Godawari Eblu Feo: ವರಮಹಾಲಕ್ಷ್ಮಿ.. ಅಗ್ಗದ ವಾಟರ್ ಪ್ರೊಫ್ ಗೋದಾವರಿ ಎಬ್ಲು ಫಿಯೊ ಇ-ಸ್ಕೂಟರ್ ಲಾಂಚ್

ದೇಶದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಕಳೆದ ಎರಡು ವರ್ಷದಿಂದ ದೊಡ್ಡಮಟ್ಟದಲ್ಲಿ ಜನಪ್ರಿಯತೆಗಳಿಸಿವೆ. ಅದರಲ್ಲೂ ಇ - ಸ್ಕೂಟರ್‌ಗಳಿಗೆ ಪ್ರತೇಕ ಅಭಿಮಾನಿ ಬಳಗವೇ ಇದೆ. ಗೋದಾವರಿ ಎಲೆಕ್ಟ್ರಿಕ್ ಮೋಟಾರ್ಸ್ (Godawari Electric Motors) ಕೈಗೆಟುಕುವ ಬೆಲೆಯ ಎಬ್ಲು ಫಿಯೊ (Eblu Feo) ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದೆ.

ನೂತನ ಗೋದಾವರಿ ಎಬ್ಲು ಫಿಯೊ ಎಲೆಕ್ಟ್ರಿಕ್ ಸ್ಕೂಟರ್, ರೂ.99,999 (ಎಕ್ಸ್ ಶೋರೂಂ) ಆರಂಭಿಕ ಬೆಲೆಯನ್ನು ಹೊಂದಿದೆ. ಇದರಲ್ಲಿ 2.52 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದ್ದು, ಸಂಪೂರ್ಣ ಚಾರ್ಜಿನಲ್ಲಿ 110 ಕಿಲೋಮೀಟರ್ ರೇಂಜ್ ನೀಡುತ್ತದೆ. ಇದು ಧೂಳು (dust) ಹಾಗೂ ಜಲ (water) ನಿರೋಧಕವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಈಗಾಗಲೇ ಬುಕ್ಕಿಂಗ್ ಆರಂಭವಾಗಿದ್ದು, ನಾಳೆಯಿಂದ (ಆಗಸ್ಟ್ 23) ವಿತರಣೆಗಳು ಶುರುವಾಗಲಿದೆ.

Godawari Eblu Feo: ವರಮಹಾಲಕ್ಷ್ಮಿ.. ಅಗ್ಗದ ವಾಟರ್ ಪ್ರೊಫ್ ಗೋದಾವರಿ ಎಬ್ಲು ಫಿಯೊ ಇ-ಸ್ಕೂಟರ್ ಲಾಂಚ್

ಹೊಚ್ಚ ಹೊಸ ಗೋದಾವರಿ ಎಬ್ಲು ಫಿಯೊ ಎಲೆಕ್ಟ್ರಿಕ್ ಸ್ಕೂಟರ್ ಮೂರು ರೈಡಿಂಗ್ ಮೋಡ್ ಆಯ್ಕೆಗಳನ್ನು ಹೊಂದಿದೆ. ಅವುಗಳೆಂದರೆ, ಎಕಾನಮಿ (Economy), ನಾರ್ಮಲ್ (Normal) ಹಾಗೂ ಪವರ್ (Power). ಈ ಸ್ಕೂಟರ್, ಮನೆಯ ವಿದ್ಯುತ್ (60 ವಿ) ಉಪಯೋಗದಲ್ಲಿ ಸಂಪೂರ್ಣ ಚಾರ್ಜ್ ಆಗಲು 5 ಗಂಟೆ 25 ನಿಮಿಷ ತೆಗೆದುಕೊಳ್ಳುತ್ತದೆ.

ಪ್ರಯಾಣಿಕರ ಸುರಕ್ಷತೆಗೆ ಈ ಸ್ಕೂಟರ್, ಫ್ರಂಟ್ ಹಾಗೂ ರೇರ್ ಸಿಬಿಎಸ್ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. ಇದರೊಟ್ಟಿಗೆ, ಫ್ರಂಟ್ ಟೆಲಿಸ್ಕೋಪಿಕ್, ರೇರ್ ಡ್ಯುಯಲ್ ಟ್ಯೂಬ್ ಟ್ವಿನ್ ಶಾಕರ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ವಿನ್ಯಾಸದ ದೃಷ್ಟಿಯಿಂದಲ್ಲೂ ಅತ್ಯುತ್ತಮವಾಗಿದ್ದು, ಹೈ-ರೆಸಲ್ಯೂಶನ್ LED ಹೆಡ್‌ಲ್ಯಾಂಪ್ಸ್, LED ಟೈಲ್ ಲ್ಯಾಂಪ್ಸ್ ಒಳಗೊಂಡಿದೆ. ಜೊತೆಯಲ್ಲಿ 12-ಇಂಚಿನ ಟ್ಯೂಬ್‌ಲೆಸ್ ಟೈಯಾರ್ಸ್, ಸೈಡ್ ಸ್ಟ್ಯಾಂಡ್ ಸೆನ್ಸರ್ಸ್ ಇಂಡಿಕೇಟರ್ ಅನ್ನು ಪಡೆದಿದೆ.

Godawari Eblu Feo: ವರಮಹಾಲಕ್ಷ್ಮಿ.. ಅಗ್ಗದ ವಾಟರ್ ಪ್ರೊಫ್ ಗೋದಾವರಿ ಎಬ್ಲು ಫಿಯೊ ಇ-ಸ್ಕೂಟರ್ ಲಾಂಚ್

ಎಬ್ಲು ಫಿಯೊ ಇ-ಸ್ಕೂಟರ್ ಸಯಾನ್ ಬ್ಲೂ, ವೈನ್ ರೆಡ್ ಹಾಗೂ ಟೆಲಿ ಗ್ರೇ ಸೇರಿದಂತೆ ಐದು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, ಯುವ ಗ್ರಾಹಕರನ್ನು ಆಕರ್ಷಿಸುವ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ನ್ಯಾವಿಗೇಶನ್ ಗಾಗಿ ಬ್ಲೂಟೂತ್ ಕನೆಕ್ಟಿವಿಟಿ, ಅಗಲವಾದ ಫ್ಲೋರ್‌ಬೋರ್ಡ್, ಮೊಬೈಲ್ ಚಾರ್ಜಿಂಗ್ ಪಾಯಿಂಟ್, 7.4 ಇಂಚಿನ ಡಿಜಿಟಲ್ ಫುಲ್ ಕಲರ್ ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇ ಕಾಲ್ ಅಲರ್ಟ್ ಸೇರಿದಂತೆ ಹೆಚ್ಚಿನ ಮಾಹಿತಿ ತೋರಿಸುತ್ತದೆ.

ಈ ಸ್ಕೂಟರ್ ಬಿಡುಗಡೆ ಬಗ್ಗೆ ಮಾತನಾಡಿರುವ ಗೋದಾವರಿ ಎಲೆಕ್ಟ್ರಿಕ್ ಮೋಟಾರ್ಸ್ ಸಿಇಒ ಹೈದರ್ ಖಾನ್ ಅವರು, 'ಎಬ್ಲು ಫಿಯೊ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಛತ್ತೀಸ್‌ಗಢ ರಾಯಪುರದಲ್ಲಿರುವ ಕಂಪನಿಯ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗುತ್ತದೆ. ಕೇವಲ ಒಂದೇ ರೂಪಾಂತರ ಆಯ್ಕೆಯಲ್ಲಿ ಮಾರಾಟ ಮಾಡಲಾಗುವುದು. ಇದು, ಹಲವಾರು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದ್ದು, ಭಾರತೀಯ ಕುಟುಂಬಗಳಿಗೆ ಹೇಳಿ ಮಾಡಿಸಿದ ರೀತಿಯಲ್ಲಿದೆ' ಎಂದು ಹೇಳಿದ್ದಾರೆ.

