ಓಲಾದಿಂದ ಭರ್ಜರಿ ಸಿಹಿಸುದ್ದಿ: ಎಸ್1, ಎಸ್1 ಪ್ರೊ ಗೆರುವಾ ಆವೃತ್ತಿ ಮರುಪರಿಚಯ
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು (EV) ದಿನದಿಂದ ದಿನಕ್ಕೆ ಜನಪ್ರಿಯತೆಯನ್ನು ಗಳಿಸುತ್ತಿವೆ. ಈ ರೀತಿಯ ದ್ವಿಚಕ್ರ ವಾಹನ ಹಾಗೂ ಕಾರುಗಳನ್ನು ಖರೀದಿಸಲು ಗ್ರಾಹಕರು ಆಸಕ್ತಿ ತೋರಿಸುತ್ತಿದ್ದಾರೆ. ಸದ್ಯ ಓಲಾ ಸ್ಕೂಟರ್ ಉತ್ತಮ ಬೇಡಿಕೆಯನ್ನು ಹೊಂದಿದ್ದು, ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದು, ಬಹುತೇಕ ಖರೀದಿದಾರರನ್ನು ಸೆಳೆದಿದೆ.
ಬೆಂಗಳೂರು ಮೂಲದ ಇವಿ ತಯಾರಕ ಕಂಪನಿ ಓಲಾ ಎಲೆಕ್ಟ್ರಿಕ್ ಇತ್ತೀಚೆಗೆ ದೇಶೀಯ ಮಾರುಕಟ್ಟೆಯಲ್ಲಿ ಎಸ್1 ಮತ್ತು ಎಸ್1 ಪ್ರೊ ಗೆರುವಾ ಆವೃತ್ತಿಯನ್ನು ಮರು ಬಿಡುಗಡೆ ಮಾಡಿದೆ. ಅಲ್ಲದೆ, ಕಂಪನಿಯು ಓಲಾ ಎಸ್1 ರೂಪಾಂತರಕ್ಕಾಗಿ ಮಾರ್ಷ್ಮ್ಯಾಲೋ, ಮಿಲೇನಿಯಲ್ ಪಿಂಕ್, ಆಂಥ್ರಾಸೈಟ್ ಗ್ರೇ, ಮಿಡ್ನೈಟ್ ಬ್ಲೂ ಮತ್ತು ಮ್ಯಾಟ್ ಬ್ಲಾಕ್ ಸೇರಿದಂತೆ ಐದು ಹೊಸ ಬಣ್ಣ ಆಯ್ಕೆಗಳನ್ನು ಪರಿಚಯ ಮಾಡಿದ್ದು, ಇದು ಹೊಸ ಗ್ರಾಹಕರು ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಯತ್ತ ಆಕರ್ಷಕರಾಗುವಂತೆ ಮಾಡಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಓಲಾ ಎಲೆಕ್ಟ್ರಿಕ್ ಚೀಫ್ ಮಾರ್ಕೆಟಿಂಗ್ ಆಫೀಸರ್ ಅನ್ಶುಲ್ ಖಂಡೇಲ್ವಾಲ್. 'ಕಂಪನಿಯನ್ನು ಅಗ್ರಸ್ಥಾನಕ್ಕೆ ತೆಗೆದುಕೊಂಡು ಹೋಗಲು, ಈ ಇವಿಗಳನ್ನು ಗ್ರಾಹಕರಿಗೆ ಕೈಗೆಟುಕುವಂತೆ ಮಾಡಲಾಗುವುದು. ಇದರಿಂದ ನಮ್ಮ ಗುರಿ ಸಾಧಿಸುವುದು ಸುಲಭವಾಗುತ್ತದೆ. ಜನರ ಸ್ಪಂದನೆಯನ್ನು ಆಧಾರಿಸಿ, ನಮ್ಮ ಎರಡೂ ರೂಪಾಂತರಗಳಿಗಾಗಿ 'ಗೆರುವಾ' ಆವೃತ್ತಿಯನ್ನು ಮರಳಿ ತರುತ್ತಿದ್ದೇವೆ. ಓಲಾ ಎಸ್1 ಎಲ್ಲಾ 11 ಬಣ್ಣದ ಪ್ಯಾಲೆಟ್‌ಗಳಲ್ಲಿ ಲಭ್ಯವಾಗುವಂತೆ ಮಾಡುತ್ತಿದ್ದೇವೆ. ಇದು ನಮ್ಮ ಸ್ಕೂಟರ್‌ಗಳನ್ನು ಇನ್ನಷ್ಟು ಆಕರ್ಷಕವಾಗಿ ಮಾಡುತ್ತದೆ' ಎಂದು ಹೇಳಿದ್ದಾರೆ.
