ಭಾರತದಲ್ಲಿ ಕಡಿಮೆ ಬೆಲೆಯ ಹೈ ಸ್ಪೀಡ್ 'Hop Oxo' ಎಲೆಕ್ಟ್ರಿಕ್ ಬೈಕ್ ಬಿಡುಗಡೆ: ಹೊಸ ಮೈಲಿಗಲ್ಲು ಸೃಷ್ಟಿ!

ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ದಿನದಿಂದ ದಿನಕ್ಕೆ ಸಾಕಷ್ಟು ಖ್ಯಾತಿಗಳಿಸುತ್ತಿವೆ. ಹೈದರಾಬಾದ್‌ನಲ್ಲಿ ತೆಲಂಗಾಣ ಸರ್ಕಾರದ ವತಿಯಿಂದ ಆಯೋಜಿಸಿದ್ದ ಇ-ಮೋಟಾರ್ ಶೋದಲ್ಲಿ ಹೊಪ್ ಎಲೆಕ್ಟ್ರಿಕ್ ತನ್ನ 'ಆಕ್ಸೊ' ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡಿದೆ. ಇದರ ಬೆಲೆ ರೂ.1.60 ಲಕ್ಷದಿಂದ ರೂ 1.80 ಲಕ್ಷ (ಎಕ್ಸ್ ಶೋರೂಂ) ಇದೆ.

ಸದ್ಯ ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಹೈದರಾಬಾದ್‌ನಲ್ಲಿ ಮಾತ್ರ ಖರೀದಿಗೆ ಲಭ್ಯವಿದೆ. ಗ್ರಾಹಕರು, ಅಲ್ಲಿನ ಶೋರೂಂಗೆ ಭೇಟಿ ನೀಡಿ ಖರೀದಿಸಬಹುದು. ಮುಂಬರುವ ದಿನಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲೂ ಈ ಬೈಕ್ ದೊರೆಯಲಿದೆ. ಹೊಪ್ ಆಕ್ಸೊ (Hop Oxo) ಎಲೆಕ್ಟ್ರಿಕ್ ಬೈಕ್‌ನ ಬಣ್ಣಗಳ ಆಯ್ಕೆ ಕುರಿತು ಹೇಳುವುದಾದರೆ, ಇದು ಐದು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದೆ. ಅವುಗಳೆಂದರೆ, ಟ್ವಿಲೈಟ್ ಗ್ರೇ, ಕ್ಯಾಂಡಿ ರೆಡ್, ಮ್ಯಾಗ್ನೆಟಿಕ್ ಬ್ಲೂ, ಎಲೆಕ್ಟ್ರಿಕ್ ಯೆಲ್ಲೋ ಹಾಗೂ ಟ್ರೂ ಬ್ಲಾಕ್.

ಭಾರತದಲ್ಲಿ ಕಡಿಮೆ ಬೆಲೆಯ ಹೈ ಸ್ಪೀಡ್ Hop Oxo ಎಲೆಕ್ಟ್ರಿಕ್ ಬೈಕ್ ಬಿಡುಗಡೆ: ಹೊಸ ಮೈಲಿಗಲ್ಲು ಸೃಷ್ಟಿ!

