-ಹೊಂದಾಣಿಕೆ ಸೌಲಭ್ಯವನ್ನು ಸಹ ಪಡೆಯುತ್ತದೆ.

ಹೊಸ ರೋಡ್‌ಸ್ಟರ್, ಸ್ಕ್ರ್ಯಾಂಬ್ಲರ್ ಮತ್ತು ಅಡ್ವೆಂಚರ್ ಬೈಕ್ ವಿತರಣೆಗೆ ಚಾಲನೆ ನೀಡಿದ ಯೆಜ್ಡಿ

ಹೊಸ ಬೈಕ್ ಮಾದರಿಯ ಆಸನಗಳು ಉತ್ತಮ ಸ್ಥಳಾವಕಾಶ ಹೊಂದಿದ್ದು, ಎಲ್‌ಸಿಡಿ ಪರದೆಗಳನ್ನು 15-ಡಿಗ್ರಿಗಳಿಗೆ ಸರಿಹೊಂದಿಸಬಹುದಾಗಿದೆ. ಹಾಗೆಯೇ ಹೊಸ ಬೈಕ್‌ಗಳಲ್ಲಿ ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಅಡ್ವೆಂಚರ್ ಮಾದರಿಯಲ್ಲಿ ಪ್ರಮಾಣಿತ ಸಾಧನಗಳಾಗಿವೆ.

ಹೊಸ ರೋಡ್‌ಸ್ಟರ್, ಸ್ಕ್ರ್ಯಾಂಬ್ಲರ್ ಮತ್ತು ಅಡ್ವೆಂಚರ್ ಬೈಕ್ ವಿತರಣೆಗೆ ಚಾಲನೆ ನೀಡಿದ ಯೆಜ್ಡಿ

ಇದಲ್ಲದೆ ಹೊಸ ಅಂಡ್ವೆಂಚರ್ ಮಾದರಿಯಲ್ಲಿ ಕಂಪನಿಯು 15.1-ಲೀಟರ್ ಇಂಧನ ಟ್ಯಾಂಕ್ ಅನ್ನು ಪಡೆದುಕೊಂಡಿದ್ದು, ಇದು ಅತ್ಯುತ್ತಮ ಮೈಲೇಜ್‌ನೊಂದಿಗೆ ಅಡ್ವೆಂಚರ್ ಮಾದರಿಯಾಗಿದೆ. ಇದರಲ್ಲಿ ಸ್ಟ್ಯಾಂಡರ್ಡ್ ಫೀಚರ್ಸ್‌‌ಗಳೊಂದಿಗೆ ಜೊತೆಗೆ ಹೊಸದಾಗಿ ಹೆಡ್‌ಲೈಟ್ ಗ್ರಿಲ್, ನ್ಯಾಕಲ್ ಗಾರ್ಡ್‌ಗಳು, ಆಕ್ಸಿಲರಿ ಲೈಟಿಂಗ್, ಸೈಡ್ ಪ್ಯಾನಿಯೆರ್ಸ್, ಟಾಪ್ ಪ್ಯಾನಿಯೆರ್ಸ್ ಮತ್ತು ಆಕ್ಸಿಲರಿ ಲೈಟ್ಸ್ ಮತ್ತು ಜೆರಿ ಕ್ಯಾನ್‌ಗಳನ್ನು ಆಕ್ಸಿಸರಿಸ್ ಪ್ಯಾಕೇಜ್‌ನಲ್ಲಿ ಸೇರ್ಪಡೆಗೊಳಿಸಲಾಗಿದೆ.

More from DriveSpark

Article Published On: Tuesday, January 18, 2022, 9:33 [IST]
English summary
Yezdi starts deliveries of all 3 new bikes details
Read more on ಯೆಜ್ಡಿ yezdi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+