ಬಜಾಜ್‌ನಿಂದ ಈ ಬೈಕ್‌ಗೆ ದೊಡ್ಡ ರಿಯಾಯಿತಿ ಘೋಷಣೆ
ದೇಶಾದ್ಯಂತ ಏಪ್ರಿಲ್ 1ರಿಂದ ಕಡ್ಡಾಯ RDE ಎಮಿಷನ್ ಮಾನದಂಡಗಳು ಜಾರಿಯಾಗಲಿದೆ. ಅದರ ಅನ್ವಯ ಎಂಜಿನ್‌ಗಳನ್ನು ನವೀಕರಿಸಬೇಕಿದ್ದು, ಪ್ರಮುಖ ವಾಹನ ತಯಾರಕ ಕಂಪನಿಗಳು ಹಳೆಯ ಸ್ಟಾಕ್ ಖಾಲಿ ಮಾಡಬೇಕಾಗಿದ್ದು, ನೂತನ ಗ್ರಾಹಕರನ್ನು ಆಕರ್ಷಿಸಲು ಭರ್ಜರಿ ರಿಯಾಯಿತಿಯನ್ನು ಘೋಷಿಸುತ್ತಿವೆ. ಅದರಲ್ಲಿ ಬಜಾಜ್ ಕೂಡ ಹಿಂದೆ ಬಿದ್ದಿಲ್ಲ. ಹೆಚ್ಚಿನ ಮಾಹಿತಿ ಇಲ್ಲಿದೆ.
ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಬಜಾಜ್ (Bajaj) ತನ್ನ ಡೊಮಿನಾರ್ 400 ಬೈಕ್ ಮೇಲೆ ದೊಡ್ಡ ಮಟ್ಟದ ರಿಯಾಯತಿಯನ್ನು ನೀಡುತ್ತಿದೆ. ಜೊತೆಗೆ ಮತ್ತಷ್ಟು ಖರೀದಿದಾರರನ್ನು ತನ್ನತ್ತ ಸೆಳೆಯಲು ಕಡಿಮೆ ಡೌನ್ ಪೇಮೆಂಟ್ ಯೋಜನೆಯನ್ನು ಪರಿಚಯಿಸಿದೆ. ಇದರ ಉದ್ದೇಶ BS6 ಎಂಜಿನ್ ಆಧಾರಿತ ಬೈಕ್‌ಗಳ ಉಳಿದಿರುವ ಸ್ಟಾಕ್ ಮಾರಾಟ ಮಾಡುವುದು ಹಾಗೂ ಯುವ ಖರೀದಿದಾರರನ್ನು ಸೆಳೆಯುವುದು ಆಗಿದೆ. ಈ ಡೊಮಿನಾರ್ 400 ಬೈಕ್ ಸಾಕಷ್ಟು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ.

ಬಜಾಜ್ ಕಂಪನಿ ತನ್ನ ಬಹುಬೇಡಿಕೆಯ ಡೊಮಿನಾರ್ 400 ಬೈಕ್ ಮೇಲೆ ಬರೋಬ್ಬರಿ ರೂ.25,000 ರಿಯಾಯಿತಿಯನ್ನು ಘೋಷಣೆ ಮಾಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಈ ಬೈಕ್ ಬೆಲೆ ರೂ.1,99,991 ಎಕ್ಸ್ ಶೋರೂಂ ದರವನ್ನು ಹೊಂದಿದ್ದು, ಇಷ್ಟು ದೊಡ್ಡ ಮಟ್ಟದ ಡಿಸ್ಕೌಂಟ್ ನಿಂದ ಕಂಪನಿಗೆ ಹಳೆಯ ಸ್ಟಾಕ್‌ನ್ನು ಸಂಪೂರ್ಣವಾಗಿ ಖಾಲಿ ಮಾಡಲು ಸಾಧ್ಯವಾಗಲಿದ್ದು, ತನ್ನ ಮಾರಾಟದಲ್ಲೂ ಉತ್ತಮ ಪ್ರಗತಿಯನ್ನು ಸಾಧಿಸಲು ನೆರವಾಗುತ್ತದೆ ಎಂದು ಹೇಳಬಹುದು. ಆ ಬಗ್ಗೆ ಮುಂಬರುವ ದಿನಗಳಲ್ಲಿ ತಿಳಿಯಲಿದೆ.
ಬಜಾಜ್ ಡೊಮಿನಾರ್ 400 ಬೈಕ್‌ಗೆ ಬಗ್ಗೆ ಮಾತನಾಡುವುದಾದರೆ, ಇದು ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿದ್ದು, ಭಾರತದ ಮಾರುಕಟ್ಟೆಗೆ 2016 ರಲ್ಲಿ ರೂ.1.36 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಬಿಡುಗಡೆಯಾಗಿತ್ತು. ವರ್ಷಗಳು ಕಳೆದಂತೆ ಬಜಾಜ್ ಕಂಪನಿ ಈ ಬೈಕ್ ಬೆಲೆಯನ್ನು ಪರಿಷ್ಕರಿಸುತ್ತಲೇ ಬಂದಿದ್ದು, ಹಲವು ಬಾರಿ ದರ ಹೆಚ್ಚಳವಾಗಿದೆ. ಜೊತೆಗೆ ಕಾಲಕ್ಕೆ ತಕ್ಕಂತೆ ಈ ಬೈಕಿನ ವೈಶಿಷ್ಟ್ಯ ಹಾಗೂ ತಾಂತ್ರಿಕತೆಯನ್ನು ಕಂಪನಿ ನವೀಕರಿಸುತ್ತಲೇ ಬಂದಿದೆ ಎಂದು ಹೇಳಬಹುದು.
