ಮೊಟ್ಟ ಮೊದಲ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಎಲೆಕ್ಟ್ರಿಕ್ ಕಾನ್ಸೆಪ್ಟ್ ಬೈಕ್ ಅನಾವರಣ: ಹೇಗಿದೆ?
ದೇಶದ ಪ್ರೀಮಿಯಂ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ರಾಯಲ್ ಎನ್‌ಫೀಲ್ಡ್ (Royal Enfield) ಜನಪ್ರಿಯತೆ ಗಳಿಸಿದೆ. ಹೆಚ್ಚಿನ ಸಂಖ್ಯೆಯ ಯುವ ಜನರು ಕಂಪನಿಯ ಬೈಕ್‌ಗಳಿಗೆ ಆಕರ್ಷಿತರಾಗಿದ್ದು, ತಮ್ಮ ನೆಚ್ಚಿನ ವಾಹನವಾಗಿ ಪರಿಗಣಿಸಿ, ಎಷ್ಟೇ ವೆಚ್ಚವಾದರೂ ಖರೀದಿಸುತ್ತಾರೆ. ಇನ್ಮುಂದೆ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಎಲೆಕ್ಟ್ರಿಕ್ ರೂಪದಲ್ಲಿ ಸಿಗುವ ಕಾಲ ಹತ್ತಿರಬಂದಿದೆ.
ರಾಯಲ್ ಎನ್‌ಫೀಲ್ಡ್ (Royal Enfield), ಹಿಮಾಲಯನ್ ಎಲೆಕ್ಟ್ರಿಕ್ ಕಾನ್ಸೆಪ್ಟ್ (Himalayan Electric Concept) ಬೈಕ್ ಮಾದರಿಯನ್ನು EICMA 2023 (ಅಂತರಾಷ್ಟ್ರೀಯ ಮೋಟಾರ್ ಸೈಕಲ್ ಮತ್ತು ಪರಿಕರಗಳ ಪ್ರದರ್ಶನ)ರಲ್ಲಿ ಹಿಮಾಲಯನ್ 452 (Himalayan 452)ನೊಂದಿಗೆ ಅನಾವರಣ ಮಾಡಿದೆ. ಆದರೆ, ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನ ಬ್ಯಾಟರಿ, ರೇಂಜ್ ಹಾಗೂ ವೈಶಿಷ್ಟ್ಯದ ಕುರಿತು ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ.

ಸದ್ಯ, ಪ್ರದರ್ಶನಗೊಳಿಸಲಾಗಿರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಎಲೆಕ್ಟ್ರಿಕ್ ಕಾನ್ಸೆಪ್ಟ್ ಬೈಕ್ ವಿನ್ಯಾಸದ ಬಗ್ಗೆ ತಿಳಿಯೋಣ. ಈ ಬೈಕ್ ಡಿಸೈನ್ ಬಹುತೇಕ ಹೊಸ ಹಿಮಾಲಯನ್ 452 ಮೋಟಾರ್‌ಸೈಕಲ್‌ಗೆ ಹೋಲಿಕೆಯಾಗುತ್ತದೆ. ಒಮ್ಮೆಲೇ ಇದರ ಸ್ಟೈಲಿಂಗ್ ನೋಡುಗರನ್ನು ತನ್ನತ್ತ ಆಕರ್ಷಿಸುತ್ತದೆ. ನೂತನ ಎಲೆಕ್ಟ್ರಿಕ್ ಕಾನ್ಸೆಪ್ಟ್ ಬೈಕ್ ವೃತ್ತಾಕಾರದ ಎಲ್ಇಡಿ ಹೆಡ್‌ಲ್ಯಾಂಪ್ (Circular LED Headlamp) ಹೊಂದಿದೆ.
ಇದರೊಂದಿಗೆ ದೊಡ್ಡದಾದ ವಿಂಡ್‌ಸ್ಕ್ರೀನ್ (large windscreen) ಒಳಗೊಂಡಿದೆ. ಟ್ಯಾಂಕ್ ಭಾಗವು ನೇರವಾಗಿ ಸಿಂಗಲ್ - ಪೀಸ್ ಸೀಟಿನಲ್ಲಿ ಕೂಡಿಕೊಂಡಿದೆ. ಅದರ ಕೆಲಭಾಗದಲ್ಲಿ ಎಲೆಕ್ಟ್ರಿಕ್ ಮೋಟರ್ ಇದ್ದು, ಇಂಧನ ಚಾಲಿತ ಹಿಮಾಲಯನ್ ಬೈಕ್‌ಗೆ ಹೋಲಿಕೆ ಮಾಡಿದರೆ, ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಕೂಡ ಆಫ್ - ರೋಡ್ ಚಾಲನೆ ಮಾಡಲು ಹೆಚ್ಚು ಸೂಕ್ತವಾಗಿದೆ.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಎಲೆಕ್ಟ್ರಿಕ್ ಕಾನ್ಸೆಪ್ಟ್ ಬೈಕ್, ಫ್ರಂಟ್ ಅಪ್-ಸೈಡ್ ಡೌನ್ ಪೋರ್ಕ್ಸ್, ರೇರ್ ಅಡ್ಜಸ್ಟ್ಏಬಲ್ ಶಾಕ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಪ್ರಸ್ತುತ ತಯಾರಿಕೆ ಹಂತದಲ್ಲಿದ್ದು, ಸಾಕಷ್ಟು ಪರೀಕ್ಷೆ ನಡೆಸುವ ಅಗತ್ಯವಿರುವುದರಿಂದ ರಸ್ತೆಗೆ ಬರಲು ಕೆಲವು ವರ್ಷಗಳು ಬೇಕಾಗಲಿದೆ. ಮೂಲಗಳ ಪ್ರಕಾರ, 2025ರಲ್ಲಿ ಬಿಡುಗಡೆಯಾಗುವ ನೀರಿಕ್ಷೆಯಿದೆ.
ಇದರೊಟ್ಟಿಗೆ ಅನಾವರಣಗೊಂಡಿರುವ ಹಿಮಾಲಯನ್ 452 ಅಡ್ವೆಂಚರ್ ಬೈಕ್ (Himalayan 452 adventure bike) ಬುಕ್ಕಿಂಗ್ ಜಾಗತಿಕ ಮಾರುಕಟ್ಟೆಯಲ್ಲಿ ಇಂದಿನಿಂದ ಆರಂಭವಾಗಿದೆ. ನವೆಂಬರ್ 24ರಿಂದ ಗ್ರಾಹಕರ ಕೈಸೇರಲಿದೆ. ಕಂಪನಿಯು ಈ ಬೈಕ್ ಬೆಲೆಯನ್ನು ಈವರೆಗೆ ಬಹಿರಂಗಪಡಿಸಿಲ್ಲ. ಆದರೆ, ಕೆಟಿಎಂ 390 ಅಡ್ವೆಂಚರ್ (ರೂ.2.80 - ರೂ.3.60 ಲಕ್ಷ), ಬಿಎಂಡಬ್ಲ್ಯೂ ಜಿ 310 ಜಿಎಸ್ (ರೂ.3.25 ಲಕ್ಷ) ಬೈಕ್ ನಂತೆ ದರವಿರಬಹುದು ಎಂದು ಅಂದಾಜಿಸಲಾಗಿದೆ.

ಈ ಹಿಮಾಲಯನ್ 452 ಅಡ್ವೆಂಚರ್ ಬೈಕ್ ಸಾಕಷ್ಟು ಅತ್ಯಾಧುನಿಕವಾಗಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿರುವ ಮೊದಲ ಮೋಟಾರ್‌ಸೈಕಲ್ ಆಗಿದೆ. ಫುಲ್ ಡಿಜಿಟಲ್ ಟಿಎಫ್‌ಟಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿದೆ. ಇದು, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಸ್ವಿಚ್ಏಬಲ್ ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಒಳಗೊಂಡಿದೆ. 21/17 - ಇಂಚಿನ ಸ್ಪೋಕ್ ವೀಲ್ ಪಡೆದಿದೆ.
ಇನ್ನು, ಮುಂಬರುವ ದಿನಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಬಹುತೇಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಇರಲಿವೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ಈ ವಿಭಾಗದಲ್ಲಿ ಪ್ರಬಲ ಸ್ಪರ್ಧಿಯೊಡ್ಡಲು ಹೊಸ ಹಿಮಾಲಯನ್ ಎಲೆಕ್ಟ್ರಿಕ್ ಕಾನ್ಸೆಪ್ಟ್ ಬೈಕ್ ಅನಾವರಣಗೊಳಿಸಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಬಿಡುಗಡೆಯಾದ ಮೇಲೆ ಹೆಚ್ಚಿನ ಗ್ರಾಹಕರನ್ನು ಸೆಳೆಯುವುದರಲ್ಲಿ ಎರಡು ಮಾತಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








