Orxa Mantis: ಬೆಂಗಳೂರಿನ ಒರ್ಹಾ ಮ್ಯಾಂಟಿಸ್ ಇ-ಬೈಕ್ ಬಿಡುಗಡೆ, 221 ಕಿ.ಮೀ ಚಲಿಸುತ್ತದೆ.. ಭಾರೀ ವೈಶಿಷ್ಟ್ಯಗಳಿವೆ

ಬೆಂಗಳೂರು (Bengaluru) ಎಲೆಕ್ಟ್ರಿಕ್ ವೆಹಿಕಲ್ (ಇವಿ) ತಯಾರಕ ಕಂಪನಿಗಳಿಗೆ ಹಬ್ ಆಗುತ್ತಿದ್ದು, ನಗರದಲ್ಲಿ ಓಲಾ, ಎಥರ್, ಸಿಂಪಲ್ ಎನರ್ಜಿ ಸೇರಿದಂತೆ ಅನೇಕ ಇವಿ ಮಾರಾಟ ಕಂಪನಿಗಳಿವೆ. ಇವುಗಳೊಂದಿಗೆ ಎಲೆಕ್ಟ್ರಿಕ್ ಮೊಬಿಲಿಟಿ ಸ್ಟಾರ್ಟ್-ಅಪ್ ಒರ್ಹಾ ಎನರ್ಜಿಸ್ (Orxa Energies) ಹೊಸ ಸೇರ್ಪಡೆಯಾಗಿದೆ.

ಸದ್ಯ, ಭಾರತದ ಮಾರುಕಟ್ಟೆಗೆ ಒರ್ಹಾ ಎನರ್ಜಿಸ್ ತನ್ನ ಮ್ಯಾಂಟಿಸ್ ಪರ್ಫಾರ್ಮೆನ್ಸ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನ್ನು (Mantis performance electric motorcycle) ಬಿಡುಗಡೆಗೊಳಿಸಿದೆ. ನೂತನ ಇ-ಬೈಕ್, 1.3 kW ಚಾರ್ಜರ್ ಒಳಗೊಂಡು ರೂ.3.60 ಲಕ್ಷ (ಎಕ್ಸ್ ಶೋರೂಂ, ಬೆಂಗಳೂರು) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಹೊಸ ಮಿಡ್-ಸೆಗ್ಮೆಂಟ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್, ಅಲ್ಟ್ರಾವೈಲೆಟ್ ಎಫ್77ಗೆ ಪ್ರತಿಸ್ಪರ್ಧಿಯಾಗಲಿದೆ ಎಂದು ಅಂದಾಜಿಸಲಾಗಿದೆ.

Orxa Mantis: ಬೆಂಗಳೂರಿನ ಒರ್ಹಾ ಮ್ಯಾಂಟಿಸ್ ಇ-ಬೈಕ್ ಬಿಡುಗಡೆ, 221 ಕಿ.ಮೀ ಚಲಿಸುತ್ತದೆ.. ಭಾರೀ ವೈಶಿಷ್ಟ್ಯಗಳಿವೆ

ನೂತನ ಒರ್ಹಾ ಮ್ಯಾಂಟಿಸ್ ಇ-ಬೈಕ್‌ಗಾಗಿ ಬುಕ್ಕಿಂಗ್ ಆರಂಭವಾಗಿದ್ದು, ಮೊದಲ 1,000 ಗ್ರಾಹಕರು ರೂ.10,000 ಟೋಕನ್ ಮೊತ್ತಕ್ಕೆ ಆರ್ಡರ್ ಮಾಡಬಹುದು. ನಂತರ ಆ ದರವು ರೂ.25,000 ಆಗಲಿದೆ. ಮುಂದಿನ ವರ್ಷದ (2024) ಏಪ್ರಿಲ್ ವೇಳೆಗೆ ವಿತರಣೆಗಳು ಶುರುವಾಗಲಿದೆ. ಕಂಪನಿ ಹೇಳುವಂತೆ ಮೇಡ್ ಇನ್ ಇಂಡಿಯಾ ಪರಿಕಲ್ಪನೆ ತಯಾರಾದ ಹಗುರವಾದ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಇದಾಗಿದ್ದು, 182 ಕೆಜಿ ತೂಕವಿದೆ.

ಈ ಒರ್ಹಾ ಮ್ಯಾಂಟಿಸ್ ಇ-ಬೈಕ್, 135 kmph ಟಾಪ್ ಸ್ವೀಡ್ ಹೊಂದಿದ್ದು, ಕೇವಲ 8.9 ಸೆಕೆಂಡುಗಳಲ್ಲಿ 0 - 100 kmph ವೇಗವನ್ನು ಪಡೆಯಲಿದೆ. ಅದೇ ರೀತಿಯಲ್ಲಿ ನಗರದ ಸಂಚಾರ ದಟ್ಟಣೆಯನ್ನು ಆಧರಿಸಿ, 2.7 ಸೆಕೆಂಡುಗಳಲ್ಲಿ 20 - 60 kmph ವೇಗವನ್ನು ಹೊಂದಲಿದೆ. ಇದರಲ್ಲಿ ಅತ್ಯಂತ ಕಡಿಮೆ ತೂಕದ (11.5 ಕೆಜಿ) ಪಿಎಂಎಸ್ ಲಿಕ್ವಿಡ್ ಕೋಲ್ಡ್ ಎಲೆಕ್ಟ್ರಿಕ್ ಮೋಟಾರ್ ಬಳಕೆ ಮಾಡಲಾಗಿದೆ.

