ಭಾರತದ ಮೊದಲ ಎಲೆಕ್ಟ್ರಿಕ್ ಗೇರ್ ಬೈಕ್... ಬೆಲೆ 1.44 ಲಕ್ಷ ರೂ... ಎರಡು ಬಣ್ಣಗಳ ಆಯ್ಕೆ

Matter Motorcycles ಇತ್ತೀಚೆಗೆ ಭಾರತದಲ್ಲಿ ತಮ್ಮ ಮೊದಲ ಎಲೆಕ್ಟ್ರಿಕ್ ಗೇರ್‌ ಮೋಟರ್ ಸೈಕಲ್ ಏರಾ 5000 ಅನ್ನು ಬಿಡುಗಡೆ ಮಾಡಿದೆ. ಇದರ ಬೆಲೆಯು 1.44 ಲಕ್ಷ ರೂ.ಗಳಿಂದ (ಎಕ್ಸ್ ಶೋರೂಂ) ಆರಂಭವಾಗಲಿದ್ದು, ನಾಲ್ಕು ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ. ಇದೀಗ ಈ ಗುಜರಾತ್ ಮೂಲದ ತಯಾರಕರು ಗ್ರಾಹಕರಿಗಾಗಿ ಎರಡು ಬಣ್ಣದ ಆಯ್ಕೆಗಳನ್ನು ನೀಡುತ್ತಿದ್ದಾರೆ.

ಕಂಪನಿಯು ಐದು ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಆದರೆ ಪ್ರಸ್ತುತ Aera 5000 ಮತ್ತು Aera 5000+ ಅನ್ನು ಮಾತ್ರ ಮಾರಾಟ ಮಾಡುತ್ತಿರುವುದರಿಂದ, ನೀವು ಎರಡು ಬಣ್ಣಗಳನ್ನು ಮಾತ್ರ ಆಯ್ಕೆ ಮಾಡಮಾಬಹುದು. ಹೊಸ ಬೈಕ್ ಅನ್ನು ವೈಟ್ ಹೈಲೆಟ್‌ಗಳೊಂದಿಗೆ ರೆಡ್ ಕಲರ್ ಆಯ್ಕೆಯಲ್ಲಿ ಮತ್ತು ನಿಯಾನ್ ಯೆಲ್ಲೋ ಹೈಲೆಟ್‌ಗಳೊಂದಿಗೆ ಗ್ರೇ ಬಣ್ಣದ ಆಯ್ಕೆಯಲ್ಲಿ ನೀಡಲಾಗುತ್ತದೆ. ನೀವು ಶೈನಿ ಬ್ಲಾಕ್, ಮ್ಯಾಟ್ ಬ್ಲಾಕ್ ಜೊತೆಗೆ ಬ್ಲಾಕ್ ಗ್ರಾಫಿಕ್ಸ್ ಬ್ಲೂ ಕಲರ್ ಆಯ್ಕೆಗಳಲ್ಲಿ ಖರೀದಿ ಮಾಡಬಹುದು.

