ಕೈಗೆಟುಕುವ ದರಕ್ಕೆ ಯಮಹಾ ಫ್ಯಾಸಿನೋ, Ray ZR ಸ್ಕೂಟರ್‌ ಬಿಡುಗಡೆ

ದೇಶೀಯ ಮಾರುಕಟ್ಟೆಯಲ್ಲಿ ಯಮಹಾ ಸ್ಕೂಟರ್‌ಗಳು ಇದೀಗ ಭಾರೀ ಪ್ರಮಾಣದಲ್ಲಿ ದಿನದಿಂದ ದಿನಕ್ಕೆ ಜನಪ್ರಿಯತೆಯನ್ನು ಗಳಿಸುತ್ತಿದ್ದು, RDE ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ಯಮಹಾ ಕಂಪನಿ ಫ್ಯಾಸಿನೋ, ರೇ ZR ಸ್ಕೂಟರ್‌ಗಳನ್ನು ಅದ್ದೂರಿಯಾಗಿ ಬಿಡುಗಡೆ ಮಾಡಿದೆ. ಈ ನೂತನ ಸ್ಕೂಟರ್‌ಗಳು ಹೇಗಿವೆ ಎಂಬುದನ್ನು ತಿಳಿಯೋಣ ಬನ್ನಿ.

ಹೊಸ ಯಮಹಾ ಸ್ಕೂಟರ್‌ಗಳ ಬೆಲೆ ವಿವರದ ಬಗ್ಗೆ ನೋಡುವುದಾದರೆ, ಯಮಹಾ ಫ್ಯಾಸಿನೋ Fi ಹೈಬ್ರಿಡ್ ಸ್ಕೂಟರ್ ರೂ.91,030 ಎಕ್ಸ್ ಶೋರೂಂ ಬೆಲೆ ಹೊಂದಿದ್ದು, ಯಮಹಾ ರೇ ZR 125 Fi ಹೈಬ್ರಿಡ್ ಸ್ಕೂಟರ್‌ ರೂ.89,530 ದರದಲ್ಲಿ ಖರೀದಿಗೆ ಸಿಗಲಿದೆ. ಯಮಹಾ ರೇ ZR ಸ್ಟ್ರೀಟ್ ರ್‍ಯಾಲಿ Fi ಹೈಬ್ರಿಡ್ ರೂ.93,530 ಬೆಲೆಯನ್ನು ಪಡೆದುಕೊಂಡಿದ್ದು, ಈ ನೂತನ ಸ್ಕೂಟರ್‌ಗಳು, ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿವೆ ಎಂದು ಹೇಳಬಹುದು.

ಕೈಗೆಟುಕುವ ದರಕ್ಕೆ ಯಮಹಾ ಫ್ಯಾಸಿನೋ, Ray ZR ಸ್ಕೂಟರ್‌ ಬಿಡುಗಡೆ

ಯಮಹಾ ರೇ ZR Fi ಹೈಬ್ರಿಡ್ ಸ್ಕೂಟರ್‌, ಡಾರ್ಕ್ ಮ್ಯಾಟ್ ಬ್ಲೂ, ರೇ ZR ಸ್ಟ್ರೀಟ್ ರ್‍ಯಾಲಿ Fi ಹೈಬ್ರಿಡ್ ಸ್ಕೂಟರ್ ಸ್ಪೋರ್ಟಿ ಲೈಟ್ ಗ್ರೇ ವರ್ಮಿಲಿಯನ್ ಮತ್ತು ಮ್ಯಾಟ್ ಬ್ಲ್ಯಾಕ್ ಬಣ್ಣವನ್ನು ಹೊಂದಿದ್ದು, ಯಮಹಾ ಕಂಪನಿ ನೂತನ ಸ್ಕೂಟರ್ ಗಳನ್ನು ದೇಶದ್ಯಂತ ಏಪ್ರಿಲ್ 1 ರಿಂದ ಜಾರಿಯಲ್ಲಿರುವ ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ರೆಡಿ ಮಾಡಿದೆ. ವಿನ್ಯಾಸದ ದೃಷ್ಟಿಯಿಂದಲ್ಲೂ ಈ ಸ್ಕೂಟರ್ ಗಳು ಆಕರ್ಷಕ ಲುಕ್ ಹೊಂದಿವೆ.

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಯಮಹಾ ಫ್ಯಾಸಿನೋ, Ray ZR ಸ್ಕೂಟರ್‌ ಗಳ ವೈಶಿಷ್ಟ್ಯಗಳನ್ನು ನೋಡುವುದಾದರೆ, ಇವು LED ಹೆಡ್‌ಲೈಟ್, LED ಟೈಲ್‌ಲ್ಯಾಂಪ್ಸ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ, ಹಾಗೂ 12-ಇಂಚಿನ ಫ್ರಂಟ್ ವೀಲ್ ಸೇರಿದಂತೆ ಹತ್ತು ಹಲವು ನವೀನ ವೈಶಿಷ್ಟ್ಯಗಳನ್ನು ಹೊಂದಿದ್ದು, ಪ್ರತಿಯೊಬ್ಬ ಖರೀದಿದಾರರು ಮೈಲೇಜ್ ಚೆನ್ನಾಗಿದ್ದರೆ ಮಾತ್ರ ಸ್ಕೂಟರ್ ಖರೀದಿಸುತ್ತಾರೆ. ಇದು 60km/l ಮೈಲೇಜ್ ನೀಡಲಿದ್ದು, ಇದು ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಸೆಳೆಯಬಹುದು.

ಕೈಗೆಟುಕುವ ದರಕ್ಕೆ ಯಮಹಾ ಫ್ಯಾಸಿನೋ, Ray ZR ಸ್ಕೂಟರ್‌ ಬಿಡುಗಡೆ

ಯಮಹಾ ಫ್ಯಾಸಿನೋ, Ray ZR ಸ್ಕೂಟರ್‌ ಗಳ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, 125 ಸಿಸಿ ಎಂಜಿನ್ ಹೊಂದಿರುವ ಸ್ಮಾರ್ಟ್ ಮೋಟಾರ್ ಜನರೇಟರ್ (SMG)ನಿಂದ ಚಾಲಿತವಾಗಲಿದೆ. 8.04 bhp ಗರಿಷ್ಠ ಪವರ್ ಹಾಗೂ 10.3Nm ಪೀಕ್ ಟಾರ್ಕ್‌ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಬರೋಬ್ಬರಿ 99 ಕೆಜಿ ತೂಕವಿದೆ. 125 ಸಿಸಿ ಎಂಜಿನ್ ಹೊಂದಿರುವುದರಿಂದ ಹೆಚ್ಚಿನ ಕೊಂಚ ಮಟ್ಟಿಗೆ ಕಾರ್ಯಕ್ಷಮತೆ ಉತ್ತಮವಾಗಿದ್ದು, ನಿರ್ವಹಣಾ ವೆಚ್ಚವು ಅಷ್ಟೇನೂ ಹೆಚ್ಚಿಲ್ಲ ಎಂದು ಹೇಳಬಹುದು.

ಸದ್ಯ ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಯಮಹಾ ಫ್ಯಾಸಿನೋ, ರೂ.77,100 ದಿಂದ ರೂ.88,730 ಆನ್-ರೋಡ್ ಬೆಲೆಯಲ್ಲಿ ಸಿಗಲಿದೆ. 68.75 kmpl ಮೈಲೇಜ್ ನೀಡಲಿದೆ. ಇದರ ಎಂಜಿನ್ ಕಾರ್ಯಕ್ಷಮತೆಯನ್ನು ನೋಡುವುದಾದರೆ, ಇದು 125 ಸಿಸಿ ಎಂಜಿನ್ ಹೊಂದಿದ್ದು, 8.2 PS ಗರಿಷ್ಠ ಪವರ್ ಹಾಗೂ 10.3 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ, ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದುಕೊಂಡಿದೆ. ಜೊತೆಗೆ ಸಾಕಷ್ಟು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ.

ಯಮಹಾ ರೇ ZR 125 Fi ಹೈಬ್ರಿಡ್ ಸ್ಕೂಟರ್ ಬೆಲೆ ಬಗ್ಗೆ ಹೇಳುವುದಾದರೆ, ಇದು ರೂ.81,230 ದಿಂದ ರೂ.91,030 ಆನ್-ರೋಡ್ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಟ್ಯೂಬ್ಲೆಸ್ ಟೈಯರ್ಸ್ ಹಾಗೂ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. 5.2 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಪಡೆದಿದೆ. ಎಂಜಿನ್ ಕಾರ್ಯಕ್ಷಮತೆಯನ್ನು ನೋಡುವುದಾದರೆ, ಇದು 125 ಸಿಸಿ ಎಂಜಿನ್ ಹೊಂದಿದ್ದು, 8.2 PS ಪವರ್ ಹಾಗೂ 10.3 Nm ಪೀಕ್ ತಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ.

ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಯಮಹಾ ಫ್ಯಾಸಿನೋ, ರೇ ZR Fi ಹೈಬ್ರಿಡ್ ಸ್ಕೂಟರ್‌ ಗಳ ಎಂಜಿನ್ ಅನ್ನು ನೂತನ ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸಿದ್ದು, ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡಿವೆ. ನೋಡಲು ಅತ್ಯಾಕರ್ಷಕವಾಗಿ ಕಾಣಿಸುತ್ತಿವೆ. ಜೊತೆಗೆ ದರವು ಅಷ್ಟೇನೂ ಹೆಚ್ಚಿಲ್ಲದೇ ಕೈಗೆಟುಕುವ ಬೆಲೆಯಲ್ಲಿಯೇ ಖರೀದಿಗೆ ಲಭ್ಯವಿದೆ. ಇದು ಸುಜುಕಿ, ಹೀರೋ ಹಾಗೂ ಟಿವಿಎಸ್ ಕಂಪನಿ ಸ್ಕೂಟರ್ ಗಳಿಗೆ ಬಾರೀ ಪೈಪೋಟಿಯನ್ನು ನೀಡಲಿದ್ದು, ಗ್ರಾಹಕರಿಂದ ಯಾವ ರೀತಿಯಲ್ಲಿ ಪ್ರತಿಕ್ರಿಯೆ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

More from DriveSpark

Article Published On: Monday, February 20, 2023, 17:32 [IST]
English summary
2023 yamaha fascino ray zr scooters launched in india details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+