ಸಿಂಗಲ್ ಚಾರ್ಜ್‌ನಲ್ಲಿ 125 ಕಿಮೀ ರೇಂಜ್... ಮಾರ್ಚ್‌ನಲ್ಲಿ ಆರ್ಯ ಕಮಾಂಡರ್ ಇ-ಬೈಕ್ ಬಿಡುಗಡೆ

ದೇಶದಲ್ಲಿ ಹೆಚ್ಚಾಗುತ್ತಿರುವ ಇಂಧನ ಬೆಲೆಗಳು ಎಲೆಲಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಿಸುತ್ತಿದ್ದು, ಸ್ಟಾರ್ಟ್‌ಅಪ್ ಕಂಪನಿಗಳು ಕೂಡ ಹೆಚ್ಚಾಗುತ್ತಿವೆ. ಗುಜರಾತ್ ಮೂಲದ ಆಟೋಮೊಬೈಲ್ ತಯಾರಕರಾದ ಆರ್ಯ ಆಟೋಮೊಬೈಲ್ಸ್ ಮುಂದಿನ ತಿಂಗಳು ತನ್ನ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡುವ ಮೂಲಕ ಎಲೆಕ್ಟ್ರಿಕ್ ಮೊಬಿಲಿಟಿ ವಿಭಾಗಕ್ಕೆ ಪ್ರವೇಶಿಸಲಿದೆ.

ಆರ್ಯ ಆಟೋಮೊಬೈಲ್ಸ್ ನಿರ್ದೇಶಕರಾದ ತುಷಾರ್ ಛಾಭಾಯಾ ಅವರು ಕಂಪನಿಯ ಭವಿಷ್ಯದ ಬಿಡುಗಡೆ ಯೋಜನೆಗಳು ಮತ್ತು ಇತರ ವಿವರಗಳ ಕುರಿತು ಬಹಿರಂಗಪಡಿಸಿದ್ದಾರೆ. ಆರ್ಯ ಕಮಾಂಡರ್ ಎಂದು ಕರೆಯಲ್ಪಡುವ ಈ ಇ-ಮೋಟಾರ್ ಸೈಕಲ್ ಒಂದೇ ಚಾರ್ಜ್‌ನಲ್ಲಿ 125 ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ. ಮುಂಬರುವ ಆರ್ಯ ಕಮಾಂಡರ್ 4.4 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇದು 3 kW (4.02 bhp) ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಜೋಡಿಸಲ್ಪಟ್ಟಿದೆ ಎಂದರು.

ಇನೋವಾ ಪ್ರಿಯರಿಗೆ ಸಿಹಿ ಸುದ್ದಿ : ಅಗ್ಗದ ಬೆಲೆಯಲ್ಲಿ ಬರುತ್ತಿದೆ ಟೊಯೊಟಾ ಇನೋವಾ ಹೈಕ್ರಾಸ್‌ನ ಹೊಸ ವೆರಿಯೆಂಟ್

ಇನ್ನು ಇದರ ಪರ್ಫಾಮೆನ್ಸ್ ಕುರಿತು ಮಾತನಾಡಿದ ಅವರು, 90 kmph ವೇಗವನ್ನು ತಲುಪಬಲ್ಲದು, ಚಾರ್ಜಿಂಗ್ ಸಮಯದ ವಿಷಯದಲ್ಲಿ ಆರ್ಯ ಕಮಾಂಡರ್ ಅನ್ನು ಸಾಮಾನ್ಯ ಚಾರ್ಜರ್‌ನೊಂದಿಗೆ 5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್‌ ಮಾಡಬಹುದು ಎಂದು ಕಂಪನಿ ಹೇಳಿದರು. ಆರ್ಯ ಅವರ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಡ್ಯುಯಲ್ ಸ್ಪ್ರಿಂಗ್-ಲೋಡೆಡ್ ಶಾಕ್ ಅಬ್ಸಾರ್ಬರ್‌ಗಳನ್ನು ಹೊಂದಿದ್ದು, ಉತ್ತಮ ಚಾಲನಾ ಅನುಭವ ನೀಡುವುದಾಗಿ ತಿಳಿಸಿದರು.

ಬ್ರೇಕಿಂಗ್ ಕುರಿತು ಮಾತನಾಡಿ, ಮೋಟಾರ್ಸೈಕಲ್ ಸಂಯೋಜಿತ ಬ್ರೇಕಿಂಗ್ ಸಿಸ್ಟಮ್ನೊಂದಿಗೆ ಎರಡೂ ತುದಿಗಳಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿರುವುದರಿಂದ ವೇಗವನ್ನು ಕೂಡಲೇ ನಿಯಂತ್ರಣಕ್ಕೆ ತರಬಹುದು. ವೈಶಿಷ್ಟ್ಯಗಳ ವಿಷಯದಲ್ಲಿ, ಕಮಾಂಡರ್ ಬ್ಲೂಟೂತ್ ಸಂಪರ್ಕದೊಂದಿಗೆ ಡಿಜಿಟಲ್ ಇನ್‌ ಸ್ಟ್ರೂಮೆಂಟ್ ಕ್ಲಸ್ಟರ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಇತ್ಯಾದಿಗಳನ್ನು ನೀಡಲಾಗಿದೆ. ಆರ್ಯ ಕಮಾಂಡರ್‌ನ ಬೆಲೆ ಸುಮಾರು 1. 60 ಲಕ್ಷ ರೂ., ಎಕ್ಸ್ ಶೋರೂಂ (ರಾಜ್ಯ ಸರ್ಕಾರದ ಸಬ್ಸಿಡಿಗಳನ್ನು ಹೊರತುಪಡಿಸಿ) ಇದೆ.

ಇನೋವಾ ಪ್ರಿಯರಿಗೆ ಸಿಹಿ ಸುದ್ದಿ : ಅಗ್ಗದ ಬೆಲೆಯಲ್ಲಿ ಬರುತ್ತಿದೆ ಟೊಯೊಟಾ ಇನೋವಾ ಹೈಕ್ರಾಸ್‌ನ ಹೊಸ ವೆರಿಯೆಂಟ್

ಈ ಹೊಸ ಎಲೆಕ್ಟ್ರಿಕ್ ಮೋಟಾರ್‌ ಸೈಕಲ್ ಬುಕ್ಕಿಂಗ್‌ಗಳು ಈಗಾಗಲೇ ರೂ. 2,500 ಕ್ಕೆ ತೆರೆದಿವೆ. ಈ ವರ್ಷದ ಏಪ್ರಿಲ್‌ನಲ್ಲಿ ವಿತರಣೆಗಳು ಪ್ರಾರಂಭವಾಗುವ ನಿರೀಕ್ಷೆಯಿದೆ. ಆರ್ಯ ಆಟೋಮೊಬೈಲ್ಸ್ ಇದು ಶ್ರೇಣಿ -I ನಗರಗಳಲ್ಲಿ ಸಕ್ರಿಯ ನೆಟ್‌ವರ್ಕ್ ಅನ್ನು ಹೊಂದಿದೆ. ಶೀಘ್ರದಲ್ಲೇ ಇತರ ಪ್ರದೇಶಗಳಿಗೂ ವಿಸ್ತರಿಸಲಿದೆ. ಇದಲ್ಲದೆ, ಸೂರತ್‌ನಲ್ಲಿರುವ ಅದರ ಉತ್ಪಾದನಾ ಸೌಲಭ್ಯವು 5,000 ಘಟಕಗಳ ಮಾಸಿಕ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

ಸದ್ಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಹೆಚ್ಚು ಮಾರಾಟವಾಗುತ್ತಿವೆ. ಇದೀಗ ಇ- ಬೈಕ್‌ಗಳು ಕೂಡ ಮಾರುಕಟ್ಟೆಯಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಲು ಸಜ್ಜಾಗುತ್ತಿವೆ. ಇತ್ತೀಚೆಗೆ ಅಲಟ್ರಾವೈಲೆಟ್ ಹಾಗೂ ಮ್ಯಾಟರ್ ಇವಿ ತಮ್ಮ ಹೊಸ ಉತ್ಪನ್ನಗಳ್ನು ಪರಿಚಯಿಸಿದ್ದರು. ಇವು ಕೂಡ ಇ-ಬೈಕ್‌ಗಳಾಗಿದ್ದು, ಮಾರುಕಟ್ಟೆಯಲ್ಲಿ ನಿಧಾನವಾಗಿ ಬೆಳೆಯತೊಡಗಿವೆ. ಇನ್ನು ಈಗಾಗಲೇ ಮಾರುಕಟ್ಟೆಯಲ್ಲಿ ಮಾರಾಟದಲ್ಲಿ ತೊಡಗಿರುವ ಟಾರ್ಕ್ ಕ್ರಾಟೋಸ್ ಒಂದು ಸುತ್ತಿನ ಇವಿ ವಲಯದ ಅನುಭವವನ್ನು ಪಡೆದಿದೆ.

ಇನೋವಾ ಪ್ರಿಯರಿಗೆ ಸಿಹಿ ಸುದ್ದಿ : ಅಗ್ಗದ ಬೆಲೆಯಲ್ಲಿ ಬರುತ್ತಿದೆ ಟೊಯೊಟಾ ಇನೋವಾ ಹೈಕ್ರಾಸ್‌ನ ಹೊಸ ವೆರಿಯೆಂಟ್

ಮುಂದಿನ ದಿನಗಳಲ್ಲಿ ಇನ್ನು ಹಲವು ಇ- ಮೋಟಾರ್‌ ಸೈಕಲ್‌ಗಳು ಮಾರುಕಟ್ಟೆಗೆ ಲಗ್ಗೆಯಿಡಲಿದ್ದು, ಪೈಪೋಟಿ ಹೆಚ್ಚಾಗಲಿದೆ. ಈಗಾಗಲೇ ಇವಿ ವಲಯಕ್ಕೆ ಸರ್ಕಾರ ಸಬ್ಸಿಡಿ ನೀಡುತ್ತಿರುವುದರಿಂದ ಗ್ರಾಹಕರು ಕೂಡ ಇವಿ ವಾಹನಗಳಿಗೆ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇಂಧನ ಚಾಲಿತ ಸ್ಕೂಟರ್‌ಗಳಿಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳು ಪ್ರತಿ ತಿಂಗಳ ಮಾರಾಟದಲ್ಲಿ ಪೈಪೋಟಿ ನೀಡುವ ಹಂತಕ್ಕೆ ಬಂದಿವೆ. ಇದೇ ರೀತಿ ಇ- ಬೈಕ್‌ಗಳು ಇಂಧನ ಚಾಲಿತ ಬೈಕ್‌ಗಳಿಗೆ ಪೈಪೋಟಿ ನೀಡುವ ಹಂತಕ್ಕೆ ಬಂದರೆ ಸಂಪೂರ್ಣ ಆಟೋ ವಲಯದ ಭವಿಷ್ಯ ಬದಲಾಗಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Saturday, February 18, 2023, 11:15 [IST]
English summary
125 km range on a single charge aarya Commander e bike launched in March
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+