ಯುವಕರ ಫೆವರೇಟ್.. Bajaj ಅವೆಂಜರ್ 220 ಸ್ಟ್ರೀಟ್ ಬೈಕ್ ಕೈಗೆಟುಕುವ ಬೆಲೆಯಲ್ಲಿ ರೀ- ಲಾಂಚ್

ಭಾರತದಲ್ಲಿ ಕೆಲವು ವರ್ಷಗಳ ಹಿಂದೆ ನಿಮ್ಮ ನೆಚ್ಚಿನ ಬೈಕ್ ಯಾವುದೆಂದು ಕೇಳಿದರೆ ತಕ್ಷಣ ಬರುತ್ತಿದ್ದ ಒಂದೇ ಉತ್ತರ 'ಬಜಾಜ್ ಅವೆಂಜರ್ 220 ಸ್ಟ್ರೀಟ್' ಎಂದು. ಅಷ್ಟರ ಮಟ್ಟಿಗೆ ಜನಪ್ರಿಯತೆ ಗಳಿಸಿತ್ತು. ಆದರೆ, ಕೆಲವೊಂದು ಕಾರಣಗಳಿಗೆ ಇದರ ಉತ್ಪಾದನೆ ಸ್ಥಗಿತಗೊಳಿಸಲಾಯಿತು. ಇದೀಗ, ಕಂಪನಿ ಮತ್ತೆ ರೀ- ಲಾಂಚ್ ಮಾಡಿದೆ.

ದೇಶದಲ್ಲಿ ಬಜಾಜ್ (Bajaj), ಅವೆಂಜರ್ 220 ಸ್ಟ್ರೀಟ್ ಬೈಕ್‌ನ್ನು ರೂ.1.42 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಮರು ಬಿಡುಗಡೆಗೊಳಿಸಿದೆ. ಇದನ್ನು ಅವೆಂಜರ್ ಮೋಟಾರ್‌ಸೈಕಲ್‌ ಸರಣಿಯ 220 ಕ್ರೂಸರ್ ಹಾಗೂ 160 ಸ್ಟ್ರೀಟ್ ಜೊತೆಯಲ್ಲಿ ಮಾರಾಟ ಮಾಡಲಾಗುತ್ತದೆ. ಈ ಮೂಲಕ ಕಂಪನಿ ತನ್ನ ಸೇಲ್ ವೃದ್ಧಿಸಿಕೊಂಡು, ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಬೆಳವಣಿಗೆ ಸಾಧಿಸಲು ಪ್ರಯತ್ನಿಸುತ್ತಿದೆ.

ಯುವಕರ ಫೆವರೇಟ್.. Bajaj ಅವೆಂಜರ್ 220 ಸ್ಟ್ರೀಟ್ ಬೈಕ್ ಕೈಗೆಟುಕುವ ಬೆಲೆಯಲ್ಲಿ ರೀ- ಲಾಂಚ್

ಮಾರಾಟದಲ್ಲಿ ತೀವ್ರ ಹಿನ್ನೆಡೆ ಅನುಭವಿಸಿದ ಕಾರಣ, ಬಜಾಜ್ ಕಂಪನಿ ಅವೆಂಜರ್ 220 ಸ್ಟ್ರೀಟ್ ಮೋಟಾರ್‌ಸೈಕಲ್ ತಯಾರಿಕೆಯನ್ನು 2020ರಲ್ಲಿ ನಿಲ್ಲಿಸಿತ್ತು. ಸದ್ಯ, ರೀ-ಲಾಂಚ್ ಆಗಿರುವ ಈ ಬೈಕ್ ಎಂಜಿನ್ ಅನ್ನು ದೇಶಾದ್ಯಂತ ಏಪ್ರಿಲ್ 1 ರಿಂದ ಜಾರಿಯಾಗಿರುವ BS6 ಹಂತ 2 ಎಮಿಷನ್ ಮಾನದಂಡಗಳು ಹಾಗೂ E20 ಫ್ಯುಯೆಲ್ (80 ಪೆಟ್ರೋಲ್ 20 ಎಥನಾಲ್)ಗೆ ಸಪೋರ್ಟ್ ಮಾಡುವುದಂತೆ ಮೇಲ್ದರ್ಜೆಗೆ ಏರಿಸಲಾಗಿದೆ.

ನವೀಕರಿಸಿರುವ ಬಜಾಜ್ ಅವೆಂಜರ್ 220 ಸ್ಟ್ರೀಟ್ ಬೈಕ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು 220 ಸಿಸಿ ಸಿಂಗಲ್ ಸಿಲಿಂಡರ್ ಆಯಿಲ್ ಕೋಲ್ಡ್ ಎಂಜಿನ್ ಹೊಂದಿದೆ. 19 bhp ಗರಿಷ್ಠ ಪವರ್ ಹಾಗೂ 17.55 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದ್ದು, 5 ಸ್ವೀಡ್ ಟ್ರಾನ್ಸ್ಮಿಷನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಈ ಬೈಕ್ ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದನ್ನು ನೋಡುವುದಾದರೆ, ಇದು ಆಕರ್ಷಕ ಹೆಡ್‌ಲೈಟ್ ಕೌಲ್, ಹ್ಯಾಂಡಲ್‌ಬಾರ್ ಹಾಗೂ ಗ್ರಾಬ್ ರೈಲ್‌ನ್ನು ಹೊಂದಿದೆ. ಜೊತೆಗೆ ಅತ್ಯಾಧುನಿಕ ಅಂಬರ್ ಬ್ಯಾಕ್‌ಲಿಟ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಪಡೆದಿದೆ. 13 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಮತ್ತು 169 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ.

ಬಜಾಜ್ ಅವೆಂಜರ್ 220 ಸ್ಟ್ರೀಟ್ ಬೈಕ್ ಬ್ರೇಕಿಂಗ್ ಸಿಸ್ಟಮ್ ಹಾಗೂ ಸಸ್ಪೆನ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್‌, ರೇರ್ 5 ಸ್ಟೇಜ್ ಅಡ್ಜಸ್ಟ್ಏಬಲ್ ಟ್ವಿನ್ ಶಾಕ್ ಅಬ್ಸಾರ್ಬರ್‌ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಬ್ರೇಕಿಂಗ್ ಸಿಸ್ಟಮ್ ವಿಚಾರಕ್ಕೆ ಬರುವುದಾದರೆ, ಸಿಂಗಲ್ ಚಾನೆಲ್ ABS, 280 ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್ ಅನ್ನು ಪಡೆದಿದೆ.

ಅವೆಂಜರ್ ಸರಣಿಯ ಇತರೆ ಬೈಕ್‌ಗಳ ಬಗ್ಗೆ ಒಂದಷ್ಟು ಹೇಳುವುದಾದರೆ, 220 ಕ್ರೂಸರ್ ರೂ.1.38 ಲಕ್ಷ ದರದಲ್ಲಿ ಖರೀದಿಗೆ ಲಭ್ಯವಿದೆ. ಇದು 220 ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿದ್ದು, 19.03 PS ಗರಿಷ್ಠ ಪವರ್ ಹಾಗೂ 17.55 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 40 kmpl ಮೈಲೇಜ್ ನೀಡಲಿದೆ. 160 ಸ್ಟ್ರೀಟ್ ಬೈಕ್ ರೂ.1.12 ಲಕ್ಷ ಬೆಲೆಯಲ್ಲಿ ಸಿಗಲಿದೆ.

ಒಟ್ಟಾರೆ, ಬಜಾಜ್ ಕಂಪನಿ ಅವೆಂಜರ್ 220 ಸ್ಟ್ರೀಟ್ ಬೈಕ್ ಅನ್ನು ಕೈಗೆಟುಕುವ ಬೆಲೆಯಲ್ಲಿ ಮರು ಬಿಡುಗಡೆ ಮಾಡುವುದರೊಂದಿಗೆ ತನ್ನ ಮಾರಾಟವನ್ನು ದ್ವಿಗುಣಗೊಳಿಸಲು ಪ್ರಯತ್ನಿಸುತ್ತಿದೆ. ಜೊತೆಗೆ ಇದರ ಎಂಜಿನ್ ಅನ್ನು ಅತ್ಯಾಧುನಿಕವಾಗಿ ನವೀಕರಿಸಿದ್ದು, ಹೆಚ್ಚಿನ ಯುವ ಗ್ರಾಹಕರನ್ನು ಸೆಳೆಯಲು ಸಾಧ್ಯವಾಗಲಿದೆ. ಮುಂಬರುವ ದಿನಗಳಲ್ಲಿ ಈ ಬೈಕ್ ಹೇಗೆ ಕಮಲ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

More from DriveSpark

Article Published On: Friday, May 12, 2023, 13:27 [IST]
English summary
Bajaj avenger 220 street relaunched details
Read more on ಬಜಾಜ್ bajaj
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+