ದೇಶದ ಪ್ರಮುಖ ಇವಿ ತಯಾರಿಕ ಕಂಪನಿಯಾಗಿರುವ ಓಲಾ, ಡಿಸೆಂಬರ್ 2022ರಲ್ಲಿ 25,000 ಯುನಿಟ್ ಸ್ಕೂಟರ್ ಮಾರಾಟ ಮಾಡಿ ದಾಖಲೆ ನಿರ್ಮಿಸಿತ್ತು. ಓಲಾ ಎಲೆಕ್ಟ್ರಿಕ್ ಇಡೀ ವರ್ಷದಲ್ಲಿ (2022) ಬರೋಬ್ಬರಿ 1,50,000 ಹೆಚ್ಚು ಯುನಿಟ್ ಸ್ಕೂಟರ್ ಸೇಲ್ ಮಾಡಿದೆ. ಕಂಪನಿಯು ದಿನದಿಂದ ದಿನಕ್ಕೆ ಬೆಳವಣಿಗೆಯಾಗುತ್ತಿದ್ದು, 100ಕ್ಕೂ ಹೆಚ್ಚು ಹೊಸ ಎಕ್ಸ್ಪೀರಿಯೆನ್ಸ್ ಸೆಂಟರ್ ಗಳನ್ನು ಓಪನ್ ಮಾಡಿದೆ. ಒಂದು ವರ್ಷದಲ್ಲಿ 3 ಸಾಫ್ಟ್‌ವೇರ್ ಅಪ್ಡೇಟ್ ಬಿಡುಗಡೆ ಮಾಡಿದ್ದು, ಈಚೆಗೆ 'MoveOS 3' ಓವರ್-ದಿ-ಏರ್ (OTA) ಅಪ್ಡೇಟ್ ಅನ್ನು 1 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಪರಿಚಯಿಸಿದೆ.
ಓಲಾ ಕಂಪನಿ 'MoveOS 3' ಅಪ್ಡೇಟ್ ಮಾಡುವ ಮೂಲಕ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ 50+ ವೈಶಿಷ್ಟ್ಯಗಳನ್ನು ಗ್ರಾಹಕರಿಗೆ ನೀಡುತ್ತದೆ. ಈ OTA ಅಪ್ಡೇಟ್ S1 ಮತ್ತು S1 Pro ಸ್ಕೂಟರ್‌ಗಳಲ್ಲಿ ಹೈಪರ್ ಚಾರ್ಜಿಂಗ್, ಬ್ಲೂಟೂತ್ ಕಾಲಿಂಗ್, ಪಾರ್ಟಿ ಮೋಡ್, ರೈಡಿಂಗ್ ಮೂಡ್‌ಗಳು, ಅಡ್ವಾನ್ಸ್ಡ್ ರೀ- ಜನರೇಷನ್, ಪ್ರಾಕ್ಸಿಮಿಟಿ ಲಾಕ್, ಅನ್‌ಲಾಕ್, ಹಿಲ್ - ಹೋಲ್ಡ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ ಎಂದು ಹೇಳಬಹುದು.
ಓಲಾ S1 ಎಲೆಕ್ಟ್ರಿಕ್ ಸ್ಕೂಟರ್ 2.9 kWh ಬ್ಯಾಟರಿಯನ್ನು ಹೊಂದಿದ್ದು, ಅದು 121 ಕಿ.ಮೀ ರೇಂಜ್ ನೀಡಲಿದೆ. ಆದರೆ, S1 ಪ್ರೊ ಸ್ಕೂಟರ್ 4 kWh ಬ್ಯಾಟರಿಯಿಂದ ಚಾಲಿತವಾಗಿದ್ದು, 181 ಕಿ.ಮೀ ರೇಂಜ್ ನೀಡುವ ಸಾಮರ್ಥ್ಯ ಹೊಂದಿದ್ದು, ಎರಡೂ ಎಲೆಕ್ಟ್ರಿಕ್ ಸ್ಕೂಟರ್‌ಗಳು 8.5 kW ಗರಿಷ್ಠ ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ. S1 ಪ್ರೊ ಸ್ಕೂಟರ್ ಬೆಲೆ ಪ್ರಸ್ತುತ 1.40 ಲಕ್ಷ ರೂ. ಇದ್ದು, ಎಸ್1 ಎಲೆಕ್ಟ್ರಿಕ್ ಸ್ಕೂಟರ್ 1 ಲಕ್ಷ ರೂ. ಇದೆ.
ಅತಿ ಕಡಿಮೆ ಬೆಲೆಯ ಎಸ್1 ಏರ್ ಎಂಬ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕೆಲ ತಿಂಗಳ ಹಿಂದೆ ಓಲಾ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ ಏಪ್ರಿಲ್ ತಿಂಗಳಲ್ಲಿ ಪ್ರಾರಂಭವಾಗಲಿದ್ದು, ಈ ಎಲೆಕ್ಟ್ರಿಕ್ ಸ್ಕೂಟರ್ ಕೇವಲ 80 ಸಾವಿರ ರೂ. ಬೆಲೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಾಗಲಿದೆ. ಇದರಿಂದ ಖರೀದಿದಾರರಿಗೆ ನೂತನ ಓಲಾ ಎಸ್1 ಏರ್ ಮೇಲೆ ನಿರೀಕ್ಷೆಗಳು ಹೆಚ್ಚಾಗಿದ್ದು, ಇದು ಇತರೆ ಇವಿ ದ್ವಿಚಕ್ರ ವಾಹನಗಳಿಗೆ ಭಾರೀ ಪೈಪೋಟಿ ನೀಡಲಿದೆ ಎಂದು ಅಂದಾಜಿಸಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








