Ola: ಆಯುಧಪೂಜೆಗೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ನಿಮ್ಮ ಮನೆಗೆ ತರಬೇಕೇ? ಬಿಗ್ ಅನೌನ್ಸ್ಮೆಂಟ್
ಬೆಂಗಳೂರು ಮೂಲದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿ ಓಲಾ ಎಲೆಕ್ಟ್ರಿಕ್ (Ola Electric), ದಸರಾ ಹಬ್ಬಕ್ಕೆ ತನ್ನ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಇಂದಿನಿಂದ (ಅಕ್ಟೋಬರ್ - 16) ಭಾರತ್ ಇವಿ ಫೆಸ್ಟ್ (Bharat EV Fest) ಹೆಸರಿನಲ್ಲಿ ವಿಶೇಷ ಮೇಳವನ್ನು ಆಯೋಜಿಸಿದೆ.
ಅದರ ಭಾಗವಾಗಿ ಹೊಸ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವವರಿಗೆ ವಾರಂಟಿ ಆಫರ್, ಎಕ್ಸ್ಚೇಂಜ್ ಡಿಸ್ಕೌಂಟ್ ಸೇರಿದಂತೆ ವಿವಿಧ ಕೊಡುಗೆಗಳು ಲಭ್ಯವಿರಲಿದೆ. ಜೊತೆಗೆ ಈ ತಿಂಗಳು, ಟೆಸ್ಟ್ ಡ್ರೈವ್ ನಡೆಸುವ ಗ್ರಾಹಕರಿಗೆ ಬಹುಮಾನವನ್ನು ವಿತರಿಸಲಾಗಿದೆ. ಮುಂದಿನ ತಿಂಗಳು ಈ ಕೊಡುಗೆಗಳನ್ನು ಕಂಪನಿ ಮುಂದುವರಿಸಲಿದೆಯೇ, ಇಲ್ಲವೇ ಎಂಬುದರ ಬಗ್ಗೆ ಈಗ ಯಾವುದೇ ವಿವರಗಳಿಲ್ಲ.

2ನೇ ತಲೆಮಾರಿನ ನೂತನ ಓಲಾ ಎಸ್1 ಪ್ರೊ (Ola S1 Pro) ಕೊಂಡುಕೊಳ್ಳುವ ಗ್ರಾಹಕರಿಗಾಗಿ 5 ವರ್ಷಗಳ ವಿಸ್ತರಿಸಿಕೊಳ್ಳಬಹುದಾದ ಬ್ಯಾಟರಿ ವಾರಂಟಿಯನ್ನು (extended battery warranty) ಕೊಡುತ್ತಿದೆ. ಅದೇ ರೀತಿಯಲ್ಲಿ ಎಸ್1 ಏರ್ (S1 Air) ಇ-ಸ್ಕೂಟರ್ ಖರೀದಿಯೊಂದಿಗೆ 5 ವರ್ಷ ವಿಸ್ತರಿಸಬಹುದಾದ ಬ್ಯಾಟರಿ ವಾರಂಟಿ ಮೇಲೆ ಶೇಕಡ 50% ರಿಯಾಯಿತಿ ಪಡೆಯಬಹುದು. ಸದ್ಯ, ಓಲಾ ಕಂಪನಿ 3 ವರ್ಷ ಬ್ಯಾಟರಿ ವಾರಂಟಿ ನೀಡುತ್ತಿದೆ.
ಓಲಾ ಕಂಪನಿಯೂ ವಾಹನ ವಿನಿಮಯ (vehicle exchange) ಡಿಸ್ಕೌಂಟ್ ಕೂಡ ಘೋಷಿಸಿದ್ದು, ಅದು ರೂ.10,000 ವರೆಗೆ ಇರಲಿದೆ. ಪೆಟ್ರೋಲ್ ಸ್ಕೂಟರ್ ಖರೀದಿಗೂ ಈ ಕೊಡುಗೆ ಅನ್ವಯವಾಗುತ್ತದೆ ಎಂದು ಹೇಳಿದೆ. ಮೊದಲಿಗೆ ಓಲಾದ ಟಾಪ್ ಎಂಡ್ ಮಾದರಿ ಎಸ್1 ಪ್ರೊ ಬಗ್ಗೆ ತಿಳಿಯೋಣ. ಇದು, ರೂ.1,47,499 ಎಕ್ಸ್ ಶೋರೂಂ ಬೆಲೆಯಲ್ಲಿ ದೇಶೀಯ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ.

ಈ ಓಲಾ ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್, 11 kW ಪೀಕ್ ಪವರ್ ಉತ್ಪಾದಿಸಲಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 195 ಕಿಲೋಮೀಟರ್ ರೇಂಜ್ ನೀಡುತ್ತದೆ. 120 kmph ಟಾಪ್ ಸ್ವೀಡ್ ಹೊಂದಿದೆ. 7 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದ್ದು, ನಿಯೋ ಮಿಂಟ್, ಕೋರಲ್ ಗ್ಲಾಮ್, ಜೆಟ್ ಬ್ಲಾಕ್ ಸೇರಿದಂತೆ ಹಲವು ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ.
ಮಿಡ್ ಲೆವೆಲ್ ಆವೃತ್ತಿಯಾಗಿರುವ ಓಲಾ ಎಸ್1 ಏರ್ (Ola S1 Air), ರೂ.1,19,999 ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯುತ್ತದೆ. 3 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಒಳಗೊಂಡಿದ್ದು, ಫುಲ್ ಚಾರ್ಜ್ ನಲ್ಲಿ 151 km ರೇಂಜ್ ಕೊಡುತ್ತದೆ. ಜೊತೆಗೆ 90 kmph ಟಾಪ್ ಸ್ವೀಡ್ ಪಡೆದಿದೆ. 7 - ಇಂಚಿನ TFT ಸ್ಕ್ರೀನ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ರಿವರ್ಸ್ ಮೋಡ್ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ.
ಓಲಾ ಎಸ್1ಎಕ್ಸ್ (Ol S1X) ಎಂಟ್ರಿ ಲೆವೆಲ್ ಮಾದರಿಯಾಗಿದ್ದು, ರೂ.89,999 ಎಕ್ಸ್ ಶೋರೂಂ ದರದಲ್ಲಿ ಗ್ರಾಹಕರಿಗೆ ಸಿಗುತ್ತದೆ. ಇದು, 2 kWh ಹಾಗೂ 3 kWh ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದೆ. ಸಂಪೂರ್ಣ ಚಾರ್ಜ್ ನಲ್ಲಿ 151 km ವರೆಗೆ ರೇಂಜ್ ನೀಡಲಿದ್ದು, 90 kmph ಟಾಪ್ ಸ್ವೀಡ್ ಹೊಂದಿದೆ. ಈ ಸ್ಕೂಟರ್, 3.5 ಇಂಚಿನ ಡಿಸ್ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.
ಇನ್ನು, ಭಾರತದ ಮಾರುಕಟ್ಟೆಯಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಗಳು ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಈ ಮೂಲಕ ಹಲವು ತಿಂಗಳಿಂದ ಕಂಪನಿ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಇದು, ಅದರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಸದ್ಯ, ಓಲಾ ದಸರಾ ಹಬ್ಬಕ್ಕೆ ಭರ್ಜರಿ ಆಫರ್ ನೀಡಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಸೇಲ್ಸ್ ಏರಿಕೆಗೆ ಕಾರಣವಾಗಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








