ಕೇವಲ 6 ತಿಂಗಳಲ್ಲಿ 1 ಲಕ್ಷ ಬೈಕ್‌ಗಳ ಮಾರಾಟ... ಹೆಚ್ಚುತ್ತಲೇ ಇದೆ RE ಹಂಟರ್ 350 ಕ್ರೇಜ್

ರಾಯಲ್ ಎನ್‌ಫೀಲ್ಡ್ ಕಂಪನಿಯು ಇತ್ತೀಚೆಗಷ್ಟೇ ಹಂಟರ್ 350 ಬೈಕ್ ಅನ್ನು ಬಿಡುಗಡೆ ಮಾಡಿದ್ದು, ಇದು ಗ್ರಾಹಕರಿಂದ ಅಭೂತಪೂರ್ವ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಪ್ರತಿ ತಿಂಗಳ ಮಾರಟದಲ್ಲಿ ಉತ್ತಮ ಬೆಳವಣಿಗೆ ಸಾಧಿಸುತ್ತಿರುವ ಹಂಟರ್ ಮಾದರಿಯನ್ನು ಇಲ್ಲಿಯವರೆಗೆ 1 ಲಕ್ಷಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡಿರುವುದಾಗಿ ಕಂಪನಿ ಬಹಿರಂಗಪಡಿಸಿದೆ.

ರಾಯಲ್ ಎನ್‌ಫೀಲ್ಡ್ ಹಂಟರ್ 350 ಅನ್ನು ಆಗಸ್ಟ್ 2022 ರಲ್ಲಿ ಬಿಡುಗಡೆ ಮಾಡಿದ್ದು, ಕೇವಲ 6 ತಿಂಗಳೊಳಗೆ ಈ ಬೈಕು ಭಾರತೀಯರ ನೆಚ್ಚಿನ 350cc ಬೈಕ್ ಆಗಿ ಜನಪ್ರಿಯತೆ ಪಡೆದಿದೆ. ಹಂಟರ್ 350 ಅನ್ನು ಹೊಸ ಮಸ್ಕ್ಯುಲರ್-ರೆಟ್ರೊ ಸ್ಟೈಲಿಂಗ್‌ನಲ್ಲಿ ಪರಿಚಯಿಸಲಾಗಿದೆ, ಇದು ಗ್ರಾಹಕರಿಗೆ ತುಂಬಾ ಇಷ್ಟವಾಗಿದೆ. ಹಂಟರ್ 350 ಭಾರತದ ಪ್ರತಿಷ್ಠಿತ ಇಂಡಿಯನ್ ಮೋಟಾರ್‌ಸೈಕಲ್ ಆಫ್ ದಿ ಇಯರ್ 2023 ಪ್ರಶಸ್ತಿಯನ್ನು ಸಹ ಗೆದ್ದಿದೆ.

ಕೇವಲ 6 ತಿಂಗಳಲ್ಲಿ 1 ಲಕ್ಷ ಬೈಕ್‌ಗಳ ಮಾರಾಟ... ಹೆಚ್ಚುತ್ತಲೇ ಇದೆ RE ಹಂಟರ್ 350 ಕ್ರೇಜ್

ಕಂಪನಿಯು ಈ ಬೈಕನ್ನು ರಫ್ತು ಮಾಡಲು ಕೂಡ ಪ್ರಾರಂಭಿಸಿದೆ. ಇವುಗಳಲ್ಲಿ ಫ್ರಾನ್ಸ್, ಜರ್ಮನಿ, ಇಟಲಿ, ಯುಕೆ, ಅರ್ಜೆಂಟೀನಾ, ಕೊಲಂಬಿಯಾ, ಮೆಕ್ಸಿಕೊ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಂತಹ ದೇಶಗಳು ಸೇರಿವೆ. ರಾಯಲ್ ಎನ್‌ಫೀಲ್ಡ್ ಹಂಟರ್ 350 ಮಾದರಿಯು 349cc, ಸಿಂಗಲ್-ಸಿಲಿಂಡರ್, ಏರ್ ಮತ್ತು ಆಯಿಲ್-ಕೂಲ್ಡ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಅನ್ನು ಒಳಗೊಂಡಿದ್ದು, ಇದು 20.2 Bhp ಪವರ್ ಮತ್ತು 27 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇದು ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡಿಸ್ಕ್/ಡ್ರಮ್ ಆಯ್ಕೆಯನ್ನು ಸಿಂಗಲ್ ಅಥವಾ ಡ್ಯುಯಲ್-ಚಾನೆಲ್ ಎಬಿಎಸ್‌ನೊಂದಿಗೆ ಪಡೆಯುತ್ತದೆ. ರಾಯಲ್ ಎನ್‌ಫೀಲ್ಡ್ ಹಂಟರ್ 350 ಒಟ್ಟಾರೆ ಉದ್ದ 2,055 ಎಂಎಂ, 800 ಎಂಎಂ ಅಗಲ ಮತ್ತು 1,055 ಎಂಎಂ ಎತ್ತರವನ್ನು ಹೊಂದಿದ್ದು, ವೀಲ್‌ಬೇಸ್ ಉದ್ದವು 1,370 ಎಂಎಂ ಮತ್ತು ಒಟ್ಟು ವಾಹನದ ತೂಕ 360 ಕೆ.ಜಿ ಇದೆ.

ಕೇವಲ 6 ತಿಂಗಳಲ್ಲಿ 1 ಲಕ್ಷ ಬೈಕ್‌ಗಳ ಮಾರಾಟ... ಹೆಚ್ಚುತ್ತಲೇ ಇದೆ RE ಹಂಟರ್ 350 ಕ್ರೇಜ್

ಮಿಟಿಯೊರ್ ಬೈಕಿಗೆ ಹೋಲಿಸಿದರೆ, ಹಂಟರ್ 350 ಉದ್ದದಲ್ಲಿ 85 ಎಂಎಂ ಚಿಕ್ಕದಾಗಿದೆ. ಕ್ಲಾಸಿಕ್ 350 ಬೈಕಿಗೆ ಹೋಲಿಸಿದರೆ, ಹಂಟರ್ 90 ಎಂಎಂ ಉದ್ದ ಮತ್ತು 35 ಎಂಎಂ ಎತ್ತರ ಕಡಿಮೆಯಿದ್ದು, 15 ಎಂಎಂ ಅಗಲವಾಗಿರುತ್ತದೆ. ವೀಲ್‌ಬೇಸ್ ಕ್ಲಾಸಿಕ್‌ನಲ್ಲಿ 20 ಎಂಎಂ ಹೆಚ್ಚಾಗಿದೆ ಮತ್ತು ಹಂಟರ್‌ಗಿಂತ 15 ಕೆ.ಜಿಯಷ್ಟು ಭಾರವಾಗಿರುತ್ತದೆ. ಹಂಟರ್ ಅದರ ಟಿಯರ್-ಡ್ರಾಪ್ ಆಕಾರದ ಇಂಧನ ಟ್ಯಾಂಕ್, ಉದ್ದವಾದ ಸಿಂಗಲ್-ಪೀಸ್ ಸೀಟ್, ವೃತ್ತಾಕಾರದ ಹೆಡ್‌ಲ್ಯಾಂಪ್‌ಗಳು, ಟರ್ನ್ ಇಂಡಿಕೇಟರ್‌ಗಳು, ರಿಯರ್-ವ್ಯೂ ಮಿರರ್‌ಗಳು ಮತ್ತು ಸ್ವಲ್ಪ ಎತ್ತರದ ಸ್ಕ್ರ್ಯಾಂಬ್ಲರ್ ಮಾದರಿಯ ಮೋಟಾರ್‌ಸೈಕಲ್ ಆಗಿದೆ.