Godawari Eblu Feo: ವರಮಹಾಲಕ್ಷ್ಮಿ.. ಅಗ್ಗದ ವಾಟರ್ ಪ್ರೊಫ್ ಗೋದಾವರಿ ಎಬ್ಲು ಫಿಯೊ ಇ-ಸ್ಕೂಟರ್ ಲಾಂಚ್

ಪ್ರಸ್ತುತ, ಭಾರತದ ಮಾರುಕಟ್ಟೆಯಲ್ಲಿ ಇದೇ ಬೆಲೆಗೆ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳು ಖರೀದಿಗೆ ಲಭ್ಯವಿವೆ. ಕಂಪನಿ ಮಾರಾಟ ಮಾಡುವ ಎಸ್1 ಎಕ್ಸ್ ಸರಣಿ ಸ್ಕೂಟರ್‌ಗಳ ಹೇಳುವುದಾದರೆ, ಇವು ಎಸ್1 ಎಕ್ಸ್ (2kWh), ಎಸ್1 ಎಕ್ಸ್ (3kWh) ಹಾಗೂ ಎಸ್1 ಎಕ್ಸ್ ಪ್ಲಸ್ ಎಂಬ ಮೂರು ವಿಧದ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, ಕ್ರಮವಾಗಿ ರೂ.80,000, ರೂ.90,000 ಹಾಗೂ ರೂ.1 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿವೆ.

ಓಲಾ ಎಸ್1 ಎಕ್ಸ್ (2kWh) ಸ್ಕೂಟರ್, ಫುಲ್ ಚಾರ್ಜಿನಲ್ಲಿ 91 ಕಿಲೋಮೀಟರ್ ರೇಂಜ್ ನೀಡಲಿದೆ. 85 kmph ಟಾಪ್ ಸ್ವೀಡ್ ಹೊಂದಿದೆ. ಎಸ್1 ಎಕ್ಸ್ (3kWh) ಮತ್ತು ಎಸ್1 ಎಕ್ಸ್ ಪ್ಲಸ್ ಸ್ಕೂಟರ್‌ಗಳು, ಸಂಪೂರ್ಣ ಚಾರ್ಜಿನಲ್ಲಿ 151 ಕಿಲೋಮೀಟರ್ ರೇಂಜ್ ಕೊಡಲಿದ್ದು, 90 kmph ಟಾಪ್ ಸ್ವೀಡ್ ಪಡೆದಿವೆ. ಮನೆಯ ವಿದ್ಯುತ್ ಬಳಕೆಯಲ್ಲಿ ಇವುಗಳ ಬ್ಯಾಟರಿ ಪ್ಯಾಕ್, ಚಾರ್ಜ್ ಆಗಲು 7.4 ಗಂಟೆಬೇಕು.

ಇನ್ನು, ಬಹುತೇಕ ಬೇರೆ ಕಂಪನಿ ಎಲೆಕ್ಟ್ರಿಕ್ ಸ್ಕೂಟರ್ ಗಳು ಇದಕ್ಕಿಂತ ಹೆಚ್ಚಿನ ಬೆಲೆಯನ್ನು ಹೊಂದಿವೆ. ಸದ್ಯ, ಭಾರತ ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿ ಗೋದಾವರಿ ಎಲೆಕ್ಟ್ರಿಕ್ ಮೋಟಾರ್ಸ್, ಕಡಿಮೆ ಬೆಲೆಗೆ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯ ಹೊಂದಿರುವ ಎಬ್ಲು ಫಿಯೊ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ್ದು, ಗ್ರಾಹಕರಿಗೆ ಖುಷಿ ತಂದಿದೆ. ಮುಂಬರುವ ದಿನಗಳಲ್ಲಿ ಈ ಸ್ಕೂಟರ್ ಮಾರಾಟ ಮತ್ತಷ್ಟು ವೃದ್ಧಿಯಾಗುವ ಸಾಧ್ಯತೆಯಿದೆ.

More from DriveSpark

Article Published On: Tuesday, August 22, 2023, 17:21 [IST]
English summary
Godawari eblu feo electric scooter launched india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+