ಫುಲ್ ಟ್ಯಾಂಕ್‌ನಲ್ಲಿ ಬರೋಬ್ಬರಿ 900 ಕಿ.ಮೀ ಓಡುವ ರಾಯಲ್ ಎನ್‌ಫೀಲ್ಡ್ ಡೀಸಲ್ ಬೈಕ್

ವಿಶ್ವದ ಅತ್ಯಂತ ಹಳೆಯ ದ್ವಿಚಕ್ರ ವಾಹನ ತಯಾರಕರಲ್ಲಿ ಒಬ್ಬರಾಗಿರುವ ರಾಯಲ್ ಎನ್‌ಫೀಲ್ಡ್‌ಗೆ ಇಂದಿಗೂ ಉತ್ತಮ ಬೇಡಿಕೆಯಿದೆ. ತೊಂಬತ್ತರ ದಶಕದಿಂದಲೂ ಜನಪ್ರಿಯ ಮಾದರಿಗಳನ್ನು ನೀಡುತ್ತಿರುವ ಕಂಪನಿ ಒಂದು ಕಾಲದಲ್ಲಿ ಡೀಸಲ್ ಬೈಕ್‌ಗಳನ್ನು ಮಾರಾಟ ಮಾಡಿರುವುದು ಎಂದು ಎಷ್ಟು ಮಂದಿಗೆ ಗೊತ್ತು. ಈ ಲೇಖನದಲ್ಲಿ ಆ ಅಪರೂಪದ ಮೋಟಾರ್‌ಸೈಕಲ್‌ ಬಗ್ಗೆ ತಿಳಿದುಕೊಳ್ಳೋಣ.

ರಾಯಲ್ ಎನ್‌ಫೀಲ್ಡ್ ಬುಲೆಟ್ ಮತ್ತು ಕ್ಲಾಸಿಕ್ ಸರಣಿಯ ಮೋಟಾರ್‌ಸೈಕಲ್‌ಗಳು ಖರೀದಿದಾರರಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ರಾಯಲ್ ಎನ್‌ಫೀಲ್ಡ್ ಒಮ್ಮೆ ಮಾರುಕಟ್ಟೆಯಲ್ಲಿ ಡೀಸೆಲ್ ಎಂಜಿನ್ ಮೋಟಾರ್‌ಸೈಕಲ್‌ ಆದ 'ಡೀಸೆಲ್ ಟಾರಸ್' ಎಂಬ ಮಾದರಿಯನ್ನು ಪರಿಚಯಿಸಿತ್ತು. ಇಲ್ಲಿಯವರೆಗೆ ಡೀಸೆಲ್ ಎಂಜಿನ್ ಪಡೆದ ಭಾರತದ ಏಕೈಕ ಮೋಟಾರ್‌ಸೈಕಲ್ ಇದಾಗಿದೆ. ಇದನ್ನು 1993 ರಲ್ಲಿ ಬಿಡುಗಡೆ ಮಾಡಿ, ಸುಮಾರು ಏಳು ವರ್ಷಗಳ ನಂತರ ಹೊಸ ಎಮಿಷನ್ ಮಾನದಂಡಗಳ ಕಾರಣ 2000 ದಲ್ಲಿ ನಿಲ್ಲಿಸಲಾಯಿತು.

