ಸ್ಪ್ಲೆಂಡರ್ ಪ್ರತಿಸ್ಪರ್ಧಿ ಹೋಂಡಾ ಶೈನ್ 100 ಸಿಸಿ ಡಿಸೈನ್ ಬಹಿರಂಗ... ಅಗ್ಗದ ಬೆಲೆಗೆ ಬಿಡುಗಡೆ ಸಾಧ್ಯತೆ!
ಭಾರತದಲ್ಲಿ ಹೋಂಡಾ ಕಂಪನಿಯು ದ್ವಿಚಕ್ರ ವಾಹನಗಳ ತಯಾರಿಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದೆ. ತನ್ನ ಉತ್ತಮ ಮೈಲೇಜ್ ಆಧಾರಿತ ವಾಹನಗಳಿಗೆ ದೇಶದಲ್ಲಿ ಭಾರೀ ಬೇಡಿಕೆ ಇದೆ. ಹಾಗಾಗಿಯೇ ಮಾರಾಟದಲ್ಲಿ ಸ್ಕೂಟರ್ ವಿಭಾಗದಲ್ಲಿ ಅಗ್ರ ಸ್ಥಾನದಲ್ಲಿದೆ. ಇದೀಗ ಹೊಸ ಬೈಕ್‌ನ ಸ್ಕೆಚ್ ಟೀಸರ್ ಬಿಡುಗಡೆ ಮೂಲಕ ಮತ್ತೊಮ್ಮೆ ನಿರೀಕ್ಷೆಗಳನ್ನು ಹೆಚ್ಚಿಸಿದೆ.
ಹೋಂಡಾದವರು ತಮ್ಮ ಶೈನ್ 100 cc ಅನ್ನು ಮಾರ್ಚ್ 15 ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಇದರ ವಿನ್ಯಾಸವು ಬಹುತೆಕ ಈ ಹಿಂದಿನ ಶೈನ್‌ನಿಂದ ಪ್ರೇರಿತವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಹೊಸ ಮಾದರಿಯು 100 cc ಪವರ್‌ಟ್ರೇನ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ. ತನ್ನ ಅಧಿಕೃತ ಮಾರುಕಟ್ಟೆ ಬಿಡುಗಡೆಗೆ ಮುಂಚಿತವಾಗಿ ಹೋಂಡಾ ತನ್ನ ಹೊಸ ಪ್ರವೇಶ ಮಟ್ಟದ ಪ್ರಯಾಣಿಕ ಮೋಟಾರ್‌ಸೈಕಲ್‌ನ ಎರಡನೇ ಟೀಸರ್ ವೀಡಿಯೊವನ್ನು ಬಿಡುಗಡೆ ಮಾಡಿದೆ.

ಮೊದಲ ಟೀಸರ್ ಹೆಚ್ಚಿನ ವಿವರಗಳನ್ನು ನೀಡದಿದ್ದರೂ, ಅದರ ಸ್ಟೈಲಿಂಗ್ ಹೇಗಿರುತ್ತದೆ ಎಂಬುದನ್ನು ತಿಳಿಯುವ ಸುಳಿವನ್ನು ನೀಡಿತ್ತು. ಮುಂಬರುವ ಮೋಟಾರ್‌ಸೈಕಲ್ ಶೈನ್ ಅನ್ನು ಆಧರಿಸಿದೆ ಎಂಬ ಊಹಾಪೋಹಗಳನ್ನು ಇದು ಪ್ರಚೋದಿಸುತ್ತಿದೆ. ಹೊಸ ಟೀಸರ್ ಕೂಡ ಅದನ್ನೇ ಖಚಿತಪಡಿಸುತ್ತಿದೆ. ಇದು ಹೀರೋ ಸ್ಪ್ಲೆಂಡರ್ ಮಾದರಿಗೆ ಪ್ರತಿಸ್ಪರ್ಧಿಯಾಗಿದ್ದು, ವಿನ್ಯಾಸವು ಆಂಗುಲರ್ ಫ್ಲೈಸ್ಕ್ರೀನ್ ಮತ್ತು ಒಂದು ಜೋಡಿ ಕನ್ನಡಿಗಳೊಂದಿಗೆ ತೀಕ್ಷ್ಣವಾಗಿ ಕಾಣುವ ಹೆಡ್‌ಲ್ಯಾಂಪ್‌ಗಳೊಂದಿಗೆ ಸಾಕಷ್ಟು ಆಕರ್ಷಕ ಲುಕ್ ಹೊಂದಿರುವಂತೆ ಕಾಣುತ್ತಿದೆ.
ಸಿಂಗಲ್-ಪೀಸ್ ಫ್ಲಾಟ್ ಸೀಟ್, ಸ್ಪ್ಲಿಟ್ ಗ್ರ್ಯಾಬ್ ರೈಲ್, ಸೈಡ್-ಮೌಂಟೆಡ್ ಎಕ್ಸಾಸ್ಟ್ ಮತ್ತು ಅಲಾಯ್ ವೀಲ್‌ಗಳನ್ನು ಸಹ ಕಾಣಬಹುದು. ಅಲಾಯ್ ವೀಲ್‌ಗಳು 18-ಇಂಚಿನದ್ದಾಗಿರಬಹುದು ಮತ್ತು ಇಂಧನ ಟ್ಯಾಂಕ್ ಸ್ಲಿಮ್ ಆಕಾರವನ್ನು ಹೊಂದಿದೆ. ವೈಡ್ ರಿಯರ್ ಮಡ್‌ಗಾರ್ಡ್, ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್, ಟ್ವಿನ್-ಸೈಡೆಡ್ ರಿಯರ್ ಶಾಕ್ ಅಬ್ಸಾರ್ಬರ್‌ಗಳು, ರಿಯರ್ ಹ್ಯಾಲೊಜೆನ್ ಟರ್ನ್ ಇಂಡಿಕೇಟರ್‌ಗಳು ಮತ್ತು ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್‌ನಂತಹ ಇತರ ಅಂಶಗಳು ಇದರಲ್ಲಿ ಲಭ್ಯವಿರಬಹುದು ಎಂದು ನಿರೀಕ್ಷಿಸಲಾಗಿದೆ.

ಹೋಂಡಾ ಮೋಟಾರ್‌ಸೈಕಲ್ ಅನ್ನು ಬಹು ರೂಪಾಂತರಗಳಲ್ಲಿ ನೀಡುವ ನಿರೀಕ್ಷೆಯಿದೆ. ಇದು ಹೊಸ 100 cc ಎಂಜಿನ್‌ನಿಂದ ಚಾಲಿತವಾಗಲಿದ್ದು, ಇದರ ಕಾರ್ಯಕ್ಷಮತೆ ಸುಮಾರು 8 bhp ಮತ್ತು 8 Nm ಟಾರ್ಕ್‌ನೊಂದಿಗೆ ಬರಬಹುದು. ಇದು ಸಂಯೋಜಿತ ಬ್ರೇಕಿಂಗ್ ಸಿಸ್ಟಮ್ ಮತ್ತು ಸೆಮಿ- ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಅನ್ನು ಸಹ ಪಡೆಯಬಹುದು. ಹೋಂಡಾದಿಂದ ಪವರ್‌ಟ್ರೇನ್ ಪರಿಷ್ಕರಣೆಯನ್ನು ಹೊಂದುವ ನಿರೀಕ್ಷೆಯಿದೆ. ಇ ಮೂಲಕ ಸ್ಟಾರ್ಟ್/ಸ್ಟಾಪ್ ವ್ಯವಸ್ಥೆಯು ಹೆಚ್ಚಿನ ಇಂಧನವನ್ನು ಉಳಿಸಲು ಸಹಾಯ ಮಾಡುತ್ತದೆ.
ಬ್ರ್ಯಾಂಡ್ ಈಗಾಗಲೇ ಆಕ್ಟಿವಾದೊಂದಿಗೆ ಹೆಚ್ಚಿನ ಪ್ರಮಾಣದ ಮಾರಾಟವನ್ನು ಗಳಿಸಿದೆ. ಮುಂಬರುವ 100 ಸಿಸಿ ಮೋಟಾರ್‌ಸೈಕಲ್ ಕಂಪನಿಯ ಮಾರಾಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹೋಂಡಾ ಇದರ ಬೆಲೆಯನ್ನು ಸುಮಾರು ರೂ. 74,000 (ಎಕ್ಸ್ ಶೋ ರೂಂ) ನಲ್ಲಿ ಇರಿಸಬಹುದು. ಇನ್ನು ಕಂಪನಿಯ ಇತರ ವಿಷಯಗಳ ಬಗ್ಗೆ ಮಾತನಾಡುವುದಾದರೆ, H'ness CB350 ಮತ್ತು CB350 RS ಗಾಗಿ ಕಸ್ಟಮ್ ಕಿಟ್‌ಗಳ ಬೆಲೆಗಳನ್ನು ಹೋಂಡಾ ಘೋಷಿಸಿದೆ. ಕೆಲವೇ ವಾರಗಳ ಹಿಂದೆ, ಆಕ್ಟಿವಾ 6G ಯ H-ಸ್ಮಾರ್ಟ್ ರೂಪಾಂತರವು ಮಾರುಕಟ್ಟೆಗೆ ಇಳಿದಿದೆ.
ಸದ್ಯ ಮಾರುಕಟ್ಟೆಯಲ್ಲಿ ಸ್ಕೂಟರ್ ವಿಭಾಗದ ಮಾರಾಟದಲ್ಲಿ ಆಕ್ಟೀವಾ ಅಗ್ರಸ್ಥಾನದಲ್ಲಿದ್ದರೇ ಬೈಕ್ ವಿಭಾಗದಲ್ಲಿ ಸ್ಪ್ಲೆಂಡರ್ ಉತ್ತಮ ಮಾರಾಟ ಗಳಿಸುತ್ತಿದೆ. ಹೋಂಡಾ ಹಾಗೂ ಹೀರೋ ನಡುವೆ ಬೈಕ್ ವಿಭಾಗದಲ್ಲಿ ತೀರ್ವ ಪೈಪೋಟಿಯಿದೆ. ಇದೀಗ ಬಿಡುಗಡೆಯಾಗಲಿರುವ ಹೋಂಡಾ ಶೈನ್ ಯಾವ ಮಟ್ಟಿಗೆ ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ ಎಂಬುದನ್ನು ತಿಳಿಯಲು ಈ ತಿಂಗಳಾಂತ್ಯದವರೆಗು ಕಾಯಬೇಕಿದೆ. ಉಳಿದಂತೆ ಆಕ್ಟಿವಾ 6G ಯ H-ಸ್ಮಾರ್ಟ್ ಉತ್ತಮ ಪ್ರತಿಕ್ರಿಯೆ ಗಳಿಸುತ್ತಿದೆ ಎಂದು ಕಂಪನಿ ಹೇಳಿಕೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications