ಭಾರೀ ಸಂಖ್ಯೆಯ ಬುಕಿಂಗ್ ಪಡೆಯುತ್ತಿರುವ ಹಾರ್ಲೆ ಡೇವಿಡ್ಸನ್ X440: ಖುಷಿಯಿಂದ ಕಂಪನಿ ಸಿಇಒ ಹೇಳಿದ್ದೇನು?
ಕಳೆದ ತಿಂಗಳಷ್ಟೇ ಪ್ರಸಿದ್ದ ಬೈಕ್ ತಯಾರಿಕಾ ಅಮೆರಿಕನ್ ಕಂಪನಿಯಾದ ಹಾರ್ಲೆ ಡೇವಿಡ್ಸನ್ ಭಾರತದಲ್ಲಿ ತನ್ನ ಅಗ್ಗದ ಬೈಕ್ ಒಂದನ್ನು ಲಾಂಚ್ ಮಾಡಿತ್ತು. ಅದುವೇ ಹಾರ್ಲೆ ಡೇವಿಡ್ಸನ್‌ನ ಬಹು ನಿರೀಕ್ಷಿತ X440. ಇದೀಗ ಈ ಬೈಕ್‌ನ ಕುರಿತಾಗಿ ಕಂಪನಿಯ ಸಿಇಒ ಪ್ರತಿಕ್ರಿಯಿಸಿದ್ದು ಸಂತಸವನ್ನು ಹೊರ ಹಾಕಿದ್ದಾರೆ.
ಹೊಸ ಹಾರ್ಲೆ ಡೇವಿಡ್ಸನ್ X440 ಬೈಕ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಂಪನಿಯ ಸಿಇಒ ಓಚೆನ್ ಝೀಟ್ಸ್, ಭಾರತದಲ್ಲಿ ನಾವು ಲಾಂಚ್ ಮಾಡಿರುವ ಹೊಸ ಬೈಕಾದ ಹಾರ್ಲೆ ಡೇವಿಡ್ಸನ್ X440 (Harley Davidson X440) ನಮ್ಮೆಲ್ಲರ ನಿರೀಕ್ಷೆಗೂ ಮೀರಿದ ಸ್ಪಂದನೆಯನ್ನು ಜನರಿಂದ ಪಡೆಯುತ್ತಿದ್ದು, ಈ ಬೈಕ್‌ನ ಪ್ರೀ ಆರ್ಡರ್‌ಗಳಂತೂ ನಮ್ಮ ನಿಲುಕೆಗೂ ಮೀರಿದ ಸಂಖ್ಯೆಯನ್ನು ಪ್ರವೇಶಿಸುತ್ತಿದೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಹೀರೋ - ಹಾರ್ಲೆ ಡೇವಿಡ್ಸನ್ ಸಹಯೋಗದೊಂದಿಗೆ ಮಾರುಕಟ್ಟೆಗ ಕಾಲಿಟ್ಟಿರುವ ಹಾರ್ಲೆ ಡೇವಿಡ್ಸನ್ X440 ಬೈಕ್‌ಗೆ ಜನರಿಂದ ಭಾರೀ ಬೆಂಬಲ ವ್ಯಕ್ತವಾಗುತ್ತಿದ್ದು, ಇದರಿಂದ ಕಂಪನಿಯ ಮುಖದಲ್ಲಿ ನಗು ಮುಖಮಾಡಿದೆ ಎಂದು ತಿಳಿದು ಬಂದಿದೆ. ಸಿಇಒ ಓಚೆನ್ ಝೀಟ್ಸ್ ಇಷ್ಟು ಮಾತ್ರ ಮಾಹಿತಿ ನೀಡಿದ್ದು, ಈ ಬೈಕ್ ಇಲ್ಲಿಯ ತನಕ ಎಷ್ಟು ಬುಕಿಂಗ್ ಅನ್ನು ಪಡೆದುಕೊಡಿದೆ ಎಂಬುದರ ಬಗ್ಗೆ ನಿಖರವಾಗಿ ಮಾಹಿತಿ ನೀಡಿಲ್ಲ.
ಇನ್ನು ಹಾರ್ಲೆ ಡೇವಿಡ್‌ಸನ್ ಪ್ರೀಮಿಯಂ ಬೈಕ್ ತಯಾರಿಕಾ ಅಮೇರಿಕನ್ ಕಂಪನಿಯಾಗಿದ್ದು, ಮೊದಲ ಬಾರಿಗೆ ಕೈಗೆಟಕುವ ಬೆಲೆಯಲ್ಲಿ ಬೈಕ್ ಅನ್ನು ಹೀರೋ ಕಂಪನಿಯ ಸಹಯೋಗದಲ್ಲಿ ಭಾರತದಲ್ಲಿ ಲಾಂಚ್ ಮಾಡಿದೆ. ಹಾರ್ಲೆ ಡೇವಿಡ್‌ಸನ್ ಕಂಪನಿಯು ಅಗ್ಗದ ಬೆಲೆಯಲ್ಲಿ ಭಾರತದಲ್ಲಿ ಬೈಕ್ ಲಾಂಚ್ ಮಾಡಲಿದೆ ಎಂದು ಸುದ್ದಿಗಳು ಹರಿದಾಡುತ್ತಿದ್ದಾಗಲೇ ಜನರಲ್ಲಿ ಭಾರೀ ನಿರೀಕ್ಷೆ ಮನೆ ಮಾಡಿತ್ತು.

ಬೈಕ್ ಲಾಂಚ್ ಆದ ಮೇಲಂತೂ ಜನರ ನಿರೀಕ್ಷೆಯನ್ನು ಪೂರ್ತಿಗೊಳಿಸಿದ್ದ ಈ ಬೈಕ್ ಇದೀಗ ಭಾರೀ ಬುಕಿಂಗ್ ಆರ್ಡರ್ ಅನ್ನು ಪಡೆದುಕೊಳ್ಳುತ್ತಿದೆ. ಇನ್ನು ಇದೇ ಸಂಧರ್ಭದಲ್ಲಿ ಮತ್ತೊಂದು ಪ್ರಸಿದ್ದ ಬೈಕ್ ನಿರ್ಮಾಣ ಕಂಪನಿಯಾದ ಟ್ರಯಂಫ್ ಸಹ ತಮ್ಮ ಅಗ್ಗದ ಎರಡು ಬೈಕ್‌ಗಳನ್ನು ಭಾರ್ತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, ಮೊದಲ ಹಂತದ ಬೈಕ್ ಡೆಲಿವರಿ ಸದ್ಯದಲ್ಲೇ ನಡೆಯಲಿದೆ.
ಈ ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕಿನಲ್ಲಿ ಸಿಂಗಲ್-ಸಿಲಿಂಡರ್, ಆಯಿಲ್-ಕೂಲ್ಡ್, 440cc ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಸರಿಸುಮಾರು 27 bhp ಪವರ್ ಮತ್ತು 38 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ ಬಾಕ್ಸ್ ಅನ್ನ್ನು ಜೋಡಿಸಲಾಗಿದೆ.
ಇನ್ನು ಈ ಬೈಕ್‌ನ ಡಿಸೈನ್ ನೋಡುವುದಾದರೆ ಹಾರ್ಲೆ-ಡೇವಿಡ್ಸನ್ X440 ಬೈಕಿನಲ್ಲಿ LED ಲೈಟಿಂಗ್, ಆಂಬಿಯೆಂಟ್ ಲೈಟ್ ಸೆನ್ಸರ್‌ನೊಂದಿಗೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಹೆಚ್ಚಿನ ಫೀಚರ್ಸ್ ಗಳನ್ನು ಹೊಂದಿವೆ. ಇತರ ಗಮನಾರ್ಹ ಫೀಚರ್ಸ್ ಗಳು ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಕಾಲ್, ಮ್ಯೂಸಿಕ್ ಕಂಟ್ರೋಲ್ ಮತ್ತು ಗೇರ್ ಸ್ಥಾನವನ್ನು ಒಳಗೊಂಡಿವೆ.
ಇನ್ನು ಹೊಸ ಹಾರ್ಲೆ-ಡೇವಿಡ್ಸನ್ X440 ಡೆನಿಮ್, ವಿವಿಡ್ ಮತ್ತು ಎಸ್ ಎಂಬ ಮೂರು ವೇರಿಯಂಟ್‌ನಲ್ಲಿ ಲಭ್ಯವಿದ್ದು, ಇದಕ್ಕೆ ಅನುಸಾರವಾಗಿ ಈ ಬೈಕ್‌ನ ಬೆಲೆ ನಿಗದಿಯಾಗಲಿದೆ. ಇನ್ನು ಇದರ ಬೆಲೆಯನ್ನು ನೋಡುವುದಾದರೆ ಎಕ್ಸ್ ಶೋ ರೂಮ್ ೨.೨೯ ಲಕ್ಷದಿಂದ - ೨.೬೯ ಲಕ್ಷದ ವರೆಗೆ ಈ ಬೈಕ್‌ನ ಬೆಲೆ ಇದೆ. ಈ ಕಾರಣದಿಂದಾಗಿಯೇ ಜನರ ನೆಚ್ಚಿನ ಬೈಕ್ ಇದಾಗಲಿದೆ ಎಂಬುದು ಎಲ್ಲರ ಅಭಿಪ್ರಾಯ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








