ಮ್ಯಾನುವಲ್ ಗೇರ್‍‍ಬಾಕ್ಸ್ ಹೊಂದಿರುವ ಭಾರತದ ಮೊದಲ ಎಲೆಕ್ಟ್ರಿಕ್ ಬೈಕ್ ಬಿಡುಗಡೆ: 150 ಕಿ.ಮೀ ರೇಂಜ್

ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡೀಕೆಯನ್ನು ಪಡೆದುಕೊಳ್ಳುತ್ತಿದೆ. ಇದರಿಂದ ಹಲವು ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಪ್ರಮುಖ್ಯತೆಯನ್ನು ನೀಡಿ ಅಭಿವೃದ್ದಿ ಪಡಿಸುತ್ತಿದೆ. ಇದರ ನಡುವೆ ಹಲವು ಸ್ಟಾರ್ಟ್ಅಪ್ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿದೆ.

ಇದೀಗ ಗುಜರಾತ್ ಮೂಲದ ಇವಿ ಸ್ಟಾರ್ಟ್ಅಪ್ ಮ್ಯಾಟರ್ ಕೊನೆಗೂ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಬಹುನಿರೀಕ್ಷಿತ Aera ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಮ್ಯಾಟರ್ Aera ಎಲೆಕ್ಟ್ರಿಕ್ ಬೈಕ್ ನಾಲ್ಕು ಟ್ರಿಮ್ ಆಯ್ಕೆಗಳನ್ನು ಹೊಂದಿದೆ, ಇದು 4000, 5000, 5000+ ಮತ್ತು 6000+.ಆಗಿದೆ. ಹೊಸ ಮ್ಯಾಟರ್ Aera ಎಲೆಕ್ಟ್ರಿಕ್ ಬೈಕ್ ಪ್ರಾರಂಭಿಕ ಬೆಲೆಯು ರೂ.1.44 ಲಕ್ಷವಾಗಿದೆ.

ಮ್ಯಾನುವಲ್ ಗೇರ್‍‍ಬಾಕ್ಸ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಹೊಸ ಮ್ಯಾಟರ್ Aera ಎಲೆಕ್ಟ್ರಿಕ್ ಬೈಕಿನ 6000+ ಹೊರತುಪಡಿಸಿ ಎಲ್ಲಾ ರೂಪಾಂತರಗಳು 125 ಕಿ.ಮೀ ವರೆಗೆ ರೇಂಜ್ ಅನ್ನು ನೀಡುತ್ತದೆ. Aera 6000+ ರೂಪಾಂತರವು 150 ಕಿ.ಮೀ ವರೆಗೆ ರೇಂಜ್ ಅನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಮ್ಯಾಟರ್ ಏರಾ ನೇಕೆಡ್ ಮೋಟಾರ್‌ಸೈಕಲ್‌ನಂತೆ ಬರುತ್ತದೆ ಮತ್ತು ಅನೇಕ ವರ್ಗ-ಪ್ರಮುಖ ವೈಶಿಷ್ಟ್ಯಗಳನ್ನು ತರುತ್ತದೆ. ಈ ಎಲೆಕ್ಟ್ರಿಲ್ ಬೈಕ್ ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿವೆ.

ಈ ಎಲೆಕ್ಟ್ರಿಕ್ ಬೈಕಿನ ಅತ್ಯಂತ ಆಸಕ್ತಿದಾಯಕ ವಿಷಯವೆಂದರೆ, ಇಂಧನ ಚಾಲಿತ ಮೋಟಾರ್‌ಸೈಕಲ್‌ಗಳಂತೆ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಬಂದಿದೆ. ಇದು ಭಾರತದ ಮೊದಲ ಮ್ಯಾನುವಲ್ ಗೇರ್ ಬಾಕ್ಸ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಆಗಿದೆ. ಮ್ಯಾಟರ್ ಏರಾ ಎಲೆಕ್ಟ್ರಿಕ್ ಬೈಕ್ 2023ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿತು. ಇದು ಮನ ಸೆಳೆಯುವ ವಿನ್ಯಾಸ ಮತ್ತು 4G ಕನೆಕ್ಟಿವಿಟಿಯೊಂದಿಗೆ 7.0-ಇಂಚಿನ ಸಂಪೂರ್ಣ-ಡಿಜಿಟಲ್ LCD ನಂತಹ ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಹೆಚ್ಚಿನ ಗಮನವನ್ನು ಸೆಳೆಯಿತು.

ಇದು ಆಂಡ್ರಾಯ್ಡ್ ಆಧಾರಿತ ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡುತ್ತದೆ. ರಿಮೋಟ್ ಲಾಕ್/ಅನ್‌ಲಾಕ್, ಜಿಯೋಫೆನ್ಸಿಂಗ್ ಮತ್ತು ಲೈವ್ ಲೊಕೇಶನ್ ಟ್ರ್ಯಾಕಿಂಗ್ ಅನ್ನು ಹೊಂದಿದೆ. ಇದರೊಂದಿಗೆ ವಾಹನ ಆರೋಗ್ಯ ಮೇಲ್ವಿಚಾರಣೆ ಮತ್ತು ವಿವರವಾದ ಸವಾರಿ ಅಂಕಿಅಂಶಗಳ ವೈಶಿಷ್ಟ್ಯಗಳಂತಹ ಕಾರ್ಯಗಳೊಂದಿಗಿನ ಈ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ, ಮ್ಯಾಟರ್ ಏರಾ ಎಲೆಕ್ಟ್ರಿಕ್ ಬೈಕ್ ಕೀ ಫೋಬ್ ಮತ್ತು ಕೀಲೆಸ್ ಎಂಟ್ರಿ ಸಿಸ್ಟಮ್‌ನೊಂದಿಗೆ ಬರುತ್ತದೆ,

ಇದು ಬೈಕ್ ಅನ್ನು ಸಮೀಪಿಸ ಬರುವ ಮೂಲಕ ಸವಾರನಿಗೆ ವಾಹನವನ್ನು ಲಾಕ್ ಮಾಡಲು ಅಥವಾ ಅನ್‌ಲಾಕ್ ಮಾಡಲು ಅನುವು ಮಾಡಿಕೊಡುತ್ತದೆ. Aera ಏಳು ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ ಎಂದು ಕಂಪನಿ ಹೇಳಿದೆ. ಲಿಕ್ವಿಡ್-ಕೂಲ್ಡ್ ಮೋಟಾರ್, ಮ್ಯಾನ್ಯುವಲ್ ಗೇರ್ ಬಾಕ್ಸ್, ಲಿಕ್ವಿಡ್-ಕೂಲ್ಡ್ ಬ್ಯಾಟರಿ ಪ್ಯಾಕ್, ಮೂರು-ಪಿನ್ 5 Amp ಚಾರ್ಜರ್, ಡಬಲ್ ಕ್ರೇಡಲ್ ಚಾಸಿಸ್ ಮತ್ತು ಸಂಪರ್ಕಿತ ಮತ್ತು ಇಂಟೆಲೆಜೆಂಟ್ ತಂತ್ರಜ್ಞಾನಗಳು. ಬೈಕ್ ಸೈಡ್ ಪ್ಯಾನೆಲ್‌ನಲ್ಲಿ 07 ಅಕ್ಷರಗಳನ್ನು ಹೊಂದಿದೆ,

ಇದು ಶೂನ್ಯ-ಹೊರಸೂಸುವಿಕೆ ತಂತ್ರಜ್ಞಾನ ಮತ್ತು ಮೇಲೆ ತಿಳಿಸಲಾದ ಏಳು ಅಂಶಗಳನ್ನು ಸೂಚಿಸುತ್ತದೆ. ಈ ಹೊಸ ಎಲೆಕ್ಟ್ರಿಕ್ ಬೈಕ್ ಅಗ್ರೇಸಿವ್ ಮತ್ತು ಸ್ಕಪಲಟಡ್ ಲುಕ್ ಅನ್ನು ಹೊಂದಿದೆ, ಇದು ಸಮಗ್ರ LED ಡೇಟೈಮ್ ರನ್ನಿಂಗ್ ಲೈಟ್‌ನೊಂದಿಗೆ LED ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡಿದೆ. ಸೈಡ್ ಕೌಲ್‌ಗಳನ್ನು ಬೈಕ್‌ಗೆ ಏರೋಡೈನಾಮಿಕ್ ದಕ್ಷತೆಯನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಒಟಿನಲ್ಲಿ ಈ ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ.

ಹೊಸ ಮ್ಯಾಟರ್ Aera ಎಲೆಕ್ಟ್ರಿಕ್ ಬೈಕಿನ ಇತರ ವಿನ್ಯಾಸದ ಅಂಶಗಳಲ್ಲಿ ಸಾಂಪ್ರದಾಯಿಕ ICE ಬೈಕ್‌ಗಳ ಎಂಜಿನ್ ಗಾರ್ಡ್ ಅನ್ನು ಹೋಲುವ ಮೋಟಾರ್ ಗಾರ್ಡ್, ಸ್ಪ್ಲಿಟ್ ಸೀಟ್‌ಗಳು, ಎಲ್‌ಇಡಿ ಟೈಲ್‌ಲೈಟ್ ಮತ್ತು ಪಿಲಿಯನ್ ರೈಡರ್‌ಗಾಗಿ ಸ್ಪ್ಲಿಟ್ ಗ್ರಾಬ್ ರೈಲ್ ಸೇರಿವೆ. ಇನ್ನು ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಗಳನ್ನು ನೀಡಿದೆ. ಇದರೊಂದಿಗೆ ಸಿಂಗಲ್ ABS ಅನ್ನು ನೀಡಲಾಗಿದೆ.

More from DriveSpark

Article Published On: Wednesday, March 1, 2023, 19:13 [IST]
English summary
First electric bike in india with manual transmission matter aera launched details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+