ನೀರಿಕ್ಷೆಗೂ ಮೀರಿದ ವೈಶಿಷ್ಟ್ಯಗಳೊಂದಿಗೆ ಹೈ ಸ್ವೀಡ್ 'ಇ-ಸ್ಪ್ರಿಂಟೋ Amery' ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಭಾರತದಲ್ಲಿ ದಿನದಿಂದ ದಿನಕ್ಕೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಜನಪ್ರಿಯವಾಗುತ್ತಿವೆ. ಅದಕ್ಕೆ ತಕ್ಕಂತೆ ವಿವಿಧ ಕಂಪನಿಗಳು ತಿಂಗಳಿಗೆ ಒಂದಾದರೂ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡುತ್ತಿರುತ್ತವೆ. ಇದೀಗ, ಹೊಸ ಸೇರ್ಪಡೆ ಎಂಬಂತೆ ಇ-ಸ್ಪ್ರಿಂಟೋ ಅಮೇರಿ ಎಲೆಕ್ಟ್ರಿಕ್ ಸ್ಕೂಟರ್ ಸೇರಿಕೊಂಡಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಮುನ್ನೆಲೆಗೆ ಬರುತ್ತಿರುವ ಇ-ಸ್ಪ್ರಿಂಟೋ (e-Sprinto) ತನ್ನ ಹೈ ಸ್ವೀಡ್ ಅಮೇರಿ (Amery) ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದು, ರೂ.1.30 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ದರ ಆರಂಭಿಕ 100 ಬುಕಿಂಗ್ ಗೆ ಮಾತ್ರ ಅನ್ವಯಿಸುತ್ತದೆ. ಆಸಕ್ತ ಗ್ರಾಹಕರು, ಇ-ಸ್ಪ್ರಿಂಟೋ ಡೀಲರ್ ಶಿಪ್ ಮುಖಾಂತರ ಅಮೇರಿ ಸ್ಕೂಟರ್ ಆರ್ಡರ್ ಮಾಡಬಹುದು.

ನೀರಿಕ್ಷೆಗೂ ಮೀರಿದ ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಹೈ ಸ್ವೀಡ್ ಇ-ಸ್ಪ್ರಿಂಟೋ Amery ಇ-ಸ್ಕೂಟರ್ ಬಿಡುಗಡೆ

ಸದ್ಯ, ದೇಶೀಯವಾಗಿ ಖರೀದಿಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳ ರೀತಿಯಲ್ಲೇ ಇ-ಸ್ಪ್ರಿಂಟೋ ಅಮೇರಿ ಹತ್ತು ಹಲವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ ಆಕರ್ಷಕ ಡಿಜಿಟಲ್ ಡಿಸ್ಪ್ಲೇ, ಆಂಟಿ ಥೆಫ್ಟ್ ಅಲಾರ್ಮ್, ರಿಮೋಟ್ ಕಂಟ್ರೋಲ್ ಲಾಕ್, ಮೊಬೈಲ್ ಚಾರ್ಜಿಂಗ್ ಸಾಕೆಟ್, ಫೈಂಡ್ ಮೈ ವೆಹಿಕಲ್ ಅಪ್ಲಿಕೇಶನ್ ಸೇರಿದಂತೆ ವಿವಿಧ ಫೀಚರ್ಸ್ ಪಡೆದಿದೆ.

ಇ-ಸ್ಪ್ರಿಂಟೋ ಅಮೇರಿ ಎಲೆಕ್ಟ್ರಿಕ್ ಸ್ಕೂಟರ್, 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್, 98 ಕೆಜಿ ತೂಕವನ್ನು ಹೊಂದಿದೆ. 12 ಡಿಗ್ರಿ ಗ್ರೇಡ್ ಎಬಿಲಿಟಿ ಹಾಗೂ 150 ಕೆಜಿ ಲೋಡ್ ಸಾಗಿಸುವ ಸಾಮರ್ಥ್ಯವನ್ನು ಪಡೆದಿದೆ. ಈ ಸ್ಕೂಟರ್ ಬ್ರೇಕಿಂಗ್ ಸಿಸ್ಟಮ್ ಬಗ್ಗೆ ಮಾತನಾಡುವುದಾದರೆ, ಇದು ಫ್ರಂಟ್ ಡಿಸ್ಕ್, ರೇರ್ ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದೆ.

