Auto Expo 2023: ಆಕರ್ಷಕ ಟಿವಿಎಸ್ iQube ST ಎಲೆಕ್ಟ್ರಿಕ್ ಸ್ಕೂಟರ್‌ ಪ್ರದರ್ಶನ: ಕೈಗೆಟುಕುವ ಬೆಲೆಯಲ್ಲಿ ಇರುತ್ತೆ!

ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಸಾಕಷ್ಟು ಜನಪ್ರಿಯತೆಯನ್ನು ಗಳಿಸುತ್ತಿದ್ದು, ಗ್ರಾಹಕರು ಸಹ ಇಂತಹ ಬೈಕ್ ಹಾಗೂ ಸ್ಕೂಟರ್‌ಗಳನ್ನು ಇಷ್ಟಪಟ್ಟು ಖರೀದಿಸುತ್ತಾರೆ. ಅಂತಹವರಿಗಾಗಿ ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ದೇಶದ ಪ್ರಮುಖ ಕಂಪನಿಗಳಲ್ಲಿ ಒಂದಾದ ಟಿವಿಎಸ್ 'iQube ST' ಇ-ಸ್ಕೂಟರ್ ಅನ್ನು ಪ್ರದರ್ಶಿಸಿದೆ.

ತಮಿಳುನಾಡು ಮೂಲದ ಟಿವಿಎಸ್ iQube ST ಮಾದರಿಯನ್ನು ಅನಾವರಣ ಮಾಡಿದ್ದು, ಇದು TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು ವಾಯ್ಸ್ ಅಸಿಸ್ಟೆಂಟ್ ಅಂತಹ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿದ್ದು, ಈ ಹೊಸ iQube ST ಇ-ಸ್ಕೂಟರ್ ಹಿಂದಿನ ಮಾದರಿಗೆ ಹೋಲಿಸಿದರೆ ಹೆಚ್ಚಾಗಿ ಬದಲಾಗಿಲ್ಲ. ಆಕರ್ಷಕ ಡ್ಯಾಶ್‌ ಬೋರ್ಡ್ ಹೊಂದಿದ್ದು, ಜೊತೆಗೆ ಸಿಂಗಲ್-ಪೀಸ್ ಸೀಟ್ ಮತ್ತು ಗ್ರ್ಯಾಬ್ ರೈಲ್ ಅನ್ನು ಪಡೆದುಕೊಂಡಿದೆ. ಆಧುನಿಕ ಫೀಚರ್ಸ್ ಹೊಂದಿರವ ಈ ಎಲೆಕ್ಟ್ರಿಕ್ ಸ್ಕೂಟರ್‌ ಅನ್ನು ಖರೀದಿದಾರರು ಲೈಕ್ ಮಾಡಬಹುದು.

Auto Expo 2023: ಆಕರ್ಷಕ ಟಿವಿಎಸ್ iQube ST ಎಲೆಕ್ಟ್ರಿಕ್ ಸ್ಕೂಟರ್‌

ಟಿವಿಎಸ್ iQube ST, 4.56 kWh Li-ion (ಲಿಥಿಯಂ-ಐಯಾನ್) ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇದು ಪವರ್ ಮೋಡ್‌ನಲ್ಲಿ 110 ಕಿಮೀ ಮತ್ತು ನಾರ್ಮಲ್ ಮೋಡ್‌ನಲ್ಲಿ 145 ಕಿಮೀ ರೈಡಿಂಗ್ ರೇಂಜ್ ನೀಡುತ್ತದೆ. 82 kmph ಟಾಪ್ ಸ್ವೀಡ್ ಹೊಂದಿದ್ದು, 4 bhp ಪವರ್ ಉತ್ಪಾದಿಸುವ ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿದ್ದು, 33 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 950W ಚಾರ್ಜರ್‌ನಲ್ಲಿ ನಾಲ್ಕು ಗಂಟೆಗಳಲ್ಲಿ ಬ್ಯಾಟರಿ ಫುಲ್ ಆಗುತ್ತದೆ. ಜೊತೆಗೆ 1500-ವ್ಯಾಟ್ ಚಾರ್ಜರ್‌ನೊಂದಿಗೆ ಎರಡೂವರೆ ಗಂಟೆಗಳಲ್ಲಿ ಚಾರ್ಜ್ ಆಗುತ್ತದೆ.

ಭಾರತೀಯ ಮಾರುಕಟ್ಟೆಯಲ್ಲಿ ಎಥರ್ 450X, ಓಲಾ S1 ಪ್ರೊ ಮತ್ತು ಇತರೇ ಸ್ಕೂಟರ್‌ಗಳಿಗೆ iQube ST ಭಾರೀ ಪೈಪೋಟಿ ನೀಡಲಿದೆ. ಇದು 7-ಇಂಚಿನ ಟಚ್‌ಸ್ಕ್ರೀನ್ ಕನ್ಸೋಲ್, ಬ್ಲೂಟೂತ್ ಕನೆಕ್ಟಿವಿಟಿ, ನ್ಯಾವಿಗೇಷನ್, ರೈಡ್ ಮೋಡ್‌ಗಳು, ಕಾಲ್ ಅಲರ್ಟ್‌ಗಳು, ಮ್ಯೂಸಿಕ್ ಕಂಟ್ರೋಲ್, ಕೀಲೆಸ್ ಇಗ್ನಿಷನ್, ಕ್ರೂಸ್ ಕಂಟ್ರೋಲ್ ಮತ್ತು ಎರಡು ಹೆಲ್ಮೆಟ್‌ಗಳನ್ನು ಇಡಲು ದೊಡ್ಡ ಸ್ಟೋರೇಜ್ ಅನ್ನು ಹೊಂದಿದ್ದು, ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ ಎಂದು ಹೇಳಬಹುದು.

Auto Expo 2023: ಆಕರ್ಷಕ ಟಿವಿಎಸ್ iQube ST ಎಲೆಕ್ಟ್ರಿಕ್ ಸ್ಕೂಟರ್‌

ನೂತನ ಟಿವಿಎಸ್ iQube ST, ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳು ಮತ್ತು ಡ್ಯುಯಲ್ ರಿಯರ್ ಶಾಕ್‌ ಅನ್ನು ಹೊಂದಿದ್ದು, ಈ ಸ್ಕೂಟರ್‌ ಬ್ರೇಕಿಂಗ್ ಬಗ್ಗೆ ಹೇಳುವುದಾದರೆ, ಫ್ರಂಟ್ ಡಿಸ್ಕ್ ಮತ್ತು ರೇರ್ ಡ್ರಮ್ ಬ್ರೇಕ್ ಸೆಟಪ್ ಹೊಂದಿದೆ. ಇದು ಸುತ್ತಲೂ ಎಲ್ಇಡಿ ಲೈಟಿಂಗ್ ವ್ಯವಸ್ಥೆಯನ್ನು ಪಡೆದುಕೊಂಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್, ಫ್ರಂಟ್ ಮತ್ತು ರೇರ್ 90/90 ಟೈರ್‌ಗಳಲ್ಲಿ 12 - ಇಂಚಿನ ಅಲಾಯ್ ವೀಲ್ಸ್ ಗಳನ್ನು ಹೊಂದಿದೆ.