ಭಾರತದ ಮೊದಲ ಎಲೆಕ್ಟ್ರಿಕ್ ಗೇರ್ ಬೈಕ್... ಬೆಲೆ 1.44 ಲಕ್ಷ ರೂ... ಎರಡು ಬಣ್ಣಗಳ ಆಯ್ಕೆ

ರೆಡ್ ಗ್ರಾಫಿಕ್ಸ್ ಮತ್ತು ರೆಡ್ ವೀಲ್‌ಗಳೊಂದಿಗೆ ವೈಟ್ ಕಲರ್ ಆಯ್ಕೆಯು ಬಹಳಷ್ಟು ಆಕರ್ಷಣೀಯ ಲುಕ್ ಅನ್ನು ನೀಡುತ್ತದೆ. ಇದು ಮ್ಯಾಟರ್ ಏರಾಗೆ ಸ್ಪೋರ್ಟಿ ಲುಕ್ ನೀಡುತ್ತದೆ. ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, ಮ್ಯಾಟರ್ ಏರಾ 5 kWh ಬ್ಯಾಟರಿ ಪ್ಯಾಕ್‌ನೊಂದಿಗೆ 10 kW ಮೋಟಾರ್‌ನೊಂದಿಗೆ ಬರುತ್ತದೆ. ಅತ್ಯಂತ ಆಸಕ್ತಿದಾಯಕ ಅಂಶವೆಂದರೆ ಈ ಬೈಕ್‌ನ ಬ್ಯಾಟರಿಯ ಹೀಟಿಂಗ್ ಅನ್ನು ನಿಯಂತ್ರಣದಲ್ಲಿಡಲು ಲಿಕ್ವಿಡ್ ಕೂಲೆಂಟ್ ಅನ್ನು ಪ್ರಮಾಣಿತವಾಗಿ ನೀಡಲಾಗಿದೆ.

ಇದರ ಜೊತೆಗೆ ಮ್ಯಾಟರ್ ಏರಾ ಎಲೆಕ್ಟ್ರಿಕ್ ಮೋಟಾರ್‌ ಸೈಕಲ್ 4 ಸ್ಪೀಡ್ ಗೇರ್‌ಬಾಕ್ಸ್ ಅನ್ನು ಪ್ರಮಾಣಿತವಾಗಿ ಪಡೆದಿದೆ. ಇದರ ವೇರಿಯೆಂಟ್ ಅನ್ನು ಅವಲಂಬಿಸಿ ಏರಾ ಸುಮಾರು 120 ರಿಂದ 150 ಕಿ.ಮೀ ವ್ಯಾಪ್ತಿಯನ್ನು ನೀಡಬಹುದು ಎಂದು ಮ್ಯಾಟರ್ ಕಂಪನಿ ಹೇಳಿಕೊಂಡಿದೆ. ವೈಶಿಷ್ಟ್ಯಗಳ ವಿಷಯಕ್ಕೆ ಬರುವುದಾದರೆ, ಇದು ಸ್ಮಾರ್ಟ್‌ ಫೋನ್ ಸಂಪರ್ಕ, ನ್ಯಾವಿಗೇಶನ್ ಮತ್ತು ಸ್ಕ್ರೀನ್ ಮೇಲೆ ಇಂಡಿಕೇಷನ್‌ಗಳೊಂದಿಗೆ TFT ಇನ್ಸ್‌ಟ್ರೂಮೆಂಟ್ ಕ್ಲಸ್ಟರ್ ಅನ್ನು ಪಡೆಯುತ್ತದೆ.

ಭಾರತದ ಮೊದಲ ಎಲೆಕ್ಟ್ರಿಕ್ ಗೇರ್ ಬೈಕ್... ಬೆಲೆ 1.44 ಲಕ್ಷ ರೂ... ಎರಡು ಬಣ್ಣಗಳ ಆಯ್ಕೆ

ಹಾಗೆಯೇ ಇದು ಆಂಡ್ರಾಯ್ಡ್ ಆಧಾರಿತ ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡುತ್ತದೆ. ರಿಮೋಟ್ ಲಾಕ್/ ಅನ್‌ಲಾಕ್, ಜಿಯೋಫೆನ್ಸಿಂಗ್ ಮತ್ತು ಲೈವ್ ಲೊಕೇಶನ್ ಟ್ರ್ಯಾಕಿಂಗ್ ಅನ್ನು ಹೊಂದಿದೆ. ಇದರೊಂದಿಗೆ ವಾಹನ ಆರೋಗ್ಯ ಮೇಲ್ವಿಚಾರಣೆ ಮತ್ತು ವಿವರವಾದ ಸವಾರಿ ಅಂಕಿಅಂಶಗಳ ವೈಶಿಷ್ಟ್ಯಗಳಂತಹ ಕಾರ್ಯಗಳೊಂದಿಗಿನ ಈ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ, ಮ್ಯಾಟರ್ ಏರಾ ಎಲೆಕ್ಟ್ರಿಕ್ ಬೈಕ್ ಕೀ ಫೋಬ್ ಮತ್ತು ಕೀಲೆಸ್ ಎಂಟ್ರಿ ಸಿಸ್ಟಂಯೊಂದಿಗೆ ಬರುತ್ತದೆ.

