ಧೊಳೆಬ್ಬಿಸಲು ಬಿಡುಗಡೆಯಾಯ್ತು ಯುವಕರ ಹಾಟ್ ಫೆವರೇಟ್ 'ಬಜಾಜ್ ಪಲ್ಸರ್ NS200'

ದೇಶದ ಯುವಕರ ಹಾಟ್ ಫೆವರೇಟ್ ಬೈಕ್ ಯಾವುದೆಂದು ಕೇಳಿದರೆ, ತಕ್ಷಣ ಬರುವ ಒಂದೇ ಉತ್ತರ ಬಜಾಜ್ ಪಲ್ಸರ್.. ಅಷ್ಟರಮಟ್ಟಿಗೆ ಜನಪ್ರಿಯತೆಯನ್ನು ಗಳಿಸಿದೆ. ಈ ಬೈಕ್‌ನ ಆಕರ್ಷಕ ಲುಕ್ ಹಾಗೂ ವೈಶಿಷ್ಟ್ಯಗಳು ಪ್ರತಿಯೊಬ್ಬ ಗ್ರಾಹಕರನ್ನು ಸೆಳೆಯುತ್ತದೆ. ಇದೀಗ, 'ಬಜಾಜ್ ಪಲ್ಸರ್ NS200' ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ.

ಈ ಬೈಕ್‌ನ ಬೆಲೆ ಸೇರಿದಂತೆ ಇತರೆ ವೈಶಿಷ್ಟ್ಯಗಳ ಬಗ್ಗೆ ನೋಡುವುದಾದರೆ, ನವೀಕರಿಸಿದ 'ಬಜಾಜ್ ಪಲ್ಸರ್ NS200' ರೂ.1.47 ಲಕ್ಷ (ಎಕ್ಸ್ ಶೋರೂಂ) ದರದಲ್ಲಿ ಖರೀದಿಗೆ ಲಭ್ಯವಾಗಲಿದೆ. ಹಿಂದಿನ ಮಾದರಿಗೆ ಹೋಲಿಕೆ ಮಾಡಿದರೆ, ರೂ.7,000 ಹೆಚ್ಚಿನ ಬೆಲೆಯನ್ನು ಹೊಂದಿದೆ. ಅದಕ್ಕೆ ತಕ್ಕಂತೆ ಕೆಲವೊಂದು ಹೊಸ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಅತ್ಯಾಧುನಿಕ 33 ಎಂಎಂ USD ಪೋರ್ಕ್ಸ್, ಡ್ಯುಯಲ್-ಚಾನೆಲ್ ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಒಳಗೊಂಡಿದೆ.

ಧೊಳೆಬ್ಬಿಸಲು ಬಿಡುಗಡೆಯಾಯ್ತು ಯುವಕರ ಹಾಟ್ ಫೆವರೇಟ್ ಬಜಾಜ್ ಪಲ್ಸರ್ NS200

ಇವಷ್ಟೇ ಅಲ್ಲದೆ, ಹೊಸ ಬಜಾಜ್ ಪಲ್ಸರ್ NS200 ನವೀಕರಿಸಿದ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ ಹೊಂದಿದೆ. ಇದು DTE (ಡಿಸ್ಟೆನ್ಸ್ ಟು ಎಂಪ್ಟಿ), ನೈಜ ಸಮಯದ ಇಂಧನ ದಕ್ಷತೆ (real-time fuel efficiency), ಗೇರ್ ಪೊಜಿಷನ್ ಮಾಹಿತಿಯನ್ನು ತೋರಿಸುತ್ತದೆ. ಜೊತೆಗೆ ಹಿಂದಿನ ಮಾದರಿಗೆ ಹೋಲಿಕೆ ಮಾಡಿದರೆ 1.5 kg (ಒಟ್ಟು 158 kg) ಕಡಿಮೆ ತೂಕವನ್ನು ಹೊಂದಿದೆ.

'ಬಜಾಜ್ ಪಲ್ಸರ್ NS200' ಎಂಜಿನ್ ಅನ್ನು ಮುಂಬರಲಿರುವ ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸಲಾಗಿದೆ. ಇದು 199.5 ಸಿಸಿ ಸಾಮರ್ಥ್ಯದ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೋಲ್ಡ್ ಎಂಜಿನ್ ಹೊಂದಿದ್ದು, 24 bhp ಗರಿಷ್ಠ ಪವರ್ ಹಾಗೂ 14.6 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 6 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಖರೀದಿಗೆ ಗ್ರಾಹಕರಿಗೆ ಲಭ್ಯವಾಗಲಿದೆ.

ಧೊಳೆಬ್ಬಿಸಲು ಬಿಡುಗಡೆಯಾಯ್ತು ಯುವಕರ ಹಾಟ್ ಫೆವರೇಟ್ ಬಜಾಜ್ ಪಲ್ಸರ್ NS200

ಈ ಬೈಕಿನ ಟೈಯರ್ಸ್ ಹಾಗೂ ಬ್ರೇಕಿಂಗ್ ವ್ಯವಸ್ಥೆ ಬಗ್ಗೆ ಹೇಳುವುದಾದರೆ, ಇದು 17 ಇಂಚಿನ ಅಲಾಯ್ ವೀಲ್ಸ್ ಹೊಂದಿದೆ. ಫ್ರಂಟ್ 100/80, ರೇರ್ 130/70 ಅಳತೆಯ ಟೈಯರ್ಸ್ ಪಡೆದಿದೆ. ಅಲ್ಲದೆ, ಫ್ರಂಟ್ 300 ಎಂಎಂ ಹಾಗೂ ರೇರ್ 230 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಜೊತೆಗೆ ಬಹುತೇಕ ಹಿಂದಿನ ಮಾದರಿ ಹೊಂದಿರುವ ವೈಶಿಷ್ಟ್ಯವನ್ನುಒಳಗೊಂಡಿದೆ ಎಂದು ಹೇಳಬಹುದು.

ನೂತನ ಬಜಾಜ್ ಪಲ್ಸರ್ NS200 ಸುತ್ತಳತೆಯ ಬಗ್ಗೆ ಮಾತನಾಡುವುದಾದರೆ, ಇದು 2,017 ಎಂಎಂ ಉದ್ದ, 804 ಎಂಎಂ ಅಗಲ, 1,075 ಎಂಎಂ ಎತ್ತರ ಹಾಗೂ 1,363 ಎಂಎಂ ವ್ಹೀಲ್‌ಬೇಸ್ ಅನ್ನು ಪಡೆದಿದೆ. ಜೊತೆಗೆ ಉತ್ತಮ ಇಂಧನ ದಕ್ಷತೆಯನ್ನು ಹೊಂದಿದ್ದು, 36 kmpl ಮೈಲೇಜ್ ನೀಡುವ ಸಾಮರ್ಥ್ಯವನ್ನು ಪಡೆದುಕೊಂಡಿರಲಿದೆ. ಮುಂಬರುವ ದಿನಗಳಲ್ಲಿ ಈ ಬೈಕ್ ಅನ್ನು ಹೆಚ್ಚಿನ ಯುವಕರು ಖರೀದಿಸಬಹುದು.

ಧೊಳೆಬ್ಬಿಸಲು ಬಿಡುಗಡೆಯಾಯ್ತು ಯುವಕರ ಹಾಟ್ ಫೆವರೇಟ್ ಬಜಾಜ್ ಪಲ್ಸರ್ NS200

ಬಜಾಜ್ ಕಂಪನಿ ಕೇವಲ 'ಪಲ್ಸರ್ NS200' ಬೈಕ್ ವೊಂದನ್ನೇ ಲಾಂಚ್ ಮಾಡಿಲ್ಲ. ಇದರೊಂದಿಗೆ USD ಪೋರ್ಕ್ಸ್, ಡ್ಯುಯಲ್-ಚಾನೆಲ್ ABS ಸೇರಿದಂತೆ ಭರಪೂರ ವೈಶಿಷ್ಟ್ಯಗಳೊಂದಿಗೆ ರೂ.1.35 ಲಕ್ಷ ಬೆಲೆಯಲ್ಲಿ 'ಪಲ್ಸರ್ NS160' ಬೈಕ್‌ನ್ನು ಬಿಡುಗಡೆ ಮಾಡಿದೆ. ಹಿಂದಿನ ಮಾದರಿಗೆ ಹೋಲಿಸಿದರೆ, ರೂ.10,000 ಹೆಚ್ಚಿನ ಬೆಲೆಯನ್ನು ಪಡೆದಿದೆ. 160.3 ಸಿಸಿ ಸಿಂಗಲ್-ಸಿಲಿಂಡರ್ ಎಂಜಿನ್ ಹೊಂದಿದೆ. 17 bhp ಪವರ್, 14.6 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 5-ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಖರೀದಿಗೆ ದೊರೆಯಲಿದೆ.

ಇನ್ನು, ಬಿಡುಗಡೆಯಾಗಿರುವ ಹೊಸ ಹೊಚ್ಚ ಪಲ್ಸರ್ NS200 ಬೈಕ್, ಅತ್ಯುತ್ತಮ ಕಾರ್ಯಕ್ಷಮತೆಯನ್ನು ಪಡೆದಿದ್ದು, ಹೆಚ್ಚಿನ ಗ್ರಾಹಕರಿಗೆ ಇಷ್ಟವಾಗಲಿದೆ. ಜೊತೆಗೆ USD ಪೋರ್ಕ್ಸ್, ಡ್ಯುಯಲ್ ಚಾನೆಲ್ ABS ಪಡೆದಿರುವುದರಿಂದ ಆಕರ್ಷಕವಾಗಿದೆ. ಎಂದು ಹೇಳಬಹುದು. ಬೆಲೆ ಕೊಂಚ ದುಬಾರಿಯಾಗಿದ್ದರೂ ಬಹುತೇಕ ಯುವಕರಿಗೆ ಪಲ್ಸರ್ ಬೈಕ್ ಮೇಲೆ ಕ್ರೇಜ್ ಹೆಚ್ಚಿರುವುದರಿಂದ ಖಂಡಿತ ಕೊಂಡುಕೊಳ್ಳುತ್ತಾರೆ ಇದರಲ್ಲಿ ಯಾವುದೇ ಎರಡು ಮಾತಿಲ್ಲ.

More from DriveSpark

Article Published On: Tuesday, March 14, 2023, 17:29 [IST]
English summary
Bajaj pulsar ns200 launched in india details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+