ಟಿವಿಎಸ್ iQube ST ವೈಶಿಷ್ಟ್ಯಗಳ ಹೇಳುವುದಾದರೆ, TFT ಕನ್ಸೋಲ್‌, ಬ್ಲೂಟೂತ್ ಕನೆಕ್ಟ್, USB ಚಾರ್ಜಿಂಗ್ ಪೋರ್ಟ್, ಜಿಯೋ-ಫೆನ್ಸಿಂಗ್, ಕಳ್ಳತನದ ಎಚ್ಚರಿಕೆ (Theft alert), ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ರೈಡ್ ಮೋಡ್‌ಗಳು, ಕಾಲ್ ಅಲರ್ಟ್, ಮ್ಯೂಸಿಕ್ ಕಂಟ್ರೋಲ್, ಪಾರ್ಕ್ ಅಸಿಸ್ಟ್ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಈ ಸ್ಕೂಟರ್‌ ಹೊಂದಿದ್ದು, ಗ್ರಾಹಕರಿಗೆ ಈ ಫೀಚರ್ಸ್ ಖಂಡಿತ ಇಷ್ಟವಾಗಲಿದ್ದು, ಮಾರುಕಟ್ಟೆಗೆ ಬಂದ ಮೇಲೆ ಹೆಚ್ಚಾಗಿ ಈ ಸ್ಕೂಟರ್‌ನ್ನು ಖರೀದಿಸಬಹುದು ಎಂದು ಹೇಳಬಹುದು.

Auto Expo 2023: ಆಕರ್ಷಕ ಟಿವಿಎಸ್ iQube ST ಎಲೆಕ್ಟ್ರಿಕ್ ಸ್ಕೂಟರ್‌

ಟಿವಿಎಸ್ iQube ಶ್ರೇಣಿಯು ಸ್ಟ್ಯಾಂಡರ್ಡ್, S ಮತ್ತು ST ರೂಪಾಂತರಗಳಲ್ಲಿ ಲಭ್ಯವಿದೆ. ಅದರಲ್ಲಿ ST ಟಾಪ್ ಎಂಡ್ ಮಾದರಿಯಾಗಿದ್ದು, ಇದು ದೊಡ್ಡ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಒಂದೇ ಚಾರ್ಜ್‌ನಲ್ಲಿ ಹೆಚ್ಚಿನ ರೈಡಿಂಗ್ ರೇಂಜ್ ಹೊಂದಿದೆ. ಇತ್ತೀಚಿನ ದಿನಗಳಲ್ಲಿ iQubeನ ಮಾರಾಟ ಸಂಖ್ಯೆ ಸತತವಾಗಿ ಏರುತ್ತಿದ್ದು, ಕಂಪನಿಯು ಮತ್ತಷ್ಟು ಹೊಸ ಇವಿಗಳನ್ನು ಪರಿಚಯಿಸಬಹುದು. ಅಲ್ಲದೆ, ಟಿವಿಎಸ್ iQube ST ಬೆಲೆಯನ್ನು ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯವಿದ್ದು, ಅದು ಗ್ರಾಹಕರ ಕೈಗೆಟುಕುವಂತೆ ಇರಲಿದೆ ಎಂದು ಅಂದಾಜಿಸಲಾಗಿದೆ.

ಸದ್ಯ ಭಾರತದಲ್ಲಿ ಟಿವಿಎಸ್ iQube ಎಲೆಕ್ಟ್ರಿಕ್ ಸ್ಕೂಟರ್, 2 ರೂಪಾಂತರಗಳು ಮತ್ತು 7 ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಸ್ಟ್ಯಾಂಡರ್ಡ್ ರೂಪಾಂತರದ ಆರಂಭಿಕ ಬೆಲೆ ರೂ.1,06,568 ಇದ್ದು, S ರೂಪಾಂತರದ ಬೆಲೆ ರೂ.1,08,331. ಇದೆ. ಈ ಮಾದರಿಗಳು ಸುಮಾರು ಐದು ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗಲಿದ್ದು, 75 ಕಿ.ಮೀ ರೇಂಜ್ ನೀಡಲಿವೆ. ಎಕೋ ಮೋಡ್‌ನಲ್ಲಿ 40kmph ಮತ್ತು ಸ್ಪೋರ್ಟ್ ಮೋಡ್‌ನಲ್ಲಿ 78kmph ಟಾಪ್ ಸ್ವೀಡ್ ಹೊಂದಬಹುದು.

Most Read Articles

Kannada
English summary
Auto expo 2023 tvs iqube st electric scooter showcased details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X