ಹೊಸ ಮ್ಯಾಟರ್ Aera ಎಲೆಕ್ಟ್ರಿಕ್ ಬೈಕಿನ ಇತರ ವಿನ್ಯಾಸದ ಅಂಶಗಳನ್ನು ನೋಡುವುದಾದರೆ, ಸಾಂಪ್ರದಾಯಿಕ ICE ಬೈಕ್‌ಗಳ ಎಂಜಿನ್ ಗಾರ್ಡ್ ಅನ್ನು ಹೋಲುವ ಮೋಟಾರ್ ಗಾರ್ಡ್, ಸ್ಪ್ಲಿಟ್ ಸೀಟ್‌ಗಳು, ಎಲ್‌ಇಡಿ ಟೈಲ್‌ಲೈಟ್ ಮತ್ತು ಪಿಲಿಯನ್ ರೈಡರ್‌ಗಾಗಿ ಸ್ಪ್ಲಿಟ್ ಗ್ರಾಬ್ ರೈಲ್ ಸೇರಿವೆ. ಈ ಹಿಂದೆ ಮ್ಯಾಟರ್ ಏರಾ ಎಲೆಕ್ಟ್ರಿಕ್ ಬೈಕ್ ಅನ್ನು ಕಂಪನಿಯು 2023ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿತು. ಇದು ಮನ ಸೆಳೆಯುವ ವಿನ್ಯಾಸ ಮತ್ತು 4G ಕನೆಕ್ಟಿವಿಟಿಯೊಂದಿಗೆ ಹೆಚ್ಚಿನ ಗಮನವನ್ನು ಸೆಳೆದಿತ್ತು.

ಭಾರತದ ಮೊದಲ ಎಲೆಕ್ಟ್ರಿಕ್ ಗೇರ್ ಬೈಕ್... ಬೆಲೆ 1.44 ಲಕ್ಷ ರೂ... ಎರಡು ಬಣ್ಣಗಳ ಆಯ್ಕೆ

ಇದರ ಹಾರ್ಡ್‌ವೇರ್‌ಗೆ ಸಂಬಂಧಿಸಿದಂತೆ, ಮ್ಯಾಟರ್ ಏರಾ 17 ಇಂಚಿನ ಅಲಾಯ್ ವೀಲ್‌ಗಳೊಂದಿಗೆ ಬರುತ್ತದೆ. ಇದು ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ ಮತ್ತು ಹಿಂಭಾಗದಲ್ಲಿ ಗ್ಯಾಸ್ ಚಾರ್ಜ್ಡ್ ಶಾಕ್‌ ಸಸ್ಪೆನ್ಷನ್‌ಗಳನ್ನು ಹೊಂದಿದೆ. ಹಾಗೆಯೇ ಡ್ಯುಯಲ್ ಚಾನೆಲ್ ಎಬಿಎಸ್‌ನೊಂದಿಗೆ ಎರಡೂ ತುದಿಗಳಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್‌ಗಳಿಂದ ಬ್ರೇಕಿಂಗ್ ಸಿಸ್ಟಮ್ ಅನ್ನು ಪ್ರಮಾಣಿತವಾಗಿ ನೀಡಲಾಗಿದೆ. ಈ ಎಲ್ಲಾ ಅಂಶಗಳನ್ನು ಒಳಗೊಂಡು ಬೈಕ್ ಹೆಚ್ಚು ಸ್ಪೋರ್ಟಿ ಲುಕ್ ಪಡೆಯುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Saturday, March 4, 2023, 13:05 [IST]
English summary
Indias first electric gear bike priced at Rs 1 44 lakh two color options
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+