Orxa Mantis: ಬೆಂಗಳೂರಿನ ಒರ್ಹಾ ಮ್ಯಾಂಟಿಸ್ ಇ-ಬೈಕ್ ಬಿಡುಗಡೆ, 221 ಕಿ.ಮೀ ಚಲಿಸುತ್ತದೆ.. ಭಾರೀ ವೈಶಿಷ್ಟ್ಯಗಳಿವೆ

ಇದು, 20.5 kW (27.4 bhp) ಗರಿಷ್ಠ ಪವರ್ ಹಾಗೂ 93 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ನಲ್ಲಿ ಶಕ್ತಿಯುತ 8.9 kWh ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 221 ಕಿಲೋಮೀಟರ್ (IDC) ರೇಂಜ್ ನೀಡುತ್ತದೆ.

ಹೊಸ ಒರ್ಹಾ ಮ್ಯಾಂಟಿಸ್ ಇ-ಬೈಕ್‌, ಏರೋಸ್ಪೇಸ್-ಗ್ರೇಡ್ ಆಲ್-ಅಲ್ಯೂಮಿನಿಯಂ ಚಾಸಿಸ್ (Aerospace-Grade All-Aluminium Chassis) ಅನ್ನು ಪಡೆದಿದ್ದು, ದೇಶದಲ್ಲಿ ಈ ವೈಶಿಷ್ಟ್ಯವನ್ನು ಹೊಂದಿದ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಇದಾಗಿದೆ. ಈ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ IP67 ರೇಟೆಡ್ ಆಗಿದೆ. 5-ಇಂಚಿನ TFT ಸ್ಕ್ರೀನ್, ರೈಡ್-ಬೈ-ವೈರ್ ಸೇರಿದಂತೆ ಹತ್ತಾರು ಫೀಚರ್ಸ್ ಒಳಗೊಂಡಿದ್ದು, 80 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಇದೆ.

ನೂತನ ಒರ್ಹಾ ಮ್ಯಾಂಟಿಸ್ ಇ-ಬೈಕ್‌ ಬಿಡುಗಡೆ ಬಗ್ಗೆ ಮಾತನಾಡಿರುವ ಕಂಪನಿಯ ಸಹ-ಸಂಸ್ಥಾಪಕ ಡಾ ಪ್ರಜ್ವಲ್ ಸಬ್ನಿಸ್ ಅವರು, 'ನಮ್ಮ ಪ್ರಯಾಣವು 2015 ರಲ್ಲಿ ಪ್ರಾರಂಭವಾಯಿತು. ಅಂತಿಮವಾಗಿ ಮ್ಯಾಂಟಿಸ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಲಾಂಚ್ ಮಾಡುತ್ತಿರುವುದು ಸಂತೋಷ ತಂದಿದೆ. .ಕಳೆದ ಎಂಟು ವರ್ಷಗಳಲ್ಲಿ ಬೈಕನ್ನು ಅಚ್ಚುಕಟ್ಟಾಗಿ ವಿನ್ಯಾಸಗೊಳಿಸಲು ಕೆಲಸ ಮಾಡಿದ್ದೇವೆ. ದೇಶಾದ್ಯಂತ ಹೆದ್ದಾರಿ ಹಾಗೂ ರಸ್ತೆಗಳಲ್ಲಿ ಈ ಎಲೆಕ್ಟ್ರಿಕ್ ಬೈಕ್‌ನ್ನು ಪರೀಕ್ಷಿಸಲಾಗಿದೆ' ಎಂದು ಹೇಳಿದ್ದಾರೆ.

ಇನ್ನು, ಹೊಸ ಒರ್ಹಾ ಮ್ಯಾಂಟಿಸ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅಲ್ಟ್ರಾವೈಲೆಟ್ ಎಫ್77ಗೆ ಪ್ರತಿಸ್ಪರ್ಧಿ ಎಂದು ಬಿಂಬಿಸಲಾಗಿದೆ. ಜೊತೆಗೆ ಇದೊಂದು ಪ್ರೀಮಿಯಂ ಬೈಕ್ ಆಗಿರುವುದರಿಂದ ಹೆಚ್ಚಿನ ಯುವ ಗ್ರಾಹಕರನ್ನು ಆಕರ್ಷಿಸಬಹುದು ಎಂದು ಕಂಪನಿ ನಂಬಿದೆ. ಆದರೆ, ಕೊಂಚ ದರ ಹೆಚ್ಚಿರುವುದು ಬಿಟ್ಟರೆ, ಬೇರೆ ಯಾವ ವಿಚಾರದಲ್ಲಿಯೂ ಈ ಎಲೆಕ್ಟ್ರಿಕ್ ಬೈಕ್‌ಗೆ ಸರಿ ಸಾಟಿಯೇ ಇರಲು ಸಾಧ್ಯವಿಲ್ಲವೆಂದು ಹೇಳಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, November 22, 2023, 10:18 [IST]
English summary
Bengaluru orxa mantis electric motorcycle launched india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+