Ola: ಬೆಂಗಳೂರಿನಲ್ಲಿ ಡೀಲರ್‌ಶಿಪ್‌ ತಲುಪಿದ ಓಲಾ ಎಸ್1 ಎಕ್ಸ್, ವಿಶೇಷತೆಗಳೇನು?

ದೇಶದ ಪ್ರಮುಖ ಎಲೆಕ್ಟ್ರಿಲ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಓಲಾ ಎಲೆಕ್ಟ್ರಿಕ್ (Ola Electric) ಖ್ಯಾತಿಗಳಿಸಿದೆ. ಹಲವು ತಿಂಗಳಿಂದ ತನ್ನ ಸ್ಕೂಟರ್ ಮಾರಾಟದಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿದ್ದು, ಆಗಸ್ಟ್‌ನಲ್ಲಿ 'ಎಸ್1 ಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿತ್ತು.

ಇದೀಗ, ಬೆಂಗಳೂರಿನ ಇಂದಿರಾ ನಗರ (Bangalore Indiranagar) ಡೀಲರ್‌ಶಿಪ್‌ಗೆ ಈ ಸ್ಕೂಟರ್ ತಲುಪಿದ್ದು, ನೀವು ಅಲ್ಲಿಗೆ ಬೇಕಾದರೆ ತೆರಳಿ ಪರಿಶೀಲನೆ ನಡೆಸಬಹುದು. ಈ ಓಲಾ ಎಸ್1 ಎಕ್ಸ್ (Ola S1 X) ಎಲೆಕ್ಟ್ರಿಕ್ ಸ್ಕೂಟರ್, ಅತ್ಯಂತ ಕಡಿಮೆ ಬೆಲೆಗೆ ಖರೀದಿಗೆ ದೊರೆಯಲಿದ್ದು, ರೂ.1,09,999 ಎಕ್ಸ್ ಶೋರೂಂ ದರವನ್ನು ಹೊಂದಿದೆ.

Ola: ಬೆಂಗಳೂರಿನಲ್ಲಿ ಡೀಲರ್‌ಶಿಪ್‌ ತಲುಪಿದ ಓಲಾ ಎಸ್1 ಎಕ್ಸ್, ವಿಶೇಷತೆಗಳೇನು?

ಓಲಾ ಎಸ್1 ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್, 3 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 151 ಕಿಲೋಮೀಟರ್ ರೇಂಜ್ ನೀಡುತ್ತದೆ. ಆದರೆ, ರಸ್ತೆಯಲ್ಲಿ ಇದು ಬೇರೆಯಾಗಿದ್ದು, ಇಕೋ (Eco) ಮೋಡ್ ನಲ್ಲಿ 125 ಕಿಲೋಮೀಟರ್, ನಾರ್ಮಲ್ (Normal) ಮೋಡ್ ನಲ್ಲಿ 100 ಕಿಲೋಮೀಟರ್ ರೇಂಜ್ ಕೊಡುತ್ತದೆ.

ಈ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಪ್ಯಾಕ್, 500 kW ಮನೆ ವಿದ್ಯುತ್ ಬಳಕೆಯಲ್ಲಿ 7.4 ಗಂಟೆಯಲ್ಲಿ ಚಾರ್ಜ್ ಆಗುತ್ತದೆ. ಇದು ಹಬ್ ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್ ಹೊಂದಿದ್ದು, 2.7 kW ನಾರ್ಮಲ್ ಪವರ್ ಹಾಗೂ 6 kW ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 90 kmph ಟಾಪ್ ಸ್ವೀಡ್ ಒಳಗೊಂಡಿದೆ.