ಭಾರತೀಯ ಮಾರುಕಟ್ಟೆಯಲ್ಲಿ ರೆಟ್ರೊ-ಥೀಮ್ ಹೊಂದಿರುವ ಹಂಟರ್ 350 ಬೈಕ್ ಪ್ರಸ್ತುತ ಸ್ವದೇಶಿ ತಯಾರಕರಿಂದ ಅತ್ಯಂತ ಕೈಗೆಟುಕುವ ಕೊಡುಗೆಯಾಗಿದೆ. ಇದು ಮಾರುಕಟ್ಟೆಗೆ ಪ್ರವೇಶಿಸಿದಾಗಿನಿಂದ ಉತ್ತಮ ಮಾರಾಟದ ಪ್ರಮಾಣವನ್ನು ಗಳಿಸುತ್ತಿದೆ. ಹಂಟರ್ 350 ಬೈಕ್ ನೇರವಾಗಿ ಟಿವಿಎಸ್ ರೋನಿನ್ 225 ಬೈಕಿಗೆ ಪೈಪೋಟಿ ನೀಡುತ್ತದೆ. ಹಂಟರ್ 350 ಮಾದರಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ ಎರಡು ವೆರಿಯೆಂಟ್‌ಗಳಾದ ಮೆಟ್ರೋ ಮತ್ತು ರೆಟ್ರೋ ಎನ್ನುವ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಕೇವಲ 6 ತಿಂಗಳಲ್ಲಿ 1 ಲಕ್ಷ ಬೈಕ್‌ಗಳ ಮಾರಾಟ... ಹೆಚ್ಚುತ್ತಲೇ ಇದೆ RE ಹಂಟರ್ 350 ಕ್ರೇಜ್

ಹೊಸ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 1.50 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 1.69 ಲಕ್ಷ ಬೆಲೆ ಹೊಂದಿವೆ. ಇತರ ರಾಯಲ್ ಎನ್‌ಫೀಲ್ಡ್ ಬೈಕ್ ಗಳಿಗೆ ಹೋಲಿಸಿದರೆ ಬೆಲೆಯು ತುಂಬಾ ಅಗ್ಗವಾಗಿದೆ. ಇದರೊಂದಿಗೆ ಹೊಸ ಬೈಕಿನಲ್ಲಿ ಬೆಲೆ ಕಡಿತಕ್ಕಾಗಿ ಕೆಲವು ಪ್ರಮುಖ ಫೀಚರ್ಸ್‌ಗಳನ್ನು ಆಯ್ಕೆ ರೂಪದಲ್ಲಿ ನೀಡಲಾಗಿದೆ. ಹಂಟರ್ 350 ಬೈಕಿನಲ್ಲಿ ಸೆಮಿ-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ ಟ್ರಿಪ್ಲರ್ ನ್ಯಾವಿಗೇಷನ್ ಅನ್ನು ಹೈ ಎಂಡ್ ಮಾದರಿಯಲ್ಲಿ ಮಾತ್ರ ನೀಡಲಾಗಿದೆ.

ಆರಂಭಿಕ ಮಾದರಿಯಲ್ಲಿ ಸೆಮಿ-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮಾತ್ರ ನೀಡಲಾಗಿದ್ದು, ಟ್ರಿಪ್ಲರ್ ನ್ಯಾವಿಗೇಷನ್ ಅನ್ನು ಆಕ್ಸೆಸರಿಸ್‌ನಲ್ಲಿ ಖರೀದಿ ಮಾಡಬಹುದಾಗಿದೆ. ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕಿನ ಸಸ್ಪೆಕ್ಷನ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಕಂಪನಿಯು 41ಎಂಎಂ ಟೆಲಿಸ್ಕೋಪಿಕ್ ಫೋರ್ಕ್‌ಗಳೊಂದಿಗೆ ಟ್ವಿನ್ ಡೌನ್‌ಟ್ಯೂಬ್ ಸ್ಪೈನ್ ಫ್ರೇಮ್ ಸೆಟಪ್ ಮತ್ತು ಹಿಂಭಾಗದಲ್ಲಿ ಪ್ರಿಲೋಡ್-ಅಡ್ಜಸ್ಟಬಲ್ ಟ್ವಿನ್ ಶಾಕ್‌‌ಗಳನ್ನು ನೀಡಿದೆ.

More from DriveSpark

Article Published On: Friday, February 24, 2023, 19:54 [IST]
English summary
1 lakh bikes sold in just 6 months re Hunter 350 craze increase
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+