3 ಹೊಸ ರೆಟ್ರೊ ಶೈಲಿಯ ಎಲೆಕ್ಟ್ರಿಕ್ ಮೊಪೆಡ್‌ಗಳನ್ನು ಪರಿಚಿಯಿಸದ ಹೋಂಡಾ

ಭಾರತದಲ್ಲಿ ಹೋಂಡಾ ವಾಹನಗಳಿಗೆ ಉತ್ತಮ ಬೇಡಿಕೆಯಿದ್ದು, ವಿದೇಶಿ ಮಾರುಕಟ್ಟೆಗಳಿಗೆ ಹೋಲಿಸಿಕೊಂಡರೆ ನಮ್ಮ ದೇಶದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿವೆ. ಅದರಲ್ಲೂ ದ್ವಿಚಕ್ರ ವಾಹನಗಳು ಹೆಚ್ಚು ಜನಪ್ರಿಯತೆ ಪಡೆದಿವೆ. ಇದೀಗ ಹೋಂಡಾ Cub e:, Dax e: ಮತ್ತು Zoomer e: ಎಂಬ ಮೂರು ಹೊಸ ಎಲೆಕ್ಟ್ರಿಕ್ ಮೊಪೆಡ್‌ಗಳನ್ನು ಚೀನಾ ಮಾರುಕಟ್ಟೆಗೆ ಪರಿಚಯಿಸಿದೆ.

ಈ ಹಿಂದಿನ ಕೆಲವು ಜನಪ್ರಿಯ ಪೆಟ್ರೋಲ್ ಚಾಲಿತ ಹೋಂಡಾ ಮಿನಿ ಬೈಕ್‌ಗಳಿಂದ ಹೊಸ ಮಾದರಿಗಳಿಗೆ ಸ್ಟೈಲಿಂಗ್ ಅನ್ನು ಪಡೆಯಲಾಗಿದೆ. ಮೊದಲಿಗೆ Cub e: ಕುರಿತು ಮಾತನಾಡುವುದಾದರೆ, ಇದು ಅತ್ಯಂತ ಪರಿಚಿತ ವಿನ್ಯಾಸವನ್ನು ಹೊಂದಿದೆ. Cub e: ವಿನ್ಯಾಸವು ಇತಿಹಾಸದಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನವಾದ ಮೂಲ ಹೋಂಡಾ Cub ಅನ್ನು ಆಧರಿಸಿದೆ. ಬಹುತೇಕ ಅದರಂತೆ ಕಾಣುವುದರಿಂದ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುವ ನಿರೀಕ್ಷೆಯಲ್ಲಿ ಕಂಪನಿಯಿದೆ.

3 ಹೊಸ ರೆಟ್ರೊ ಶೈಲಿಯ ಎಲೆಕ್ಟ್ರಿಕ್ ಮೊಪೆಡ್‌ಗಳನ್ನು ಪರಿಚಿಯಿಸದ ಹೋಂಡಾ

1958 ರಿಂದ ನಿರಂತರ ಸರಣಿ ಉತ್ಪಾದನೆಯಲ್ಲಿದ್ದ ಈ ಮಾದರಿ 2018 ರಲ್ಲಿ ಹೋಂಡಾ ಸೂಪರ್ Cub C125 ನ ಪರಿಚಯದೊಂದಿಗೆ ಸಂಪೂರ್ಣವಾಗಿ ಆಧುನಿಕ ನವೀಕರಣವನ್ನು ಪಡೆದುಕೊಂಡಿತು. ಇದೀಗ ಬಂದಿರುವ ಹೊಸ ಎಲೆಕ್ಟ್ರಿಕ್ Cub e: ಒಂದೇ ಚಾರ್ಜ್‌ನಲ್ಲಿ ಸುಮಾರು 64 ಕಿ.ಮೀ ವ್ಯಾಪ್ತಿಯನ್ನು ನೀಡುವುದಾಗಿ ಕಂಪನಿ ಹೇಳಿದೆ. ಸಣ್ಣ ಮೋಟಾರ್ ಉತ್ತಮ ಕಾರ್ಯಕ್ಷಮತೆಯನ್ನು ನೀಡಲಿದ್ದು, ಪ್ರಯಾಣಿಕರಿಗೆ ಉತ್ತಮ ಚಾಲನಾ ಅನುಭವ ನೀಡುವುದಾಗಿ ತಿಳಿಸಿದೆ.

ಹೋಂಡಾ ದಶಕಗಳಿಂದಲೂ ದ್ವಿಚಕ್ರ ವಾಹನಗಳ ಮನಬಂದಂತೆ ರೈಡ್ ಮಾಡಲು ಉತ್ತಮ ಆಯ್ಕೆಯಾಗಿದೆ. ಇವರ ಉತ್ಪನ್ನಗಳು ಯುವಕರನ್ನು ತುಂಬಾ ಸೆಳೆಯುತ್ತವೆ. ಪ್ರತಿ ವಿಭಾಗದಲ್ಲೂ ಸ್ಪೋರ್ಟಿ ಚಾಲನಾ ಅನುಭವ ನಿಡುವ ವಾಹನವನ್ನು ಪರಿಚಯಿಸುವ ಹಾಗಯೇ ಹೋಂಡಾ ST70 (ಡಾಕ್ಸ್ ಎಂದೂ ಕರೆಯಲ್ಪಡುತ್ತದೆ) ರಿಂದ Dax e: ವಿನ್ಯಾಸದ ಸ್ಫೂರ್ತಿಯನ್ನು ಪಡೆದಿದೆ. ಒಂದೇ ಚಾರ್ಜ್‌ನಲ್ಲಿ, Dax e: ಸುಮಾರು 80km ಕ್ರಮಿಸಬಲ್ಲದು ಎಂದು ಕಂಪನಿ ಕ್ಲೈಮ್ ಮಾಡಿದೆ.

3 ಹೊಸ ರೆಟ್ರೊ ಶೈಲಿಯ ಎಲೆಕ್ಟ್ರಿಕ್ ಮೊಪೆಡ್‌ಗಳನ್ನು ಪರಿಚಿಯಿಸದ ಹೋಂಡಾ

ಕೊನೆಯದಾಗಿ ಜೂಮರ್ ಇ: ಬಗ್ಗೆ ಮಾತನಾಡುವುದಾದರೆ, ಇದು ರುಕಸ್ (Ruckus) ಸ್ಕೂಟರ್‌ನಿಂದ ತನ್ನ ವಿನ್ಯಾಸದ ಸ್ಫೂರ್ತಿಯನ್ನು ಪಡೆದಿದೆ. ಹೋಂಡಾ ರುಕಸ್ ಒಂದು ಚಿಕ್ಕ 49cc ಎಂಜಿನ್‌ನಿಂದ ಚಾಲಿತವಾಗಿದೆ. ಆಫ್-ರೋಡ್ ಸಾಮರ್ಥ್ಯದ ಸ್ಕೂಟರ್ ಎಂದು ಜನಪ್ರಿಯತೆ ಪಡೆದಿದೆ, ಅದರ ಬ್ಲಾಕ್ ಟೈರ್ ಟ್ರೆಡ್ ಮಾದರಿಯಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಪೂರ್ಣ ಚಾರ್ಜ್‌ನಲ್ಲಿ Zoomer e: ಸುಮಾರು 90km ರೇಂಜ್ ನೀಡುವ ಸಾಮರ್ಥ್ಯವನ್ನು ಹೊಂದಿರುವುದಾಗಿ ಕಂಪನಿ ಹೇಳಿಕೊಂಡಿದೆ.

ಈ ಮೂರು ಎಲೆಕ್ಟ್ರಿಕ್ ಮೊಪೆಡ್‌ಗಳು ಎಲೆಕ್ಟ್ರಿಕ್ ಪವರ್‌ಟ್ರೇನ್ ಅನ್ನು ಒಳಗೊಂಡಿರುತ್ತವೆ. ಚೈನ್ ಫೈನಲ್ ಡ್ರೈವ್ ಮೂಲಕ ಹಿಂದಿನ ಚಕ್ರಕ್ಕೆ ಪವರ್ ಜನರೇಟ್ ಮಾಡುತ್ತವೆ. ಹಾಗೆಯೇ ನೀವು ಚಾರ್ಜ್‌ ಖಾಲಿಯಾದಾಗ ಮುನ್ನಡೆಯಲು ಪೆಡಲ್ ಸಹಾಯವನ್ನು ಪಡೆಯಬಹುದು. ಈ ಮೂಲಕ ವಾಹನವನ್ನು ತಳ್ಳುವ ಅನಿವಾರ್ಯತೆ ಇರುವುದಿಲ್ಲ. ಈ ಮೂರರ ಟಾಪ್ ಸ್ಪೀಡ್ 25kph ಆಗಿದ್ದು, ಸದ್ಯಕ್ಕೆ ಇವುಗಳನ್ನು ಚೀನಾದ ಮಾರುಕಟ್ಟೆಯಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿದೆ, ಬೇರೆಡೆ ಮಾರಾಟ ಮಾಡುವ ಯೋಜನೆಯನ್ನು ಹೋಂಡಾ ಹೊಂದಿಲ್ಲ.

3 ಹೊಸ ರೆಟ್ರೊ ಶೈಲಿಯ ಎಲೆಕ್ಟ್ರಿಕ್ ಮೊಪೆಡ್‌ಗಳನ್ನು ಪರಿಚಿಯಿಸದ ಹೋಂಡಾ

ಭಾರತದಲ್ಲಿ CB350 ಕೆಫೆ ರೇಸರ್:
ಕಳೆದ ತಿಂಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾದ 'ಆಕ್ಟಿವಾ 6G ಹೆಚ್ ಸ್ಮಾರ್ಟ್' ಸ್ಕೂಟರ್‌ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೀಗ, ತನ್ನ CB350 ಕೆಫೆ ರೇಸರ್ ಬೈಕ್ ಲಾಂಚ್ ಮಾಡಲು ಸಿದ್ಧತೆ ನಡೆದಿದೆ. ಈ ನೂತನ ಬೈಕ್ ವಿನ್ಯಾಸದ ದೃಷ್ಟಿಯಿಂದ ಆಕರ್ಷಕ ಲುಕ್ ಹೊಂದಿರಲಿದ್ದು, ಸಾಕಷ್ಟು ನವೀನ ವೈಶಿಷ್ಟ್ಯಗಳನ್ನು ಪಡೆದಿರಲಿದೆ. ಪ್ರಮುಖವಾಗಿ ಈ ಬೈಕ್ ಗ್ಲೊಸಿ ಬ್ಲೂ/ವೈಟ್ ಬಣ್ಣದ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದೆ.

ಹೊಸ ಹೋಂಡಾ CB350 ಕೆಫೆ ರೇಸರ್ ಬೈಕ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು 348.36 ಸಿಸಿ 4-ಸ್ಟೋಕ್ SI BS-VI ಎಂಜಿನ್ ಹೊಂದಿದ್ದು, 5,500 rpmನಲ್ಲಿ 21.07 PS ಗರಿಷ್ಠ ಪವರ್ ಹಾಗೂ 3,000 rpmನಲ್ಲಿ 30 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದುಕೊಂಡಿದೆ. ಬೇರೆ ಬೈಕ್ ಗಳಿಗೆ ಹೋಲಿಸಿದರೆ, ಇದರ ಮೈಲೇಜ್ ಕೊಂಚ ಕಡಿಮೆ ಎಂದು ಹೇಳಬಹುದು. 35 kmpl ಇಂಧನ ದಕ್ಷತೆಯನ್ನು ಹೊಂದಿದೆ.

Article Published On: Saturday, February 25, 2023, 13:12 [IST]
English summary
Honda introduced three new retro style e Mopeds
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+