ಬಜಾಜ್ ಡೊಮಿನಾರ್ 400 ಬೈಕ್‌ನ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು 373 ಸಿಸಿ, ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೋಲ್ಡ್ DOHC ಎಂಜಿನ್ ಹೊಂದಿದ್ದು, 8,800rpm ನಲ್ಲಿ 39.4 bhp ಗರಿಷ್ಠ ಪವರ್ ಹಾಗೂ 6,500 rpmನಲ್ಲಿ 35 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. 6 ಸ್ಪೀಡ್ ಗೇರ್ ಬಾಕ್ಸ್ ಹಾಗೂ ಸ್ಲಿಪ್ಪರ್ ಕ್ಲಚ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಈ ನೂತನ ಡೊಮಿನಾರ್ 400 ಬೈಕ್‌ನ ಸಸ್ಪೆನ್ಷನ್ ಹಾಗೂ ಬ್ರೇಕಿಂಗ್ ವ್ಯವಸ್ಥೆಯನ್ನು ನೋಡುವುದಾದರೆ, ಇದು ಫ್ರಂಟ್ 43 ಎಂಎಂ USD ಫೋರ್ಕ್ ಹಾಗೂ ರೇರ್ 110 ಎಂಎಂ ಮೊನೊ-ಶಾಕ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಬ್ರೇಕಿಂಗ್ ವ್ಯವಸ್ಥೆಯು ಅತ್ಯುತ್ತಮವಾಗಿದ್ದು, ಫ್ರಂಟ್ 320 ಎಂಎಂ ಹಾಗೂ ರೇರ್ 230 ಎಂಎಂ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. ಜೊತೆಗೆ ಡುಯಲ್ ಚಾನೆಲ್ ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಪಡೆದುಕೊಂಡಿದೆ.
ಬಜಾಜ್ ಡೊಮಿನಾರ್ 400 ಬೈಕ್,13 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಹೊಂದಿದ್ದು, 29 kmpl ಮೈಲೇಜ್ ನೀಡಲಿದೆ. ಜೊತೆಗೆ 193 ಕೆಜಿ ತೂಕವಿದೆ. ಇದು ಎರಡು ಬಣ್ಣಗಳ ಆಯ್ಜೆಯಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಅರೋರಾ ಗ್ರೀನ್ ಮತ್ತು ವೈನ್ ಬ್ಲ್ಯಾಕ್. ಭಾರತದ ಮಾರುಕಟ್ಟೆಯಲ್ಲಿ ಈ ಬೈಕ್, ರಾಯಲ್ ಎನ್‌ಫೀಲ್ಡ್ ಹಿಮಾಲಯನ್, ಕೆಟಿಎಂ 250 ಡ್ಯೂಕ್ ಹಾಗೂ ಸುಜುಕಿ ಜಿಕ್ಸರ್ 250 ಬೈಕ್‌ಗಳಿಂದ ಭಾರೀ ಪೈಪೋಟಿಯನ್ನು ಎದುರಿಸಬೇಕಾಗಿದೆ.
ದೇಶೀಯ ಮಾರುಕಟ್ಟೆಯಲ್ಲಿ ಬಜಾಜ್ ಸರಣಿಯ ಪಲ್ಸರ್ ಬೈಕ್ ಗಳು ಭಾರೀ ಜನಪ್ರಿಯತೆಯನ್ನು ಗಳಿಸಿದ್ದು, ದೊಡ್ಡ ಮಟ್ಟದಲ್ಲಿ ಗ್ರಾಹಕರು ಖರೀದಿಸುತ್ತಿದ್ದಾರೆ. ಅದಕ್ಕೆ ಹೋಲಿಸಿದರೆ, ಡೊಮಿನಾರ್ 400 ಕೊಂಚ ಹಿಂದುಳಿದಿದೆ. ಇದರ ಮಾರಾಟ ಪ್ರಗತಿಯನ್ನು ಉತ್ತಮಪಡಿಸಲು ಜೊತೆಗೆ ಏಪ್ರಿಲ್ 1ರಿಂದ RDE ಎಮಿಷನ್ ಮಾನದಂಡಗಳು ಜಾರಿಯಾಗುತ್ತಿರುವುದರಿಂದ ಕಂಪನಿ ಹಳೆಯ ಸ್ಟಾಕ್ ಖಾಲಿ ಮಾಡಬೇಕಾಗಿದ್ದು, ಅದಕ್ಕಾಗಿ ಭರ್ಜರಿ ರಿಯಾಯಿತಿ ನೀಡಿದೆ. ಗ್ರಾಹಕರಿಂದ ಯಾವ ಮಟ್ಟದಲ್ಲಿ ಪ್ರತಿಕ್ರಿಯೆ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications








