ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾಗಲಿರುವ Muvi ಎಲೆಕ್ಟ್ರಿಕ್ ಸ್ಕೂಟರ್ ಶೀಘ್ರದಲ್ಲೇ ಬುಕ್ಕಿಂಗ್ ಪ್ರಾರಂಭ

ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಂಡಿದೆ. ಇದರಿಂದ ಹಲವು ಜನಪ್ರಿಯ ವಾಹನ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಪ್ರಾಮುಖ್ಯತೆಗಳನ್ನು ನೀಡುತ್ತಿದೆ. ಇದರ ಜೊತೆಗೆ ಹಲವು ಸ್ಟಾರ್ಟ್ ಅಪ್ ಕಂಪನಿಗಳು ಕೂಡ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸುತ್ತಿವೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೂ ಭಾರೀ ಬೇಡಿಕೆಯನ್ನು ಪಡೆದುಕೊಂಡಿವೆ.

eBikeGo, ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮೊಬಿಲಿಟಿ ಪ್ಲಾಟ್‌ಫಾರ್ಮ್, ಭಾರತದಲ್ಲಿ ತನ್ನ Muvi ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಬುಕ್ಕಿಂಗ್‌ಗಳನ್ನು ತೆರೆಯಲು ಸಿದ್ಧವಾಗಿದೆ. ಈ Muvi ಎಲೆಕ್ಟ್ರಿಕ್ ಸ್ಕೂಟರ್ (Muvi Electric Scooter) ಖರೀದಿಗಾಗಿ 2023ರ ಅಕ್ಟೋಬರ್ ತಿಂಗಳಿನಿಂದ ಅಧಿಕೃತವಾಗಿ ಪ್ರಾರಂಭವಾಗಲಿದೆ. ಆಸಕ್ತ ಗ್ರಾಹಕರು ಬ್ರ್ಯಾಂಡ್‌ನ ಅಧಿಕೃತ ವೆಬ್‌ಸೈಟ್‌ನಿಂದ ಈಗ ನಗದುರಹಿತ ಮುಂಗಡ-ಬುಕಿಂಗ್ ಮಾಡಬಹುದು.

Muvi Electric Scooter

ಮುವಿ ಸಿಟಿ ಇ-ಸ್ಕೂಟರ್ ಭಾರತದಲ್ಲಿ ಬಿಡುಗಡೆಯಾದ ಬ್ರ್ಯಾಂಡ್‌ನಿಂದ ಮೊದಲನೆಯದು ಆಗಿದೆ. ಈ ಹಿಂದೆ, 2021 ರಲ್ಲಿ, eBikeGo ಭಾರತದಲ್ಲಿ ಸ್ಪ್ಯಾನಿಷ್ ಆಟೋಮೋಟಿವ್ ಕಂಪನಿ ಟೊರೊಟ್‌ನಿಂದ Muvi ಬ್ರ್ಯಾಂಡ್ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಲು ಉತ್ಪನ್ನ ಪರವಾನಗಿ ಹಕ್ಕುಗಳನ್ನು ಪಡೆದುಕೊಂಡಿತು. ಮುಂಬರುವ ಕಾಯ್ದಿರಿಸುವಿಕೆ ಪ್ರಕ್ರಿಯೆಯ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿಮುವಿಗೆ ಶೀಘ್ರದಲ್ಲೇ ಬುಕ್ಕಿಂಗ್‌ಗಳನ್ನು ತೆರೆಯಲು ನಾವು ರೋಮಾಂಚನಗೊಂಡಿದ್ದೇವೆ ಎಂದು ಇಬೈಕ್‌ಗೋ ಸಿಇಒ ಇರ್ಫಾನ್ ಖಾನ್ ಹೇಳಿದ್ದಾರೆ.

ಬಿಡುಗದೆಯಾಗಲಿರುವ ಮುಂಬರುವ ಹೊಸ ಮುವಿ ಸಿಟಿ ಎಲೆಕ್ಟ್ರಿಕ್ ಸ್ಕೂಟರ್ ಟ್ಯೂಬ್ ಲರ್ ಸಿಲ್ವರ್ ಫ್ರೇಮ್ ಅನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಹೈಡ್ರಾಲಿಕ್ ಟೆಲಿಸ್ಕೋಪಿಕ್ ಫೋರ್ಕ್ ಅನ್ನು ಹೊಂದಿದೆ, ಆದರೆ ಹಿಂಭಾಗದ ಸಸ್ಪೆನ್ಶನ್ ಸೈಡ್ ಮೊನೊಶಾಕ್ ಅನ್ನು ಹೊಂದಿದ್ದು ಅದು ಹೆಚ್ಚುವರಿ ಸೌಕರ್ಯಕ್ಕಾಗಿ ಪ್ರಿಲೋಡ್ ಹೊಂದಾಣಿಕೆಯನ್ನು ನೀಡುತ್ತದೆ.

