Hero Vida V1: ಇನ್ಮುಂದೆ Flipkart ಮೂಲಕವೇ.. ಹೀರೋ ದೊಡ್ಡ ಘೋಷಣೆ

ಭಾರತದಲ್ಲಿ ಇ-ಕಾಮರ್ಸ್ ಪ್ಲಾಟ್​ಫಾರ್ಮ್ ಗಳು ದಿನದಿಂದ ದಿನಕ್ಕೆ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿವೆ. ಅದರಲ್ಲೂ ಅಮೆಜಾನ್, ಫ್ಲಿಪ್‌ಕಾರ್ಟ್‌ಗಳ ಓಟಕ್ಕೆ ಸರಿ ಸಾಟಿಯೇ ಇಲ್ಲ. ಇದೀಗ, ಮನೆಯಲ್ಲಿ ಕುಳಿತು ಫ್ಲಿಪ್‌ಕಾರ್ಟ್ ನಲ್ಲಿ ಸ್ಕೂಟರ್ ಅನ್ನು ಕೊಂಡುಕೊಳ್ಳಬಹುದು. ಆ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ.

ಇನ್ಮುಂದೆ ಹೀರೋ ವಿಡಾ ವಿ1 (Hero Vida V1) ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಇ-ಕಾಮರ್ಸ್ ಪ್ಲಾಟ್​ಫಾರ್ಮ್ ಫ್ಲಿಪ್‌ಕಾರ್ಟ್‌ ಮೂಲಕ ಗ್ರಾಹಕರು ಖರೀದಿಸಬಹುದು. ಡಿಜಿಟಲ್ ವೇದಿಕೆ ಮೂಲಕ ಮಾರಾಟ ಪ್ರಮಾಣವನ್ನು ದ್ವಿಗುಣಗೊಳಿಸಲು ಹೀರೋ ಕಂಪನಿ ನಿರ್ಧಾರ ಮಾಡಿದೆ. ಪ್ರಸ್ತುತ, ವಿಡಾ ವಿ1 ಎಲೆಕ್ಟ್ರಿಕ್ ಸ್ಕೂಟರ್ ನ್ನು ಶೋರೂಂಗೆ ಭೇಟಿ ನೀಡಿ, ಗ್ರಾಹಕರು ಖರೀದಿಸಬೇಕಿದ್ದು, ಕಂಪನಿಯ ಈ ತೀರ್ಮಾನದಿಂದ ಲಕ್ಷಾಂತರ ಖರೀದಿದಾರರಿಗೆ ದೊಡ್ಡ ಮಟ್ಟದಲ್ಲಿ ಅನುಕೂಲವಾಗಲಿದೆ.

Hero Vida V1: ಫ್ಲಿಪ್‌ಕಾರ್ಟ್ ಮೂಲಕವೇ ಎಲೆಕ್ಟ್ರಿಕ್ ಸ್ಕೂಟರ್ ಸಿಗುತ್ತೆ... ಹೀರೋ ದೊಡ್ಡ ಘೋಷಣೆ

ಈ ಹೀರೋ ವಿಡಾ ವಿ1 ಸ್ಕೂಟರ್ ಗಳು ಬೆಂಗಳೂರು, ಜೈಪುರ ಹಾಗೂ ನವದೆಹಲಿಯಲ್ಲಿ ಮಾತ್ರ ಖರೀದಿಗೆ ದೊರೆಯುತ್ತಿದ್ದು, ಕಂಪನಿಯು ಮಹಾರಾಷ್ಟ್ರದ ನಗರಗಳು ಸೇರಿದಂತೆ ಕೊಚ್ಚಿ, ಚೆನ್ನೈ, ಅಹಮದಾಬಾದ್ ಮತ್ತು ಹೈದರಾಬಾದ್ ಮಹಾನಗರಿಯಲ್ಲೂ ಶೀಘ್ರದಲ್ಲೇ ತನ್ನ ಮಾರಾಟ ಜಾಲವನ್ನು ವಿಸ್ತರಿಸಲಿದೆ. ಸದ್ಯ, ವಿಡಾ ವಿ1 ಎಲೆಕ್ಟ್ರಿಕ್ ಸ್ಕೂಟರ್ ಬೆಂಗಳೂರಿನಲ್ಲಿ ರೂ.1.45 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಹೀರೋ ವಿಡಾ ವಿ1 ಎಲೆಕ್ಟ್ರಿಕ್ ಸ್ಕೂಟರ್ ಎರಡು ರೂಪಾಂತರಗಳಲ್ಲಿ ಖರೀದಿಗೆ ಸಿಗಲಿದೆ. ಅವುಗಳೆಂದರೆ, ಪ್ಲಸ್ ಹಾಗೂ ಪ್ರೊ. ಇವರೆಡು ಬೇರೆ - ಬೇರೆ ಬ್ಯಾಟರಿ ಪ್ಯಾಕ್ ಆಯ್ಕೆ ಹಾಗೂ ರೇಂಜ್ ಅನ್ನು ಹೊಂದಿವೆ. 'ಪ್ಲಸ್' ರೂಪಾಂತರ 3.44 kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಂಪೂರ್ಣ ಚಾರ್ಜಿನಲ್ಲಿ 143 km ರೇಂಜ್ ನೀಡಲಿದೆ. ಟಾಪ್ ಎಂಡ್ ರೂಪಾಂತರ 'ಪ್ರೊ' 3.94 kWh ಬ್ಯಾಟರಿ 165 km ರೇಂಜ್ ಕೊಡಲಿದೆ.