ಹೊಪ್ ಆಕ್ಸೊ ಬೈಕ್ ಬ್ಯಾಟರಿ ಹಾಗೂ ಕಾರ್ಯಕ್ಷಮತೆ:
ಈ ಹೊಸ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅತ್ಯುತ್ತಮ ರೇಂಜ್ ನೀಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು 3.75 kWh ಲಿಥಿಯಂ - ಐಯಾನ್ ಬ್ಯಾಟರಿಯನ್ನು ಹೊಂದಿದ್ದು, 135 km ರಿಂದ 150 km ರೇಂಜ್ ನೀಡುತ್ತದೆ, ಇದರಲ್ಲಿ ಅಳವಡಿಸಿರುವ BLDC ಹಬ್ ಮೋಟಾರ್ 5.2 kW/6.2 kW ಪವರ್ ಹಾಗೂ 185 Nm/200 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಆಕ್ಸೊ ಬೈಕ್‌ನ್ನು ಕಂಪನಿಯು ಕೈಗೆಟುಕುವ ಬೆಲೆಯಲ್ಲಿ ಗರಿಷ್ಠ ವೇಗವನ್ನು ಹೊಂದಿರುವಂತೆ ವಿನ್ಯಾಸ ಮಾಡಿದೆ. ಇದು 90 kmph/95 kmph ಟಾಪ್ ಸ್ವೀಡ್ ಹೊಂದಿದೆ. ಅಲ್ಲದೆ, 850W ಚಾರ್ಜರ್ ನಲ್ಲಿ ಈ ಬೈಕ್‌ಗೆ ಅಳವಡಿಸುವ ಬ್ಯಾಟರಿಯು ಶೇಕಡ 0 ರಿಂದ 80% ಚಾರ್ಜ್ ಆಗಲು 4 ಗಂಟೆ ತೆಗೆದುಕೊಳ್ಳುತ್ತದೆ. ಈ ಆಕ್ಸೊ ಬೈಕ್‌ ನಾಲ್ಕು ರೈಡಿಂಗ್ ಮೋಡ್‌ ಆಯ್ಕೆಗಳಲ್ಲಿ ಖರೀದಿಗೆ ಸಿಗಲಿದೆ. ಅವುಗಳೆಂದರೆ, ಇಕೋ, ಪವರ್, ಸ್ಪೋರ್ಟ್ ಮತ್ತು ರಿವರ್ಸ್. ವಿಶೇಷವಾಗಿ ಸಿನುಸೈಡಲ್ FOC ವೆಕ್ಟರ್ ಕಂಟ್ರೋಲ್‌ನ್ನು ಹೊಂದಿದೆ.

ಭಾರತದಲ್ಲಿ ಕಡಿಮೆ ಬೆಲೆಯ ಹೈ ಸ್ಪೀಡ್ Hop Oxo ಎಲೆಕ್ಟ್ರಿಕ್ ಬೈಕ್ ಬಿಡುಗಡೆ: ಹೊಸ ಮೈಲಿಗಲ್ಲು ಸೃಷ್ಟಿ!

ಹೊಪ್ ಆಕ್ಸೊ ಬೈಕ್ ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. 5-ಇಂಚಿನ ಸ್ಮಾರ್ಟ್ LCD ಡಿಸ್‌ಪ್ಲೇಯನ್ನು ಹೊಂದಿದ್ದು, ಇದು 4G LTE CAT4, AGPS (ಅಸಿಸ್ಟೆಂಟ್ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್), GNSS (ಗ್ಲೋಬಲ್ ನೇವಿಗೇಶನ್ ಸ್ಯಾಟಲೈಟ್ ಸಿಸ್ಟಮ್)ನೊಂದಿಗೆ ಕನೆಕ್ಟ್ ಆಗಿದೆ.128-ಬಿಟ್ ಎನ್‌ಕ್ರಿಪ್ಶನ್ (ಎಡ್ಜ್ ಟು ಕ್ಲೌಡ್ ಸೆಕ್ಯುರಿಟಿ) ಅನ್ನು ಒಳಗೊಂಡಿದೆ. ಈ ಆಕರ್ಷಕ ವೈಶಿಷ್ಟ್ಯಗಳು ದೇಶೀಯ ಗ್ರಾಹಕರನ್ನು ಖಂಡಿತ ಸೆಳೆಯಲಿದ್ದು, ಇದರಲ್ಲಿ ಎರಡು ಮಾತಿಲ್ಲ.