ನೀರಿಕ್ಷೆಗೂ ಮೀರಿದ ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಹೈ ಸ್ವೀಡ್ ಇ-ಸ್ಪ್ರಿಂಟೋ Amery ಇ-ಸ್ಕೂಟರ್ ಬಿಡುಗಡೆ

ಈ ಅಮೇರಿ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ 60V 50AH ಸಾಮರ್ಥ್ಯದ ಲಿಥಿಯಂ ಐಯಾನ್ NMC ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದ್ದು, ಇದು ಸಂಪೂರ್ಣ ಚಾರ್ಜಿನಲ್ಲಿ 140 km ರೇಂಜ್ ನೀಡುತ್ತದೆ. ಜೊತೆಗೆ ಇದರ 1500W BLDC ಹಬ್ ಮೋಟಾರ್ 3.3 hp ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಇ-ಸ್ಪ್ರಿಂಟೋ ಅಮೇರಿ ಎಲೆಕ್ಟ್ರಿಕ್ ಸ್ಕೂಟರ್ ಕೇವಲ 6 ಸೆಕೆಂಡುಗಳಲ್ಲಿ 0-40 kmph ವೇಗವನ್ನು ಪಡೆಯಲಿದ್ದು, 65 kmph ಟಾಪ್ ಸ್ವೀಡ್ ಹೊಂದಿದೆ. ಜೊತೆಗೆ ಇದರ ಬ್ಯಾಟರಿ ಪ್ಯಾಕ್ 0-100% ಚಾರ್ಜ್ ಆಗಲು ನಾಲ್ಕು ಗಂಟೆ ಬೇಕು. ಈ ಸ್ಕೂಟರ್, ಮೂರು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ , ಬ್ಲಿಸ್ಫುಲ್ ವೈಟ್, ಮ್ಯಾಟ್ ಹಾಗೂ ಹೈ ಸ್ಪಿರಿಟ್ ಯೆಲ್ಲೋ.

ನೀರಿಕ್ಷೆಗೂ ಮೀರಿದ ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಹೈ ಸ್ವೀಡ್ ಇ-ಸ್ಪ್ರಿಂಟೋ Amery ಇ-ಸ್ಕೂಟರ್ ಬಿಡುಗಡೆ

ಇ-ಸ್ಪ್ರಿಂಟೋ ಅಮೇರಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಬಗ್ಗೆ ಮಾತನಾಡಿರುವ ಕಂಪನಿಯ ಸಹ ಸಂಸ್ಥಾಪಕ ಮತ್ತು ನಿರ್ದೇಶನದ ಅತುಲ್ ಗುಪ್ತಾ ಅವರು, 'ಹೊಚ್ಚ ಹೊಸ ಇ-ಸ್ಕೂಟರ್ ಅನ್ನು ನಮ್ಮ ಗ್ರಾಹಕರಿಗೆ ಪರಿಚಯಿಸುತ್ತಿರುವುದು ತುಂಬಾ ಸಂತೋಷ ತಂದಿದೆ. ಇದು ಅತ್ಯಾಧುನಿಕ ವೈಶಿಷ್ಟ್ಯ ಹಾಗೂ ಆಕರ್ಷಕ ಲುಕ್ ಪಡೆದಿರುವುದು ಬಹುಪಾಲು ಯುವ ಖರೀದಿದಾರರಿಗೆ ಇಷ್ಟವಾಗುತ್ತದೆ' ಎಂದು ಹೇಳಿದ್ದಾರೆ.

ಇನ್ನು, ಭಾರತದ ಮಾರುಕಟ್ಟೆಯಲ್ಲಿ ಓಲಾ, ಎಥರ್, ಟಿವಿಎಸ್ ಹಾಗೂ ಹೀರೋ ಕಂಪನಿ ಎಲೆಕ್ಟ್ರಿಕ್ ಸ್ಕೂಟರ್ ಗಳು ದೊಡ್ಡ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಎರಡು ದಿನದ ಹಿಂದೆಯಷ್ಟೇ ಗರಿಷ್ಠ ರೇಂಜ್ ನೀಡುವ ಸಿಂಪಲ್ ಒನ್ ಕೂಡ ಈ ಪಟ್ಟಿ ಸೇರಿದೆ. ಸದ್ಯ, ಇ-ಸ್ಪ್ರಿಂಟೋ ಅಮೇರಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಿದ್ದು, ದೇಶೀಯ ಗ್ರಾಹಕರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

More from DriveSpark

Article Published On: Thursday, May 25, 2023, 10:42 [IST]
English summary
E sprinto amery electric scooter launched in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+