Acer: ಎಲೆಕ್ಟ್ರಾನಿಕ್ಸ್ ದೈತ್ಯ 'ಏಸರ್'ನಿಂದ ಮೊದಲ ಇ-ಸ್ಕೂಟರ್ ಅನಾವರಣ, ಭಾರತದ ಮಾರುಕಟ್ಟೆಯಲ್ಲಿ ಬಿರುಗಾಳಿ!
ತೈವಾನ್ ಮೂಲದ ಬಹುರಾಷ್ಟ್ರೀಯ ಸಂಸ್ಥೆ ಏಸರ್ (Acer), ಲಾಪ್ ಟ್ಯಾಪ್ ಸೇರಿದಂತೆ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಿಂದ ದೇಶ - ವಿದೇಶದಲ್ಲಿ ಭಾರೀ ಜನಪ್ರಿಯತೆಗಳಿಸಿದೆ. ಇದೀಗ, ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಭಾರತದ ಮಾರುಕಟ್ಟೆಯಲ್ಲಿ ಅನಾವರಣ ಮಾಡಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.
ಗ್ರೇಟರ್ ನೋಯ್ಡಾದಲ್ಲಿ ಗುರುವಾರ ನಡೆದ ಇವಿ ಇಂಡಿಯಾ ಎಕ್ಸ್‌ಪೋ (EV India Expo) 2023 ಸಮಾರಂಭದಲ್ಲಿ ಎಲೆಕ್ಟ್ರಾನಿಕ್ಸ್ ದೈತ್ಯ ಏಸರ್, ತನ್ನ ಪ್ರಥಮ ಎಲೆಕ್ಟ್ರಿಕ್ ಸ್ಕೂಟರ್ ಮೂವಿ-125-4ಜಿ ( MUVI-125-4G) ಪರಿಚಯಿಸಿದೆ. ಈ ಮೂಲಕ ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಗೆ ಅಧಿಕೃತವಾಗಿ ಪ್ರವೇಶ ಮಾಡಿದೆ.

ನೂತನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಏಸರ್ ಕಂಪನಿ, ದೇಶೀಯ ಎಲೆಕ್ಟ್ರಿಕ್ ಮೊಬಿಲಿಟಿ ಪ್ಲಾಟ್‌ಫಾರ್ಮ್ ಇಬೈಕ್‌ಗೊ (eBikeGo) ಸಹಯೋಗದಲ್ಲಿ ಅನಾವರಣ ಮಾಡಿದೆ. ಆ ಕಾರಣಕ್ಕೆ ಇಬೈಕ್‌ಗೊ ಕಂಪನಿ, ಮೂವಿ-125-4ಜಿ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಸುವ ಹೊಣೆಯನ್ನು ಹೊತ್ತಿದೆ. ಮುಂಬರುವ ದಿನಗಳಲ್ಲಿ ಏಸರ್ ಇ-ಬೈಕ್, ಇ-ಸ್ಕೂಟರ್ ಮತ್ತು ಇ-ಬೈಸಿಕಲ್ ಬಿಡುಗಡೆಗೊಳಿಸಲಿದೆ.
ಏಸರ್ ಮೂವಿ-125-4ಜಿ ಇ-ಸ್ಕೂಟರ್, ಸಂಚಾರ ದಟ್ಟಣೆಯಿರುವ ನಗರ ಪ್ರದೇಶದಲ್ಲಿ ಚಾಲನೆ ಮಾಡಲು ಹೆಚ್ಚು ಸೂಕ್ತವಾಗಿದ್ದು, ಹಗುರು ಚಾಸಿಸ್ ಅನ್ನು ಪಡೆದುಕೊಂಡಿದೆ. ಜೊತೆಗೆ 16 - ಇಂಚಿನ ವೀಲ್ಸ್ ಪಡೆಯುವ ಮೂಲಕ ಹೆಚ್ಚು ಅತ್ಯಾಧುನಿಕವಾಗಿದೆ. ಇದು, ದೇಶೀಯ ಮಾರುಕಟ್ಟೆಯಲ್ಲಿ ಈ ಸ್ಕೂಟರ್ ಬಿಡುಗಡೆಯಾದ ಮೇಲೆ ಹೆಚ್ಚು ಜನರನ್ನು ಖರೀದಿಸುವಂತೆ ಪ್ರೇರಿಪಿಸಬಹುದು.
ಹೊಸ ಎಲೆಕ್ಟ್ರಿಕ್ ಸ್ಕೂಟರ್, ಸಸ್ಪೆನ್ಸನ್ ಸೆಟಪ್ ಬಗ್ಗೆ ಮಾತನಾಡುವುದಾದರೆ, ಫ್ರಂಟ್ ಹೈಡ್ರಾಲಿಕ್ ಫೋರ್ಕ್, ರೇರ್ ಶಾಕ್ ಅಬ್ಸಾರ್ಬರ್ ಸೆಟಪ್ ಒಳಗೊಂಡಿದೆ. ಈ ಏಸರ್ ಮೂವಿ-125-4ಜಿ ಇ-ಸ್ಕೂಟರ್ ವಿಶೇಷವಾಗಿ ಬದಲಾಯಿಸಬಹುದಾದ ಬ್ಯಾಟರಿ (swappable batteri) ಆಯ್ಕೆಯನ್ನು ಹೊಂದಿದೆ. ಇದರಿಂದ ಸವಾರರು ಎಲ್ಲಿ ಬೇಕಾದರೂ ಸುಲಭವಾಗಿ ಚಾರ್ಜ್ ಮಾಡಬಹುದು. ಕೆಲವೇ ಸೆಕೆಂಡುಗಳಲ್ಲಿ ಬ್ಯಾಟರಿ ಬದಲಾವಣೆ ಮಾಡಬಹುದು.
ಏಸರ್ ಮೂವಿ-125-4ಜಿ ಇ-ಸ್ಕೂಟರ್ 48V 35.2Ah ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಂಪೂರ್ಣ ಚಾರ್ಜಿನಲ್ಲಿ 80 ಕಿಲೋಮೀಟರ್ ರೇಂಜ್ ನೀಡುತ್ತದೆ. 75 kmph ಟಾಪ್ ಸ್ವೀಡ್ ಹೊಂದಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಮನೆಯ ವಿದ್ಯುತ್ ಬಳಕೆಯಲ್ಲಿ ಇದರ ಬ್ಯಾಟರಿ ಪ್ಯಾಕ್, ಕೆಲವೇ ನಾಲ್ಕು ಗಂಟೆಯಲ್ಲಿ ಚಾರ್ಜ್ ಆಗುತ್ತದೆ.
ಮೊದಲೇ ಏಸರ್ ತಂತ್ರಜ್ಜಾನ ಆಧಾರಿತ ಕಂಪನಿಯಾಗಿದ್ದು, ಅದರ ಮೂವಿ-125-4ಜಿ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಗ್ರಾಹಕರಲ್ಲಿ ಸಾಕಷ್ಟು ನೀರಿಕ್ಷೆಗಳಿವೆ. ಈ ಸ್ಕೂಟರ್, ಭರಪೂರ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಈಗ ಒಂದೆರಡು ಫೀಚರ್ಸ್ ಬಗ್ಗೆ ಕಂಪನಿ ಮಾಹಿತಿ ಬಹಿರಂಗಪಡಿಸಿದೆ. ಅವು ಯಾವುದೆಂದು ನೋಡುವುದಾದರೆ, ಮೂವಿ-125-4ಜಿ ಇ-ಸ್ಕೂಟರ್ ಬ್ಲೂಟೂತ್ ಸಂಪರ್ಕಿತ 4-ಇಂಚಿನ LCD ಡಿಸ್ಪ್ಲೇಯನ್ನು ಹೊಂದಿದೆ.
ಇನ್ನು, ಏಸರ್ ಕಂಪನಿ ನೂತನ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಹಾಗೂ ಬಿಡುಗಡೆ ದಿನಾಂಕದ ಬಗ್ಗೆ ಯಾವುದೇ ವಿವರವನ್ನು ಬಹಿರಂಗಪಡಿಸಿಲ್ಲ. ಕಡಿಮೆ ರೇಂಜ್ ನೀಡುವ ಹಿನ್ನೆಲೆ, ಕೊಂಚ ಕಡಿಮೆ ದರವನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಮುಂಬರುವ ದಿನಗಳಲ್ಲಿ ಏಸರ್, ಹೊಸ ದ್ವಿಚಕ್ರ ವಾಹನ ಬಿಡುಗಡೆಯೊಂದಿಗೆ ದೇಶೀಯ ಮಾರುಕಟ್ಟೆಯಲ್ಲಿ ಅಬ್ಬರಿಸುವುದು ಶತಸಿದ್ದ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