ಹೊಪ್ ಆಕ್ಸೊ ಬೈಕ್‌ನ ಸಸ್ಪೆಷನ್ ಸೆಟಪ್ ಹಾಗೂ ಬ್ರೇಕಿಂಗ್ ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳುವುದಾದರೆ, ಫ್ರಂಟ್, ಟೆಲಿಸ್ಕೋಪಿಕ್ ಫೋರ್ಕ್‌ ಹಾಗೂ ರೇರ್ ಹೈಡ್ರಾಲಿಕ್ ಸ್ಪ್ರಿಂಗ್ ಲೋಡೆಡ್ ಶಾಕ್ ಅಬ್ಸಾರ್ಬರ್ ಸಸ್ಪೆಷನ್ ಸೆಟಪ್ ಅನ್ನು ಹೊಂದಿದೆ. ಅಲ್ಲದೆ, ಫ್ರಂಟ್ ಹಾಗೂ ರೇರ್ ಡಿಸ್ಕ್ ಬ್ರೇಕ್ ಒಳಗೊಂಡಿದ್ದು, ಇದು ಕಾಂಬಿ-ಬ್ರೇಕ್ ಸಿಸ್ಟಮ್ ಮೂಲಕ ಕಾರ್ಯ ನಿರ್ವಹಿಸುತ್ತದೆ. ಈ ಬೈಕ್ ಬರೋಬ್ಬರಿ 250 ಕೆಜಿ ತೂಕವಿದ್ದು, ಇದರ ಆಕರ್ಷಕ ಲುಕ್ ಪ್ರತಿಯೊಬ್ಬರನ್ನು ಆಕರ್ಷಿಸುತ್ತದೆ.

ಈ ಬೈಕ್ ಲಾಂಚ್ ಬಗ್ಗೆ ಮಾತನಾಡುದ ಹೊಪ್ ಎಲೆಕ್ಟ್ರಿಕ್‌ನ ಸಹ-ಸಂಸ್ಥಾಪಕ ನಿಖಿಲ್ ಭಾಟಿಯಾ ಅವರು, ' ಹೈದರಾಬಾದ್‌ನಲ್ಲಿ ನಡೆದ ಇ-ಮೋಟಾರ್ ಶೋನಲ್ಲಿ ಭಾಗವಹಿಸಲು ಅವಕಾಶ ನೀಡಿದ ತೆಲಂಗಾಣ ಸರ್ಕಾರಕ್ಕೆ ಧನ್ಯವಾದಗಳನ್ನು ಹೇಳಲು ಬಯಸುತ್ತೇವೆ. ಐಟಿ, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ, ಕೈಗಾರಿಕೆಗಳ ಸಚಿವರದ ಕೆ.ಟಿ.ರಾಮರಾವ್ ಅವರು, ಈ ಹೊಪ್ ಆಕ್ಸೊ ಬೈಕ್ ಬಿಡುಗಡೆ ಮಾಡಿರುವುದು ಖುಷಿ ತಂದಿದೆ. ಬೈಕ್‌ನ್ನು ದೇಶದ ಗ್ರಾಹಕರು ಸ್ವೀಕರಿಸುತ್ತಾರೆ ಎಂಬ ನಂಬಿಕೆಯಿದೆ' ಎಂದು ಹೇಳಿದ್ದಾರೆ.

ಭಾರತದಲ್ಲಿ ವೇಗವಾಗಿ ಬೆಳವಣಿಗೆಯಾಗುತ್ತಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಪ್ರತಿ ತಿಂಗಳು ಒಂದಲ್ಲ ಒಂದು ಕಂಪನಿ ಹೊಸ ಬೈಕ್ ಅಥವಾ ಸ್ಕೂಟರ್ ಬಿಡುಗಡೆ ಮಾಡುತ್ತಿರುತ್ತಿದೆ. ಇದೀಗ, ಹೊಪ್ ಕಂಪನಿ ಹೈ ಸ್ಪೀಡ್ ಆಕ್ಸೊ ಬೈಕ್‌ ಲಾಂಚ್ ಮಾಡುವ ಮೂಲಕ ತನ್ನದೇ ಆದ ನೂತನ ಮೈಲಿಗಲ್ಲನ್ನು ಸ್ಥಾಪಿಸಲು ಮುಂದಾಗಿದೆ. ಇದರ ಬೆಲೆಯು ಅಷ್ಟಾಗಿ ಹೆಚ್ಚಿಲ್ಲ. ಗ್ರಾಹಕರಿಗೆ ಕೈಗೆಟುಕುವ ದರದಲ್ಲಿಯೇ ಖರೀದಿಗೆ ದೊರೆಯಲ್ಲಿದ್ದು, ಹೆಚ್ಚಿನ ರೇಂಜ್ ನೀಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

More from DriveSpark

Article Published On: Thursday, February 9, 2023, 10:23 [IST]
English summary
Hop oxo electric motorcycle launched hyderabad e motor show details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+