Gear Head: 25,000 ರೂಪಾಯಿಗೆ 30 km ಕ್ರಮಿಸುವ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ
ದೇಶದಲ್ಲಿ ಶುದ್ಧ ಪರಿಸರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಉತ್ತೇಜಿಸುತ್ತಿದೆ. ಅದಕ್ಕೆ ತಕ್ಕಂತೆ ವಿವಿಧ ಕಂಪನಿಗಳು ಕೂಡ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ. ಇದೀಗ, ಆ ಸಾಲಿಗೆ ಹೈದರಾಬಾದ್ (Hyderabad) ಮೂಲಕದ ಇವಿ ತಂತ್ರಜ್ಞಾನ ಕಂಪನಿ ಗೇರ್ ಹೆಡ್ ಮೋಟಾರ್ಸ್ (Gear Head Motors) ಸೇರ್ಪಡೆಯಾಗಿದೆ.
ಕಂಪನಿಯು ಎಲ್2.0 (L 2.0) ಸರಣಿಯ ನೂತನ ಎಲೆಕ್ಟ್ರಿಕ್ ಸೈಕಲ್ ಅನ್ನು ಲಾಂಚ್ ಮಾಡಿದೆ. ಈ ಬೈಸಿಕಲ್ ರೂ.25,000 ಬೆಲೆಗೆ ಖರೀದಿಗೆ ಲಭ್ಯವಿದ್ದು, 250 - ವಾಲ್ಟ್ ಜಿಹೆಚ್ಎಂ ಮೋಟಾರ್ ಸಹಾಯದಿಂದ ಕಾರ್ಯನಿರ್ವಹಿಸಲಿದೆ. ಸಂಪೂರ್ಣ ಚಾರ್ಜಿನಲ್ಲಿ 30 km ರೇಂಜ್ ನೀಡುತ್ತದೆ. ಬ್ಯಾಟರಿಯಲ್ಲಿ ಚಾರ್ಜ್ ಮುಗಿದಾಗ ಪೆಡಲ್ ಸಹಾಯದಿಂದ ಚಲಿಸಲಿದೆ.

ಗೇರ್ ಹೆಡ್ ಎಲ್2.0 ಸರಣಿ ಎಲೆಕ್ಟ್ರಿಕ್ ಸೈಕಲ್, 3 ಎಎಂಪಿ ಫಾಸ್ಟ್ ಚಾರ್ಜರ್ ಆಯ್ಕೆಯನ್ನು ಹೊಂದಿದ್ದು, ಇದರ ಬ್ಯಾಟರಿ 2 ಗಂಟೆಯಲ್ಲಿ ಸಂಪೂರ್ಣ ಚಾರ್ಜ್ ಆಗುತ್ತದೆ. ಈ ಹೊಸ ಇ-ಸೈಕಲ್, 36V 6Ah ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಪಡೆದಿದೆ. ಜೊತೆಗೆ ಇ-ಕಟ್ಆಫ್ ತಂತ್ರಜ್ಞಾನ (technology)ದೊಂದಿಗೆ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಒಳಗೊಂಡಿದೆ.
ಇದರಿಂದಾಗಿ ಬ್ರೇಕ್ ಹಾಕಿದ ಕೊಡಲೇ, ಸೈಕಲ್ ನಲ್ಲಿರುವ ಮೋಟಾರ್ ತನ್ನಿಂದ ತಾನೇ ನಿಲ್ಲುತ್ತದೆ. ಈ ಎಲೆಕ್ಟ್ರಿಕ್ ಸೈಕಲ್ ಎಲ್ಇಡಿ ಲೈಟ್ಸ್, ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್, 27.5 ಇಂಚಿನ ಟೈಯಾರ್ಸ್ ಹೊಂದಿದೆ. ಜೊತೆಗೆ ಕಾರ್ಬನ್ ಸ್ಟೀಲ್ ಫ್ರೇಮ್ ಒಳಗೊಂಡಿರುವ ಈ ಸೈಕಲ್, 25 kmph ಟಾಪ್ ಸ್ವೀಡ್ ಪಡೆದಿದೆ.

