Simple Dot One: ಬೆಂಗಳೂರಿನ ಸಿಂಪಲ್ ಡಾಟ್ ಒನ್ ಇ-ಸ್ಕೂಟರ್ ರೂ.1 ಲಕ್ಷಕ್ಕೆ ಬಿಡುಗಡೆ.. 151 Km ಓಡುತ್ತೆ

ಬೆಂಗಳೂರಿನ ಸಿಂಪಲ್ ಎನರ್ಜಿ (Simple Energy) ಕಳೆದ ಮೇ ತಿಂಗಳಿನಲ್ಲಿ ಕೈಗೆಟುಕುವ ಬೆಲೆಯಲ್ಲಿ ಗರಿಷ್ಠ ರೇಂಜ್ ನೀಡುವ ಸಿಂಪಲ್ ಒನ್ (Simple ONE) ಎಲೆಕ್ಟ್ರಿಕ್ ಸ್ಕೂಟರ್‌ನ್ನು ಲಾಂಚ್ ಮಾಡಿತ್ತು. ಇಂದು (ಶುಕ್ರವಾರ) ಕಡಿಮೆ ಬೆಲೆಯ ಸಿಂಪಲ್ ಡಾಟ್ ಒನ್ (Simple Dot One) ಸ್ಕೂಟರ್‌ನ್ನು ಬಿಡುಗಡೆಗೊಳಿಸಿದೆ.

ಈ ನೂತನ ಸಿಂಪಲ್ ಡಾಟ್ ಒನ್ ಎಲೆಕ್ಟ್ರಿಕ್ ಸ್ಕೂಟರ್, ರೂ.1 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಾಂಚ್ ಆಗಿದ್ದು, ಮೊದಲು ಬೆಂಗಳೂರಿನಲ್ಲಿ ವಿತರಣೆಯಾಗಲಿದೆ. ಆ ಬಳಿಕ, ದೇಶದ ಇತರೆ ನಗರಗಳ ಗ್ರಾಹಕರಿಗೆ ಲಭ್ಯವಾಗಲಿದೆ. ಆದರೆ, ಈ ದರಗಳು 'ಸಿಂಪಲ್ ಒನ್' ಎಲೆಕ್ಟ್ರಿಕ್ ಸ್ಕೂಟರ್‌ನ್ನು ಮುಂಗಡವಾಗಿ ಕಾಯ್ದಿರಿಸಿರುವ ಖರೀದಿದಾರರಿಗೆ ಮಾತ್ರ ಅನ್ವಯಿಸುತ್ತದೆ. ಅವರು, ಇಷ್ಟಪಟ್ಟರೆ ಸಿಂಪಲ್ ಡಾಟ್ ಒನ್ ಕೊಂಡುಕೊಳ್ಳಬಹುದು.

Simple Dot One

ಹೊಸ ಗ್ರಾಹಕರಿಗಾಗಿ ಸಿಂಪಲ್ ಡಾಟ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯನ್ನು ಜನವರಿ (2024) ತಿಂಗಳಲ್ಲಿ ಘೋಷಣೆ ಮಾಡಲು ಕಂಪನಿ ತೀರ್ಮಾನ ಮಾಡಿದೆ. ಈ ಸಿಂಪಲ್ ಡಾಟ್ ಒನ್ ಇ - ಸ್ಕೂಟರ್ ಕೂಡ ಸಿಂಪಲ್ ಒನ್ ತರಹವೇ ಪ್ಲಾಟ್‌ಫಾರ್ಮ್ ಹೊಂದಿದೆ. ಆದರೆ, ವೈಶಿಷ್ಟ್ಯ ಹಾಗೂ ವಿನ್ಯಾಸದಲ್ಲಿ ಬದಲಾವಣೆಗಳನ್ನು ಪಡೆದುಕೊಂಡಿದೆ.

ಸಿಂಪಲ್ ಡಾಟ್ ಒನ್ ಎಲೆಕ್ಟ್ರಿಕ್ ಸ್ಕೂಟರ್ 3.7 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 151 ಕಿಲೋಮೀಟರ್ ರೇಂಜ್ ನೀಡುತ್ತದೆ. ಇದರಲ್ಲಿ 8.5 kW ಎಲೆಕ್ಟ್ರಿಕ್ ಮೋಟಾರ್ ಬಳಕೆ ಮಾಡಲಾಗಿದ್ದು, 72 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಕೆಲವೇ 2.7 ಸೆಕೆಂಡುಗಳಲ್ಲಿ 0 - 40 kmph ವೇಗವನ್ನು ಪಡೆಯಲಿದೆ.

Simple Dot One

ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್, ಮುಂಭಾಗ ಹಾಗೂ ಹಿಂಭಾಗ 12 - ಇಂಚಿನ ಅಲಾಯ್ ವೀಲ್ಸ್, ಟ್ಯೂಬ್‌ಲೆಸ್ ಟೈಯರ್ಸ್ ಅನ್ನು ಒಳಗೊಂಡಿದೆ. ಸುರಕ್ಷತೆಗಾಗಿ CBS (ಕಾಂಬಿ ಬ್ರೇಕಿಂಗ್ ಸಿಸ್ಟಮ್) ಹಾಗೂ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. ಜೊತೆಗೆ 35 - ಲೀಟರ್ ಸಾಮರ್ಥ್ಯದ ಅಂಡರ್ ಸ್ವೀಟ್ ಸ್ಟೋರೇಜ್ ಅನ್ನು ಪಡೆದಿದೆ.

ಬ್ರೇಜನ್ ಬ್ಲಾಕ್, ಗ್ರೇಸ್ ವೈಟ್ ಸೇರಿದಂತೆ 4 ಬಣ್ಣಗಳ ಆಯ್ಕೆಯಲ್ಲಿ ಸಿಗುವ ಸಿಂಪಲ್ ಡಾಟ್ ಒನ್ ಇ - ಸ್ಕೂಟರ್, 7.0 - ಇಂಚಿನ ಟಚ್‌ಸ್ಕ್ರೀನ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಟರ್ನ್ - ಬೈ - ಟರ್ನ್ ನ್ಯಾವಿಗೇಷನ್, ಬ್ಲೂಟೂತ್ ಕನೆಕ್ಟಿವಿಟಿ, ಒಟಿಎ ಅಪ್‌ಡೇಟ್‌ಗಳೊಂದಿಗೆ ಆಂಡ್ರಾಯ್ಡ್ ಒಎಸ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಕಳೆದ ಮೇ ತಿಂಗಳಲ್ಲಿ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್, ರೂ.1.45 ಲಕ್ಷದಿಂದ ರೂ.1.5 ಲಕ್ಷ (ಎಕ್ಸ್ ಶೋರೂಂ ಬೆಂಗಳೂರು) ಬೆಲೆಯಲ್ಲಿ ಬಿಡುಗಡೆಯಾಗಿತ್ತು. ಇದು 5 kWh ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 212 km (IDC) ರೇಂಜ್ ನೀಡುತ್ತದೆ. ಇದರ ಎಲೆಕ್ಟ್ರಿಕ್ ಮೋಟಾರ್ 11.39 bhp (8.5kW) ಗರಿಷ್ಠ ಪವರ್, 72 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಸಿಂಪಲ್ ಒನ್ ಇ-ಸ್ಕೂಟರ್ ಕೇವಲ 2.77 ಸೆಕೆಂಡ್‌ಗಳಲ್ಲಿ ಗಂಟೆಗೆ 0 - 40 ಕಿಮೀ ವೇಗವನ್ನು ಪಡೆಯಲಿದ್ದು, 105 km ಟಾಪ್ ಸ್ವೀಡ್ ಹೊಂದಿದೆ. ಇಕೋ, ರೈಡ್, ಡ್ಯಾಶ್ ಮತ್ತು ಸೋನಿಕ್ ಎಂಬ ರೈಡಿಂಗ್ ಮೋಡ್ ಆಯ್ಕೆಯನ್ನು ಒಳಗೊಂಡಿದ್ದು, ಇದರ ಬ್ಯಾಟರಿ ಶೇಕಡ 0 - 80% ಚಾರ್ಜ್ ಆಗಲು 5 ಗಂಟೆ 54 ನಿಮಿಷ ಬೇಕಾಗಲಿದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಸೇರಿದಂತೆ ವಿವಿಧ ಫೀಚರ್ಸ್ ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, December 15, 2023, 15:54 [IST]
English summary
Bengaluru simple dot one electric scooter launched rs 1 lakh price 151 km range
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+