EVeium ಸ್ಮಾರ್ಟ್ ಮೊಬಿಲಿಟಿಯಿಂದ ವರ್ಷಾಂತ್ಯಕ್ಕೆ ರಾಜ್ಯದಲ್ಲಿ 10 ಇವಿ ಶೋರೂಂಗಳ ಸ್ಥಾಪನೆ

ಭಾರತದಲ್ಲಿ ಹೆಚ್ಚುತ್ತಿರುವ ಎಲೆಕ್ಟ್ರಿಕ್ ವಾಹನಗಳ ಬೇಡಿಕೆಯಿಂದಾಗಿ ಇವಿ ಸ್ಟಾರ್ಟ್‌ಅಪ್‌ಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಪ್ರೀಮಿಯಂ EVಗಳ ಭಾರತೀಯ ಬ್ರಾಂಡ್ ಆದ EVeium ಸ್ಮಾರ್ಟ್ ಮೊಬಿಲಿಟಿ ತನ್ನ ಹೊಸ EV ಶೋರೂಂ ಅನ್ನು ಮಂಗಳೂರಿನಲ್ಲಿ ಪ್ರಾರಂಭಿಸಿದ್ದು ಸ್ಥಳೀಯ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದು EVeium ಬ್ರ್ಯಾಂಡ್‌ನ ವ್ಯಾಪಕ ಶ್ರೇಣಿಯ ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪ್ರದರ್ಶಿಸುವ ಅನುಭವ ಕೇಂದ್ರವಾಗಿದೆ ಎಂದು ಕಂಪನಿ ತಿಳಿಸಿದೆ. ಹೊಸ EV ಶೋರೂಂ ವೆಸ್ಟ್ ಎಂಡ್ ಆಟೋಮೋಟಿವ್ಸ್ ಎಂಬ ಡೀಲರ್‌ಶಿಪ್ ಹೆಸರಿನಲ್ಲಿ ಕಾರ್ಯನಿರ್ವಹಿಸಲಿದೆ. ಶೋರೂಂ ಹಾಗೂ ಅನುಭವ ಕೇಂದ್ರವಾಗಿರುವ ಹೊಸ ಡೀಲರ್‌ಶಿಪ್ ಅನ್ನು ಪಂಪ್ ವೆಲ್ ನ ಗೋಲ್ಡ್ ಪ್ಯಾಲೇಸ್ ಓನಿಕ್ಸ್ ಬಳಿ ತೆರಯಲಾಗಿದೆ. ಈ ಹಿಂದೆ (ಮಾರ್ಚ್ 16) ಶೋರೂಂ ಉದ್ಘಾಟನೆಯನ್ನು ಶಾಸಕ ಯು.ಟಿ. ಖಾದರ್ ನೆರವೇರಿಸಿದ್ದರು.

EVeium ಸ್ಮಾರ್ಟ್ ಮೊಬಿಲಿಟಿಯಿಂದ ವರ್ಷಾಂತ್ಯಕ್ಕೆ ರಾಜ್ಯದಲ್ಲಿ 10 ಇವಿ ಶೋರೂಂಗಳ ಸ್ಥಾಪನೆ

ಶೋರೂಂ ತೆರೆದ ಕೆಲವೇ ದಿನಗಳಲ್ಲಿ ಕಂಪನಿಯು ಹೊಸ ಘೋಷಣೆಯನ್ನು ಪ್ರಕಟಿಸಿದೆ. ಕಂಪನಿಯ ವಾಹನಗಳಿಗೆ ಹಾಗೂ ಅವರ ಹೊಸ ಶೋರೂಂಗೆ ಸಿಕ್ಕ ಪ್ರತಿಕ್ರಿಯೆಯು ಭರವಸೆಯನ್ನು ಹೆಚ್ಚಿಸಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿದೆ. ಹಾಗಾಗಿ ರಾಜ್ಯಾದ್ಯಂತ ನಮ್ಮ ಹೊಸ ಶೋರೂಂಗಳನ್ನು ವಿಸ್ತರಿಸಲು ಯೋಜಿಸುತ್ತಿರುವುದಾಗಿ ಕಂಪನಿ ಹೇಳಿಕೊಂಡಿದೆ. ಸದ್ಯ ಈ ವರ್ಷ ಮುಗಿಯುವ ಅಷ್ಟರಲ್ಲಿ ಬರೋಬ್ಬರಿ 10 ಹೊಸ ಡೀಲರ್‌ಶಿಪ್‌ಗಳನ್ನು ತೆರೆಯುವುದಾಗಿ ಕಂಪನಿ ಘೋಷಿಸಿದೆ.

3 ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್‌ಗಳು:
ವೆಸ್ಟ್ ಎಂಡ್ ಆಟೋಮೋಟಿವ್ಸ್‌ನ ಡೀಲರ್‌ಶಿಪ್ಗೆ, ಬ್ರ್ಯಾಂಡ್‌ನಿಂದ 3 ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಒದಗಿಸುತ್ತಿದೆ. ಅವುಗಳನ್ನು ನೋಡುವುದಾದರೆ ಮೊದಲನೆಯದು 'ಕಾಸ್ಮೊ' ಇದರ ಟಾಪ್ ಸ್ಪೀಡ್ 65 Kmph ಇದ್ದು, ಸಿಂಗಲ್ ಚಾರ್ಜ್‌ನಲ್ಲಿ 80 ಕಿಮೀ ರೇಂಜ್ ನೀಡುತ್ತದೆ. ಇದರ ಬೆಲೆಯನ್ನು ರೂ. 1,39,200 ಕ್ಕೆ ನಿಗಧಿ ಪಡಿಸಲಾಗಿದೆ. ಎರಡನೇಯದು 'ಕಾಮೆಟ್' ಇದರ ಟಾಪ್ ಸ್ಪೀಡ್ 85 Kmph ಇದ್ದು, ಸಿಂಗಲ್ ಚಾರ್ಜ್‌ನಲ್ಲಿ 150 ಕಿ.ಮೀ ಮೈಲೇಜ್ ನೀಡುತ್ತದೆ. ಇದರ ಬೆಲೆಯು ರೂ. 1,84,900 ಇದೆ.

EVeium ಸ್ಮಾರ್ಟ್ ಮೊಬಿಲಿಟಿಯಿಂದ ವರ್ಷಾಂತ್ಯಕ್ಕೆ ರಾಜ್ಯದಲ್ಲಿ 10 ಇವಿ ಶೋರೂಂಗಳ ಸ್ಥಾಪನೆ

ಕೊನೆಯದಾದ "Czar" ಇದು ವೇಗದ ಮಾದರಿಯಾಗಿದ್ದು, 85 Kmph ವೇಗವನ್ನು ಹೊಂದಿದೆ. ಸಿಂಗಲ್ ಚಾರ್ಜ್‌ನಲ್ಲಿ 150 ಕಿ.ಮೀ ರೇಂಜ್ ಹಿಂದಿರುಗಿಸುತ್ತದೆ. ಇದರ ಬೆಲೆಯು ರೂ. 2,07,700 ಇದೆ. ಎಲ್ಲಾ ಬೆಲೆಗಳು, ಎಕ್ಸ್ ಶೋರೂಂ ಆಗಿವೆ. ಹೊಸ ಶೋರೂಂ, ಗ್ರಾಹಕರಿಗೆ ವಿಶಿಷ್ಟ್ EV ಖರೀದಿಯ ಅನುಭವವನ್ನು ಒದಗಿಸುವುದಲ್ಲದೆ, EV ಅಳವಡಿಕೆಯ ಬಗ್ಗೆ ಜಾಗೃತಿ ಮೂಡಿಸಲು ವೇದಿಕೆಯಾಗಿಯೂ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಎಲ್ಲಾ EVeium ಕ್ಲೈಂಟ್‌ಗಳ EV-ಸಂಬಂಧಿತ ಅವಶ್ಯಕತೆಗಳಿಗಾಗಿ ಶೋರೂಂ ಒಂದು-ನಿಲುಗಡೆ ಅಂಗಡಿಯಾಗಿ ಕಾರ್ಯನಿರ್ವಹಿಸುತ್ತದೆ.

ಉತ್ತಮ ದರ್ಜೆಯ ಶೋರೂಂ:
ಈ ಹಿಂದೆ ಶೋರೂಂ ಉದ್ಘಾಟನೆ ಸಂದರ್ಭದಲ್ಲಿ ಮಾತನಾಡಿದ್ದ EVeium ಸ್ಮಾರ್ಟ್ ಮೊಬಿಲಿಟಿ ಸಹ ಸಂಸ್ಥಾಪಕ ಸಮೀರ್ ಮೊಯ್ದಿನ್, ಉತ್ತಮ ಅನುಭವವನ್ನು ಒದಗಿಸುವ ಮತ್ತು ಸಾಮಾನ್ಯರು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಸಹಾಯ ಮಾಡುವ ಮಹತ್ವಾಕಾಂಕ್ಷೆಯೊಂದಿಗೆ ಮಂಗಳೂರಿನಲ್ಲಿ ನಮ್ಮ ಹೊಸ ಡೀಲರ್‌ಶಿಪ್ ಶೋರೂಂ ಅನಾವರಣಗೊಳಿಸಿದ್ದೇವೆ. ಎಲ್ಲಾ ಅಗತ್ಯ ಪರಿಕರಗಳು ಮತ್ತು ಯಂತ್ರೋಪಕರಣಗಳೊಂದಿಗೆ ಅತ್ಯುತ್ತಮ ದರ್ಜೆಯ ಶೋರೂಂ ಸ್ಥಾಪಿಸಿದ್ದೇವೆ. ಹಾಗೆಯೇ ನಮ್ಮ ಹೊಸ ವಾಹನಗಳು ಆಧುನಿಕ ತಂತ್ರಜ್ಞಾನ ಹೊಂದಿವೆ ಎಂದು ಹೇಳಿದ್ದರು.

EVeium ಸ್ಮಾರ್ಟ್ ಮೊಬಿಲಿಟಿಯಿಂದ ವರ್ಷಾಂತ್ಯಕ್ಕೆ ರಾಜ್ಯದಲ್ಲಿ 10 ಇವಿ ಶೋರೂಂಗಳ ಸ್ಥಾಪನೆ

ನಮ್ಮ ಮೌಲ್ಯಯುತ ಗ್ರಾಹಕರಿಗೆ ನಾವು ಉನ್ನತ ದರ್ಜೆಯ ಮಾರಾಟದ ನಂತರದ ಸೇವಾ ಅನುಭವಗಳನ್ನು ಖಾತರಿಪಡಿಸುತ್ತಿದ್ದೇವೆ. ಇದಲ್ಲದೆ, ನಮ್ಮ ಹಿತೈಷಿಗಳಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯುವುದು ನಮ್ಮ ನಂಬಿಕೆಯನ್ನು ಬಲಪಡಿಸುತ್ತದೆ. ಹಾಗೆಯೇ ನಾವು ಹೆಚ್ಚಿನ ಶೋರೂಂಗಳು ಮತ್ತು ಉತ್ಪನ್ನಗಳೊಂದಿಗೆ ಮುಂದಿನ ದಿನಗಳಲ್ಲಿ ನಮ್ಮ ಉಪಸ್ಥಿತಿಯನ್ನು ವಿಸ್ತರಿಸಲು ಯೋಜಿಸಿದ್ದೇವೆ. ಈ EV ಶೋರೂಂ ಪ್ರತಿ ಮಂಗಳೂರಿನ ಮನೆಗಳಿಗೆ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸುವಲ್ಲಿ ಒಂದು ಗೇಮ್ ಚೇಂಜರ್ ಆಗಲಿದೆ ಎಂದರು.

Ellysium ಮೊಬಿಲಿಟಿಯಡಿ ಕಾರ್ಯ ನಿರ್ವಹಣೆ:
EVeium ಸ್ಮಾರ್ಟ್ ಮೊಬಿಲಿಟಿ ಎಂಬುದು Ellysium ಆಟೋಮೋಟಿವ್ಸ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲೆಕ್ಟ್ರಿಕ್ 2-ವೀಲರ್ EV ಬ್ರ್ಯಾಂಡ್ ಆಗಿದೆ. EVeium ಸ್ಮಾರ್ಟ್ ಮೊಬಿಲಿಟಿಯಲ್ಲಿ ಶುದ್ಧ ಪವರ್ ಮತ್ತು ಸುಸ್ಥಿರ ಪರಿಸರ ವ್ಯವಸ್ಥೆಯನ್ನು ರಚಿಸುವುದು ಮತ್ತು ಭವಿಷ್ಯದ ಮತ್ತು ಸುರಕ್ಷಿತ ವಿದ್ಯುತ್ ಪ್ರಯಾಣದ ಮಾರ್ಗವನ್ನು ಸುಲಭವಾಗಿ ಅಳವಡಿಸಿಕೊಳ್ಳುವುದು ಇವರ ಮೂಲ ಉದ್ದೇಶವಾಗಿದೆ. EVEIUM ಅತ್ಯುತ್ತಮ ಮತ್ತು ಸ್ಮಾರ್ಟ್ ಬ್ಯಾಟರಿ, ಬಾಳಿಕೆ ನೀಡುವ ವಸ್ತುಗಳ ಆಯ್ಕೆಯಿಂದ ಪ್ರದರ್ಶಿಸಲ್ಪಟ್ಟಿದ್ದು, ಸಮರ್ಥನೀಯವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

More from DriveSpark

Article Published On: Thursday, March 23, 2023, 15:57 [IST]
English summary
Eveium announces to open 10 more dealerships in karnataka
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+