ಅಲ್ಲದೆ, ನೀರು ಹಾಗೂ ಧೂಳು ಬಿದ್ದರೂ ಹಾಳಾಗದಂತೆ ಈ ಸೈಕಲ್ ವಿನ್ಯಾಸ ಮಾಡಲಾಗಿದ್ದು, ಇದು ಗ್ರಾಹಕರಲ್ಲಿ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ ಎಂದು ಕಂಪನಿ ಹೇಳಿದೆ. ಈ ಸೈಕಲ್, ಬರೋಬ್ಬರಿ 22 ಕೆಜಿ ತೂಕವಿದ್ದು, ರೆಡ್ ಹಾಗೂ ಸ್ಕೈ ಬ್ಲೂ ಎಂಬ ಎರಡು ಬಣ್ಣದ ಆಯ್ಕೆಯಲ್ಲಿ ಖರೀದಿದಾರರಿಗೆ ಸಿಗುತ್ತದೆ.
ಗೇರ್ ಹೆಡ್ ಮೋಟಾರ್ಸ್ ಕಂಪನಿ, ಎಲ್2.0 ಎಲೆಕ್ಟ್ರಿಕ್ ಸೈಕಲ್‌ನ ಫ್ರೇಮ್‌ಗೆ ಜೀವಮಾನ ವಾರಂಟಿ (lifetime warranty) ನೀಡುತ್ತಿದೆ. ಆದರೆ, ಬ್ಯಾಟರಿ ಪ್ಯಾಕ್ ಗೆ 2.5 ವರ್ಷಗಳವರೆಗೆ ವಾರಂಟಿಯನ್ನು ಕೊಡುತ್ತಿದೆ. ಈ ಸೈಕಲ್ ಬಿಡುಗಡೆ ಬಗ್ಗೆ ಮಾತನಾಡಿರುವ ಕಂಪನಿಯ ಸಹ-ಸಂಸ್ಥಾಪಕ ನಿಖಿಲ್ ಗುಂಡಾ, 'ಇದೊಂದು ಮೇಕ್ ಇನ್ ಇಂಡಿಯಾ ಬೈಸಿಕಲ್ ಆಗಿದ್ದು, ಇಂಗಾಲವೂ ವಾತಾವರಣ ಸೇರುವುದನ್ನು ಕಡಿಮೆಗೊಳಿಸುತ್ತದೆ' ಎಂದಿದ್ದಾರೆ.
ಇನ್ನು, ಹೆಚ್ಚು-ಕಮ್ಮಿ ಇಷ್ಟೇ ಬೆಲೆಗೆ ಟಾಟಾ ಇಂಟರ್‌ನ್ಯಾಷನಲ್ ಲಿಮಿಟೆಡ್‌ನ ಅಂಗಸಂಸ್ಥೆಯಾದ 'ಸ್ಟ್ರೈಡರ್' ಜೀಟಾ ಸರಣಿಯ ಬೈಸಿಕಲ್ ಖರೀದಿಗೆ ಲಭ್ಯವಿದೆ. ಇತ್ತೀಚೆಗೆ ಜೀಟಾ ಮ್ಯಾಕ್ಸ್ ಸೈಕಲ್ ಅನ್ನು ರೂ.29,995 ಪರಿಚಯಾತ್ಮಕ ಬೆಲೆಗೆ ಬಿಡುಗಡೆ ಮಾಡಲಾಗಿತ್ತು. ಇದು, 36V/ 7.5Ah ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಂಪೂರ್ಣ ಚಾರ್ಜಿನಲ್ಲಿ 35 km ವರೆಗೆ ಚಲಿಸಬಲ್ಲದು.
ಈ ಜೀಟಾ ಮ್ಯಾಕ್ಸ್ ಸೈಕಲ್, ಮ್ಯಾಟ್ ಗ್ರೇ ಹಾಗೂ ಮ್ಯಾಟ್ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಖರೀದಿದಾರರಿಗೆ ಸಿಗಲಿದ್ದು, 25 km/hr ಟಾಪ್ ಸ್ವೀಡ್ ಪಡೆಯಲಿದೆ. ಆಟೋ-ಕಟ್ ಬ್ರೇಕ್‌ನ್ನು ಒಳಗೊಂಡಿದೆ. ಇದರ ಪ್ರಮುಖ ವೈಶಿಷ್ಟ್ಯವೆಂದರೆ, LCD ಡಿಸ್ಪ್ಲೇಯಿದ್ದು, ಇದರಲ್ಲಿ ಬ್ಯಾಟರಿ ಲೆವೆಲ್, ಓಡೋಮೀಟರ್ ಸೇರಿದಂತೆ ಹೆಚ್ಚಿನ ಮಾಹಿತಿ ದೊರೆಯುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