ಓಲಾ ಎಸ್1 ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಕೇವಲ 3.3 ಸೆಕೆಂಡುಗಳಲ್ಲಿ 0 - 40 kmph ಹಾಗೂ 5.5 ಸೆಕೆಂಡುಗಳಲ್ಲಿ 0 - 60 kmph ವೇಗವನ್ನು ಪಡೆಯಲಿದೆ. ವೈಶಿಷ್ಟ್ಯ ವಿಚಾರವಾಗಿ ಹೇಳುವುದಾದರೆ, 5-ಇಂಚಿನ LCD ಡಿಸ್ಪ್ಲೇ, LED ಲೈಟಿಂಗ್, ಸೈಡ್-ಸ್ಟ್ಯಾಂಡ್ ಅಲರ್ಟ್, ರಿವರ್ಸ್ ಮೋಡ್, ರಿಮೋಟ್ ಬೂಟ್ ಅನ್ಲಾಕ್, ನ್ಯಾವಿಗೇಷನ್, OTA ಅಪ್ಡೇಟ್, ಬ್ಲೂಟೂತ್ ಮತ್ತು ಜಿಪಿಎಸ್ ಕನೆಕ್ಟಿವಿಟಿಯನ್ನು ಹೊಂದಿದೆ.

ಈ ಸ್ಕೂಟರ್, ಸಸ್ಪೆನ್ಷನ್ ಸೆಟಪ್ ಬಗ್ಗೆ ಮಾತನಾಡುವುದಾದರೆ, ಮುಂಭಾಗ ಟೆಲಿಸ್ಕೋಪಿಕ್ ಪೋರ್ಕ್ಸ್, ಹಿಂಭಾಗ ಡ್ಯುಯಲ್ - ಶಾಕ್ ಅಬ್ಸಾರ್ಬರ್‌ ಅನ್ನು ಪಡೆದಿದೆ. ಎರಡು ತುದಿಯಲ್ಲಿ ಡ್ರಮ್ ಬ್ರೇಕ್‌ ಆಯ್ಕೆಯನ್ನು ಒಳಗೊಂಡಿದೆ. ಈ ಸ್ಕೂಟರ್ ಕಡಿಮೆ ಬೆಲೆಯನ್ನು ಹೊಂದಿರುವುದರಿಂದ ಅಲಾಯ್ ವೀಲ್ಸ್ ಪಡೆದಿಲ್ಲ. ಆದರೂ, ಕಾಂಬಿ-ಬ್ರೇಕಿಂಗ್ ಸಿಸ್ಟಮ್, ಸ್ಟಿಲ್ ವೀಲ್ ಒಳಗೊಂಡಿದೆ.

ಇನ್ನು, ಓಲಾ ಮಾರಾಟ ಮಾಡುವ ಇತರೆ ಸ್ಕೂಟರ್ ಬಗ್ಗೆ ಮಾತನಾಡುವುದಾದರೆ, ಟಾಪ್ ಎಂಡ್ ಮಾದರಿ ಎಸ್1 ಪ್ರೊ ರೂ.1,47,499 ಎಕ್ಸ್ ಶೋರೂಂ ದರದಲ್ಲಿ ಗ್ರಾಹಕರಿಗೆ ಸಿಗುತ್ತದೆ. ಇದು, 195 ಕಿಲೋಮೀಟರ್ ರೇಂಜ್ ನೀಡುತ್ತದೆ. 120 kmph ಟಾಪ್ ಸ್ವೀಡ್ ಹೊಂದಿದೆ. ಓಲಾ ಎಸ್1 ಏರ್ ರೂ.1,19,999 ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ.

ಈ ಎಸ್1 ಏರ್, 3 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಒಳಗೊಂಡಿದ್ದು, ಫುಲ್ ಚಾರ್ಜ್ ನಲ್ಲಿ 151 km ರೇಂಜ್ ಕೊಡುತ್ತದೆ. 90 kmph ಟಾಪ್ ಸ್ವೀಡ್ ಪಡೆದಿದೆ. ಸದ್ಯ, ಓಲಾ ಎಸ್1 ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಡೀಲರ್‌ಶಿಪ್‌ ತಲುಪಲು ಆರಂಭವಾಗಿದ್ದು, ಇದು ಕಡಿಮೆ ಬೆಲೆಗೆ ಖರೀದಿಗೆ ದೊರೆಯುವುದರಿಂದ ಮುಂಬರುವ ಹಬ್ಬದ ಋತುವಿನಲ್ಲಿ ಬೇಡಿಕೆ ಹೆಚ್ಚಾಗಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, October 22, 2023, 13:31 [IST]
English summary
Bangalore ola s1x electric scooter reach dealership
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+