ದೀಪಾವಳಿ ಬೆಸ್ಟ್ ಆಫರ್: ರೂ.1.32 ಲಕ್ಷ ಬೆಲೆಯ ಇವಿ ಸ್ಕೂಟರ್ ಕೇವಲ 85 ಸಾವಿರಕ್ಕೆ... ಡಿಸ್ಕೌಂಟ್ ಡಿಟೇಲ್ಸ್!
ಈ ದೀಪಾವಳಿಗೆ ನೀವು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಬಯಸುತಿದ್ದೀರಾ? ಹಾಗಾದ್ರೆ ಭರ್ಜರಿ ಡೀಲ್ ಒಂದು ಲಭ್ಯವಿದೆ. ರೂ. 1.32 ಲಕ್ಷ ಬೆಲೆಯ ಸ್ಕೂಟರ್ ಈಗ ಕೇವಲ ರೂ. 85 ಸಾವಿರಕ್ಕೆ ಸಿಗುತ್ತದೆ. ಆದ್ರೆ ಕಂಪನಿ ಹೇಳಿರುವಂತೆ ಈ ಡೀಲ್‌ಗಳಿಗೆ ಒಳಪಟ್ಟಿರಬೇಕು, ಈ ಕುರಿತ ಸಂಪೂರ್ಣ ವಿವರಗಳನ್ನು ಇಲ್ಲಿ ನೋಡೋಣ.
ಈ ವರ್ಷದ ದೀಪಾವಳಿ ಹಬ್ಬದಂದು ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಭಾರಿ ಕೊಡುಗೆ ಲಭ್ಯವಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಿವಿಧ ಕಂಪನಿಗಳು ರಿಯಾಯಿತಿ ಕೊಡುಗೆಗಳನ್ನು ತಂದಿವೆ. ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರಲ್ಲಿ ಒಂದಾದ ಎಥರ್ ಎನರ್ಜಿ ತನ್ನ ಮಾದರಿಗಳ ಮೇಲೆ ಭಾರಿ ಕೊಡುಗೆಗಳನ್ನು ನೀಡುತ್ತಿದೆ. ಈ ಕೊಡುಗೆಗಳು ಸೀಮಿತ ಅವಧಿಗೆ ಮಾತ್ರ ಲಭ್ಯವಿರುತ್ತವೆ.

ಎಥರ್ 450S ರೂ. 85 ಸಾವಿರಕ್ಕೆ: ಎಥರ್ 450S ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ರೂ. 1.32 ಲಕ್ಷವಿದೆ (ಎಕ್ಸ್ ಶೋ ರೂಂ ಬೆಲೆ). ಈ ಸ್ಕೂಟರ್ ಈಗ ರೂ. 85 ಸಾವಿರಕ್ಕೆ ಸಿಗುತ್ತದೆ. ಅದು ಹೇಗೆಂದರೆ, ಈಗ ನೀವು ಕ್ರೆಡಿಟ್ ಕಾರ್ಡ್ EMI ಕ್ಯಾಶ್‌ಬ್ಯಾಕ್ ಅನ್ನು ರೂ. 6 ಸಾವಿರದವರೆಗೆ ರಿಯಾಯಿತಿ ಪಡೆಯಬಹುದು. ಕಾರ್ಪೊರೇಟ್ ಲಾಭದ ಅಡಿಯಲ್ಲಿ ರೂ. 1500 ರಿಯಾಯಿತಿ ಇದೆ.
ಇದಲ್ಲದರ ಜೊತೆಗೆ ಈ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ವಿನಿಮಯ ಕೊಡುಗೆ (Exchange offer) ಕೂಡ ಇದ್ದು, ಒಟ್ಟಾಗಿ ರೂ. 40 ಸಾವಿರದವರೆಗೆ ರಿಯಾಯಿತಿ ಪಡೆಯಬಹುದು. ಅಂದರೆ ಈ ಕೊಡುಗೆಯನ್ನು ಸಹ ಸೇರಿಸಿದರೆ ನೀವು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕೇವಲ ರೂ. 85 ಸಾವಿರಕ್ಕೆ ಖರೀದಿಸಬಹುದು.

Aether 450X ಕೂಡ ಇದ್ದು, ಎರಡೂ ರೂಪಾಂತರಗಳಲ್ಲಿ ಬಹುತೇಕ ಒಂದೇ ರೀತಿಯ ಕೊಡುಗೆಗಳು ಲಭ್ಯವಿವೆ. ಈ ಮಾದರಿಯು ಬೆಲೆಯು ರೂ.1.42 ಲಕ್ಷದಿಂದ ಪ್ರಾರಂಭವಾಗುತ್ತದೆ. ಆದರೆ ದೀಪಾವಳಿ ಆಫರ್ ಅಡಿಯಲ್ಲಿ ಮೇಲೆ ತಿಳಿಸಿದ ಅದೇ ಕೊಡುಗೆಗಳ ಅಡಿಯಲ್ಲಿ ಈಗ ರೂ. 95 ಸಾವಿರ ಆರಂಭಿಕ ಬೆಲೆಯಲ್ಲಿ ಖರೀದಿಸಬಹುದು. ಅಲ್ಲದೆ ಈ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೆ EMI ಉಳಿತಾಯ ರೂ. 12 ಸಾವಿರದವರೆಗೆ ರಿಯಾಯಿತಿ ಪಡೆಯಬಹುದು.
ನಿಮ್ಮ ಹಳೆಯ ದ್ವಿಚಕ್ರ ವಾಹನವನ್ನು ಆಧರಿಸಿ ವಿನಿಮಯ ಮೌಲ್ಯವು ಬದಲಾಗುತ್ತದೆ. ಹಗಾಗಿ ಕೆಲವು ಮಾದರಿಗಳು ಕಡಿಮೆ ವಿನಿಮಯ ಮೌಲ್ಯವನ್ನು ಹೊಂದಿರಬಹುದು. ನೀವು EMI ರೂಪದಲ್ಲಿ ಸ್ಕೂಟರ್ ಖರೀದಿಸಲು ಬಯಸಿದರೆ, ನೀವು 5.99 ಶೇಕಡಾ ಬಡ್ಡಿಯಲ್ಲಿ ಸಾಲವನ್ನು ಪಡೆಯಬಹುದು. ಇದು ಅತ್ಯಂತ ಕಡಿಮೆ ಬಡ್ಡಿ ದರ ಎಂದು ಹೇಳಬಹುದು. ಸಾಮಾನ್ಯ ಪೆಟ್ರೋಲ್ ವಾಹನಗಳಿಗಾದರೆ ಬಡ್ಡಿ ದರವು ಶೇ 9.99 ರಿಂದ ಪ್ರಾರಂಭವಾಗುತ್ತದೆ.

ಎಥರ್ 450X ವೈಶಿಷ್ಟ್ಯಗಳು: ಎಥರ್ ಎನರ್ಜಿ 450X ಎಲೆಕ್ಟ್ರಿಕ್ ಸ್ಕೂಟರ್ ಒಂದು ಪೂರ್ಣ ಚಾರ್ಜ್‌ನಲ್ಲಿ 150 ಕಿಲೋಮೀಟರ್ ರೇಂಜ್ ನೀಡುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 90 ಕಿಲೋಮೀಟರ್, ಹಾಗೆಯೇ ಇದು ಕೇವಲ 3.3 ಸೆಕೆಂಡುಗಳಲ್ಲಿ 40 kmph ವೇಗವನ್ನು ಸಾಧಿಸಬಲ್ಲದು. ಇದು 4G ಸಂಪರ್ಕ, ಬ್ಲೂಟೂತ್, ವಾಟರ್ ರೆಸಿಸ್ಟೆಂಟ್, ಟಚ್ ಸ್ಕ್ರೀನ್ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications








