'ಹೋಂಡಾ ಆಕ್ಟಿವಾ 7G' 100 ಕಿ.ಮೀ ಮೈಲೇಜ್ ನೀಡುತ್ತಾ? ಜನವರಿ 23ಕ್ಕೆ ತಿಳಿಯುತ್ತೆ..

ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ ದ್ವಿಚಕ್ರ ವಾಹನವನ್ನು ಜನವರಿ 23 ರಂದು ಬಿಡುಗಡೆ ಮಾಡುವುದಾಗಿ ಹೋಂಡಾ ಕಂಪನಿ ಘೋಷಿಸಿದೆ. ಈ ಬಗ್ಗೆ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಅದರ ಬಗ್ಗೆ ವಿವರವಾದ ಮಾಹಿತಿಯನ್ನು ಇಲ್ಲಿ ತಿಳಿಸಿಕೊಡುವ ಪ್ರಯತ್ನ ಮಾಡಲಾಗಿದೆ.

ಹೋಂಡಾ ದೇಶದಲ್ಲಿ ಮುಂಚೂಣಿಯಲ್ಲಿರುವ ಪ್ರಮುಖ ದ್ವಿಚಕ್ರ ವಾಹನ ಕಂಪನಿಯಾಗಿದೆ. ಅದರ ಹಲವು ಬೈಕ್ ಹಾಗೂ ಸ್ಕೂಟರ್ ಗಳು ಮಾರುಕಟ್ಟೆಯಲ್ಲಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದು, ಮಾರಾಟದಲ್ಲೂ ಒಳ್ಳೆಯ ಪ್ರಗತಿಯನ್ನು ಸಾಧಿಸುವ ಮೂಲಕ ಖ್ಯಾತಿಗಳಿಸಿವೆ. 2022ರ ಡಿಸೆಂಬರ್ ತಿಂಗಳಲ್ಲಿ ಹೊಸ H - Smart ಟ್ರೇಡ್‌ಮಾರ್ಕ್‌ ಅನ್ನು ನೋಂದಣಿ ಮಾಡಿದೆ. ಅದರೊಂದಿಗೆ ಹೋಂಡಾ ಕಂಪನಿಯು ತನ್ನ ಹೊಸ ಟೆಕ್ನಾಲಜಿಯನ್ನು ಈ ಹೆಸರಿನಲ್ಲಿ ಪರಿಚಯಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಕಂಪನಿಯು ಈಗಾಗಲೇ ಹೋಂಡಾ ಇಕೋ ಟೆಕ್ನಾಲಜಿ (ಎಚ್‌ಇಟಿ) ಬಳಸಿಕೊಂಡು ದ್ವಿಚಕ್ರ ವಾಹನಗಳಿಗೆ ಎಂಜಿನ್‌ಗಳನ್ನು ರೆಡಿ ಮಾಡುತ್ತಿದೆ. BS6 ನಿಯಮಗಳಿಂದಾಗಿ ಎನ್ಹ್ಯಾನ್ಸ್ಡ್ ಸ್ಮಾರ್ಟ್ ಪವರ್ (eSP) ತಂತ್ರಜ್ಞಾನದೊಂದಿಗೆ ಎಂಜಿನ್‌ಗಳನ್ನು ತಯಾರಿಸುತ್ತಿದೆ. ಅಲ್ಲದೆ, ಟ್ರೇಡ್‌ಮಾರ್ಕ್‌ನಲ್ಲಿ 'ಸ್ಮಾರ್ಟ್' ಪದವನ್ನು ಬಳಕೆ ಮಾಡಿರುವುದರಿಂದ ಇದು ಹೋಂಡಾದ ಎಲೆಕ್ಟ್ರಿಕ್ ಹೈಬ್ರಿಡ್ ಟೆಕ್ನಾಲಜಿಯ ಹೆಸರಾಗಿರಬಹುದು ಎಂದು ಅಂದಾಜಿಸಲಾಗಿದೆ. ಈ ಕುರಿತು ಜನವರಿ 23ಕ್ಕೆ ಖಚಿತವಾಗಿ ತಿಳಿಯಲಿದೆ. ಹೋಂಡಾ ಹೈಬ್ರಿಡ್ ತಂತ್ರಜ್ಞಾನದಲ್ಲಿ ಕೆಲಸ ಮಾಡುತ್ತಿದೆ ಎಂದು ಹಲವಾರು ತಿಂಗಳಿನಿಂದ ಸುದ್ದಿಯಿದೆ.

ಹೋಂಡಾದ ಕಂಪನಿ ಮಾಡಿರುವ ಘೋಷಣೆಯಂತೆ, 'ಆಕ್ಟಿವಾ 7G ಸ್ಕೂಟರ್‌' ಅನ್ನು ಮಾರುಕಟ್ಟೆಯಲ್ಲಿ ಅನಾವರಣ ಮಾಡುವ ಸುದ್ದಿಗಳು ಎಲ್ಲೆಡೆ ಕೇಳಿಬರುತ್ತಿವೆ. ಈ ಆಕ್ಟಿವಾ 7G ಹೈಬ್ರಿಡ್ ಚಾಲಿತ ಸ್ಕೂಟರ್ ಆಗಿರಬಹುದು ಎಂದು ನಿರೀಕ್ಷಿಸಲಾಗಿದ್ದು, ಇದಕ್ಕಾಗಿ, ಕಂಪನಿಯು ಪ್ರತ್ಯೇಕ ಎಲೆಕ್ಟ್ರಿಕ್ ಮೋಟಾರ್ ಮತ್ತು ಬ್ಯಾಟರಿಯನ್ನು ಅಳವಡಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಇದರಿಂದ ಗ್ರಾಹಕರಿಗೆ ಮುಂಬರುವ ಹೋಂಡಾದ ನೂತನ ಸ್ಕೂಟರ್ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿದ್ದು, ಅದರ ಖರೀದಿಗೆ ಮುಂದಾಗಬಹುದು.

ಅಲ್ಲದೆ, ಇದರಲ್ಲಿ ಅಳವಡಿಸಬಹುದಾದ ಬ್ಯಾಟರಿಯನ್ನು ರೀಜೆನೆರೇಟಿವ್ ಟೆಕ್ನಾಲಜಿ ಬಳಸಿಕೊಂಡು ಚಾರ್ಜ್ ಮಾಡಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಜೊತೆಗೆ ಮಾರುಕಟ್ಟೆಗೆ ಬರಲಿರುವ ಈ ಸ್ಕೂಟರ್, ಪ್ರತ್ಯೇಕ ಎಲೆಕ್ಟ್ರಿಕ್ ಮೋಡ್ ಅನ್ನು ಹೊಂದಿರಲಿದೆ. ಇದು 10-15 ಕಿಲೋ ಮೀಟರ್‌ಗಳವರೆಗೆ ವಿದ್ಯುತ್ ಶಕ್ತಿಯಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ದೂರದ ಪ್ರಯಾಣಕ್ಕೆ ಪೆಟ್ರೋಲ್‌ ಮೂಲಕ ಚಲಿಸುವ ಆಯ್ಕೆಯನ್ನು ಪಡೆದಿರಲಿದೆ.

ಈ ಸ್ಕೂಟರ್, 40 kmph ಸ್ವೀಡ್ ಮೇಲೆ ಹೋದಾಗ ಮಾತ್ರವೇ ಪೆಟ್ರೋಲ್ ಮೂಲಕ ಕಾರ್ಯ ನಿರ್ವಹಿಸುವ ಸಾಧ್ಯತೆಯಿದೆ. ಕಡಿಮೆ ವೇಗದಲ್ಲಿ ಇದು ಬ್ಯಾಟರಿ ಮೂಲಕವೇ ಚಾಲಿತವಾಗಲಿದೆ. ಹೋಂಡಾದ ಈ ಸ್ಕೂಟರ್ ಉತ್ತಮ ಮೈಲೇಜ್ ನೊಂದಿಗೆ ಖರೀದಿಗೆ ಲಭ್ಯವಾಗುವ ನಿರೀಕ್ಷೆ ಇದ್ದು, ಬರೋಬ್ಬರಿ 100 kmpl ಮೈಲೇಜ್ ನೀಡಬಹುದು ಎಂದು ಹೇಳಲಾಗಿದೆ. ಅದು ನಿಜವಾಗಲುಬಹುದು. ಸದ್ಯ ಭಾರತದಲ್ಲಿ ಹೋಂಡಾ ಆಕ್ಟಿವಾ 6G ಖರೀದಿಗೆ ಲಭ್ಯವಿದ್ದು, ಅದರ ಬೆಲೆ ರೂ.73,359 ದಿಂದ ರೂ.76,859 ವರೆಗೆ ಇದೆ.

ಆಕ್ಟಿವಾ 6G, 3 ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಇದು 109.51ಸಿಸಿ, ಸಿಂಗಲ್-ಸಿಲಿಂಡರ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಹೊಂದಿದ್ದು, ಇದು 7.79PS ಪವರ್ ಹಾಗೂ 8.84Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ, ಟೆಲಿಸ್ಕೋಪಿಕ್ ಫೋರ್ಕ್ ಮತ್ತು ದೊಡ್ಡ 12-ಇಂಚಿನ ಫ್ರಂಟ್ ವೀಲ್ಸ್.ಸೇರಿದಂತೆ ಆಕ್ಟಿವಾ 6G ಸ್ಕೂಟರ್ 130 ಎಂಎಂ ಡ್ರಮ್ ಬ್ರೇಕ್‌ ಹೊಂದಿದೆ. ಜೊತೆಗೆ ಇದರ ಅತ್ಯುತ್ತಮ ಮೈಲೇಜ್ ಖರೀದಿದಾರರಿಗೆ ಇಷ್ಟವಾಗುತ್ತದೆ ಎಂದು ಹೇಳಬಹುದು.

ಜನವರಿ 23 ರಂದು ಬಿಡುಗಡೆಯಾಗಲಿರುವ ಸ್ಕೂಟರ್ ಹೈಬ್ರಿಡ್ ಟೆಕ್ನಾಲಜಿ ಹೊಂದಿರುವ ಸಾಧ್ಯತೆಯಿರುವುದರಿಂದ ಅದರ ಬೆಲೆಯು ಅಸ್ತಿತ್ವದಲ್ಲಿರುವ ICE ಎಂಜಿನ್‌ಗಿಂತ ಸ್ವಲ್ಪ ಹೆಚ್ಚಿರಬಹುದು. ಈ ಹೈಬ್ರಿಡ್ ಟೆಕ್ನಾಲಜಿ ಸ್ಕೂಟರ್ ಬಿಡುಗಡೆಯೊಂದಿಗೆ ಹೋಂಡಾ, ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನ (ಇವಿ) ಉತ್ಪಾದಿಸಲು ಗುರಿ ತಲುಪುವ ಪ್ರಯತ್ನವಾಗಿದೆ. ಇದು ಯಶಸ್ವಿಯಾದರೆ, ಹೋಂಡಾ ವಿಶೇಷವಾಗಿ ಎಲೆಕ್ಟ್ರಿಕ್ ಸ್ಕೂಟರ್‌ ತಯಾರಿಸುವುದನ್ನು ಆರಂಭಿಸಲಿದೆ. ಆದರೆ, ಇವೆಲ್ಲವೂ ಊಹೆಯಾಗಿದ್ದು, ಕೆಲವೇ ದಿನಗಳಲ್ಲಿ ಅದರ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದೆ.

Most Read Articles

Kannada
Read more on ಹೋಂಡಾ honda
English summary
Honda launch activa 7g electric hybrid scooter
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X