Simple Dot One: ಬೆಂಗಳೂರಿನ ಸಿಂಪಲ್ ಡಾಟ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಡೇಟ್ ಫಿಕ್ಸ್, ಬೆಲೆ ತುಂಬಾ ಕಡಿಮೆ!

ಬೆಂಗಳೂರಿನ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿ ಸಿಂಪಲ್ ಎನರ್ಜಿ (Simple Energy) ಕಳೆದ ಮೇ ತಿಂಗಳಲ್ಲಿ ಕೈಗೆಟುಕುವ ಬೆಲೆಯಲ್ಲಿ ಗರಿಷ್ಠ ರೇಂಜ್ ನೀಡುವ ಸಿಂಪಲ್ ಒನ್ (Simple ONE) ಎಲೆಕ್ಟ್ರಿಕ್ ಸ್ಕೂಟರ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿತ್ತು. ಈಗ ಕಡಿಮೆ ಬೆಲೆಗೆ ಹೊಸ ಇ-ಸ್ಕೂಟರ್‌ ಲಾಂಚ್ ಗೆ ಸಿದ್ದತೆಯನ್ನು ನಡೆಸಿದೆ.

ಈ ಬಗ್ಗೆ ಸಿಂಪಲ್ ಎನರ್ಜಿ ಸೋಮವಾರ ಘೋಷಣೆ ಮಾಡಿದ್ದು, ಡಿಸೆಂಬರ್ 15 ರಂದು ಸಿಂಪಲ್ ಡಾಟ್ ಒನ್ ಎಲೆಕ್ಟ್ರಿಕ್ ಸ್ಕೂಟರ್ (Simple Dot One electric scooter) ಅನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿದೆ. ನೂತನ ಇ-ಸ್ಕೂಟರ್‌ ಬೆಲೆ 1 ಲಕ್ಷಕ್ಕಿಂತ ಕಡಿಮೆ ಇರಲಿದ್ದು, ಓಲಾ ಎಸ್1 ಎಕ್ಸ್‌ (Ola S1 X)ಗೆ ನೇರ ಪ್ರತಿಸ್ಪರ್ಧಿಯಾಗಲಿದೆ. ಅಂದೇ ಬುಕ್ಕಿಂಗ್ ಕೂಡ ಶುರುವಾಗಲಿದ್ದು, 2024ರ ಜನವರಿಯಲ್ಲಿ ವಿತರಣೆ ಶುರುವಾಗಲಿದೆ.

Simple Dot One: ಬೆಂಗಳೂರಿನ ಸಿಂಪಲ್ ಡಾಟ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಡೇಟ್ ಫಿಕ್ಸ್, ಬೆಲೆ ತುಂಬಾ ಕಡಿಮೆ!

ಸಿಂಪಲ್ ಡಾಟ್ ಒನ್ ಎಲೆಕ್ಟ್ರಿಕ್ ಸ್ಕೂಟರ್, ಸಿಂಪಲ್ ಒನ್‌ ರೀತಿಯಲ್ಲಿಯೇ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. 3.7 kWh ಬ್ಯಾಟರಿ ಪ್ಯಾಕ್ ಪಡೆದಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 151 ಕಿಲೋಮೀಟರ್ ರಿಂದ 160 ಕಿಲೋಮೀಟರ್ ರೇಂಜ್ ನೀಡಲಿದೆ. ಆದರೆ, ಇದರಲ್ಲಿ ಉಪಯೋಗಗೊಳಿಸಲಾಗಿರುವ ಎಲೆಕ್ಟ್ರಿಕ್ ಮೋಟಾರ್ ಬಗ್ಗೆ ಮಾಹಿತಿಯಿಲ್ಲ. ಶಕ್ತಿಯುತ ಮೋಟಾರ್ ಬಳಕೆ ಮಾಡಿರಬಹುದು ಎಂದು ಅಂದಾಜಿಸಲಾಗಿದೆ.

ವಿನ್ಯಾಸದ ವಿಚಾರವಾಗಿ ಹೇಳುವುದಾದರೆ, ಸಿಂಪಲ್ ಡಾಟ್ ಒನ್ ಎಲೆಕ್ಟ್ರಿಕ್ ಸ್ಕೂಟರ್, ಸಿಂಪಲ್ ಒನ್‌ಗೆ ಹೋಲಿಕೆಯಾಗಲಿದ್ದು, ಸಣ್ಣ ಮಟ್ಟಿಗೆ ಕಾಸ್ಮೆಟಿಕ್ ಬದಲಾವಣೆಗಳನ್ನು ಹೊಂದಿದೆ. ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಅಪ್ಲಿಕೇಶನ್ ಕನೆಕ್ಟಿವಿಟಿಯೊಂದಿಗೆ ಟಚ್‌ಸ್ಕ್ರೀನ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲ್ಇಡಿ ಲೈಟಿಂಗ್, ನ್ಯಾವಿಗೇಷನ್, ಫೋನ್ ಮತ್ತು ಮೆಸೇಜ್ ನೋಟಿಫಿಕೇಶನ್, ಬ್ಲೂಟೂತ್ ಕಲೆಕ್ಷನ್ ಸೇರಿದಂತೆ ಹತ್ತಾರು ಫೀಚರ್ಸ್ ಒಳಗೊಂಡಿದೆ.

Simple Dot One: ಬೆಂಗಳೂರಿನ ಸಿಂಪಲ್ ಡಾಟ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಡೇಟ್ ಫಿಕ್ಸ್, ಬೆಲೆ ತುಂಬಾ ಕಡಿಮೆ!

ಸಿಂಪಲ್ ಒನ್‌ ತರಹ ಈ ಸಿಂಪಲ್ ಡಾಟ್ ಒನ್ ಎಲೆಕ್ಟ್ರಿಕ್ ಸ್ಕೂಟರ್, ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿರುವುದಿಲ್ಲ ಎನ್ನಲಾಗಿದೆ. ಅದರ ಬದಲಾಗಿ CBS (ಕಾಂಬಿ ಬ್ರೇಕಿಂಗ್ ಸಿಸ್ಟಮ್) ಹಾಗೂ ಡ್ರಮ್ ಬ್ರೇಕ್ ಪಡೆದಿರುವ ನೀರಿಕ್ಷೆಯಿದೆ. ಸಸ್ಪೆನ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗ ಟೆಲಿಸ್ಕೋಪಿಕ್ ಯುನಿಟ್, ಹಿಂಭಾಗ ಮೊನೊಶಾಕ್ ಸೆಟಪ್ ಒಳಗೊಂಡಿರಲಿದೆ.

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಮಾತನಾಡುವುದಾದರೆ, ಇದು ಕಳೆದ ಮೇ ತಿಂಗಳಲ್ಲಿ ರೂ. 1.45 ಲಕ್ಷದಿಂದ ರೂ.1.5 ಲಕ್ಷ (ಎಕ್ಸ್ ಶೋರೂಂ ಬೆಂಗಳೂರು) ಬೆಲೆಯಲ್ಲಿ ಬಿಡುಗಡೆಯಾಗಿತ್ತು. ಶಕ್ತಿಯುತ 5 kWh ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 212 km (IDC) ರೇಂಜ್ ಕೊಡುತ್ತದೆ

Simple Dot One: ಬೆಂಗಳೂರಿನ ಸಿಂಪಲ್ ಡಾಟ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಡೇಟ್ ಫಿಕ್ಸ್, ಬೆಲೆ ತುಂಬಾ ಕಡಿಮೆ!

ಈ ಸ್ಕೂಟರ್‌ನಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್ 11.39 bhp (8.5kW) ಗರಿಷ್ಠ ಪವರ್ ಮತ್ತು 72 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಒಳಗೊಂಡಿದೆ. ಕೇವಲ 2.77 ಸೆಕೆಂಡ್‌ಗಳಲ್ಲಿ ಗಂಟೆಗೆ 0 - 40 ಕಿಮೀ ವೇಗವನ್ನು ಪಡೆಯಲಿದ್ದು, 105 km ಟಾಪ್ ಸ್ವೀಡ್ ಹೊಂದಿದೆ.

ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್, ಇಕೋ, ರೈಡ್, ಡ್ಯಾಶ್ ಮತ್ತು ಸೋನಿಕ್ ಎಂಬ ರೈನ್ಡಿಂಗ್ ರೈಡಿಂಗ್ ಮೋಡ್ ಪಡೆದಿದೆ. ಇದರ ಬ್ಯಾಟರಿ ಶೇಕಡ 0 - 80% ಚಾರ್ಜ್ ಆಗಲು 5 ಗಂಟೆ 54 ನಿಮಿಷ ಬೇಕು. ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಬ್ಲೂಟೂತ್ ಕನೆಕ್ಟಿವಿಟಿ, OTA ಅಪ್‌ಡೇಟ್‌ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, November 28, 2023, 18:07 [IST]
English summary
Simple dot one electric scooter launched december 15 low price
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+