ಹೀರೋ ವಿಡಾ ವಿ1 ಎಲೆಕ್ಟ್ರಿಕ್ ಸ್ಕೂಟರ್ ನ ಪ್ಲಸ್ ಮತ್ತು ಪ್ರೊ ರೂಪಾಂತರಗಳು 0 40 kmph ವೇಗವನ್ನು ಪಡೆಯಲು ಕ್ರಮವಾಗಿ 3.4 & 3.2 ಸೆಕೆಂಡ್ ತೆಗೆದುಕೊಳ್ಳುತ್ತವೆ. ಜೊತೆಗೆ 80 kmph ಟಾಪ್ ಸ್ವೀಡ್ ನೀಡಲಿದ್ದು, 3 ರೈಡಿಂಗ್ ಮೋಡ್ ಆಯ್ಕೆಯಲ್ಲಿ ಗ್ರಾಹಕರಿಗೆ ಖರೀದಿಗೆ ದೊರೆಯುತ್ತವೆ. ಅವುಗಳೆಂದರೆ, ಇಕೋ, ರೈಡ್, ಹಾಗೂ ಸ್ಪೋರ್ಟ್.

ನೂತನ ವಿಡಾ ವಿ1 ಸ್ಕೂಟರ್ ಬಣ್ಣಗಳ ಆಯ್ಕೆ ಬಗ್ಗೆ ಹೇಳುವುದಾದರೆ, ಪ್ಲಸ್ ರೂಪಾಂತರ, ಮ್ಯಾಟ್ ವೈಟ್, ಮ್ಯಾಟ್ ಸ್ಪೋರ್ಟ್ಸ್ ರೆಡ್ ಮತ್ತು ಗ್ಲೋಸ್ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾದ್ರೆ, ಪ್ರೊ ರೂಪಾಂತರ ಮ್ಯಾಟ್ ವೈಟ್, ಮ್ಯಾಟ್ ಸ್ಪೋರ್ಟ್ಸ್ ರೆಡ್, ಗ್ಲೋಸ್ ಬ್ಲ್ಯಾಕ್ ಹಾಗೂ ಮ್ಯಾಟ್ ಅಬ್ರಾಕ್ಸ್ ಆರೆಂಜ್ ಬಣ್ಣದಲ್ಲಿ ಸಿಗಲಿದೆ.

ಹೀರೋ ವಿಡಾ ವಿ1 ಕೂಡ ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಗಳಲ್ಲಿ ಒಂದಾಗಿದ್ದು, ಬದಲಾಯಿಸಬಹುದಾದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಜೊತೆಗೆ ಓಲಾ ಎಸ್1 ಪ್ರೊ, ಎಥರ್ 450X, ಬಜಾಜ್ ಚೇತಕ್ ಹಾಗೂ ಟಿವಿಎಸ್ ಐಕ್ಯೂಬ್ ಸ್ಕೂಟರ್ ಗಳಿಗೆ ನೇರ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಿದ್ದು, ಬೆಲೆ ಕೂಡ ಗ್ರಾಹಕರ ಕೈಗೆಟುಕುವಂತಿದೆ.

ಇ-ಕಾಮರ್ಸ್ ಪ್ಲಾಟ್​ಫಾರ್ಮ್ ಫ್ಲಿಪ್‌ಕಾರ್ಟ್‌ ಮೂಲಕ ವಿಡಾ ವಿ1 ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಮಾಡಲು 'ಹೀರೋ' ಕಂಪನಿ ಮಾಡಿರುವ ತೀರ್ಮಾನವನ್ನು ಗ್ರಾಹಕರು ಸ್ವಾಗತಿಸಿದ್ದು, ಮುಂಬರುವ ದಿನಗಳಲ್ಲಿ ಇದೇ ವಿಧಾನವನ್ನು ಬೇರೆ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಅನುಸರಿಸುವ ಮೂಲಕ ತಮ್ಮ ವಾಹನಗಳನ್ನು ಮಾರಾಟ ಮಾಡಬಹುದು. ಇದು ದೊಡ್ಡ ಮಟ್ಟದ ಸ್ಪರ್ಧೆಗೆ ಕಾರಣವಾಗಲಿದೆ.

More from DriveSpark

Article Published On: Tuesday, April 18, 2023, 17:49 [IST]
English summary
Hero announces sale vida v1 electric scooter in flipkart details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+