ಫುಲ್ ಟ್ಯಾಂಕ್‌ನಲ್ಲಿ ಬರೋಬ್ಬರಿ 900 ಕಿ.ಮೀ ಓಡುವ ರಾಯಲ್ ಎನ್‌ಫೀಲ್ಡ್ ಡೀಸಲ್ ಬೈಕ್

ಇಲ್ಲಿ ಕಾಣಸಿಗುವ ಮೋಟಾರು ಸೈಕಲ್ 1997ರ ಮಾಡೆಲ್ ಆಗಿದ್ದು, ಈ ಬೈಕಿನ ಮಾಲೀಕರಿಗೆ ಸುಮಾರು 80 ವರ್ಷ ವಯಸ್ಸಾಗಿದೆ. 26 ವರ್ಷದ ಈ ಹಳೆಯ ಡೀಸೆಲ್ ಟಾರಸ್ ಮೋಟಾರ್‌ಸೈಕಲ್‌ ಇಂದಿಗೂ ಉತ್ತಮ ಸ್ಥಿತಿಯಲ್ಲಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ಈ ಹಿಂದೆ ಮೋಟಾರ್‌ಸೈಕಲ್‌ಗೆ ಸೆಲ್ಫ್ ಸ್ಟಾರ್ಟ್ ನೀಡುತ್ತಿರಲಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಹಾಗೆಯೇ ಇದು ಕೂಡ ಕಿಕ್ ಸ್ಟಾರ್ಟರ್ ಬಳಸಿ ಪ್ರಾರಂಭಿಸುವ ಮೂಲಕ ವಿಂಟೇಜ್ ಕಾಲವನ್ನು ನೆನಪಿಸುತ್ತದೆ.

ಹಳೆಯ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್‌ನಂತೆಯೇ, ಇದು ಸಂಪೂರ್ಣವಾಗಿ ಪರಿಷ್ಕೃತವಾಗಿಲ್ಲ. ಅದರ ಮೇಲೆ ಕಂಪನಗಳು (ವೈಬ್ರೇಷನ್) ಸ್ಪಷ್ಟವಾಗಿ ಕಂಡುಬರುವುದಾಗಿ ಮಾಲೀಕ ಹೇಳುತ್ತಾರೆ. ಇತರ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್‌ಗಳಂತೆ, ಟಾರಸ್ 350-ಸಿಸಿ ಎಂಜಿನ್ ಅನ್ನು ಹೊಂದಿಲ್ಲ. ಬದಲಿಗೆ ಇದು 325 ಸಿಸಿ, ಗ್ರೀವ್ಸ್ ಲೊಂಬಾರ್ಡಿನಿ ಫೋರ್-ಸ್ಟ್ರೋಕ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಅನೇಕ ಜನರು ಈ ಮೋಟಾರ್ಸೈಕಲ್ ಅನ್ನು ಖರೀದಿಸಲು ಒಂದು ಕಾರಣವೆಂದರೆ ಅದರ ದಕ್ಷತೆ.

ಫುಲ್ ಟ್ಯಾಂಕ್‌ನಲ್ಲಿ ಬರೋಬ್ಬರಿ 900 ಕಿ.ಮೀ ಓಡುವ ರಾಯಲ್ ಎನ್‌ಫೀಲ್ಡ್ ಡೀಸಲ್ ಬೈಕ್

ಸಾಮಾನ್ಯ ಬುಲೆಟ್ ನಿಮಗೆ ಸುಮಾರು 30 kmpl ಮೈಲೇಜ್ ಅನ್ನು ನೀಡುತ್ತವೆ. ಆದರೆ, ಈ ಡೀಸೆಲ್ ಬುಲೆಟ್ ಅಥವಾ ಟಾರಸ್ 60 ರಿಂದ 70 kmpl ನಡುವೆ ಮೈಲೇಜ್ ನೀಡುತ್ತವೆ. ಇದರರ್ಥ ಒಮ್ಮೆ ಟ್ಯಾಂಕ್‌ನಲ್ಲಿ ಪೂರ್ಣ ಡೀಸೆಲ್ ತುಂಬಿದರೆ ಮೋಟಾರ್ ಸೈಕಲ್ 900 ಕಿ.ಮೀ ಮೈಲೇಜ್ ನೀಡಬಹುದು. ಈ ಮೋಟಾರ್‌ಸೈಕಲ್ ಹೀರೋ ಹೋಂಡಾ ಸ್ಪ್ಲೆಂಡರ್‌ಗಿಂತಲೂ ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿದೆ ಎಂದು ಮಾಲೀಕ ಹೇಳಿಕೊಂಡಿದ್ದಾರೆ.

325-cc ಎಂಜಿನ್ ಸುಮಾರು 6.9 Bhp ಅನ್ನು ಮಾತ್ರ ಉತ್ಪಾದಿಸಿತ್ತದೆ, ಈ ಪವರ್ ಈ ಗಾತ್ರದ ಮೋಟಾರ್‌ಸೈಕಲ್‌ಗೆ ತುಂಬಾ ಕಡಿಮೆಯಾಗಿದೆ. ಇದು ಇಂದಿಗಲ್ಲ ಆ ಕಾಲದಲ್ಲೂ ವೇಗದ ಮೋಟಾರ್‌ಸೈಕಲ್ ಆಗಿರಲಿಲ್ಲ, ಆದರೆ ತನ್ನ ಮೈಲೇಜ್ ಮೂಲಕ ಬೆಡಿಕೆಯನ್ನು ಪಡೆದಿತ್ತು. ಅನೇಕ ಪ್ರದೇಶಗಳಲ್ಲಿ, ಈ ಮೋಟಾರ್ಸೈಕಲ್ ಅನ್ನು ಕೃಷಿ ಉಪಕರಣವಾಗಿಯೂ ಬಳಸಲಾಗುತ್ತಿತ್ತು. ಜನರು ಮೋಟಾರ್‌ಸೈಕಲ್‌ನ ಎಂಜಿನ್ ಕವರ್ ತೆಗೆದುಹಾಕುವ ಮೂಲಕ ಫ್ಲೈವೀಲ್‌ಗೆ ಬೆಲ್ಟ್ ಅನ್ನು ಸಂಪರ್ಕಿಸುತ್ತಿದ್ದರು.

ಫುಲ್ ಟ್ಯಾಂಕ್‌ನಲ್ಲಿ ಬರೋಬ್ಬರಿ 900 ಕಿ.ಮೀ ಓಡುವ ರಾಯಲ್ ಎನ್‌ಫೀಲ್ಡ್ ಡೀಸಲ್ ಬೈಕ್

ನಂತರ ಕೃಷಿ ಜಮೀನುಗಳಿಗೆ ನೀರನ್ನು ಪಂಪ್ ಮಾಡಲು ಬಳಸಲಾಗುತ್ತಿತ್ತು. ಈ ಇಂಜಿನ್ ಅತ್ಯಂತ ದಕ್ಷತೆ ಹೊಂದಿದ್ದರಿಂದ ಜನರು ಇಂಧನ ಖಾಲಿಯಾಗುವ ಬಗ್ಗೆ ಚಿಂತಿಸುತ್ತಿರಲಿಲ್ಲ. ಈ ಮೋಟಾರ್‌ಸೈಕಲ್‌ಗೆ ಆ ಕಾಲದಲ್ಲಿ ಸುಮಾರು 72,000 ರೂಪಾಯಿಗಳ ಬೆಲೆ ಇತ್ತು. ಆ ಕಾಲಕ್ಕೆ ಇದು ತುಂಬಾ ದುಬಾರಿಯಾಗಿತ್ತು ಎಂದು ಕೂಡ ಹೇಳಲಾಗುತ್ತಿದೆ. ಪೆಟ್ರೋಲ್ ಚಾಲಿತ ಬುಲೆಟ್‌ಗೆ ಹೋಲಿಸಿದರೆ ಈ ಮೋಟಾರ್‌ಸೈಕಲ್ ಗ್ರಾಹಕರಲ್ಲಿ ಹೆಚ್ಚು ಜನಪ್ರಿಯವಾಗದಿರಲು ಇದು ಒಂದು ಕಾರಣವಾಗಿರಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Monday, February 27, 2023, 10:26 [IST]
English summary
A royal enfield diesel bike that runs 900 km on a full tank
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+