Muvi Electric Scooter

ಇನ್ನು ಈ ಮುವಿ ಸಿಟಿ ಎಲೆಕ್ಟಿಕ್ ಸ್ಕೂಟರ್ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, 220 ಎಂಎಂ ಮುಂಭಾಗ ಮತ್ತು 190 ಎಂಎಂ ಹಿಂಭಾಗದಲ್ಲಿ ಬ್ರೇಕ್‌ಗಳನ್ನು ಒಳಗೊಂಡಿವೆ. ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ ಹೈಡ್ರಾಲಿಕ್ ಸಂಯೋಜಿತ ಬ್ರೇಕ್ ಸಿಸ್ಟಮ್ (ಸಿಬಿಎಸ್) ಮೂಲಕ ನಿರ್ವಹಿಸಲಾಗುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಟೊರೊಟ್ ಬ್ರಶ್‌ಲೆಸ್ 48V ಮೋಟಾರ್, 4.1 CV (3 kW) ಅಥವಾ 35 Nm ಅನ್ನು ಉತ್ಪಾದಿಸುತ್ತದೆ.

ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ 70 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಈ ಮುವಿ ಸಿಟಿ ಎಲೆಕ್ಟ್ರಿಕ್ ಸ್ಕೂಟರ್ 48V (54.6V ಗರಿಷ್ಠ ವೋಲ್ಟೇಜ್) 5A ಡಬಲ್ ಟೊರೊಟ್ ಬ್ಯಾಟರಿ ಚಾರ್ಜರ್ ಅನ್ನು ನೀಡುತ್ತದೆ, ಇದು ಪೂರ್ಣ ಚಾರ್ಜ್‌ಗೆ ಸುಮಾರು 7 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಹೆಚ್ಚುವರಿಯಾಗಿ, ಬಳಕೆದಾರರು 48V (54.6V ಗರಿಷ್ಠ ವೋಲ್ಟೇಜ್) 10A ಡಬಲ್ ಟೊರೊಟ್ ಬ್ಯಾಟರಿ ಚಾರ್ಜರ್‌ಗೆ ಅಪ್‌ಗ್ರೇಡ್ ಮಾಡುವ ಆಯ್ಕೆಯನ್ನು ಹೊಂದಿರುತ್ತದೆ.

Muvi Electric Scooter

ಇದು ಚಾರ್ಜಿಂಗ್ ಸಮಯವನ್ನು 4 ಗಂಟೆಗಳವರೆಗೆ ಕಡಿಮೆ ಮಾಡುತ್ತದೆ. Muvi ಯ ಬ್ಯಾಟರಿಯು ತೆಗೆಯಬಹುದಾದ 2x48V/35.2Ah Li-iON ಆಗಿದ್ದು, ಈ ಎಲೆಕ್ಟ್ರಿಕ್ ಸ್ಕೂಟರ್ ಇಕೋ ಮೋಡ್ ನಲ್ಲಿ ಸರಿಸುಮಾರು 85 ಕಿ.ಮೀ ರೇಂಜ್ ಅನ್ನು ಒದಗಿಸುತ್ತದೆ. ಮುವಿ ಇಂಟಲಿಜೆಂಟ್ LCD 4-ಇಂಚಿನ ಡಿಸ್ಪ್ಲೇಯೊಂದಿಗೆ ಸಜ್ಜುಗೊಂಡಿದೆ, iOS ಮತ್ತು Android ಗಾಗಿ ಲಭ್ಯವಿರುವ ಅಪ್ಲಿಕೇಶನ್ ಮೂಲಕ ಗ್ರಾಹಕೀಯಗೊಳಿಸಬಹುದಾಗಿದೆ.

ಈ ಫಿಚರ್ಸ್ ಅನ್ನು ಸವಾರರು ತಮ್ಮ ಆದ್ಯತೆಗಳಿಗೆ ಸರಿಹೊಂದುವಂತೆ ತಮ್ಮ ಸ್ಕೂಟರ್‌ನ ಇಂಟರ್‌ಫೇಸ್ ಅನ್ನು ವೈಯಕ್ತೀಕರಿಸಲು ಅನುಮತಿಸುತ್ತದೆ. ಇ-ಸ್ಕೂಟರ್‌ನ ಒಟ್ಟು ತೂಕ ಬ್ಯಾಟರಿ ಸೇರಿದಂತೆ 95 ಕೆಜಿ ಅನ್ನು ತೂಕವಿದೆ. ಮುವಿ ಸಿಟಿ ಎಲೆಕ್ಟ್ರಿಕ್ ಸ್ಕೂಟರ್ Bluetooth ಮತ್ತು OBD ಸಾಮರ್ಥ್ಯಗಳೊಂದಿಗೆ ಟೊರೊಟ್ ಇಸಿಯು (ಎಲೆಕ್ಟ್ರಾನಿಕ್ ಕಂಟ್ರೋಲ್ ಯುನಿಟ್) ಅನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಲು ಮರೆಯದಿರಿ.

More from DriveSpark

Article Published On: Wednesday, August 9, 2023, 18:21 [IST]
English summary
Ebikego muvi electric scooter booking starts from october 2023 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+